• Home
 • »
 • News
 • »
 • state
 • »
 • Hubballi: ಹಜ್ ಯಾತ್ರೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ; ಪ್ರಮುಖ ಆರೋಪಿ ಸಾವಿನ ಸುತ್ತ ಅನುಮಾನದ ಹುತ್ತ!

Hubballi: ಹಜ್ ಯಾತ್ರೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ವಂಚನೆ; ಪ್ರಮುಖ ಆರೋಪಿ ಸಾವಿನ ಸುತ್ತ ಅನುಮಾನದ ಹುತ್ತ!

ಹಜ್ ಯಾತ್ರೆ ಹೆಸರಲ್ಲಿ ವಂಚನೆ

ಹಜ್ ಯಾತ್ರೆ ಹೆಸರಲ್ಲಿ ವಂಚನೆ

ಹಜ್ ಯಾತ್ರೆ ಹೆಸರಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸಿರೋ ಘಟನೆ ಬೆಳಕಿಗೆ ಬಂದಿದೆ. ಆದರೆ ಹಣ ಪಡೆದ ಪ್ರಮುಖ ಆರೋಪಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಉಳಿದವರ ಮೇಲಾದ್ರೂ ಕ್ರಮ ಕೈಗೊಳ್ರಿ. ನಮ್ಮ ಹಣ ನಮಗೆ ವಾಪಸ್ ಕೊಡಿಸಿ ಅಂತ ಹಣ ಕೊಟ್ಟವರು ಕೇಳಿಕೊಂಡಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಹುಬ್ಬಳ್ಳಿ (ಅ 19): ಹಜ್ ಯಾತ್ರೆಗೆ (Hajj Pilgrimage) ಕಳುಹಿಸಿ ಕೊಡುವುದಾಗಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರೋ ಘಟನೆ ಹುಬ್ಬಳ್ಳಿಯಲ್ಲಿ (Hubballi) ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ ಹೀಗೆ ದುಡ್ಡು ತೆಗೆದುಕೊಂಡವರ ಪೈಕಿ ಪ್ರಮುಖ ಆರೋಪಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹಣ ಕೊಟ್ಟವರು ಇಂಗು ತಿಂದ ಮಂಗನಂತಾಗಿದ್ದಾರೆ. 12 ಜನರಿಂದ 7.73 ಲಕ್ಷ ರೂಪಾಯಿ ಹಣ ಪಡೆದು ವಂಚನೆ (Fraud) ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಹುಬ್ಬಳ್ಳಿ  ಶಹರ ಪೊಲೀಸ್ ಠಾಣೆಯಲ್ಲಿ (Police Station) 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಬ್ದುಲ್ ಮುಳ್ಳೋಳ್ಳಿ ಹಾಗೂ ಕಲೀಂಖಾನ್ ಎಂಬುವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಬೀರ್ ಅಹ್ಮದ್ ನದಾಫ್, ಇಪ್ಲಿಕಾರ ಸೌದಾಗಾರ, ಮೊಹಮ್ಮದ್, ಅಬ್ಬಾಸ್, ಅಲ್ಲಾಬಕ್ಷ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


  ಮುಖ ಆರೋಪಿ ಸಾವಿನ ಸುತ್ತ ಅನುಮಾನ


  ಆದರೆ ಪ್ರಮುಖ ಆರೋಪಿ ಶಬೀರ ಅಹ್ಮದ್ ನದಾಫ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಶಬೀರ್ ಶವ ಹಿಡಕಲ್ ಡ್ಯಾಮಿನಲ್ಲಿ ಪತ್ತೆಯಾಗಿದ್ದು, ಈ ಕುರಿತು ಯಮಕನಮರಡಿ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರವಾಸಕ್ಕೆ ಕಳುಹಿಸಿ ಕೊಡುವುದಾಗಿ ಆರೋಪಿತ ಶಬೀರ್ ಅಹ್ಮದ್ ತಿಳಿಸಿದ್ದ ಎನ್ನಲಾಗಿದೆ. ಪವಿತ್ರ ಹಜ್ ಮತ್ತು ಉಮ್ರಾಹ್ ಯಾತ್ರೆ ಹೆಸರಲ್ಲಿ ಆರೋಪಿಗಳು ಹಣ ಪಡೆದಿದ್ದರೆಂದು ಆರೋಪಿಸಲಾಗಿದೆ.


  ಒಬ್ಬಬ್ಬರಿಂದ 65 ಸಾವಿರ ಪಡೆದಿದ್ದ ಆರೋಪಿಗಳು


  15 ದಿನದ ಪ್ರವಾಸಕ್ಕೆ 65 ಸಾವಿರಗಳಂತೆ ಹಣ ಪಡೆದಿದ್ದರು. 12 ಜನರ ಪ್ರಯಾಣಕ್ಕೆ 7.73 ಲಕ್ಷ ರೂಪಾಯಿ ಹಣ ಮುಂಗಡವಾಗಿ ತೆಗೆದುಕೊಂಡಿದ್ದರು. ಯಾತ್ರೆಗೆ ಹೋಗಲು ಯಾವುದೇ ಟಿಕೆಟ್ ಬುಕ್ ಮಾಡದೇ ವಂಚಿಸಿದ್ದಾರೆಂದು ಆರೋಪಿಸಲಾಗಿದೆ. ವಂಚಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಶಹರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


  ಇದನ್ನೂ ಓದಿ: Firecrackers: ರಾಜ್ಯದಲ್ಲಿ ಪರಿಸರ ಸ್ನೇಹಿ ಪಟಾಕಿಗೆ ಮಾತ್ರ ಅವಕಾಶ! ಮಾಲಿನ್ಯ ನಿಯಂತ್ರಣಕ್ಕೆ ಕ್ರಮ


  ಸಿಡಿಲು ಬಡಿದು ಬೈಕ್ ಸವಾರ ಸಾವು


  ಸಿಡಿಲು ಬಡಿದು ಬೈಕ್ ಸವಾರ ಸಾವನ್ನಪ್ಪಿರೊ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಪಶುಪತಿಹಾಳ ಗ್ರಾಮದ ಪ್ರವೀಣ ಬಡಿಗೇರ(32) ಎಂದು ಗುರುತಿಸಲಾಗಿದೆ. ಕುಂದಗೋಳ ತಾಲ್ಲೂಕಿನ ಸಂಶಿ ಮತ್ತು ಪಶುಪತಿಹಾಳ ಗ್ರಾಮದ ನಡುವೆ ದುರ್ಘಟನೆ ನಡೆದಿದೆ.


  ಬೈಕ್ ನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಸಿಡಿಲು ಅಪ್ಪಳಿಸಿದೆ. ಸ್ಥಳದಲ್ಲಿಯೇ ಪ್ರವೀಣ್ ಸಾವನ್ನಪ್ಪಿದ್ದಾನೆ. ಮೃತ ಪ್ರವೀಣ್ ಹುಬ್ಬಳ್ಳಿಯ ಖಾಸಗಿ ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


  ಇದನ್ನೂ ಓದಿ: Puneeth Rajkumar: ಶಿವಮೊಗ್ಗದಲ್ಲಿ ಅಪ್ಪು ಪುಣ್ಯಸ್ಮರಣೆ; ಅಭಿಮಾನಿಗಳಿಗೆ ಭರ್ಜರಿ ಬಾಡೂಟ


  ಬೈಕ್ ಕಳ್ಳರ ಬಂಧನ


  ಹುಬ್ಬಳ್ಳಿಯ ಗೋಕುಲ ರೋಡ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬೈಕ್ ಕಳ್ಳತನ ಮಾಡುತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮನೆ ಮುಂದೆ‌‌ ನಿಲ್ಲಿಸಿದ ಬೈಕ್‌ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳರು ಕದ್ದು ಎಸ್ಕೇಪ್ ಆಗುತ್ತಿದ್ದರು. ನಗರದಲ್ಲಿ ಹಲವು ದಿನಗಳಿಂದ ಬೈಕ್ ಕಳ್ಳತನವಾಗುತ್ತಿದ್ದವು. ಕಳ್ಳರ ಮೇಲೆ ಕಣ್ಣಿಟ್ಟಿದ್ದ ಗೋಕುಲ್ ಠಾಣೆಯ ಪೊಲೀಸರು, ತಾರಿಹಾಳ ಮೂಲದ ಖಾಸಿಂ, ಮತ್ತೋರ್ವನ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ಕಳ್ಳತನವಾದ ನಾಲ್ಕು ಬೈಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ.

  Published by:ಪಾವನ ಎಚ್ ಎಸ್
  First published: