HOME » NEWS » State » FROG REMOVED TWO DAYS CURRENT IN KODAGU GNR

ಕೊಡಗಿನಲ್ಲಿ ಎರಡು ದಿನ ಕರೆಂಟ್​​ ತೆಗೆದ ಕಪ್ಪೆ: ಕೆಇಬಿ ಕಾರ್ಯಾಚರಣೆಯಲ್ಲಿ ಬಯಲಾಯ್ತು ಹೀಗೊಂದು ಅಚ್ಚರಿ

ಎರಡು ದಿನದ ಬಳಿಕ ನಿರಂತರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ವಿದ್ಯುತ್ ಸಮಸ್ಯೆ ಕಾರಣ ತಿಳಿಯಲು ಯಶಸ್ವಿಯಾದರು. ಅಷ್ಟಕ್ಕೂ ಇಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಕ್ಕೆ ಕಾರಣವಾಗಿದ್ದು ಅದೊಂದು ಕಪ್ಪೆ!

news18-kannada
Updated:June 7, 2020, 6:10 PM IST
ಕೊಡಗಿನಲ್ಲಿ ಎರಡು ದಿನ ಕರೆಂಟ್​​ ತೆಗೆದ ಕಪ್ಪೆ: ಕೆಇಬಿ ಕಾರ್ಯಾಚರಣೆಯಲ್ಲಿ ಬಯಲಾಯ್ತು ಹೀಗೊಂದು ಅಚ್ಚರಿ
ಕರೆಟ್​​ ತೆಗೆದ ಕಪ್ಪೆ
  • Share this:
ಕೊಡಗು(ಜೂ.07): ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಬಂತೆಂದರೆ ಪವರ್ ಕಟ್ ಆಗೋದು ಸಾಮಾನ್ಯ. ಹಲವು ಬಾರಿ ವಿದ್ಯುತ್ ದುರಸ್ತಿಯಿಂದ ಗಂಟೆಗಟ್ಟಲೇ ಗ್ರಾಮಗಳು ಕಾರ್ಗತ್ತಲಿನಲ್ಲಿ ಮುಳುಗುವುದು ಕೂಡ ಸಹಜ. ಜಿಲ್ಲೆಯ ಜನರು ಕೂಡ ಕತ್ತಲ ನಡುವೆ ಬದುಕುವುದನ್ನು ಕಲಿತಿದ್ದಾರೆ. ಚೆಸ್ಕಾಂ ಸಿಬ್ಬಂದಿಗಳು ಕೂಡ ಹಗಲಿರುಳು ಶ್ರಮಿಸಿ ಸೇವೆ ನೀಡುತ್ತಾರೆ. ಹೀಗಿರುವಾಗ ಬಲು ಅಪರೂಪದ ಘಟನೆಯೊಂದು ಜಿಲ್ಲೆಯಲ್ಲಿ ಸಂಭವಿಸಿದೆ.

ಇಲ್ಲಿನ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪದ ಬಲ್ಯಮಂಡೂರು ಗ್ರಾಮದ ಸುತ್ತ ಮುತ್ತ ಕಳೆದೆರಡು ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲದೆ ಜನರು ಪರದಾಡುತ್ತಿದ್ದರು. ಗಾಳಿ-ಮಳೆಯಿಲ್ಲದ ಸಂದರ್ಭದಲ್ಲಿ ಪವರ್ ಕಟ್ ಆಗಲು ಕಾರಣವೇನು ಎಂದು ತಿಳಿಯಲು ಜನರು ಸೇರಿ ಸ್ಥಳೀಯ ಚೆಸ್ಕಾಂ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದರು. ಎಷ್ಟೇ ತಲೆ ಕೆಡಿಸಿಕೊಂಡರು ಲೈನ್ ಮೆನ್ ಗಳಿಗೆ ಸಮಸ್ಯೆಯ ಮೂಲ ಹುಡುಕಲು ಸಾಧ್ಯವೇ ಆಗಿರಲಿಲ್ಲ.

ಎರಡು ದಿನದ ಬಳಿಕ ನಿರಂತರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ವಿದ್ಯುತ್ ಸಮಸ್ಯೆ ಕಾರಣ ತಿಳಿಯಲು ಯಶಸ್ವಿಯಾದರು. ಅಷ್ಟಕ್ಕೂ ಇಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದಕ್ಕೆ ಕಾರಣವಾಗಿದ್ದು ಅದೊಂದು ಕಪ್ಪೆ.

ಇದನ್ನೂ ಓದಿ: ಕೋವಿಡ್​​-19 ವಿರುದ್ದ ಹೋರಾಟ: ಸಿಎಂ ಪರಿಹಾರ ನಿಧಿಗೆ ಹರಿದು ಬಂದ ಒಟ್ಟು ಹಣವೆಷ್ಟು ಗೊತ್ತೇ?

ಹೌದು, ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎರಡು ದಿನ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದ್ದು ವಿದ್ಯುತ್ ತಂತಿಯಲ್ಲಿ ಸತ್ತಿದ್ದ ಕಪ್ಪೆ ಎಂದರೆ ನೀವು ನಂಬಲೇಬೇಕು.  ವಿದ್ಯುತ್ ಕಂಬವೇರಿ 11ಕೆವಿ ತಂತಿಗೆ ತಾಗಿ ಸತ್ತ ಕಪ್ಪೆಯಿಂದ ಆ ಲೈನೇ ಟ್ರಿಪ್ಪ್ ಆಗಿತ್ತು. ಸತ್ತು ಅಂಟಿಕೊಂಡ ಕಪ್ಪೆಯನ್ನು ತೆಗೆಯುವ ತನಕ ಎಷ್ಟೇ ಬಾರಿ ಚಾರ್ಜ್ ಮಾಡಿದರು ಟ್ರಿಪ್ಪ್ ಆಗ್ತಿತ್ತೇ ಹೊರತು ಕರೆಂಟ್ ಆ ಮಾರ್ಗಕ್ಕೆ ಚಾರ್ಜ್ ಆಗುತ್ತಿರಲಿಲ್ಲ.

ಲೈನ್ ಮ್ಯಾನ್ ಆ ಚಿಕ್ಕ ಕಪ್ಪೆಯನ್ನು ಹುಡುಕಿ ತೆಗೆದು ಚಾರ್ಜ್ ಮಾಡಿದ ಬಳಿಕವಷ್ಟೇ ವಿದ್ಯುತ್ ಸಂಪರ್ಕ ಸಫಲವಾಯಿತು. ಕೊನೆಗೂ ಅಲ್ಲಿನ ಲೈನ್ ಮೆನ್ ಹಾಗೂ ಸ್ಥಳೀಯರು ಕಪ್ಪೆಯಿಂದ ಪರದಾಡಿದ ಬಳಿಕ ನಿಟ್ಟುಸಿರು ಬಿಡುವಂತಾಯಿತು. ಒಂದು ಸಣ್ಣ ಕಪ್ಪೆಯಿಂದ ಎಷ್ಟೆಲ್ಲಾ ಅವಾಂತರ ಆಗಬಹುದಾ ಎನ್ನುವುದಕ್ಕೆ ಈ ಘಟನೆಯೊಂದು ಉತ್ತಮ ನಿದರ್ಶನವೇ ಸರಿ.
First published: June 7, 2020, 6:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories