ಮೈಸೂರಿನ Free Kashmir ಪೋಸ್ಟರ್​ ಪ್ರಕರಣ; ನಳಿನಿ ಎದುರು 80 ಪ್ರಶ್ನೆ ಮುಂದಿಟ್ಟ ಪೊಲೀಸರು 7.45 ಗಂಟೆ ವಿಚಾರಣೆ!

80 ಪ್ರಶ್ನೆಗಳನ್ನು ಪೊಲೀಸರು ಯುವತಿಗೆ ಕೇಳಿದ್ದು ಕೆಲ ಪ್ರಶ್ನೆಗಳಿಗೆ ಉತ್ತರಿಸದೆ ಮೌನವಾಗಿದ್ದ ನಳಿನಿ ಇತರೆ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಸಂಜೆ ವೇಳೆಗೆ ನಳಿನಿಯ ಹೇಳಿಕೆಯನ್ನ ಲಿಖಿತವಾಗಿ ದಾಖಲಿಸಿಕೊಂಡ ಪೊಲೀಸರು ಮತ್ತೆ ವಿಚಾರಣೆಗೆ ಅಗತ್ಯವಿದ್ದರೆ ಸಹಕರಿಸಿ ಎಂದು ತಿಳಿ ಹೇಳಿ ಕಳುಹಿಸಿಕೊಟ್ಟಿದ್ದಾರೆ.

ನಳಿನಿ ಬಾಲಕುಮಾರ್​

ನಳಿನಿ ಬಾಲಕುಮಾರ್​

  • Share this:
ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮೀರ್ ಪೋಸ್ಟರ್ ಪ್ರಕರಣ ಮೂರನೆ ದಿನದ ವೇಳೆ ಕೊಂಚ ತಣ್ಣಗಾದಂತಯೆ ಕಾಣುತ್ತಿದೆ. ಒಂದು ಹಂತಕ್ಕೆ ಕ್ಲೈಮ್ಯಾಕ್ಸ್ ತಲುಪಿದಂತೆ ಕಂಡರು ಪೋಸ್ಟರ್ ಹಿಡಿದು ಸಂಚಲನ ಸೃಷ್ಟಿಸಿದ್ದ ಯುವತಿ ಇಂದು ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದು ಮತ್ತೊಂದು ಹಂತದ ಚರ್ಚೆಗೆ ಕಾರಣವಾಗಿದೆ. ಠಾಣೆಗೆ ಹಾಜರಾದ ಯುವತಿಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೈದಿದು, ಸುಮಾರು 7.45 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಜ.8 ರಂದು ಮೈಸೂರು ವಿವಿ ಆವರಣದಲ್ಲಿ ಯುವತಿಯೊಬ್ಬಳು ಫ್ರೀ ಕಾಶ್ಮೀರ್ ಅಂತ ಬೋರ್ಡ್ ಹಿಡಿದು ಇಡೀ ದೇಶದಲ್ಲೆ ಸಂಚಲ ಸೃಷ್ಟಿ ಮಾಡಿದ್ಲು. ಆದರೆ, ಆ ಯುವತಿ ಯಾರು? ಅಲ್ಲಿ ಯಾಕೆ ಆ ಪೋಸ್ಟರ್​ ಹಿಡಿದಿದ್ಲು? ಅನ್ನೋ ಪ್ರಶ್ನೆಗಳು ಮಾತ್ರ ದೊಡ್ಡ ಕುತೂಹಲವನ್ನು ಮೂಡಿಸಿತ್ತು. ಘಟನೆ ನಂತರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆ ಯುವತಿಯ ಬಗ್ಗೆ ಮಾಹಿತಿ ಕಲೆಹಾಕಿದಾಗ ಯುವತಿ ಮೈಸೂರು ವಿವಿ ಹಳೆ ವಿದ್ಯಾರ್ಥಿ ನಳಿನಿ ಅಂತ ತಿಳಿದು ಬಂದಿತ್ತು.

ಇದಕ್ಕೆ ಪೂರಕವೆಂಬತ್ತೆ ನಿನ್ನೆ ಮೈಸೂರು ನ್ಯಾಯಾಲಯದಲ್ಲಿ ಶರತ್ತು ಬದ್ದ ಜಾಮೀನು ಪಡೆದಿದ್ದ ನಳಿನಿ ಎಂಬ ಯುವತಿ ಇಂದು ಜಾಮೀನಿನ ಪ್ರತಿಯೊಂದಿಗೆ ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಗೆ ತಂದೆ ಬಾಲಕುಮಾರ್ ಜೊತೆ ಹಾಜರಾಗಿ ವಿಚಾರಣೆ ಎದುರಿಸಿದ್ದಾಳೆ. ನಳಿನಿ ಮೂಲತಃ ತಮಿಳುನಾಡಿನ ನಿವಾಸಿಯಾಗಿದ್ದು ಮೈಸೂರಿನ ವಿವಿಯಲ್ಲಿ 2016ರಲ್ಲಿ  ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. ನಂತರ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್‌ನಲ್ಲಿ ದೆಹಲಿಯಲ್ಲಿ ಪೋಟೋಗ್ರಫಿಯ ಡಿಪ್ಲೊಮೋ ಪಡೆದಿದ್ದಾರೆ. ಪದವಿ ನಂತರ ಮೈಸೂರಿನ ರಾಮಕೃಷ್ಣನಗರದಲ್ಲಿ ವಾಸವಿರುವ ಈಕೆ ಘಟನೆಯ ಹೊಣೆ ಹೊತ್ತು ವಿಡಿಯೋ ಹಾಗೂ ಪತ್ರಿಕಾ ಪ್ರಕಟಣೆ ನೀಡಿ ಪ್ಲೇಕಾರ್ಡ್ ಹಿಡಿದ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಪ್ಲಕಾರ್ಡ್ ಹಿಡಿದ ಯುವತಿ ಇಂದು ಸ್ವಯಂ ಪ್ರೇರಿತವಾಗಿ ಠಾಣೆಗೆ ಹಾಜರಾಗಿದ ಬೆನ್ನಲ್ಲೆ ಯುವತಿಯ ವಿಚಾರಣೆ ಆರಂಭವಾಗಿತ್ತು. ನಿನ್ನೆ ಮಧ್ಯಂತರ ಜಾಮೀನು ಪಡೆದಿದ್ದ ನಳಿನಿ ಇಂದು ಜಾಮೀನು ಪ್ರತಿಯನ್ನು ಠಾಣೆಗೆ ನೀಡಲು ತಂದೆ ಜೊತೆ ಹಾಜರಾಗಿದ್ದಳು. ಬೆಳಗ್ಗೆ 10 ಗಂಟೆಗೆ ಠಾಣೆಗೆ ಬಂದ ಯುವತಿಯನ್ನ ಸತತ 7.45 ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸ್‌ ಅಧಿಕಾರಿಗಳು ನಳಿಗೆ ಪ್ರಶ್ನೆಗಳ ಸುರಿಮಳೆಗೈದರು. ಎಸಿಪಿ ಶಿವಶಂಕರ್ ಹಾಗೂ ಡಿಸಿಪಿ ಮುತ್ತುರಾಜ್ ನಡೆಸಿದ ವಿಚಾರಣೆಯಲ್ಲಿ ಯುವತಿಗೆ ಬರೋಬ್ಬರಿ ಸಿದ್ದಪಡಿಸಿದ್ದ 80 ಪ್ರಶ್ನೆಗಳನ್ನ ಕೇಳಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ಮಾಹಿತಿ ದೊರಕಿದೆ.

ಪೊಲೀಸರು ಯುವತಿಗೆ ಕೇಳಿರುವ ಪ್ರಶ್ನೆಗಳು ಇಂತಿವೆ:

ಪ್ರಶ್ನೆ 1. ಪ್ರತಿಭಟನೆಯಲ್ಲಿ ನಿಮ್ಮನ್ನ ಕರೆದವರು ಯಾರು ?.

ಪ್ರಶ್ನೆ 2. ಪ್ರತಿಭಟನೆ ಬಗ್ಗೆ ಮಾಹಿತಿ ಹೇಗೆ ಸಿಕ್ಕಿತು.?

ಪ್ರಶ್ನೆ 3. ಪ್ರತಿಭಟನೆಯಲ್ಲಿ ಯಾಕೇ ಭಾಗಿಯಾಗಿದ್ರಿ?

ಪ್ರಶ್ನೆ 4. ಪ್ರತಿಭಟನೆಯಲ್ಲಿ ಫ್ರೀ ಕಾಶ್ಮಿರ್ ಪೋಸ್ಟರ್ ಯಾಕೇ ಹಿಡಿದಿದ್ರಿ?

ಪ್ರಶ್ನೆ 5. ಪ್ರತಿಭಟನೆ ಇದ್ದದ್ದು JNU ವಿಚಾರವಾಗಿ ಅಲ್ಲಿ ಕಾಶ್ಮಿರ ವಿಚಾರ ಯಾಕೇ ಬಂತು ?

ಪ್ರಶ್ನೆ 6. ದೂರು ದಾಖಲಾದ ತಕ್ಷಣ ನಿಮ್ಮ ಫೇಸ್‌ಬುಕ್ ಡಿಲಿಟ್ ಮಾಡಿದ್ದು ಯಾಕೇ?

ಪ್ರಶ್ನೆ 7. ದೂರು ದಾಖಲಾದ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಯಾಕೇ ?

ಪ್ರಶ್ನೆ 8. ನಿಮ್ಮ ಉದ್ದೇಶ ಒಳ್ಳೆಯದಾಗಿದ್ದರೇ ನೀವು ಠಾಣೆಗೆ ಬರುವ ಮುಂಚೆ ಜಾಮೀನು ಪಡೆದದ್ದು ಏಕೆ?

ಪ್ರಶ್ನೆ 9.  ವಿವಿಯ ಹಳೆ ವಿದ್ಯಾರ್ಥಿಯಾಗಿರುವ ನೀವು ಈಗಲೂ ವಿವಿ ಜೊತೆ ನಿಕಟ ಸಂಪರ್ಕ ಹೊಂದಿರುವುದು ಏಕೆ?

ಪ್ರಶ್ನೆ 10. ನೀವು ಯಾವುದಾದರೂ ಸಂಘಟನೆಯಲ್ಲಿ ಸದಸ್ಯರಾಗಿದ್ದೀರ?

ಈ ರೀತಿ 80 ಪ್ರಶ್ನೆಗಳನ್ನು ಪೊಲೀಸರು ಯುವತಿಗೆ ಕೇಳಿದ್ದು ಕೆಲ ಪ್ರಶ್ನೆಗಳಿಗೆ ಉತ್ತರಿಸದೆ ಮೌನವಾಗಿದ್ದ ನಳಿನಿ ಇತರೆ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಸಂಜೆ ವೇಳೆಗೆ ನಳಿನಿಯ ಹೇಳಿಕೆಯನ್ನ ಲಿಖಿತವಾಗಿ ದಾಖಲಿಸಿಕೊಂಡ ಪೊಲೀಸರು ಮತ್ತೆ ವಿಚಾರಣೆಗೆ ಅಗತ್ಯವಿದ್ದರೆ ಸಹಕರಿಸಿ ಎಂದು ತಿಳಿ ಹೇಳಿ ಕಳುಹಿಸಿಕೊಟ್ಟಿದ್ದಾರೆ.

ಪೊಲೀಸ್​ ಠಾಣೆಯಿಂದ ಹೊರಬರುತ್ತಿದ್ದಂತೆ ಮಾಧ್ಯಮಗಳಿಗೆ ಈ ಕುರಿತು ಹೇಳಿಕೆ ನೀಡಿರುವ ನಳಿನಿ ಬಾಲಕುಮಾರ್, "ನನ್ನ ಹೇಳಿಕೆಯನ್ನು ಪತ್ರಿಕಾ ಪ್ರಕಟಣೆ ಮೂಲಕ ಈಗಾಗಲೇ ನೀಡಿದ್ದೇನೆ. ಮತ್ತಿನ್ನೇನೂ ಹೇಳೋದಿಲ್ಲ" ಎಂದು ಮಾಧ್ಯಮಗಳಿಂದ ದೂರ ಸರಿಯುವ ಕೆಲಸ ಮಾಡಿದ್ರು.  ಬಾರಿ ವಿವಾದಕ್ಕೆ ಕಾರಣವಾಗಿದ್ದ ಪ್ರೀ ಕಾಶ್ಮೀರ ಪ್ಲೇಕಾರ್ಡ ಪ್ರಕರಣ ಇದೀಗ ಒಂದು ಹಂತಕ್ಕೆ ತಣ್ಣಗಾಗಿದೆ. ಇನ್ನು ಪೊಲೀಸರು ಯಾವ ದಿಕ್ಕಿನಲ್ಲಿ ತನಿಖೆ ನಡೆಸಿ ಏನೆಂದು ಚಾರ್ಜ್ ಶೀಟ್ ಸಲ್ಲಿಸುತ್ತಾರೆ? ಎಂಬುದು ಸದ್ಯಕ್ಕಿರುವ ಕುತೂಹಲ.

ಇದನ್ನೂ ಓದಿ : ಮೈಸೂರು ವಿವಿಯಲ್ಲಿ free kashmir ಪೋಸ್ಟರ್ ವಿಚಾರ; ಸತತ 7 ಗಂಟೆ ವಿಚಾರಣೆಗೊಳಗಾಗಿ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿನಿ ನಳಿನಿ
Published by:MAshok Kumar
First published: