ಐಷಾರಾಮಿ ಕಾರಿನ ಆಸೆಗೆ ಬಿದ್ದು, ಇದ್ದ ಕಾರಿನ ಜೊತೆ 9 ಲಕ್ಷವನ್ನು ಕಳ್ಕೊಂಡ ವ್ಯಕ್ತಿ

ಸ್ನೇಹಿತರ ಮಾತು ನಂಬಿ ಕಾದು ಕುಳಿತ ನಾರಾಯಣ ಸ್ವಾಮಿ ಮನೆ ಮುಂದೆ ಕಡೆಗೆ ಗುಜರಿ ಟಿಪ್ಪರ್​ ಲಾರಿಯೊಂದು ಬಂದು ನಿಂತಿದೆ. ಇದರಿಂದ ಅವಕ್ಕಾದ ನಾರಾಯಣ ಸ್ವಾಮಿ ಈ ಕುರಿತು ಸ್ನೇಹಿತರ ಸಂಪರ್ಕಕ್ಕೆ ಮುಂದಾಗಿದ್ದಾರೆ. ಆದರೆ, ಆದಾಗಲೇ ಅವರು ಮೋಸ ಮಾಡಿ ಪರಾರಿಯಾಗಿತ್ತು. 

ಮೋಸ ಹೋದ ನಾರಾಯಣಸ್ವಾಮಿ

ಮೋಸ ಹೋದ ನಾರಾಯಣಸ್ವಾಮಿ

 • Share this:
  ಕೋಲಾರ (ಫೆ.17): ಅತಿಆಸೆ ಎಂಬುದು ಮನುಷ್ಯನನ್ನು ಹೇಗೆ ಮೋಸ ಮಾಡುತ್ತದೆ ಎಂಬುದಕ್ಕೆ ಸಾಕ್ಷಿ ಈ ಘಟನೆ. ಹೊಸ ಕಾರಿನ ಆಸೆಗೆ ಬಿದ್ದ ವ್ಯಕ್ತಿಯೊಬ್ಬ ಇರುವ ಕಾರನ್ನು ಮಾರಿ ಕಡೆಗೆ ಲಕ್ಷಾಂತರ ರೂ ಹಣ ಕಳೆದುಕೊಳ್ಳುವ ಜೊತೆಗೆ, ಗುಜರಿ  ಟಿಪ್ಪರ್​ ಲಾರಿಯ ಮಾಲೀಕನಾಗಿ ಕಣ್ಣೀರು ಹಾಕುತ್ತಿದ್ದಾರೆ. 

  ನಾರಾಯಣಸ್ವಾಮಿ ಮೋಸ ಹೋದ ವ್ಯಕ್ತಿ.  ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದವರು. . ಕಳೆದೆರಡು ತಿಂಗಳ  ಹಿಂದೆ ತಾವು ಕೆಲಸ ಮಾಡುತ್ತಿದ್ದ ಆಲ್ಪಾ ಗ್ರಾನೈಟ್​ ಕಂಪನಿಯಲ್ಲಿ  ಮನ್ಸೂರ್ ಪಾಷಾ ಹಾಗೂ ಪ್ರಕಾಶ್ ಬಾಬು ಎಂಬ ಇಬ್ಬರು ಈತನಿಗೆ ಪರಿಚಯವಾಗಿದ್ದರು.

  ನಾರಾಯಣ ಸ್ವಾಮಿ ಸ್ನೇಹ ಸಂಪಾದಿಸಿದ ಈ ಇಬ್ಬರು ಆತನಿಗೆ ಐಷಾರಾಮಿ ಕಾರಿನ ಮೋಹ ಹುಟ್ಟಿಸಿದ್ದಾರೆ. ನಿನ್ನ ಬಳಿ ಇರುವ ಟಾಟಾ ಸಫಾರಿ ಕಾರು ಮಾರಿ ಎರಾಟಿಕಾ ಕಾರು ಕೊಡಿಸುತ್ತೇವೆ ಎಂಬ ಹುಸಿ ಭರವಸೆ ಮೂಡಿಸಿದ್ದಾರೆ. ಸ್ನೇಹಿತರ ಮೋಸದ ಜಾಲದಲ್ಲಿ ಸಿಕ್ಕ ನಾರಾಯಣ ಸ್ವಾಮಿ ಕೂಡ ನಂಬಿ, ತನ್ನ ಬಳಿ ಇದ್ದ ಟಾಟಾ ಸಫಾರಿ ಕಾರನ್ನು  3.10 ಲಕ್ಷಕ್ಕೆ ಮುನ್ಸೂರ್ ಪಾಷಾ ಮೂಲಕ ಮಾರಾಟ ಮಾಡಿದ್ದಾರೆ.

  ಈ ಹಣವನ್ನು ಮಣಪ್ಪುರಂ ಫೈನಾನ್ಸ್​​ ಕಂಪನಿಯಲ್ಲಿ ಎರಟಿಗಾ ಕಾರು ಪಡೆಯಲು 6.15 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ.  ಸ್ನೇಹಿತರ ಮಾತು ನಂಬಿ ಕಾದು ಕುಳಿತ ನಾರಾಯಣ ಸ್ವಾಮಿ ಮನೆ ಮುಂದೆ ಕಡೆಗೆ ಗುಜರಿ ಟಿಪ್ಪರ್​ ಲಾರಿಯೊಂದು ಬಂದು ನಿಂತಿದೆ. ಇದರಿಂದ ಅವಕ್ಕಾದ ನಾರಾಯಣ ಸ್ವಾಮಿ ಈ ಕುರಿತು ಸ್ನೇಹಿತರ ಸಂಪರ್ಕಕ್ಕೆ ಮುಂದಾಗಿದ್ದಾರೆ. ಆದರೆ, ಆದಾಗಲೇ ಅವರು ಮೋಸ ಮಾಡಿ ಪರಾರಿಯಾಗಿತ್ತು.

  ಇನ್ನು ಉಳಿದಿರುವ ಮಾರ್ಗ ಒಂದೇ ಎಂಬಂತೆ ಮಣಪ್ಪುರಂ ಫೈನಾನ್ಸ್​ ಕಂಪನಿ ಮೆಟ್ಟಿಲು ಹತ್ತಿದಾಗ ಅಸಲಿ ಸತ್ಯ ಹೊರ ಬಿದ್ದಿದೆ.  ಎರಟಿಗಾ ಕಾರು ಕೊಳ್ಳಲು ಫೈನಾನ್ಸ್​ ಕಂಪನಿಯಿಂದ 6.50 ಲಕ್ಷ ಸಾಲ ತೆಗೆದುಕೊಳ್ಳುವುದಾಗಿ ದಾಖಲೆ ನೀಡಿದ್ದಾರೆ. ಗೆಳೆಯ ನೀಡಿದ ದಾಖಲೆ ಪರಿಶೀಲನೆ ಮಾಡದ ನಾರಾಯಣ ಸ್ವಾಮಿ ಆತನ ಮಾತಿನ ಮೇಲೆ ಎಲ್ಲ ದಾಖಲೆಗೆ ಸಹಿ ಹಾಕಿದ್ದಾರೆ. ಆದರೆ, ಆತ ಸಹಿ ಹಾಕಿದ್ದು, ಕಾರಿನ ಬದಲು ಟಿಪ್ಪರ್​ ಲಾರಿಗೆ ಎಂಬುದು ಬಳಿಕ ತಿಳಿದು ಬಂದಿದೆ.

  ಇದನ್ನು ಓದಿ: ದಿಢೀರ್​ ವರ್ಗಾವಣೆಯಾದ ಕೋಲಾರ ಜಿಲ್ಲಾಧಿಕಾರಿ; ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಮೂಡಿಸಿದ ಸರ್ಕಾರದ ಆದೇಶ ಪ್ರತಿ

  ಅಷ್ಟೇ ಅಲ್ಲದೇ, ಮನ್ಸೂರ್​ ಪಾಷಾನ ಮಾರಾಟವಾಗದ ಗುಜರಿ ಟಿಪ್ಪರ್​ ಲಾರಿ ತನಗೆ ಮಾರಾಟ ಮಾಡಿ, ಅದರ ಮೇಲೆ ಆತ ಸಾಲ ಮಾಡಿ ಆ ಹಣವನ್ನು ಕೊಂಡೊಯ್ದಿರುವುದು ತಿಳಿದು ಬಂದಿದೆ.

  ಟಿಪ್ಪರ್​ ನಾರಾಯಣ ಸ್ವಾಮಿ ಹೆಸರಿನಲ್ಲಿರುವುದರಿಂದ ಅದರ ಮೇಲಿನ 6.50 ಲಕ್ಷ ಸಾಲ ಮರಳಿ ನೀಡುವಂತೆ ಫೈನಾನ್ಸ್​ ಕಂಪನಿ ನೋಟಿಸ್​ ನೀಡಿದೆ. ತನ್ನ ಕಾರು ಕಳೆದುಕೊಳ್ಳುವ ಜೊತೆಗೆ 9.60 ಲಕ್ಷವನ್ನು ಮೋಸ ಹೋಗಿ ಕಂಗಾಲಾದ ನಾರಾಯಣ ಸ್ವಾಮಿ ಈಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

  (ವರದಿ: ರಘುರಾಜ್​)
  First published: