Double Murder: ಬೆಂಗಳೂರು ಹೊರವಲಯದಲ್ಲಿ ಜೋಡಿ ಕೊಲೆ; 15 ಸಾವಿರ ಹಣಕಾಸು ವಿಚಾರಕ್ಕೆ ಡಬಲ್ ಮರ್ಡರ್ ಶಂಕೆ!

ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾಸ್ಕರ್ ಮತ್ತು ದೀಪಕ್ ಕೊಲೆಗೆ ಫೈನಾನ್ಸ್ ವಿಚಾರ ಕಾರಣವೋ ಅಥವಾ ಜೂಜಾಟ ದಂಧೆ ಕಾರಣವೋ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್: ಅವರಿಬ್ಬರು ಆತ್ಮೀಯ ಸ್ನೇಹಿತರು. ಫೈನಾನ್ಸ್ ವ್ಯವಹಾರ (Finance business) ಸಹ ಜೊತೆಯಾಗಿ ನಡೆಸುತ್ತಿದ್ದರು. ಎಂದಿನಂತೆ ಫೈನಾನ್ಸ್ ಹಣ ವಸೂಲಿಗೆ ಹೋಗಿದ್ದ ಇಬ್ಬರು ತಡರಾತ್ರಿಯಾದರೂ ವಾಪಸ್ ಆಗಿರಲಿಲ್ಲ. ಅತ್ತ ಫೋನುಗಳು ಮಾತ್ರ ರಿಂಗಣಿಸುತ್ತಿದ್ದವು. ಆದರೆ ರಿಸೀವ್ ಮಾಡಿರಲಿಲ್ಲ. ಬೆಳಗ್ಗೆ ನಿರ್ಜನ ಪ್ರದೇಶವೊಂದರಲ್ಲಿ ಬರ್ಬರವಾಗಿ ಕೊಲೆಯಾದ (Double Murder) ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಷ್ಟಕ್ಕೂ ಇಬ್ಬರು ಸ್ನೇಹಿತರ ಬರ್ಬರ ಕೊಲೆಗೆ ಕಾರಣವಾದರೂ ಏನೂ ಅಂತೀರಾ? ಈ ಸ್ಟೋರಿ ಒಮ್ಮೆ ಓದಿ.

ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಇವರ ಹೆಸರು ಭಾಸ್ಕರ್ ಆನೇಕಲ್ ತಾಲ್ಲೂಕಿನ ಮಾಯಸಂದ್ರ ನಿವಾಸಿ. ದೀಪಕ್ ಮೂಲತಃ ನಗರದ ಕೊರಮಂಗಲ ನಿವಾಸಿಯಾಗಿದ್ದು, ಸದ್ಯ ಅತ್ತಿಬೆಲೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದವರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಟಿವಿಎಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕೊಲೆಯಾದ ಸ್ನೇಹಿತರು. ಇಂದು ಬೆಳಗ್ಗೆ  8 ಗಂಟೆ ಸುಮಾರಿಗೆ ಸ್ಥಳೀಯರು ಹೊಲದ ಬಳಿ ಬಂದಾಗ ಮೃತ ದೇಹಗಳು ಪತ್ತೆಯಾಗಿವೆ. ಸಮೀಪದಲ್ಲಿಯೇ ಉರುಳಿ ಬಿದ್ದ ಸ್ಥಿತಿಯಲ್ಲಿ ಪಲ್ಸರ್ ಬೈಕ್ ಪತ್ತೆಯಾಗಿದ್ದು, ಮತ್ತೊಂದು ಹೊಂಡಾ ಎಕ್ಸ್ಟ್ರೀಮ್ ಬೈಕ್ ಸಹ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ. ತಲೆ ಮೇಲೆ ಕಲ್ಲು ಹಾಕಿ, ಮದ್ಯದ ಬಾಟಲಿಗಳಿಂದ ಚುಚ್ಚಿ ಇಬ್ಬರನ್ನು ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ 7 ರಿಂದ 8 ಗಂಟೆ ಸುಮಾರಿನಲ್ಲಿ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ವಸಂತ್ ತಿಳಿಸಿದ್ದಾರೆ.

ಇನ್ನೂ ಮೃತ ದೀಪಕ್ ಸಣ್ಣ ಪುಟ್ಟ ಫೈನಾನ್ಸ್ ಮಾಡಿಕೊಂಡಿದ್ದರೆ, ಸೊಪ್ಪಿನ ವ್ಯಪಾರ ನಡೆಸುತ್ತಿದ್ದ ಭಾಸ್ಕರ್ ಲಾಕ್ ಡೌನ್ ನಿಂದಾಗಿ ನಷ್ಟ ಹೊಂದಿ ಇತ್ತೀಚೆಗೆ ದೀಪಕ್ ಜೊತೆ ಫೈನಾನ್ಸ್  ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಹತ್ತರಿಂದ ಐವತ್ತು ಸಾವಿರದವರೆಗೆ ಫೈನಾನ್ಸ್ ನೀಡುತ್ತಿದ್ದ ಇವರು ಡೈಲಿ, ವೀಕ್ಲಿ ಮತ್ತು ಮಂತ್ಲಿ ಇಂತಿಷ್ಟು ಪರ್ಸೆಂಟೆಜ್​ಗೆ ಫೈನಾನ್ಸ್ ನೀಡುತ್ತಿದ್ದರು. ಫೈನಾನ್ಸ್ ಎಂದ ಮೇಲೆ ಲೇವಾದೇವಿ ವಿಚಾರವಾಗಿ ಸಣ್ಣ ಪುಟ್ಟ ಜಗಳ, ಗಲಾಟೆ ಮಾತಿನ ಚಕಮಕಿ ಕಾಮನ್. ಅದೇ ರೀತಿ ತಮಿಳುನಾಡಿನ ಬೇಗಿಹಳ್ಳಿ ವಾಸಿಗಳಾದ ದೊರೆ ಮತ್ತು ಅರುಣ್ ಎಂಬುವವರು ಇವರ ಬಳಿ ಹದಿನೈದು ಸಾವಿರ ಸಾಲ ಪಡೆದುಕೊಂಡಿದ್ದರು. ಆದರೆ ಸರಿಯಾದ ಸಮಯಕ್ಕೆ ಹಣ ವಾಪಸ್ ನೀಡಿರಲಿಲ್ಲ. ಇದೇ ವಿಚಾರವಾಗಿ ವಾರದ ಹಿಂದೆ ದೀಪಕ್ ಮತ್ತು ಅರುಣ್ ನಡುವೆ ಜಗಳ ನಡೆದಿತ್ತು. ಈ ವೇಳೆ ದೀಪಕ್ ಗೆ ನಿನ್ನ ಒಂದು ಕೈ ನೋಡಿಕೊಳ್ಳುವುದಾಗಿ ಅರುಣ್ ವಾರ್ನ್ ಮಾಡಿದ್ದ ಎನ್ನಲಾಗಿದೆ.

ಇದರ ನಡುವೆ ನಿನ್ನೆ ದೀಪಕ್ ಮತ್ತು ಭಾಸ್ಕರ್ ಎಂದಿನಂತೆ ಫೈನಾನ್ಸ್ ವಸೂಲಿಗೆ ಅರುಣ್ ಮತ್ತು ದೊರೆ ಬಳಿ ಹೋಗಿದ್ದಾರೆ. ಮತ್ತದೆ ಸಬೂಬು ಹೇಳಿದ್ದರಿಂದ ಕೋಪಗೊಂಡ ದೀಪಕ್ ಮತ್ತ ಭಾಸ್ಕರ್ ಅರುಣ್ ಬಳಿ ಇದ್ದ ಹೊಂಡಾ ಎಕ್ಸ್ಟ್ರೀಮ್ ಬೈಕ್ ಕಸಿದುಕೊಂಡು ಬಂದಿದ್ದಾರೆ. ಸಂಜೆ ಹೊತ್ತಿಗೆ ಫೋನ್ ಮೂಲಕ ದೀಪಕ್ ಮತ್ತು ಭಾಸ್ಕರ್ ನನ್ನು ಸಂಪರ್ಕಿಸಿದ ದೊರೆ ಮತ್ತು ಅರುಣ್ ಸೆಟ್ಲಮೆಂಟ್ ಮಾಡಿಕೊಳ್ಳುವುದಾಗಿ ಕರೆದಿದ್ದಾರೆ ಎನ್ನಲಾಗಿದೆ. ಇವರ ಮಾತು ನಂಬಿ ಸ್ಥಳಕ್ಕೆ ಬಂದ ದೀಪಕ್ ಮತ್ತು ಭಾಸ್ಕರ್ ಮೇಲೆ ಮೊದಲೇ ಪ್ಲಾನ್ ಮಾಡಿದಂತೆ ಭೀಕರವಾಗಿ ದಾಳಿ ನಡೆಸಿ ಆರೋಪಿಗಳು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಕೆ ವಂಶಿಕೃಷ್ಣ ತಿಳಿಸಿದ್ದಾರೆ.

ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್

ಇನ್ನೂ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಮೃತ ಭಾಸ್ಕರ್ ಇದೇ ತಿಂಗಳು 9 ನೇ ತಾರೀಖು ತಮಿಳುನಾಡಿನ ಹೊಸೂರು ಸಮೀಪದ ಅರಸನಹಟ್ಟಿ ಬಳಿ ಜೂಜು ಆಡುವಾಗ ಸಿಕ್ಕಿಬಿದ್ದು ಕೃಷ್ಣಗಿರಿ ಜೈಲು ಪಾಲಾಗಿದ್ದ. ಸಿಪ್ ಕಾಟ್ ಪೊಲೀಸರಿಗೆ ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದಾಗ  ಒಟ್ಟು 16 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿತ್ತು. ಎ 6 ಆರೋಪಿಯಾಗಿದ್ದ ಭಾಸ್ಕರ್ ವಾರದ ಹಿಂದೆ ಜಾಮೀನು ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಜೊತೆಗೆ ಜಾಮೀನು ಷರತ್ತಿನಂತೆ ನಿತ್ಯ ಸಿಪ್ ಕಾಟ್ ಠಾಣೆಗೆ ಹೋಗಿ ಸಹಿ ಹಾಕಿ ಬರುತ್ತಿದ್ದ. ನಿನ್ನೆ ಸಹ ಸ್ನೇಹಿತ ದೀಪಕ್ ಜೊತೆ ಸಿಪ್ ಕಾಟ್ ಠಾಣೆಯಲ್ಲಿ ಸಹಿ ಮಾಡಿ ಬಂದಿದ್ದ. ಅಂದಹಾಗೆ ಫೈನಾನ್ಸ್ ಹಣ ವಸೂಲಿಗೆ ಭಾಸ್ಕರ್ ಹೋಗಿದ್ದಾಗ ಹಣ ನೀಡಬೇಕಾದರು ಜೂಜು ಅಡ್ಡೆ ಬಳಿ ಹಣ ನೀಡುವುದಾಗಿ ಕರೆಸಿಕೊಂಡಿದ್ದರು. ಅದೇ ಸಮಯಕ್ಕೆ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಫೈನಾನ್ಸ್ ಗೆ ಹಣ ಪಡೆದವರೇ ಭಾಸ್ಕರ್ ಮೇಲೆ ಪೊಲೀಸರ ಬಳಿ ದೂರಿದ್ದರು. ಹಣ ನೀಡಿ ಜೂಜಾಟ ಆಡಿಸುತ್ತಾನೆ ಎಂದು ದೂರಿದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಜೂಜುಕೋರರು ಮತ್ತು ಭಾಸ್ಕರ್ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.

ಇದನ್ನು ಓದಿ BS Yediyurappa: ನಮ್ಮ ತಾತ ತರಕಾರಿ ಮಾರುತ್ತಿದ್ದರು, ನಾನು ಮಂಡ್ಯದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದೆ; ಬಿಎಸ್ ಯಡಿಯೂರಪ್ಪ!

ಸದ್ಯ ಡಬಲ್ ಮರ್ಡರ್ ನಡೆದ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಡಾಗ್ ಸ್ಕ್ವಾಡ್ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಜೊತೆಗೆ ಮೃತರ ಸಂಬಂಧಿಕರು ಸಹ ಆರೋಪಿಗಳ ಬಗ್ಗೆ ಸುಳಿವು ನೀಡಿದ್ದು, ಈಗಾಗಲೇ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚನೆ ಮಾಡಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವುದಾಗಿ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾಸ್ಕರ್ ಮತ್ತು ದೀಪಕ್ ಕೊಲೆಗೆ ಫೈನಾನ್ಸ್ ವಿಚಾರ ಕಾರಣವೋ ಅಥವಾ ಜೂಜಾಟ ದಂಧೆ ಕಾರಣವೋ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ವರದಿ : ಆದೂರು ಚಂದ್ರು
Published by:HR Ramesh
First published: