• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • CM Basavaraj Bommai: ಕೇವಲ ಘೋಷಣೆಗೆ ಮಾತ್ರ ಸೀಮಿತವಾಯ್ತಾ ಭರವಸೆ? ಮಾತು ತಪ್ಪಿದ ರಾಜ್ಯ ಸರ್ಕಾರ!

CM Basavaraj Bommai: ಕೇವಲ ಘೋಷಣೆಗೆ ಮಾತ್ರ ಸೀಮಿತವಾಯ್ತಾ ಭರವಸೆ? ಮಾತು ತಪ್ಪಿದ ರಾಜ್ಯ ಸರ್ಕಾರ!

ಬಸವರಾಜ್ ಬೊಮ್ಮಾಯಿ, ಸಿಎಂ

ಬಸವರಾಜ್ ಬೊಮ್ಮಾಯಿ, ಸಿಎಂ

ಆದರೆ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿಗೆ ಉಚಿತ ಪಾಸ್ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಈ ಹಿನ್ನೆಲೆ ಸಾರಿಗೆ ಸಂಸ್ಥೆ ಯಾವುದೇ ಬಸ್ ಪಾಸ್ ವಿತರಣೆ ಮಾಡಿಲ್ಲ.

  • Share this:

ಬೆಂಗಳೂರು: ದುಡಿಯುವ ಮಹಿಳೆಯರಿಗಾಗಿ (Working Women) ಉಚಿತ ಬಸ್ ಪಾಸ್ (Free Bus Pass) ನೀಡಲಾಗುವುದು ಎಂದು ರಾಜ್ಯ ಸರ್ಕಾರ (Karnataka Government) ಈ ಬಾರಿ ಬಜೆಟ್​ನಲ್ಲಿ (Karnataka Bu ಘೋಷಣೆ ಮಾಡಿತ್ತು. ಇಂದಿನಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಆಗಬೇಕಿತ್ತು. ಇಂದಿನಿಂದ ಸರ್ಕಾರಿ ಬಸ್​ನಲ್ಲಿ (Government Bus) ಉಚಿತ ಪ್ರಯಾಣಕ್ಕೆ (Free Travel) ಅವಕಾಶ ನೀಡಬೇಕಿತ್ತು. ಆದರೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ನೀಡಿದ ಭರವಸೆ ಹುಸಿಯಾಗಿದೆ. ರಾಜ್ಯ ಬಜೆಟ್​​ನಲ್ಲಿ 30 ಲಕ್ಷ ಅಸಂಘಟಿತ ವಲಯದಲ್ಲಿ (Unorganized Sector) ಕೆಲಸ ಮಾಡ್ತಿರುವ ಮಹಿಳೆಯರಿಗೆ ಬಸ್ ಪಾಸ್ ಭರವಸೆಯನ್ನು ಸಿಎಂ ಬೊಮ್ಮಾಯಿ ನೀಡಿದ್ದರು. ಬಸ್ ಪಾಸ್ ವಿತರಣೆ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು.


ಸಿಎಂ ಹೇಳಿದ್ದಂತೆ ಇಂದಿನಿಂದ ಉಚಿತ ಬಸ್ ಪಾಸ್ ವಿತರಣೆ ಆಗಬೇಕಿತ್ತು. ಇಂದಿನಿಂದ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕಿತ್ತು. ಕೊಟ್ಟ ಮಾತಿನಂತೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಿಲ್ಲ. ಉಚಿತ ಬಸ್ ಪಾಸ್ ವಿತರಣೆಗೆ ಬಜೆಟ್ ನಲ್ಲಿ 1 ಸಾವಿರ ಕೋಟಿ ಮೀಸಲಿಡಲಾಗಿತ್ತು.


ಸಾರಿಗೆ ಸಂಸ್ಥೆಗೆ ಸಿಗದ ಯಾವುದೇ ಆದೇಶ?


ಆದರೆ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿಗೆ ಉಚಿತ ಪಾಸ್ ಬಗ್ಗೆ ಯಾವುದೇ ಆದೇಶ ಬಂದಿಲ್ಲ. ಈ ಹಿನ್ನೆಲೆ ಸಾರಿಗೆ ಸಂಸ್ಥೆ ಯಾವುದೇ ಬಸ್ ಪಾಸ್ ವಿತರಣೆ ಮಾಡಿಲ್ಲ.
ಹಾಸನದಿಂದ ಎಚ್​​.ಕೆ .ಮಹೇಶ್​ ಕಣಕ್ಕೆ?


ಹಾಸನ ರಾಜಕಾರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವರೂಪ್ ಗೆ ಚೆಕ್​ಮೇಟ್​​ ಕೊಡಲು ರೇವಣ್ಣ ಪ್ಲ್ಯಾನ್ ಮಾಡಿದ್ದಾರಂತೆ. ಎಚ್.ಕೆ.ಮಹೇಶ್ ಅಚ್ಚರಿಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.


ಇದನ್ನೂ ಓದಿ: JDS ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ನಿರ್ಮಾಪಕ ಮಂಜುಗೆ ಬಿಗ್ ಶಾಕ್!


ಈಗಾಗ್ಲೇ ದೇವೆಗೌಡರನ್ನು ಭೇಟಿ ಮಾಡಿ ಎಚ್​ಕೆ ಮಹೇಶ್​ ಚರ್ಚೆ ನಡೆಸಿದ್ದಾರಂತೆ. ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಕೆ.ಮಹೇಶ್ ಪ್ರೀತಂ ಗೌಡ ವಿರುದ್ಧ ಸೋತಿದ್ದರು.

First published: