ಹುಬ್ಬಳ್ಳಿ(ಮೇ.12): ಪಿ ಎಸ್ ಐ (PSI) ನೇಮಕಾತಿಯಲ್ಲಿ ಮತ್ತೊಂದು ಅಕ್ರಮ ಬಯಲಿಗೆ ಬಂದಿದೆ. ಇನ್ನೊಂದು ಭಯಾನಕ ಸತ್ಯ ಅನಾವರಣಗೊಂಡಿದೆ. ಪಿಎಸ್ಐ ಲಿಖಿತ ಪರೀಕ್ಷೆಯಲ್ಲಿ (Written Exam) ಮಾತ್ರ ನಡೆದಿಲ್ಲ ಅಕ್ರಮ. ಇದರ ಜೊತೆ ಪಿಎಸ್ಐ ದೈಹಿಕ ಪರೀಕ್ಷೆಯಲ್ಲಿಯೂ ದೊಡ್ಡ ಅಕ್ರಮ ನಡೆದಿರೋದು ಬಹಿರಂಗಗೊಂಡಿದೆ. ಫಿಜಿಕಲ್ ಟೆಸ್ಟ್ ನಲ್ಲಿ (Physical Test) ಪಾಸ್ ಮಾಡಲು ಲಕ್ಷಾಂತರ ರೂಪಾಯಿ ಹಣ ನೀಡಿದ ಆರೋಪ ಕೇಳಿ ಬಂದಿದೆ. ಫಿಸಿಕಲ್ ಟೆಸ್ಟ್ ಉತ್ತೀರ್ಣರಾಗಲು ಕೆಲ ಅಭ್ಯರ್ಥಿಗಳು (Candidates) ಹಣ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಸಿಐಡಿ ಪೊಲೀಸರು ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದಾರೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಲು ಹುಬ್ಬಳ್ಳಿಯ ಯುವಕ ಹಣ ಪಡೆದ ಆರೋಪ ಕೇಳಿ ಬಂದಿದೆ.
ಈಗಾಗಲೇ ಪೊಲೀಸರು ಯುವಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಯುವಕನ ವಿಚಾರಣೆ ನಡೆಸಿದ್ದಾರೆ. ಜಿ.ಎಸ್.ಸತ್ಯನಾರಾಯಣ ಎಂಬುವರ ಮಗ ಕಿರಣ್ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಈ ಸಮಯದಲ್ಲಿ ತಮ್ಮ ಪರಿಚಯದ ವ್ಯಕ್ತಿಯೊಬ್ಬ ಹುಬ್ಬಳ್ಳಿ ಮೂಲದ ನವೀನ್ ಧಲಬಂಜನ ನನ್ನು ಸತ್ಯನಾರಾಯಣಗೆ ಪರಿಚಯ ಮಾಡಿಕೊಟ್ಟಿದ್ದಾರೆ.
30 ಲಕ್ಷ ರೂಪಾಯಿ ಹಣದ ಬೇಡಿಕೆ
ಈ ವೇಳೆ ದಲಭಂಜನ್, ಪಿಎಸ್ಐ ಕೆಲಸ ಮಾಡಿಕೊಡುವುದಾಗಿ ಸತ್ಯನಾರಾಯಣ ಗೆ ತಿಳಿಸಿದ್ದ ಎನ್ನಲಾಗಿದೆ. ಆಗ ಕೆಲಸ ಕೊಡಿಸುವುದಕ್ಕೆ ನವೀನ್ ಧಲಭಂಜನ್ 30 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದ. ಸತ್ಯನಾರಾಯಣ ನವೀನ್ ಬ್ಯಾಂಕ್ ಅಂಕೌಂಟ್ ಗೆ 7,70,000 ರೂಪಾಯಿ ಗಳನ್ನು ಹಾಕಿದ್ದರು. ಅಲ್ಲದೇ 13,50,000 ರೂಪಾಯಿ ಹಣವನ್ನು ನಗದು ರೂಪದಲ್ಲಿ ಕೊಟ್ಟಿದ್ದರು.
ಫಿಸಿಕಲ್ ಪಾಸ್ನಲ್ಲಿ ಅಕ್ರಮ
ಫಿಜಿಕಲ್ ಪಾಸ್ ಮಾಡಿಸಿ ಎಂದು ಹಣ ನೀಡಿದ್ದಾರೆ. ಆದರೆ ಕೆಲಸ ಕೊಡಿಸದೇ ಮೋಸ ಮಾಡಿದ್ದಾನೆ ಎಂದು ಸತ್ಯನಾರಾಯಣ ದೂರು ನೀಡಿದ್ದಾರೆ. ಸತ್ಯನಾರಾಯಣ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬಾಗೇಪಲ್ಲಿ ಪೊಲೀಸರು, ಹುಬ್ಬಳ್ಳಿಯ ಲಿಂಗರಾಜನಗರದ ನಿವಾಸಿ 31 ವರ್ಷದ ನವೀನ್ ಧಲಬಂಜ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂಓದಿ: Mangaluru ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾದ ಕ್ಯಾನ್ಸರ್ ರೋಗ; ಹೆಚ್ಚಿದ ಆತಂಕ
ಪಾಲಿಕೆಗೆ ಕೂಡಿಬಂದ ಮುಹೂರ್ತ
ಕೊನೆಗೂ ಹುಬ್ಬಳ್ಳಿ - ಧಾರವಾಡ ಮೇಯರ್ ಚುನಾವಣೆಗೆ ಕಾಲ ಕೂಡಿ ಬಂದಿದೆ. ಇದೇ ತಿಂಗಳು 28 ಕ್ಕೆ ಮೇಯರ್, ಉಪಮೇಯರ್ ಚುನಾವಣೆ ನಿಗದಿಗೊಳಿಸಲಾಗಿದೆ. ಮೇಯರ್ ಸ್ಥಾನ ಸಾಮಾನ್ಯ, ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲುಗೊಳಿಸಲಾಗಿದೆ. ಚುನಾವಣಾ ದಿನಾಂಕ ನಿಗದಿಗೊಳಿಸಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆದೇಶಿಸಿದ್ದಾರೆ.
ಮೇಯರ್, ಉಪಮೇಯರ್ ಚುನಾವಣೆ
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಚುನಾವಣೆ ನಡೆಸಲು ಅಧಿಕೃತವಾಗಿ ಘೋಷಣೆ ಮಾಡಿ ಆದೇಶಿಸಲಾಗಿದೆ. ಕಳೆದ ಸಪ್ಟೆಂಬರ್ ತಿಂಗಳಲ್ಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. 82 ವಾರ್ಡ್ಗಳ ಚುನಾವಣೆ ನಡೆದು, ಜನತೆ ಪಾಲಿಕೆ ಸದಸ್ಯರನ್ನ ಆಯ್ಕೆ ಮಾಡಿದ್ದರು.
ಇದನ್ನೂ ಓದಿ: Crime Story: ಒಡವೆಗಾಗಿ ಸ್ನೇಹಿತೆಯ ಕೊಲೆ, ಡೆಡ್ಬಾಡಿ ಜೊತೆ ನಡುರಸ್ತೆಯಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?
ಚುನಾವಣೆ ನಡೆದು 9 ತಿಂಗಳ ಬಳಿಕ ಮೇಯರ್, ಉಪಮೇಯರ್ ಆಯ್ಕೆಗೆ ಕಾಲ ಕೂಡಿ ಬಂದಿದೆ. 21ನೇ ಅವಧಿಗೆ ಮೇಯರ್, ಉಪಮೇಯರ್ ಆಗೋಕೆ ಪೈಪೋಟಿ ಆರಂಭಗೊಂಡಿದೆ.
ಇನ್ನು ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆಯೂ ನಡೆಯಲಿದ್ದು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಭದ್ರತೆ ವಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ