• Home
  • »
  • News
  • »
  • state
  • »
  • 'ಸಾವರ್ಕರ್​ ರೋಮಕ್ಕೂ ದೊರೆಸ್ವಾಮಿ ಸಮನಲ್ಲ'; ಮತ್ತೋರ್ವ ಬಿಜೆಪಿ ನಾಯಕನಿಂದ ಕೀಳುದರ್ಜೆಯ ಹೇಳಿಕೆ

'ಸಾವರ್ಕರ್​ ರೋಮಕ್ಕೂ ದೊರೆಸ್ವಾಮಿ ಸಮನಲ್ಲ'; ಮತ್ತೋರ್ವ ಬಿಜೆಪಿ ನಾಯಕನಿಂದ ಕೀಳುದರ್ಜೆಯ ಹೇಳಿಕೆ

ಹಿರಿಯ ಚೇತನ ಎಚ್.ಎಸ್. ದೊರೆಸ್ವಾಮಿ

ಹಿರಿಯ ಚೇತನ ಎಚ್.ಎಸ್. ದೊರೆಸ್ವಾಮಿ

‘ಸ್ವಾತಂತ್ರ್ಯ ಹೋರಾಟದ ಕರ್ನಾಟಕದ ಕಣ್ಮಣಿಗಳು’ ಪುಸ್ತಕ ಬಿಡುಗಡೆ ವೇಳೆ ಮಾತನಾಡಿದ್ದ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ, ಸಾವರ್ಕರ್​ ಅವರನ್ನು ಹೇಡಿ ಎಂದು ಸಂಬೋಂಧಿಸಿದ್ದರು. ಇದಕ್ಕೆ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್​ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Share this:

ಬೆಂಗಳೂರು (ಮಾ.1); ಹೆಚ್​.ಎಸ್​. ದೊರೆಸ್ವಾಮಿ ಅವರು ಸಾವರ್ಕರ್ ಅವರ ಕುದಲಿಗೂ ಸಮಾನರಲ್ಲ ಎಂದು ಕೀಳುದರ್ಜೆಯ ಹೇಳಿಕೆ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಬಿಜೆಪಿ ನಾಯಕ ಹಾಗೂ ಯುವ ಮೋರ್ಚ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ಕಿಡಿಕಾರಿದ್ದಾರೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಶನಿವಾರ ದಿವ್ಯಚಂದ್ರ ಪ್ರಕಾಶನ ಏರ್ಪಡಿಸಿದ್ದ ಎನ್. ಪದ್ಮನಾಭರಾವ್ ಅವರ ‘ಸ್ವಾತಂತ್ರ್ಯ ಹೋರಾಟದ ಕರ್ನಾಟಕದ ಕಣ್ಮಣಿಗಳು’ ಪುಸ್ತಕ ಲೋಕಾರ್ಪಣೆ ಮಾಡಿ ದೊರೆಸ್ವಾಮಿ ಮಾತನಾಡಿದ್ದರು. "ಮಹಾತ್ಮ ಗಾಂಧಿಗೆ ಬೇರಾರೂ ಸಾಟಿಯಿಲ್ಲ. ಅದೇ ರೀತಿ ನಾನು ಎಂದೆಂದಿಗೂ ದೊರೆ ಸ್ವಾಮಿಯೇ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ತಪ್ಪು ಮಾಡಿದ್ದೇನೆ ಎಂದು ಹೇಡಿಯಂತೆ ಪತ್ರ ಬರೆದು ಸಾವರ್ಕರ್​ ಕ್ಷಮೆಯಾಚಿಸಿದ್ದರು. ಹೀಗಾಗಿ ನನ್ನನ್ನು ಅಂತವರ ಜೊತೆಗೆ ದಯವಿಟ್ಟು ಹೋಲಿಕೆ ಮಾಡಬೇಡಿ" ಎಂದಿದ್ದರು. ಆದರೆ, ದೊರೆಸ್ವಾಮಿ ಅವರ ಹೇಳಿಕೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸಿದೆ.

ದೊರೆಸ್ವಾಮಿ ಅವರ ಹೇಳಿಕೆಗೆ ಇಂದು ಕೆಂಡಕಾರಿರುವ ಬಿಜೆಪಿ ಮುಖಂಡ ಭೀಮಾಶಂಕರ ಪಾಟೀಲ, “ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮಹಾತ್ಮ ಗಾಂಧಿಯ ಜೊತೆಗೆ ಲಕ್ಷಾಂತರ ಯುವಕರು ಪಾಲ್ಗೊಂಡಿದ್ದರು. ಈ ಪೈಕಿ ದೊರೆಸ್ವಾಮಿ ಕೂಡ ಒಬ್ಬರಿರಬಹುದು. ಆದರೆ, ಸ್ವತಃ ದೊರೆಸ್ವಾಮಿ ಬ್ರಿಟೀಷರ ವಿರುದ್ಧ ಉಗ್ರ ಹೋರಾಟ ಮಾಡಿದ ಬಗ್ಗೆ ನಮಗೆ ಗೊತ್ತಿಲ್ಲ. ರಾಜ್ಯದಲ್ಲಿ ಸಾಕಷ್ಟು ಸ್ವಾತಂತ್ರ ಹೋರಾಟಗಾರರಿದ್ದರು ಮತ್ತು ಈಗಲೂಇದ್ದಾರೆ. ಆದರೆ, ಅವರ್ಯಾರು ದೇಶದ್ರೋಹಿಗಳ ಜೊತೆ ಟೌನ್ ಹಾಲ್ ಎದುರು ಕುಳಿತು ಘೋಷಣೆ ಕೂಗಿಲ್ಲ.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸುಧಾಕರ್ ಚತುರ್ವೇದಿ ನಿಧನ

ಸಾವರ್ಕರ ಅವರ ಹೋರಾಟ ಎಂತಹದ್ದು ಎನ್ನುವುದನ್ನು ಮೊದಲು ದೊರೆಸ್ವಾಮಿ ಓದಲಿ. ದೊರೆಸ್ವಾಮಿ ಸಾವರ್ಕರ್ ಅವರ ಕೂದಲಿಗೂ ಸಮನಲ್ಲ ಹೀಗಾಗಿ ಸಾವರ್ಕರ್ ಅಂಥ ಸ್ವಾತಂತ್ರ ಯೋಧನ ಬಗ್ಗೆ ದೊರೆಸ್ವಾಮಿ ತಾವು ಆಡಿದ ಮಾತನ್ನ ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಅವರ ವಿರುದ್ಧ ನಾವು ಉಗ್ರ ಹೋರಾಟ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದರು.ದೊರ

First published: