ಬಿಜೆಪಿಗೆ ಮತ್ತೊಮ್ಮೆ ‘ಲಿಂಗಾಯತ’ ತಲೆನೋವು; ವಿಜಯೇಂದ್ರ ಬಗ್ಗೆ ಸ್ವಾಮೀಜಿಗಳದ್ದೂ ತಗಾದೆ

ಪಂಚಮಸಾಲಿ ಹೋರಾಟ ಮುಂದುವರಿದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗುತ್ತದೆಂದು ಭಾವಿಸಿ ಬಿ.ವೈ. ವಿಜಯೇಂದ್ರ ಅವರು ಹೋರಾಟದ ದಿಕ್ಕುತಪ್ಪಿಸಲು ಯತ್ನಿಸಿದರು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

 • News18
 • Last Updated :
 • Share this:
  ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕೊಡುವಂತೆ ಆಗ್ರಹಿಸಿ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಪ್ರತಿಭಟನೆ ಇವತ್ತು ಆರಂಭವಾಗುತ್ತಿದೆ. ಲಿಂಗಾಯತ ಸಮಾಜದಲ್ಲಿ ಶೇ. 70ರಷ್ಟಿರುವ ಪಂಚಮಸಾಲಿ ಸಮುದಾಯಕ್ಕೆ ಒಬಿಸಿ ವರ್ಗದ 2ಎ ಮೀಸಲಾತಿ ಕೊಡಬೇಕೆಂದು ಸಮಾಜದ ಸ್ವಾಮಿಗಳು ಮತ್ತೆ ಧ್ವನಿ ಎತ್ತಿದ್ದಾರೆ. ಒಂದು ತಿಂಗಳ ಕಾಲದವರೆಗೂ ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯತಂತ್ರ ರೂಪಿಸಿದ್ದಾರೆ. ಇವತ್ತು ಆಗಸ್ಟ್ 26ರಿಂದ ನಡೆಯುವ ‘ಪ್ರತಿಜ್ಞಾ ಪಂಚಾಯತ್’ ಹೋರಾಟ ಸೆಪ್ಟೆಂಬರ್ 30ರವರೆಗೂ ಇರಲಿದೆ. ಈ ಹೋರಾಟಕ್ಕೆ ಸಮುದಾಯದ ಬೆಂಬಲ ಗಳಿಸಲು ರಾಜ್ಯದ ಪ್ರತಿಯೊಂದು ತಾಲೂಕಿನಲ್ಲೂ ಜಾಗೃತಿ ಶಿಬಿರಗಳನ್ನ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಸಲು ನಿಶ್ಚಯಿಸಲಾಗಿದೆ.

  ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುವುದಾಗಿ ವಿಧಾನಸಭೆಯಲ್ಲಿ ಸರ್ಕಾರ ಭರವಸೆ ನೀಡಿತ್ತು. ಅದನ್ನು ನಾನು ನೆನಪಿಸುತ್ತೇವೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಅವರು ನ್ಯೂಸ್18 ಕನ್ನಡಕ್ಕೆ ತಿಳಿಸಿದ್ದಾರೆ. ಆರು ತಿಂಗಳ ಹಿಂದೆ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ 500 ಕಿಮೀ ಪಾದಯಾತ್ರೆ ನಡೆಸಲಾಗಿತ್ತು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಈ ದೊಡ್ಡ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ತಕ್ಕುದಾದ ಪ್ರಮಾಣದಲ್ಲಿ ಮೀಸಲಾತಿ ಕೊಡಬೇಕು ಎಂಬುದು ಇವರ ಪ್ರಮುಖ ಬೇಡಿಕೆ. ಆದರೆ, ಸ್ವಾಮೀಜಿ ಮಾಧ್ಯಮಗಳ ಜೊತೆ ಮಾತನಾಡುವಾಗ ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದು ಗಮನಾರ್ಹ. ಪಂಚಮಸಾಲಿ ಹೋರಾಟದ ದಿಕ್ಕು ತಪ್ಪಿಸಲು ವಿಜಯೇಂದ್ರ ಪ್ರಯತ್ನಿಸಿದರು ಎಂದು ಶ್ರೀಗಳು ಹೇಳಿ ಅಚ್ಚರಿ ಮೂಡಿಸಿದರು.

  “ಯಡಿಯೂರಪ್ಪ ಸರ್ಕಾರ ನಮ್ಮ ಯಾತ್ರೆಯನ್ನ ನಿರ್ಲಕ್ಷಿಸಿತು. ಅವರನ್ನ ದಿಕ್ಕುತಪ್ಪಿಸಿದ್ದು ಅವರ ಮಗ ವಿಜಯೇಂದ್ರನೇ. ಒಂದು ಕಾಲದಲ್ಲಿ ನಮ್ಮ ಸಮುದಾಯದವರು ಯಡಿಯೂರಪ್ಪ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಈಗ ಅವರ ನಿಲುವು ಬದಲಾಗಿದೆ” ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ಕರ್ನಾಟಕದ 6.5 ಕೋಟಿ ಜನಸಂಖ್ಯೆಯಲ್ಲಿ ಲಿಂಗಾಯತರ ಸಂಖ್ಯೆ 80 ಲಕ್ಷದಷ್ಟಿರಬಹುದು. ಇವ ಪೈಕಿ ಶೇ. 70ರಷ್ಟು ಪಂಚಮಸಾಲಿಗಳೇ ಇದ್ದಾರೆ. ಉತ್ತರ ಕರ್ನಾಟಕದ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಸದ್ಯ ಲಿಂಗಾಯತರಿಗೆ 3ಬಿ ಮೀಸಲಾತಿ ಸಿಗುತ್ತಿದೆ. ಇದರಲ್ಲಿ ಅವರು ಜೈನರು, ಕ್ರೈಸ್ತರು ಸೇರಿ ಹಲವು ಸಮುದಾಯಗಳ ಜೊತೆ ಮೀಸಲಾತಿ ಹಂಚಿಕೊಳ್ಳಬೇಕಾಗುತ್ತದೆ. 3ಎ ಕೋಟಾಗೆ ಶೇ. 5ರಷ್ಟು ಮೀಸಲಾತಿ ಇದೆ. ಆದರೆ, ಇದಕ್ಕಾಗಿ ವಿವಿಧ ಸಮುದಾಯಗಳ ಪೈಪೋಟಿ ಬಹಳಷ್ಟಿದೆ. ಒಂದು ವೇಳೆ 2ಎ ಕೋಟಾ ಅಡಿ ಮೀಸಲಾತಿ ಸಿಕ್ಕರೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 15ರಷ್ಟು ಸ್ಥಾನಗಳ ಅವಕಾಶ ಇರುತ್ತದೆ. ಕುರುಬ, ಈಡಿಗ ಮೊದಲಾದ ಪ್ರಬಲ ಹಿಂದುಳಿದ ಸಮುದಾಯಗಳೂ ಇದೇ 2ಎ ಕೋಟಾದಲ್ಲಿ ಬರುತ್ತವೆ. ಶೇ. 15ರಷ್ಟು ಮೀಸಲಾತಿ ಇರುವುದರಿಂದ ಪಂಚಮಸಾಲಿಗಳಿಗೆ ಹೆಚ್ಚು ಲಾಭವಾಗುವ ನಿರೀಕ್ಷೆ ಇದೆ.

  ಇದನ್ನೂ ಓದಿ: ಭಾರತದ ಜೊತೆ ತಾಲಿಬಾನ್ ಸಂಬಂಧ ಹೇಗಿರುತ್ತೆ? ಇಲ್ಲಿದೆ Exclusive ಸಂದರ್ಶನದ ಮಾಹಿತಿ

  ಪಂಚಮಸಾಲಿಗಳಿಗೆ ಸದ್ಯಕ್ಕೆ ಓಬಿಸಿ ಸ್ಥಾನಮಾನ ನೀಡಬೇಕೆಂಬುದು ಇವರ ತುರ್ತು ಆಗ್ರಹ. ಫೆಬ್ರವರಿ ತಿಂಗಳಲ್ಲಿ ಆಗ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಸಂಬಂಧ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಆ ವರದಿ ಇನ್ನೂ ಸಲ್ಲಿಕೆಯಾಗಿಲ್ಲ. ಈಗ ಪಂಚಮಸಾಲಿಗಳ ಪ್ರತಿಭಟನೆ ಪುನಾರಂಭಗೊಂಡಿರುವುದರಿಂದ ಆ ವರದಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಎಲ್ಲಾ ಬೆಳವಣಿಗೆಯು ಬಿಜೆಪಿ ಪಕ್ಷಕ್ಕೂ ಮುಜುಗರ ತಂದಿದೆ. ಬ್ರಾಹ್ಮಣರಂತೆ ಲಿಂಗಾಯತ ಸಮುದಾಯಗಳೂ ಕೂಡ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್. ಆದರೆ, ಸಮುದಾಯದ ಜನರ ನಿಲುವುಗಳ ಮೇಲೆ ಹಿಡಿತ ಇರುವುದು ಮಠಗಳಲ್ಲೇ. ಹೀಗಾಗಿ, ಲಿಂಗಾಯತ ಸ್ವಾಮೀಜಿಗಳನ್ನ ಎದುರುಹಾಕಿಕೊಳ್ಳುವ ಧೈರ್ಯವನ್ನು ಬಿಜೆಪಿ ತೋರಲಾಗದು. ಇದೇ ವೇಳೆ, ಜಯಮೃತ್ಯುಂಜಯ ಸ್ವಾಮೀಜಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಸಕರಾತ್ಮಕ ಧೋರಣೆ ಹೊಂದಿದ್ದಾರೆ.

  “ಸಿಎಂ ಬೊಮ್ಮಾಯಿ ಅವರು ನಮ್ಮ ಬೇಡಿಕೆಯನ್ನ ಒಪ್ಪಿ ಈ ವರ್ಷಾಂತ್ಯದೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುತ್ತಾರೆಂಬ ವಿಶ್ವಾಸ ಇದೆ” ಎಂದು ಅವರು ತಿಳಿಸುತ್ತಾರೆ. ಆದರೆ, ಬೊಮ್ಮಾಯಿ ಸಂಪುಟದಲ್ಲಿರುವ ಪಂಚಮಸಾಲಿ ಸಮಾಜಕ್ಕೆ ಸೇರಿದ ಮುರುಗೇಶ್ ನಿರಾಣಿ ಮತ್ತು ಸಿಸಿ ಪಾಟೀಲ್ ಅವರು ಹೊಸ ಹೋರಾಟದ ಬಗ್ಗೆ ಹೆಚ್ಚು ಮಾತನಾಡಲು ಬಯಸುತ್ತಿಲ್ಲ. ಆರು ತಿಂಗಳ ಹಿಂದೆ ನಡೆದಿದ್ದ ಪಂಚಮಸಾಲಿ ಹೋರಾಟದ ವೇಳೆ ಸರ್ಕಾರ ಹಾಗೂ ಸ್ವಾಮಿಗಳ ಮಧ್ಯೆ ಸಂಪರ್ಕಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಸಚಿವರು ಈಗ ಮೌನ ವಹಿಸಿದ್ದಾರೆ. ಸ್ವಾಮೀಜಿಗಳ ಕೆಂಗಣ್ಣಿಗೆ ಗುರಿಯಾಗಿರುವ ಬಿ ವೈ ವಿಜಯೇಂದ್ರ ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ.

  ವರದಿ: ದೀಪಾ ಬಾಲಕೃಷ್ಣನ್, CNN-News18
  Published by:Vijayasarthy SN
  First published: