Teachers Day: ಇದು ಶಿಕ್ಷಕರ ದಿನಾಚರಣೆ ಸ್ಪೆಷಲ್, ವಂಡರ್‌ ಲಾದಿಂದ ವಂಡರ್‌ಫುಲ್ ಗಿಫ್ಟ್!

ಈಗ ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಖ್ಯಾತಿ ಪಡೆದಿರುವ ವಂಡರ್‌ ಲಾ ಶಿಕ್ಷಕರಿಗೆ ಗೌರವ ಸಮರ್ಪಿಸಲು ಮುಂದಾಗಿದೆ. ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾನ ವಂಡರ್ ಹಾಲಿಡೇಸ್ ಲಿಮಿಟೆಡ್ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಗೌರವ ಸಮರ್ಪಿಸಲು 150 ಶಾಲೆಗಳಿಂದ 300 ಶಿಕ್ಷಕರನ್ನು ಆಹ್ವಾನಿಸುತ್ತಿದೆ.

ಬೆಂಗಳೂರು ವಂಡರ್‌ ಲಾ

ಬೆಂಗಳೂರು ವಂಡರ್‌ ಲಾ

  • Share this:
    ಬೆಂಗಳೂರು: ತಮ್ಮ ವಾರಾಂತ್ಯವನ್ನು (Weekend) ಉಲ್ಲಾಸದ ಸಮಯವಾಗಿ ಕಳೆಯಬೇಕು ಅಂತ ಕುಟುಂಬ ಹಾಗೂ ಮಕ್ಕಳ (Family And Children’s) ಸಮೇತ ವಿವಿಧ ಸ್ಥಳಗಳಿಗೆ (Places) ಪಿಕ್‌ನಿಕ್ (Picnic) ಅಥವಾ ಪ್ರವಾಸಕ್ಕೆ (Trip) ಹೋಗುವುದನ್ನು ನೀವು ನೋಡಿರಬಹುದು. ತುಂಬಾ ಒತ್ತಡ ಮತ್ತು ತರಾತುರಿಯ ದೈನಂದಿನ ಹೊರೆಯನ್ನು ಮರೆತು ವೀಕೆಂಡ್ ನಲ್ಲಿ ಹಾಯಾಗಿ ದಿನ ಕಳೆಯಲು ಹಲವರು ಉದ್ಯಾನವನಗಳಿಗೆ (Park) ಹೋಗ್ತಾರೆ. ಬೆಂಗಳೂರಿನಲ್ಲಿ (Bengaluru) ಅಂತಹ ಅನೇಕ ಸ್ಥಳಗಳು ವಾರಾಂತ್ಯದಲ್ಲಿ ಜನರಿಂದ ತುಂಬಿ ತುಳುಕುತ್ತವೆ. ಮಕ್ಕಳು ಮತ್ತು ಫ್ಯಾಮಿಲಿ ಸದಸ್ಯರು ಕೆಲ ಸಮಯವನ್ನು ಸಂತಸದಿಂದ ಕಳೆಯಲು ಅಮ್ಯೂಸ್ ಮೆಂಟ್ ಪಾರ್ಕ್ (Amusement Park) ಗಳಿಗೂ ಹೋಗ್ತಾರೆ. ಮಕ್ಕಳೊಂದಿಗೆ ಅಲ್ಲಿ ಆಟೋಟಗಳನ್ನು (Games) ಆಡಿ ತಮ್ಮ ಶರೀರ ಮತ್ತು ಮನಸ್ಸನ್ನು (Body and Mind) ರಿಲ್ಯಾಕ್ಸ್‌ (Relax) ಮಾಡಿಕೊಳ್ತಾರೆ.

    ಬೆಂಗಳೂರು ಹಾಗೂ ಸುತ್ತಮುತ್ತಲಿನ ಮಂದಿ ತಮ್ಮ ವಾರಾಂತ್ಯದ ಸಮಯವನ್ನ ವಂಡರ್ ಲಾ ದಂತಹ ಸುಂದರವಾದ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಕಳೆಯಲು ಇಷ್ಟಪಡುತ್ತಾರೆ. ಬೆಂಗಳೂರಿನ ಅಮ್ಯೂಸ್‌ಮೆಂಟ್‌ ಪಾರ್ಕ್‌ ದೇಶದಲ್ಲೇ ಅತ್ಯುತ್ತಮ ಅಮ್ಯೂಸ್‌ಮೆಂಟ್ ಪಾರ್ಕ್ ಎಂದು ಗುರುತಿಸಿಕೊಂಡಿದೆ.

    ಇದನ್ನೂ ಓದಿ: ಕಲಬುರಗಿ ರೈತರಿಗೆ ಮಹತ್ವದ ಸೂಚನೆ ನೀಡಿದ ಜಿಲ್ಲಾಧಿಕಾರಿ

    300 ಶಿಕ್ಷಕರನ್ನು ಆಹ್ವಾನಿಸುತ್ತಿದೆ ಅಮ್ಯೂಸ್‌ಮೆಂಟ್ ಪಾರ್ಕ್

    ಈಗ ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಖ್ಯಾತಿ ಪಡೆದಿರುವ ವಂಡರ್‌ ಲಾ ಶಿಕ್ಷಕರ ದಿನಾಚರಣೆ ನಿಮಿತ್ತ ಸಮಸ್ತ ಶಿಕ್ಷಕರಿಗೆ ಗೌರವ ಸಮರ್ಪಿಸಲು ಮುಂದಾಗಿದೆ. ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ ಲಾನ ವಂಡರ್ ಹಾಲಿಡೇಸ್ ಲಿಮಿಟೆಡ್, ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಗೌರವ ಸಮರ್ಪಿಸಲು 150 ಶಾಲೆಗಳಿಂದ 300 ಶಿಕ್ಷಕರನ್ನು ಆಹ್ವಾನಿಸುತ್ತಿದೆ.

    300 ಶಿಕ್ಷಕರಿಗೆ ವಂಡರ್‌ ಲಾಗೆ ಉಚಿತ ಪ್ರವೇಶ

    ಈ ಆಯ್ದ ಶಾಲೆಗಳಿಂದ ವಂಡರ್‌ ಲಾ ಪಾರ್ಕ್‌ಗೆ ಬರುವ ಈ 300 ಶಿಕ್ಷಕರಿಗೆ ವಂಡರ್‌ ಲಾ ವತಿಯಿಂದ ಉಚಿತ ಪ್ರವೇಶ ನೀಡಲಾಗುತ್ತಿದೆ. ಈ ಸೌಲಭ್ಯವು ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 5ವರೆಗೆ ಕೊಚ್ಚಿ, ಬೆಂಗಳೂರು ಮತ್ತು ಹೈದರಾಬಾದ್ ಪಾರ್ಕ್‌ಗಳಲ್ಲಿ ಇರಲಿದೆ.

    ಶಿಕ್ಷಕರನ್ನು ಗೌರವಿಸಲು ವಂಡರ್‌ ಲಾದಿಂದ ಕೊಡುಗೆ

    ಈ ಬಗ್ಗೆ ವಂಡರ್‌ ಲಾ ಹಾಲಿಡೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ ಚಿಟ್ಟಿಲಪಿಲ್ಲಿ ಮಾತನಾಡಿ, ಸಾಂಕ್ರಾಮಿಕ ರೋಗದ ಮಧ್ಯೆಯೂ ಶಿಕ್ಷಕರು ಆನ್‌ಲೈನ್‌ ತರಗತಿ ಜೊತೆಗೆ ಮನೆ ಹಾಗೂ ಶಾಲೆ ಎರಡರಲ್ಲೂ ಸಮರ್ಪಕವಾಗಿ ಸೇವೆ ನೀಡಿದ್ದಾರೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಜೀವನದ ಪಾಠ ಕಲಿಸುವ ಈ ಮಾರ್ಗದರ್ಶಕರನ್ನು ವಂಡರ್‌ ಲಾ ಗೌರವಿಸುವ ಉದ್ದೇಶದಿಂದ ಈ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

    ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 5ವರೆಗೆ ಸೌಲಭ್ಯ

    ಇದಷ್ಟೇ ಅಲ್ಲದೆ, ಆಗಸ್ಟ್ 29 ರಿಂದ ಸೆಪ್ಟೆಂಬರ್ 05 ರವರೆಗೆ ವಂಡರ್‌ ಲಾ ಪಾರ್ಕ್‌ ಗೆ ಭೇಟಿ ನೀಡುವ ಎಲ್ಲಾ ಶಿಕ್ಷಕರಿಗೂ ತಮ್ಮ ಬುಕಿಂಗ್‌ಗಳ ಮೇಲೆ ಶೇ. 20ರಷ್ಟು ರಿಯಾಯಿತಿ ಘೋಷಿಸಿದೆ. ಈ ಕೊಡುಗೆಯನ್ನು ಪಡೆಯಲು ಕಡ್ಡಾಯವಾಗಿ ಗುರುತಿನ ಚೀಟಿ ತರುವುದು ಮುಖ್ಯವಾಗಿದೆ.

    ಇದನ್ನೂ ಓದಿ: ಶಾರದಜ್ಜಿಯ ಹಾಡು ಕೇಳಿ! ಇವರು ಹೊನ್ನಾವರದ ಜಾನಪದ ಗಾನಶಾರದೆ

    ಹೆಚ್ಚಿನ ಮಾಹಿತಿಗಾಗಿ www.wonderla.com ಗೆ ಭೇಟಿ ನೀಡಿ ಅಥವಾ ಬೆಂಗಳೂರು - 080 37230333, 080 35073966 ಕರೆ ಮಾಡಿ.

    ಇನ್ನು ವಂಡರ್‌ಲಾ ಬೆಂಗಳೂರಿನ ಹೊರವಲಯದಲ್ಲಿರುವ ಜನಪ್ರಿಯ ಥೀಮ್ ಪಾರ್ಕ್ ಮತ್ತು ಮನರಂಜನಾ ಚಟುವಟಿಕೆ ಕೇಂದ್ರವಾಗಿದೆ. ಮೋಜಿನ ಸವಾರಿಗಳು, ನೀರಿನ ಆಟಗಳು ಮತ್ತು ಅಡ್ರಿನಾಲಿನ್ ಪಂಪಿಂಗ್ ಹೈ ಥ್ರಿಲ್ ಸವಾರಿಗಳಿಂದ ತುಂಬಿರುವ ಒಂದು ದಿನದ ಕುಟುಂಬ ತಾಣವಾಗಿದೆ ವಂಡರ್‌ಲಾ.
    Published by:renukadariyannavar
    First published: