• Home
 • »
 • News
 • »
 • state
 • »
 • BDA Site: ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ ಶೇಖರ್ ಹೆಸರಿನ ನಿವೇಶನವನ್ನೇ ಲಪಟಾಯಿಸಿದ ಭೂಗಳ್ಳರು!

BDA Site: ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ ಶೇಖರ್ ಹೆಸರಿನ ನಿವೇಶನವನ್ನೇ ಲಪಟಾಯಿಸಿದ ಭೂಗಳ್ಳರು!

ಶಾಸಕ ಗೂಳಿಹಟ್ಟಿ ಶೇಖರ್

ಶಾಸಕ ಗೂಳಿಹಟ್ಟಿ ಶೇಖರ್

ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಸಂಬಂಧಿಸಿದ ಸುಮಾರು 10 ಕೋಟಿ ರೂಪಾಯಿ ಬೆಲೆ ಬಾಳುವ 50*80 ವಿಸ್ತೀರ್ಣದ ನಿವೇಶನದ ಭೂದಾಖಲೆಗಳೆಲ್ಲವನ್ನು ನಕಲು ಮಾಡಿ ಬೇರೊಬ್ಬರ ಹೆಸರಿಗೆ ಖಾತೆ ವರ್ಗಾಯಿಸಿಕೊಂಡ ಘಟನೆ ನಡೆದಿದ್ದು, ಈ ಸಂಬಂಧ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore, India
 • Share this:

ಬೆಂಗಳೂರು: ಗಗನಕ್ಕೇರಿದ ಭೂಮಿ ಬೆಲೆಯ ಕಾರಣದಿಂದ ಬಡವರು ನಿವೇಶನಗಳನ್ನು (Site Purchase) ಖರೀದಿಸೋದು ಕನಸಿನ ಮಾತು. ಬೆಂಗಳೂರಿನಂತಹ (Bengaluru) ನಗರಗಳಲ್ಲಂತೂ ನಿವೇಶನಗಳ ಬೆಲೆ ಕೇಳೋ ಹಾಗಿಲ್ಲ. ಇದರ ಮಧ್ಯೆಯೇ ಭೂಗಳ್ಳರ (Land Mafia) ಸಂಖ್ಯೆ ವ್ಯಾಪಕವಾಗಿ ಮಿತಿ ಮೀರುತ್ತಿದೆ. ನಕಲಿ ದಾಖಲೆ (Fake Documents) ಸೃಷ್ಟಿಸಿ ಜನಸಾಮಾನ್ಯರ ನಿವೇಶನಗಳ ಖಾತೆ ಬದಲಾವಣೆ ಮಾಡುವವರ ಸಂಖ್ಯೆ ಕೂಡ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ. ಇದೆಲ್ಲದರ ಮಧ್ಯೆ ಶಾಸಕರ (MLA Goolihatty Shekhar) ನಿವೇಶನಗಳ ದಾಖಲೆಗಳನ್ನೇ ಬದಲು ಮಾಡಿ ಮೋಸಗೈದ ಘಟನೆ ಬೆಳಕಿಗೆ ಬಂದಿದೆ.


ಇದನ್ನೂ ಓದಿ: BDA: ಪರಿಹಾರ ನೀಡದ ಬಿಡಿಎ; ಲೇಔಟ್ ಮುಖ್ಯರಸ್ತೆಗೆ ಬೇಲಿ ಹಾಕಿದ ವೃದ್ಧ ದಂಪತಿ


ಹೌದು, ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಸಂಬಂಧಿಸಿದ ಸುಮಾರು 10 ಕೋಟಿ ರೂಪಾಯಿ ಬೆಲೆ ಬಾಳುವ 50*80 ವಿಸ್ತೀರ್ಣದ ನಿವೇಶನದ ಭೂದಾಖಲೆಗಳೆಲ್ಲವನ್ನೂ ನಕಲು ಮಾಡಿ ಬೇರೊಬ್ಬರ ಹೆಸರಿಗೆ ಖಾತೆ ವರ್ಗಾಯಿಸಿಕೊಂಡ ಘಟನೆ ನಡೆದಿದ್ದು, ಈ ಸಂಬಂಧ ಶಾಸಕ ಗೂಳಿ ಹಟ್ಟಿ ಶೇಖರ್ ಅವರು ಸಂಜಯ ನಗರ ಪೊಲೀಸ್ ಠಾಣೆಯಲ್ಲಿ 8 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


ಬಿಡಿಎ ಸೈಟ್ ಗೋಲ್ ಮಾಲ್


ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ  ಸಬ್​ ರಿಜಿಸ್ಟ್ರಾರ್ ಕಚೇರಿಯಲ್ಲಿ ಮತ್ತೊಬ್ಬರ ಹೆಸರಿಗೆ ನಿವೇಶನವನ್ನು ನೋಂದಣಿ ಮಾಡಿಸಿಕೊಂಡಿದ್ದು, ಸುಳ್ಳು ದಾಖಲೆಗಳ ಆಧಾರದ ಮೇಲೆ ಶಾಸಕ ಗೂಳಿಹಟ್ಟಿ ಶೇಖರ್‌ ಹೆಸರಿನ ನಿವೇಶನವನ್ನ ಕಂಡವರ ಹೆಸರಿಗೆ ನೋಂದಣಿ ಮಾಡಿಕೊಟ್ಟ ಬ್ಯಾಟರಾಯನಪುರ ಸಬ್ ರಿಜಿಸ್ಟರ್ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಉಳಿದಂತೆ ಶಾಸಕರ ದೂರಿನ ಆಧಾರದ ಮೇಲೆ ಪ್ರಕರಣದ ಆರೋಪಿಗಳಾದ ರಾಮಮೂರ್ತಿ ಅಲಿಯಾಸ್ ಮುನಿವಣ್ಣನ್, ಅನುರಾಧಾ, ದೀಪೀಕಾ, ನಿವೇತಿಕಾ, ಜಿಮ್ಮಿ ರಾಹುರ್ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ: Lake Encroachment: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ, ಸರ್ಕಾರಿ ಸಂಸ್ಥೆಗಳಿಂದಲೇ ಬೆಂಗಳೂರಿನ ಕೆರೆ ಒತ್ತುವರಿ!


ಅಂದ ಹಾಗೆ, 2015 ರಲ್ಲಿ ಶಾಸಕ ಗೂಳಿಹಟ್ಟಿ ಶೇಖರ್, ಶಾಸಕ ಅಭಯ್ ಪಾಟೀಲ್ ಹಾಗೂ ಮಾಜಿ ಸಚಿವ, ಪಿಎಂ ನರೇಂದ್ರ ಸ್ವಾಮಿಗೆ ಸರ್ಕಾರದ ವತಿಯಿಂದ ನಿವೇಶನ ಹಂಚಿಕೆ ಮಾಡಲಾಗಿತ್ತು. ಲೊಟ್ಟೆ ಗೊಲ್ಲಹಳ್ಳಿ, ಸಂಜಯ ನಗರದ ಆರ್ ಎಂವಿ 2 ನೇ ಹಂತದಲ್ಲಿ ಹಂಚಿಕೆಯಾದ ನಿವೇಶನಕ್ಕೆ ದುಡ್ಡು ಕಟ್ಟಿ ಸಂಪೂರ್ಣ ದಾಖಲೆ ಹೊಂದಿದ್ದ ಶಾಸಕ ಗೂಳಿಹಟ್ಟಿ ಶೇಖರ್ ಇದೀಗ ತಮ್ಮ‌ ಸೈಟು ಬೇರೆಯವರ ಹೆಸರಿಗೆ ನೋಂದಣಿ ಆಗಿರೋದನ್ನು ಕಂಡು ಶಾಕ್ ಆಗಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಬಿಡಿಎ ಹಾಗೂ ಕಂದಾಯ ಇಲಾಖೆಯಲ್ಲಿ ತನಿಖೆ ನಡೆಸಲಾಗ್ತಿದೆ.


ಸುಮಾರು 8 ಕೋಟಿ ಮೌಲ್ಯದ ಸೈಟು


2015 ರಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಮಂಜೂರಾಗಿದ್ದ ಈ ಬಿಡಿಎ ಸೈಟ್‌ನ ಪ್ರಸ್ತುತ ಬೆಲೆ 10 ಕೋಟಿ ಎಂದು ಅಂದಾಜಿಸಲಾಗಿದ್ದು, ಈ ನಿವೇಶನ 50*80 ವಿಸ್ತೀರ್ಣ ಹೊಂದಿದೆ ಎನ್ನಲಾಗಿದೆ. ನಗರದ ಲೊಟ್ಟೆ ಗೊಲ್ಲಹಳ್ಳಿ, ಸಂಜಯ ನಗರದ ಆರ್ ಎಂವಿ 2 ನೇ ಹಂತದಲ್ಲಿ ಇರುವ ಈ ನಿವೇಶನಕ್ಕೆ ಶಾಸಕ ಗೂಳಿಹಟ್ಟಿ ಶೇಖರ್ ಅವರು ತಮ್ಮ ಹೆಸರಿನಲ್ಲಿ ಬೇಲಿ ಹಾಕಿದ್ದರು. ಅದಾಗ್ಯೂ ಕಿಡಿಗೇಡಿಗಳು ಈ  ನಿವೇಶನದ ಭೂ ದಾಖಲೆಗಳೆಲ್ಲವನ್ನು ನಕಲು ಮಾಡಿ ಬೇರೊಬ್ಬರ ಹೆಸರಿಗೆ ಖಾತೆ ವರ್ಗಾಯಿಸಿಕೊಂಡಿದ್ದಾರೆ. ಒಬ್ಬ ಶಾಸಕನಿಗೆ ಈ ರೀತಿ ಮೋಸ ಆದರೆ ಇನ್ನು ಜನಸಾಮಾನ್ಯರ ಕಥೆ ಏನು ಅಂತಾ ಜನ ಮಾತನಾಡಿಕೊಳ್ತಿದ್ದಾರೆ.
ಸದ್ಯ ಶಾಸಕ ಗೂಳಿಹಟ್ಟಿ ಶೇಖರ್ ನೀಡಿನ ದೂರಿನನ್ವಯ ಆರೋಪಿಗಳ ವಿರುದ್ಧ ಸಂಜಯನಗರ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತಿ (ಐಪಿಸಿ) 420,465,468,471 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಶಾಸಕರ ಹೆಸರಿನ ನಿವೇಶನವನ್ನೇ ವಂಚಕರಿಗೆ ಲಪಟಾಯಿಸಲು ಸಾಧ್ಯವಾದದ್ದಾರೂ ಹೇಗೆ ಅನ್ನೋದರ ಬಗ್ಗೆ ಹತ್ತಾರು ಬಗೆಯಲ್ಲಿ ತನಿಖೆ ನಡೆಸಲು ನಿರ್ಧರಿಸಿದ್ದಾರೆ.

Published by:Avinash K
First published: