• Home
  • »
  • News
  • »
  • state
  • »
  • Heart Attack: ಶಾಲೆಯಲ್ಲಿ ಹೃದಯಾಘಾತದಿಂದ 4ನೇ ಕ್ಲಾಸ್ ವಿದ್ಯಾರ್ಥಿ ಸಾವು

Heart Attack: ಶಾಲೆಯಲ್ಲಿ ಹೃದಯಾಘಾತದಿಂದ 4ನೇ ಕ್ಲಾಸ್ ವಿದ್ಯಾರ್ಥಿ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಆತನಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದರಿಂದ ಮೆಡಿಸಿನ್ ಕೊಡಲಾಗುತ್ತಿತ್ತು ಅಂತ ಪೋಷಕರು ತಿಳಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Dharwad, India
  • Share this:

ಹುಬ್ಬಳ್ಳಿ - ಧಾರವಾಡ ಜಿಲ್ಲೆ ಕಲಘಟಗಿ (Kalaghatagi, Dharwad) ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಗಿದೆ. ಶಾಲೆಗೆ (School) ಹೋಗಿದ್ದ ವಿದ್ಯಾರ್ಥಿಯೋರ್ವ (Student) ಹೃದಯಾಘಾತಕ್ಕೆ (Heart Attack) ತುತ್ತಾಗಿ ಕೊನೆಯುಸಿರೆಳೆದಿದ್ದಾನೆ. ಜವರಾಯನ ಅಟ್ಟಹಾಸದ ಮುಂದೆ ಪೋಷಕರ ಪ್ರಾರ್ಥನೆ ಫಲಿಸಿಲ್ಲ. ಬಾಲಕ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾನೆ. ವಿದ್ಯಾರ್ಥಿಗೆ ಹಾರ್ಟ್ ಅಟ್ಯಾಕ್ ಆಗಿ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದಲ್ಲಿ ನಡೆದಿದೆ. ಕಲಘಟಗಿ ಪಟ್ಟಣದ ಸರಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಇಂದು ಮುಂಜಾನೆ ವಿದ್ಯಾರ್ಥಿ ಕ್ಲಾಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.


ವಿದ್ಯಾರ್ಥಿ ಮುಕ್ತುಂ ಮಹ್ಮದ್ ರಫಿ ಮನಿಯಾರ ಎಂದು ತಿಳಿದು ಬಂದಿದೆ. ಆತ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.


ವಿದ್ಯಾರ್ಥಿ ಕಲಘಟಗಿ ನಿವಾಸಿಯಾಗಿದ್ದು, ಬಾಲಕನಿಗೆ ಮುಂಚೆಯೇ ಹೃದಯದಲ್ಲಿ ತೊಂದರೆ ಇರುವುದು ತಿಳಿದು ಬಂದಿದೆ.  ಮುಂಜಾನೆ ಎಂದಿನಂತೆ ಶಾಲೆಗೆ ಬಂದಿದ್ದು ಕ್ಲಾಸಿನಲ್ಲಿ ಕುಸಿದು ಬಿದ್ದಿದ್ದಾನೆ. ನಂತರ ಶಿಕ್ಷಕರು ಕೂಡಲೇ ಅವನನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.


ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಆತನಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ದರಿಂದ ಮೆಡಿಸಿನ್ ಕೊಡಲಾಗುತ್ತಿತ್ತು ಅಂತ ಪೋಷಕರು ತಿಳಿಸಿದ್ದಾರೆ.


ಕಲಘಟಗಿಯಲ್ಲಿ ಆನೆಗಳ ಹಾವಳಿ


ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಕಲಘಟಗಿ ಪಟ್ಟಣದ ಹೊರ ವಲಯದಲ್ಲಿನ ಕಬ್ಬಿನ ಹೊಲಗಳಿಗೆ ಲಗ್ಗೆಯಿಟ್ಟ ಆನೆ ಹಿಂಡು, ಅಪಾರ ಪ್ರಮಾಣದ ಕಬ್ಬನ್ನು ನಾಶ ಮಾಡಿವೆ.


ಇದನ್ನೂ ಓದಿ: ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಿಕ್ಷಕರಿಗೆ ಶಾಕ್; ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ!


ಎಂಟು ಆನೆಗಳಿರುವ ಹಿಂಡಿನಿಂದ ಬೆಳೆ ನಾಶ ಮಾಡಿವೆ. ದುಂಡಿ ಬಸವಣ್ಣ ಪ್ರದೇಶ ಸೇರಿದಂತೆ ಸುತ್ತಲಿನ ಹೊಲಗಳಲ್ಲಿ ಕಬ್ಬು ನಾಶವಾಗಿದೆ. ಕೃಷ್ಣಾಜಿ ಹುಲಿಹೊಂಡ, ತಾನಾಜಿ ಹುಲಿಹೊಂಡ ಹೊಲದಲ್ಲಿನ ಕಬ್ಬು ಬೆಳೆಯನ್ನು ತುಳಿದ ಆನೆಗಳು ನಾಶಪಡಿಸಿವೆ. ಆನೆಗಳನ್ನು ಕಾಡಿಗೆ ಅಟ್ಟುವಂತೆ ಅರಣ್ಯ ಇಲಾಖೆಗೆ ರೈತರು ಆಗ್ರಹಿಸಿದ್ದಾರೆ.


ಕೇಶ್ವಾಪುರ ಪೊಲೀಸರಿಂದ ಬೈಕ್ ಕಳ್ಳರ ಬಂಧನ


ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಚಾಲಾಕಿ ಬೈಕ್ ಕಳ್ಳರನ್ನು ಬಂಧಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲ್ವೆ ಯೂನಿಯನ್‌ ಆಫೀಸ್ ಬಳಿ ಮೂವರನ್ನು ಬಂಧಿಸಲಾಗಿದೆ.


ನಗರದ ವಿವಿಧೆಡೆ ಬೈಕ್​​ಗಳನ್ನು ಕಳ್ಳತನ ಮಾಡ್ತಿದ್ದ ಆರೋಪಿಗಳು, ಅವೇ ಬೈಕ್ ಗಳನ್ನು ಬೇರೆ ಕಳ್ಳತನ ಕೃತ್ಯಕ್ಕೆ ಬಳಸುತ್ತಿದ್ದರು. ಕೇಶ್ವಾಪೂರ ಠಾಣೆ ಪೊಲೀಸ್ ಇನ್​​ಸ್ಪೆಕ್ಟರ್ ಜಗದೀಶ್ ಹಂಚನಾಳ ನೇತೃತ್ವದ ತಂಡದಿಂದ ಬಂಧಿಸಲಾಗಿದೆ. ಬಂಧಿತರಿಂದ 09 ಬೈಕ್ ವಶಕ್ಕೆ ಪಡೆಯಲಾಗಿದೆ.


ಹಳೆ ಬೈಕ್ ಕದ್ದರೆ ದೂರು ಕೊಡಲ್ಲ


ಖದೀಮರು ಹಳೆ ಬೈಕ್​​ಗಳನ್ನು ಟಾರ್ಗೆಟ್ ಮಾಡ್ತಿದ್ದರು. ಹಳೆ ವಾಹನಗಳಿಗೆ ಕಾಗದ ಪತ್ರ ಸರಿಯಾಗಿ ಇರೋಲ್ಲ, ಕಳ್ಳತನವಾದ್ರೂ ಪೊಲೀಸರಿಗೆ ದೂರು ನೀಡೋಲ್ಲ ಅನ್ನೋ ಲೆಕ್ಕಾಚಾರದಲ್ಲಿ ಅವುಗಳನ್ನು ಕದಿಯುತ್ತಿದ್ದರು.


ಬೇರೆ ಕಳ್ಳತನ ಕೃತ್ಯಕ್ಕೆ ಕದ್ದ ಬೈಕ್​​ಗಳನ್ನು ಬಳಸುತ್ತಿದ್ದ ಆರೋಪಿಗಳು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಇದನ್ನೂ ಓದಿ: Silent Sunil and Fighter Ravi: ಸೈಲೆಂಟ್‌ ಆಗಿಯೇ ಸದ್ದು ಮಾಡುತ್ತಿರುವ ಸುನೀಲ ಯಾರು? ಫೈಟರ್ ರವಿ ಇತಿಹಾಸ ನಿಮಗೆ ಗೊತ್ತಾ?


ಶಾಲಾ ಮಕ್ಕಳ ಬ್ಯಾಗ್​​ಗಳಲ್ಲಿ ಕಾಂಡೋಮ್ ಪತ್ತೆ


ಬೆಂಗಳೂರಿನ (Bengaluru) ಹಲವು ಶಾಲೆಗಳಲ್ಲಿ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ (School Bag Checking) ಕಾಂಡೋಮ್ಸ್‌, ಗರ್ಭನಿರೋಧಕಗಳು ಪತ್ತೆಯಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಘಟನೆ ಬಗ್ಗೆ ಪರ-ವಿರೋಧ ಎರಡೂ ವ್ಯಕ್ತವಾಗಿವೆ. ಕೆಲವರು ಕನಿಷ್ಠ ಕಾಂಡೋಮ್ ಬಳಸುವ ಬಗ್ಗೆ ವಿದ್ಯಾರ್ಥಿಗಳಿಗೆ (Students) ಅರಿವು ಇದೆ ಎಂದು ಅಭಿಪ್ರಾಯ ಪಟ್ಟಿದ್ದರೆ, ಇನ್ನೂ ಕೆಲವರು 14 ಮತ್ತು 16 ರ ವಯಸ್ಸಿನ ಮಕ್ಕಳ ಬ್ಯಾಗ್‌ಲ್ಲಿ (Bag) ಇವೆಲ್ಲಾ ಈಗಲೇ ಏಕೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು