ಮೈಸೂರು ವಿವಿಯಲ್ಲಿ free kashmir ಪೋಸ್ಟರ್ ವಿಚಾರ; ಸತತ 7 ಗಂಟೆ ವಿಚಾರಣೆಗೊಳಗಾಗಿ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ ನಳಿನಿ

ಮೈಸೂರು ವಿವಿ ಆವರಣದಲ್ಲಿ ಜನವರಿ 8 ರಂದು ದೊಡ್ಡ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್​ Free Kashmir  ಎಂಬ ಫಲಕವನ್ನು ಹಿಡಿದಿದ್ದು ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ, ಆಕೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ರಾಜ್ಯಪಾಲರು ಈ ಕುರಿತು ತುರ್ತು ವರದಿ ತರಿಸಿಕೊಂಡಿದ್ದರು.

news18-kannada
Updated:January 11, 2020, 5:23 PM IST
ಮೈಸೂರು ವಿವಿಯಲ್ಲಿ free kashmir ಪೋಸ್ಟರ್ ವಿಚಾರ; ಸತತ 7 ಗಂಟೆ ವಿಚಾರಣೆಗೊಳಗಾಗಿ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ ನಳಿನಿ
ಮೈಸೂರು ವಿವಿಯಲ್ಲಿ Free Kashmir ಪೋಸ್ಟರ್
  • Share this:
ಮೈಸೂರು (ಜನವರಿ 11); ದೆಹಲಿಯ ಜೆಎನ್​ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ Free Kashmir ಪೋಸ್ಟರ್​ ಪ್ರದರ್ಶಿಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಪತ್ರಿಕೋದ್ಯಮ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಇಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ. ಅಲ್ಲದೆ, ಸತತ 7 ಗಂಟೆ ನಡೆದ ವಿಚಾರಣೆಯಲ್ಲಿ ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಜನವರಿ.05 ರಂದು ಕೆಲವು ಕಿಡಿಗೇಡಿಗಳು ದೆಹಲಿಯ ಜವಹರ್​ ಲಾಲ್​ ನೆಹರು ವಿಶ್ವವಿದ್ಯಾಲಯದ ಹಾಸ್ಟೆಲ್​ಗೆ ನುಗ್ಗಿದ್ದರು. ಅಲ್ಲದೆ, ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಹಲ್ಲೆಯಲ್ಲಿ ಜೆಎನ್​ಯು ವಿದ್ಯಾರ್ಥಿ ಮುಖಂಡೆ ಐಶೆ ಘೋಷ್​ ಬಲವಾದ ಪೆಟ್ಟು ತಿಂದು ತರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದರು. ಈ ಘಟನೆಗೆ ಇಡೀ ರಾಷ್ಟ್ರದಾದ್ಯಂತ ಖಂಡನೆ ವ್ಯಕ್ತವಾಗಿತ್ತು.

ಈ ಹಲ್ಲೆಯನ್ನು ಖಂಡಿಸಿ ಮೈಸೂರು ವಿವಿ ಆವರಣದಲ್ಲಿ ಜನವರಿ 8 ರಂದು ದೊಡ್ಡ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್​ Free Kashmir  ಎಂಬ ಫಲಕವನ್ನು ಹಿಡಿದಿದ್ದು ದೊಡ್ಡ ಮಟ್ಟದ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ, ಆಕೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ರಾಜ್ಯಪಾಲರು ಈ ಕುರಿತು ತುರ್ತು ವರದಿ ತರಿಸಿಕೊಂಡಿದ್ದರು.

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಿನ್ನೆ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಪಡೆದಿದ್ದ ನಳಿನಿ ಬಾಲಕುಮಾರ್​ ನ್ಯಾಯಾಲಯದ ಸೂಚನೆಯಂತೆ ಇಂದು ಪೊಲೀಸರ ವಿಚಾರಣೆ ಒಳಗಾಗಿದ್ದಾರೆ. ಸತತ 7 ಗಂಟೆ ನಡೆದ ವಿಚಾರಣೆಯಲ್ಲಿ ಕೆಲ ಪ್ರಶ್ನೆಗಳನ್ನು ಬಿಟ್ಟು ಉಳಿದ ಎಲ್ಲಾ ಪ್ರಶ್ನೆಗಳಿಗೂ ಅವರು ಉತ್ತರ ನೀಡಿದ್ದಾರೆ. ಅವರು ಮೌಕಿಕವಾಗಿ ನೀಡಿದ ಉತ್ತರವನ್ನು ಪೊಲೀಸರು ಲಿಖಿತವಾಗಿ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಉಳಿದವರ ವಿಚಾರಣೆಯನ್ನು ಪೊಲೀಸರು ನಾಳೆಗೆ ಮುಂದೂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಮೈಸೂರು ವಿವಿ Free Kashmir ಪ್ರಕರಣ; ನಿರೀಕ್ಷಣಾ ಜಾಮೀನು ಪಡೆದ ವಿದ್ಯಾರ್ಥಿನಿ ನಳಿನಿ, ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ