• Home
  • »
  • News
  • »
  • state
  • »
  • Murugha Mutt: ಮುರುಘಾ ಮಠದಲ್ಲಿ 4 ವರ್ಷದ ಹೆಣ್ಣು ಮಗು ಪತ್ತೆ, ಮೂರನೇ ಆರೋಪಿಗೆ ಜಾಮೀನು

Murugha Mutt: ಮುರುಘಾ ಮಠದಲ್ಲಿ 4 ವರ್ಷದ ಹೆಣ್ಣು ಮಗು ಪತ್ತೆ, ಮೂರನೇ ಆರೋಪಿಗೆ ಜಾಮೀನು

ಮುರುಘಾ ಮಠ

ಮುರುಘಾ ಮಠ

ಅಳುತ್ತಿದ್ದ ಮಗುವಿನ ಬಟ್ಟೆಯಲ್ಲಿ ಚೀಟಿಯೊಂದನ್ನು ಇರಿಸಲಾಗಿತ್ತು. ಮಗುವನ್ನು ಮಠಕ್ಕೆ ನೀಡಬೇಕೆಂದು ಬರೆಯಲಾಗಿತ್ತು. ಆನಂತರ ಸ್ಥಳೀಯರು ಮಗುವನ್ನು ಮಠಕ್ಕೆ ನೀಡಿದರು ಎಂದು ಫೈರೋಜ್ ಹೇಳಿದ್ದಾರೆ.

  • Share this:

ಚಿತ್ರದುರ್ಗದ ಮುರುಘಾ ಮಠದ (Murugha Mutt, Chitradurga) ವಿಚಾರದಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಸಿಗ್ತಿದೆ. ಮುರುಘಾ ಮಠದ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು (Four Year old Baby) ಪತ್ತೆಯಾಗಿದೆ. ಆದ್ರೆ ಹೆಣ್ಣು ಮಗುವಿನ (Girl Baby) ಪೋಷಕರ ಬಗ್ಗೆ ಮಠದಲ್ಲಿ ಯಾವುದೇ ಮಾಹಿತಿ ಇಲ್ಲ. ಚೈಲ್ಡ್‌ ವೆಲ್ಫೇರ್ ಕಮಿಟಿ (Child Welfare Committee) ಭೇಟಿ ವೇಳೆ ಮಗು ಸಿಕ್ಕಿದ್ದು, ಪೋಷಕರ ಪತ್ತೆಗೆ ಜಾಹೀರಾತು (Advertisement) ನೀಡಲಾಗಿದೆ. ಸದ್ಯ ಮಗುವನ್ನ ಮಡಿಲು ಕೇಂದ್ರಕ್ಕೆ ಸೇರಿಸಲಾಗಿದೆ. ಇನ್ನು ಮಗು ಯಾವಾಗ ಸಿಕ್ಕಿತ್ತು ಎಂಬ ಬಗ್ಗೆ ನ್ಯೂಸ್18ಗೆ  ಪ್ರತ್ಯಕ್ಷದರ್ಶಿ ಫೈರೋಜ್ ಮಾತನಾಡಿದ್ದಾರೆ.


ಮಗುವನ್ನು ಮೊದಲು ನೋಡಿ ಸಂತೈಸಿದ್ದೆ. ನಾಲ್ಕುವರೆ ವರ್ಷಗಳ ಹಿಂದೆ ಮಗು ಮಠದ ಕಾಂಪೌಂಡ್ ಬಳಿ ಸಿಕ್ಕಿತ್ತು. ಅಂದು ಅಂಗಡಿ ಓಪನ್ ಮಾಡಲು ಬಂದಾಗ ಮಗು ಅಳುವು ಸದ್ದು ಕೇಳಿಸಿತು. ಹೋಗಿ ನೋಡಿದಾಗ ಸುಮಾರು 4 ರಿಂದ 5 ದಿನದ ಮಗು ಅದಾಗಿತ್ತು. ಅಳುತ್ತಿದ್ದ ಮಗುವಿನ ಬಟ್ಟೆಯಲ್ಲಿ ಚೀಟಿಯೊಂದನ್ನು ಇರಿಸಲಾಗಿತ್ತು. ಮಗುವನ್ನು ಮಠಕ್ಕೆ ನೀಡಬೇಕೆಂದು ಬರೆಯಲಾಗಿತ್ತು. ಆನಂತರ ಸ್ಥಳೀಯರು ಮಗುವನ್ನು ಮಠಕ್ಕೆ ನೀಡಿದರು ಎಂದು ಫೈರೋಜ್ ಹೇಳಿದ್ದಾರೆ.


ಮೂರನೇ ಆರೋಪಿಗೆ ಜಾಮೀನು


ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧದ ಫೋಕ್ಸೋ ಪ್ರಕರಣದಲ್ಲಿ 3ನೇ ಆರೋಪಿಗೆ ಬಾಲ ನ್ಯಾಯ ಮಂಡಳಿ ಮಧ್ಯಂತರ ಜಾಮೀನು ನೀಡಿದೆ. ನಾಪತ್ತೆ ಆಗಿದ್ದ 3ನೇ ಆರೋಪಿ, ಮಠದ ಉತ್ತರಾಧಿಕಾರಿ ನಿನ್ನೆ ಬಾಲ ನ್ಯಾಯಮಂಡಳಿಗೆ ಶರಣಾಗಿದ್ದ. ಆದ್ರೆ ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಪೊಲೀಸರೇ ಕೇಸ್​ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ.


ಇದನ್ನೂ ಓದಿ:  Hubballi Riots: ಹುಬ್ಬಳ್ಳಿ ಗಲಭೆ ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ


ಮುರುಘಾ ಸ್ವಾಮಿ ವಿರುದ್ಧ 2ನೇ FIR


ಚಿತ್ರದುರ್ಗದ ಮುರುಘಾ ಮಠದ ಸ್ವಾಮಿ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮತ್ತೊಂದು ಲೈಂಗಿದ ದೌರ್ಜನ್ಯದ ದೂರು ದಾಖಲಾಗಿದೆ. ಒಡನಾಡಿ ಸಂಸ್ಥೆ ಸಹಾಯದೊಂದಿಗೆ 14 ವರ್ಷದ ಇಬ್ಬರು, 12 ವರ್ಷದ ಒಬ್ಬ ಹಾಗೂ 15 ವರ್ಷದ ಓರ್ವ ವಿದ್ಯಾರ್ಥಿ, ಒಟ್ಟು 7 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯನ್ನ ಮಕ್ಕಳು ಸಂಪರ್ಕ ಮಾಡಿದ್ರು. ಅದರಂತೆ ದೌರ್ಜನ್ಯಕ್ಕೆ ಒಳಗಾದ ಮಗುವಿನ ತಾಯಿ ದೂರು ದಾಖಲಿಸಿದ್ದಾರೆ.


ಸರಿಯಾಗಿ ತನಿಖೆ ನಡೆಯುತ್ತಿಲ್ಲ


ಇನ್ನು ಒಡನಾಡಿ ಸಂಸ್ಥೆಯ ಪರಶುರಾಮ್ ನ್ಯೂಸ್​18 ಕನ್ನಡದ ಜೊತೆ ಮಾತಾಡಿದ್ದಾರೆ. ಚಿತ್ರದುರ್ಗ ಜಿಲ್ಲಾಡಳಿಯ ಸಂತ್ರಸ್ತ ಮಕ್ಕಳ ರಕ್ಷಣೆ ಮಾಡಬೇಕು. ಆರೋಪಿಗಳಿಗೆ ಕಠಿಣ ಶಿಕ್ಷನೆ ನೀಡಬೇಕೆಂದು ಆಗ್ರಹ ಮಾಡಿದ್ದಾರೆ. ಇನ್ನು ಮುರುಘಾಸ್ವಾಮಿ ಕೇಸ್​ ಬಗ್ಗೆ ಸರಿಯಾದ ತನಿಖೆ ನಡೀತಿಲ್ಲ, ಸಂತ್ರಸ್ತರ ಪರ ವಕೀಲ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದ್ದಾರೆ.


ಮಠಕ್ಕೆ ಹೊಸ ಶ್ರೀಗಳ ನೇಮಕ ಗೊಂದಲ


ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ವಿಚಾರದ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡಿದ್ದಾರೆ. ಮಠದ ಭಕ್ತರು, ಮಾಜಿ ಶಾಸಕರ ನಿಯೋಗ ನನ್ನನ್ನ ಭೇಟಿ ಮಾಡಿದ್ದಾರೆ. ಆಡಳಿತ ವಿಚಾರದಲ್ಲಿ ಆಗ್ತಿರುವ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಆದ್ದರಿಂದ ಏನೇ ಕ್ರಮ ತೆಗೆದುಕೊಂಡರೂ ಕಾನೂನು ಚೌಕಟ್ಟಿನ ಪ್ರಕಾರವೇ ಮುಂದಿನ ಕ್ರಮ ತಗೋತೀವಿ ಎಂದು ಸಿಎಂ ಹೇಳಿದ್ರು.


ಇದನ್ನೂ ಓದಿ:  BJP Tweet: ರಾಹುಲ್ ಗಾಂಧಿ ಅವರೇ, ಕರ್ನಾಟಕ ಬಿಡುವ ಮುನ್ನ ಒಮ್ಮೆ ನೆನಪಿಸಿಕೊಳ್ಳಿ; ಬಿಜೆಪಿ ವಾಗ್ದಾಳಿ


ತನಿಖೆಯನ್ನ ಸಿಬಿಐಗೆ ಒಪ್ಪಿಸುವಂತೆ ಆಗ್ರಹ


ಇನ್ನು ಸಿಡಬ್ಲ್ಯೂಸಿಯು ಮಕ್ಕಳಿಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದೆ. ಆ ನಂತರ ಸಂತ್ರಸ್ತ ಬಾಲಕಿಯರ ಹೇಳಿಕೆಗಳನ್ನು ಪಡೆದು ದಾಖಲಿಸಿ ತಕ್ಷಣವೇ ಮುರುಘಾ ಶರಣರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಸಿಡಬ್ಲ್ಯೂಸಿಯು ಆದೇಶ ಹೊರಡಿಸಿದೆ.

Published by:Mahmadrafik K
First published: