• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಆಸ್ತಿ ಲೂಟಿಗಾಗಿ ಜೀವಂತ ಇರುವ ಮಾಜಿ ಶಾಸಕರ ಹೆಸರಲ್ಲಿ ಮರಣಪತ್ರ ಸೃಷ್ಟಿಸಿದ ವಂಚಕರು

ಆಸ್ತಿ ಲೂಟಿಗಾಗಿ ಜೀವಂತ ಇರುವ ಮಾಜಿ ಶಾಸಕರ ಹೆಸರಲ್ಲಿ ಮರಣಪತ್ರ ಸೃಷ್ಟಿಸಿದ ವಂಚಕರು

ವಂಚಕ

ವಂಚಕ

ಮುಂಡರಗಿ ಮಾಜಿ ಶಾಸಕರಾದ ವಸಂತಪ್ಪ ಭಾವಿ ಹಾಗೂ ಪತ್ನಿ ಗಂಗವ್ವ ಭಾವಿ ಮೈಸೂರಿನಲ್ಲಿ ವಾಸವಾಗಿದ್ದಾರೆ. ಕಳೆದ 30 ವರ್ಷಗಳ ಹಿಂದೆಯೇ ಗದಗ ಜಿಲ್ಲೆಯನ್ನು ಬಿಟ್ಟು ಮೈಸೂರಿನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಪೇಠಾಲೂರು ಗ್ರಾಮದ ಸರಹದ್ದಿನಲ್ಲಿರುವ ಆಸ್ತಿಯನ್ನು ಲಪಟಾಯಿಸಿದ್ದಾರೆ.

 • Share this:

ಗದಗ (ಫೆ. 13):  ಮಾಜಿ ಶಾಸಕರು ವಸಂತಪ್ಪ ಭಾವಿ ಅವರು ಇನ್ನೂ ಜೀವಂತವಾಗಿದ್ದಾರೆ. ಆದರೆ, ದಾಖಲೆಯಲ್ಲಿ ಅವರನ್ನು ಸಾವನ್ನಪ್ಪಿಸಿ, ಲಕ್ಷಾಂತರ ರೂಪಾಯಿ ಆಸ್ತಿಯನ್ನು ಲೂಟಿ ಮಾಡಲಾಗಿದೆ. ಹೌದು, ಮಾಜಿ ಶಾಸಕರು ಹಾಗೂ ಅವರ ಧರ್ಮ ಪತ್ನಿ ಸಾವನ್ನಪ್ಪಿದ್ದಾರೆ ಎಂದು ಖೋಟ್ಟಿ ದಾಖಲೆ ಸೃಷ್ಟಿ ಮಾಡಲಾಗಿದೆ. ಹೀಗಾಗಿ ಜೀವಂತ ಇರೋ ಶಾಸಕರಿಗೆ ಶಾಕ್ ಆಗಿದೆ. ಹೀಗಾಗಿ ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.  ಜಿಲ್ಲೆಯ ಮುಂಡರಗಿಯ ಮಾಜಿ ಶಾಸಕ ವಸಂತಪ್ಪ ಭಾವಿ ಹಾಗೂ ಅವರ ಪತ್ನಿ ಗಂಗವ್ವ ಭಾವಿ ಸಾವನ್ನಪ್ಪಿದ್ದಾರೆ ಎಂದು ಖೋಟ್ಟಿ ದಾಖಲೆ ಸೃಷ್ಟಿ ಮಾಡಲಾಗಿದೆ. ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ಸರ್ವೆ ನಂಬರ್‌ 118/2ಎ ಕ್ಷೇತ್ರದ ಒಂದು ಎಕರೆ ಜಮೀನು ಪರಭಾರೆ ಮಾಡಿಕೊಳ್ಳಲಾಗಿದೆ. ಪೇಠಾಲೂರು ಗ್ರಾಮದ ನಿವಾಸಿಯಾದ ಗಿರಿಜವ್ವ ದೇವೇಂದ್ರಪ್ಪ ಕೊಪ್ಪದ ಎನ್ನುವವರು ವಂಚನೆ ಮಾಡಿದ್ದಾರಂತೆ.


2014 ರಲ್ಲಿ ವಸಂತಪ್ಪ ಭಾವಿ ಹಾಗೂ ಗಂಗವ್ವ ಭಾವಿ ಅವರ ಸಾವನ್ನಪ್ಪಿದ್ದಾರೆ ಎಂದು ಮರಣ ಪ್ರಮಾಣ ಪತ್ರವನ್ನು ನೀಡಿದ್ದಾರೆ. ನಂತರ 2019- 20 ರ ಸಾಲಿನಲ್ಲಿ ಗಿರಿಜವ್ವ ದೇವೇಂದ್ರಪ್ಪ ಕೊಪ್ಪದ ಹೆಸರಿಗೆ ಪರಭಾರೆ ಮಾಡಿಕೊಂಡಿದ್ದಾರೆ. ಇದರಲ್ಲಿ ಖೋಟ್ಟಿ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್, ಆರ್ ಐ ಕರೆಮನಿ, ಎನ್ನುವದು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.


ಇದನ್ನು ಓದಿ: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹುಟ್ಟುಹಬ್ಬಕ್ಕೆ ಕಾಮನ್​ ಡಿಪಿ ಬಿಡುಗಡೆ ಮಾಡಿದ ಫ್ಯಾನ್ಸ್​


ಇನ್ನೂ ಮುಂಡರಗಿ ಮಾಜಿ ಶಾಸಕರಾದ ವಸಂತಪ್ಪ ಭಾವಿ ಹಾಗೂ ಪತ್ನಿ ಗಂಗವ್ವ ಭಾವಿ ಮೈಸೂರಿನಲ್ಲಿ ವಾಸವಾಗಿದ್ದಾರೆ. ಕಳೆದ 30 ವರ್ಷಗಳ ಹಿಂದೆಯೇ ಗದಗ ಜಿಲ್ಲೆಯನ್ನು ಬಿಟ್ಟು ಮೈಸೂರಿನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಪೇಠಾಲೂರು ಗ್ರಾಮದ ಸರಹದ್ದಿನಲ್ಲಿರುವ ಆಸ್ತಿಯನ್ನು ಲಪಟಾಯಿಸಿದ್ದಾರೆ. ಈ ಕುರಿತು ಮಾಜಿ ಶಾಸಕರು ಕೂಡಾ ಮುಂಡರಗಿ ತಹಶಿಲ್ದಾರ ಅವರಿಗೆ ಕಾಲ್ ಮಾಡಿ ಮಾತನಾಡಿದ್ದಾರೆ.


ಈ ಕುರಿತು ಮುಂಡರಗಿ ತಹಶಿಲ್ದಾರರ ಮಾತನಾಡಿ, ಶಿವಕುಮಾರ್ ಎನ್ನುವ ಗ್ರಾಮ ಲೆಕ್ಕಾಧಿಕಾರಿ 2014 ಶಾಸಕರು ಸಾವನ್ನಪ್ಪಿದ್ದಾರೆ ಎಂದು ನಕಲಿ ದಾಖಲಿ ಸೃಷ್ಟಿಸಿ 2019 ರಲ್ಲಿ ಆಸ್ತಿಯನ್ನು ಪರಭಾರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ  ಅವರ ಮೇಲೆ ಕಾನೂನು ಕ್ರಮ‌ ಕೈಗೊಳ್ಳುತ್ತೇವೆ, ಆಸ್ತಿಯನ್ನು ಯಥಾಸ್ಥಿತಿಯಲ್ಲಿ ಈಡುತ್ತೇವೆ ಅಂತಾ ಹೇಳಿದ್ದಾರೆ ಮುಂಡರಗಿ ತಹಶೀಲ್ದಾರ್​​  ಆಶಪ್ಪಾ ಪೂಜಾರ.


ಮಾಜಿ ಶಾಸಕರು ಜೀವಂತವಾಗಿರುವಗಾಲೇ ಮರಣ ಹೊಂದಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ. ಹೀಗಾಗಿ ಈ ಭಾಗದ ರೈತರಲ್ಲಿ ತಳಮಳ ಆರಂಭವಾಗಿದೆ. ಓರ್ವ ಶಾಸಕರ ಆಸ್ತಿಯನ್ನು ಲಪಟಾಯಿಸಿದ್ದಾರೆ. ಇನ್ನೂ ಜನ ಸಾಮಾನ್ಯ ಸ್ಥಿತಿ ಹೇಗಾಗಬಾರದು. ಹಾಗಾಗಿ ತಪ್ಪಿತಸ್ಥರ ಮೇಲೆ ಸೂಕ್ತವಾದ ಕ್ರಮ‌ ಕೈಗೊಳ್ಳಬೇಕಾಗಿದೆ.

top videos


  (ವರದಿ: ಸಂತೋಷ‌ ಕೊಣ್ಣೂರು)

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು