• Home
  • »
  • News
  • »
  • state
  • »
  • Fox in Bengaluru: ನಾಯಿ ಮರಿ ಅಂತ ನರಿ ಮರಿಗೆ ಮೊಸರನ್ನ ತಿನ್ನಿಸಿದ್ರು! ಸತ್ಯ ತಿಳಿದ ಮೇಲೆ ಮನೆಮಂದಿಗೆ ಶಾಕ್!

Fox in Bengaluru: ನಾಯಿ ಮರಿ ಅಂತ ನರಿ ಮರಿಗೆ ಮೊಸರನ್ನ ತಿನ್ನಿಸಿದ್ರು! ಸತ್ಯ ತಿಳಿದ ಮೇಲೆ ಮನೆಮಂದಿಗೆ ಶಾಕ್!

ಬೆಂಗಳೂರಲ್ಲಿ ಪತ್ತೆಯಾದ ನರಿ

ಬೆಂಗಳೂರಲ್ಲಿ ಪತ್ತೆಯಾದ ನರಿ

ವ್ಯಕ್ತಿಯೊಬ್ಬರು ತಮ್ಮ ತಾಯಿ ಮನೆಯಿಂದ ನಾಯಿ ಮರಿ ಅಂತ ಮರಿಯೊಂದನ್ನು ತಂದಿದ್ದಾರೆ. ಆದರೆ ಅದು ನಾಯಿ ಅಲ್ಲ, ನರಿ ಮರಿಯಂತೆ! ಮರಿ ಇದ್ದ ಕಾರಣ ಯಾರಿಗೂ ಕೂಡ ಅದು ನರಿ ಅಂತ ಗೊತ್ತಾಗಿಲ್ಲ. ಮನೆಗೆ ತಂದು ಪ್ರೀತಿಯಿಂದಲೇ ಮುದ್ದಾಡಿದ್ದಾರೆ‌!

  • Share this:

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಷ್ಟು ದಿನ ನಾಯಿಗಳು (Dogs), ಹಾವುಗಳ (Snakes) ಹಾವಳಿ ಕೇಳಿದ್ವಿ, ಆದ್ರೆ ಈಗ ಅದನ್ನು ಮೀರಿ ನರಿಗಳ ಹಾವಳಿ ಶುರುವಾಗ್ತಿದೆ. ಹೀಗಂತ ಹೇಳಿದ್ರೆ ನೀವು ಶಾಕ್ ಆಗ್ತೀರಿ. ಅರೇ ಬೆಂಗಳೂರಿನಲ್ಲಿ ನರಿಗಳ (Fox) ಹಾವಳಿ ಹೇಗಪ್ಪ ಶುರುವಾಗಿದೆ ಅಂತ ಕನ್ಫ್ಯೂಸ್ ಆಗ್ಬೇಡಿ. ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೆಚ್ಚು ಬೆಳೆದಂತೆ ನಗರದಲ್ಲಿ ಸಮಸ್ಯೆಗಳು (Problems) ಕೂಡಾ ಜಾಸ್ತಿಯಾಗ್ತಾನೆ ಇವೆ. ಹೀಗಿರುವಾಗ ಇದೀಗ, ಬೆಂಗಳೂರು ಬೆಳೆಯುತ್ತಿರೋದ್ರಿಂದ ಕಾಡುಗಳು (Forest) ನಾಶವಾಗುತ್ತಿವೆ. ಹೀಗಾಗಿ ಕಾಡು ಬಿಟ್ಟು ನಾಡಿನ ಕಡೆಗೆ ಕಾಡು ಪ್ರಾಣಿಗಳು (Wild Animals) ಬರ್ತಿವೆ. ನರಿ ಹಾಗೂ ನಾಯಿಗಳು ಚಿಕ್ಕದಿರುವಾಗ ಒಂದೇ ರೀತಿ ಕಾಣೋದ್ರಿಂದ ಜನರಿಗೆ ನರಿಗಳು ಬರ್ತಿರೋ ಬಗ್ಗೆ ಅರಿವು ಆಗ್ತಿಲ್ವಂತೆ. ಇದೇ ರೀತಿ ಎರಡು ಕಡೆ ನರಿಗಳು ಪತ್ತೆಯಾಗಿವೆ.


ನಾಯಿ ಅಂತ ನರಿ ಮರಿಗೆ ಮೊಸರನ್ನ ಇಟ್ಟ ಮಾಲೀಕರು!


ಮೊದಲ ಪ್ರಕರಣ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ತಮ್ಮ ತಾಯಿ ಮನೆಯಿಂದ ನಾಯಿ ಮರಿ ಅಂತ ಮರಿಯೊಂದನ್ನು ತಂದಿದ್ದಾರೆ. ಆದರೆ ಅದು ನಾಯಿ ಅಲ್ಲ, ನರಿ ಮರಿಯಂತೆ! ಮರಿ ಇದ್ದ ಕಾರಣ ಯಾರಿಗೂ ಕೂಡ ಅದು ನರಿ ಅಂತ ಗೊತ್ತಾಗಿಲ್ಲ. ಮನೆಗೆ ತಂದು ಪ್ರೀತಿಯಿಂದಲೇ ಮುದ್ದಾಡಿದ್ದಾರೆ‌. ಇದ್ರ ಜೊತೆಗೆ ಸಾಮಾನ್ಯವಾಗಿ ಶ್ವಾನಕ್ಕೆ ಕೊಡೋ ರೀತಿಯೇ, ಇದಕ್ಕೂ ಕೂಡಾ ಊಟಕ್ಕೆ ಅಂತ ಮೊಸರನ್ನ ಇಟ್ಟಿದ್ದಾರೆ. ಆದ್ರೆ ಕಾಡು ಪ್ರಾಣಿ ಮೊಸರನ್ನ ಹೇಗೆ ತಾನೆ ತಿನ್ನುತ್ತೆ ಹೇಳಿ?


foxes are being spotted in bengaluru
ನಗರದಲ್ಲಿ ಪತ್ತೆಯಾದ ನರಿ


ಪರಿಶೀಲಿಸಿದಾಗ ನಾಯಿಯಲ್ಲ, ನರಿ ಎನ್ನೋದು ಬೆಳಕಿಗೆ


ಹೀಗಾಗಿ ಮೊಸರನ್ನ ಊಟ ಸೇರದೆ ಡಿ ಹೈಡ್ರೇಷನ್ ಆಗಿ ನಾಲ್ಕು ದಿನಗಳ ಕಾಲ ನರಿ ಮರಿ ಮನೆಯಲ್ಲೇ ಗೋಳಾಡಿದೆ. ಗೋಳಾಟ ಕೇಳದೆ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದು ಪ್ರಾಣಿ ಸಂರಕ್ಷಕರಿಗೆ ಕರೆ ಮಾಡಿದ್ದಾರೆ. ಈ ವೇಳೆ ಪ್ರಾಣಿ ಸಂರಕ್ಷಕ ರಾಹುಲ್ ವಿಡಿಯೋ ಕಳಿಸಿ ಎಂದು ಕೇಳಿದಾಗ, ಪಕ್ಕದ ಮನೆವರು ನರಿಯ ವಿಡಿಯೋ ಕಳಿಸಿದ್ದಾರೆ. ಬಳಿಕ ವಿಡಿಯೋ ತರಿಸಿಕೊಂಡು ನೋಡಿದಾಗ, ಅದ್ರಲ್ಲಿ ಇದು ನಾಯಿಯಲ್ಲ ನರಿಯೆಂದು ಪತ್ತೆಯಾಗಿದೆ. ಕೂಡಲೇ ಪೋಲಿಸರ ಸಮ್ಮುಖದಲ್ಲಿ ನರಿಯನ್ನು ರಕ್ಷಿಸಿ, ಇದೀಗ ಕೆಂಗೇರಿ ಬಳಿ ಇರೋ ಪೀಪಲ್ ಫಾರ್ ಅನಿಮಲ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.


foxes are being spotted in bengaluru
ನರಿ ಮರಿ ರಕ್ಷಣೆ


ಇದನ್ನೂ ಓದಿ: Long Eared Goat: ಈ ಮೇಕೆ ಮರಿಗಿಂತ ಅದರ ಕಿವಿಗಳೇ ಉದ್ದ! ಮುದ್ದು ಪ್ರಾಣಿ ಫೋಟೋ ಸಖತ್ ವೈರಲ್


ಯಲಹಂಕದ ಮಾಲ್‌ನ ಪಾರ್ಕಿಂಗ್ ಏರಿಯಾದಲ್ಲಿ ನರಿ ಪತ್ತೆ


ಇದ್ರ ಜೊತೆಗೆ ಒಂದು ವಾರದ ಹಿಂದೆ ಯಲಹಂಕದ ಮಾಲ್‌ ಒಂದರಲ್ಲಿ ನರಿಪತ್ತೆಯಾಗಿದೆ. ಇಲ್ಲೂ ಕೂಡಾ ಮೊದಲಿಗೆ ನಾಯಿ ಅಂತ ನರಿಯನ್ನುಓಡಿಸಲು ಮುಂದಾಗಿದ್ದಾರೆ. ಆದ್ರೆ ಈ ನರಿ ನಾಲ್ಕೈದು ತಿಂಗಳಾದ ಕಾರಣ ಸ್ವಲ್ಪ ಮಟ್ಟಿಗೆ ಇದು ನಾಯಿಯಲ್ಲ ಅನ್ನೋದು ಗೊತ್ತಾಗಿದೆ.  ಇದನ್ನು ಗಮನಿಸಿದ ಕೂಡಲೇ ಪ್ರಾಣಿಸಂರಕ್ಷಕರಿಗೆ ಕರೆ ಮಾಡಿ ನರಿಯನ್ನು ರಕ್ಷಿಸಿಲಾಗಿದ್ದು, ಆತಂಕದಲ್ಲಿದ್ದ ನರಿಯನ್ನು ಹಿಡಿಯಲು ಹರಸಾಹಸ ಪಟ್ಟ ಬಳಿಕ ನರಿಯನ್ನು ಹಿಡಿದು, ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿದ್ದಾರೆ.


ಇದನ್ನೂ ಓದಿ: Charlie Special: ಚಾರ್ಲಿಗೆ ಧರ್ಮನೇ ಯಾಕೆ ಇಷ್ಟ ಗೊತ್ತಾ? ಮನುಷ್ಯ ಮತ್ತು ನಾಯಿಗಳ ಬಾಂಧವ್ಯದ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ


ಕಾಡು ಪ್ರಾಣಿ ಹಾವಳಿಯಿಂದ ಆತಂಕ


ಬೆಂಗಳೂರಿನಲ್ಲಿ ಈ ರೀತಿ ನರಿಗಳು ಕಾಣಿಸ್ತಿಕೊಳ್ತಿರೋದು ಆತಂಕ ಮೂಡಿಸಿದ್ದು, ಅನೇಕರು ಅಕ್ರಮವಾಗಿ ಕೂಡಾ ಇದನ್ನು ಮನೆಯಲ್ಲಿ ಇಟ್ಕೊಳ್ತಿದ್ದಾರೆ ಅನ್ನೋ ಅನುಮಾನ ಬಂದಿದ್ದು, ಜನರು ಸ್ವಲ್ಪ ನಾಯಿಗಳನ್ನು ಸಾಕೋ ಮೊದಲು ಎಚ್ಚರಿಕೆ ವಹಿಸಿದ್ರೆ, ಒಳ್ಳೇದು. ಸದ್ಯ ಎರಡು ನರಿಗಳನ್ನು ಕೆಂಗೇರಿಯಲ್ಲಿರೋ ಪೀಪಲ್ ಫಾರ್ ಅನಿಮಲ್‌ನಲ್ಲಿ ನೋಡಿ ಕೊಳ್ತಿದ್ದು, ಎರಡನ್ನು ಕೂಡಾ ಕೆಲ ದಿನಗಳಲ್ಲೇ ಕಾಡಿಗೆ ಬಿಡೋದಾಗಿ ಪ್ರಾಣಿ ಸಂರಕ್ಷಕ ರಾಹುಲ್ ತಿಳಿಸಿದ್ದಾರೆ.

Published by:Annappa Achari
First published: