ಹಸುಳೆಯನ್ನು ಎತ್ತೊಯ್ದು ಅತ್ಯಾಚಾರಕ್ಕೆ ಯತ್ನ; ಕಾಮುಕನಿಗೆ ಸಾರ್ವಜನಿಕರ ಧರ್ಮದೇಟು

ಕುಪಿತಗೊಂಡ ಸಾರ್ವಜನಿಕರು ಕಾಮುಕನಿಗೆ ಕೋಣೆಯಲ್ಲಿಯೇ ಧರ್ಮದೇಟು ನೀಡಿದ್ದಾರೆ. ಹಿಗ್ಗಾಮುಗ್ಗ ಥಳಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

news18-kannada
Updated:February 25, 2020, 10:22 PM IST
ಹಸುಳೆಯನ್ನು ಎತ್ತೊಯ್ದು ಅತ್ಯಾಚಾರಕ್ಕೆ ಯತ್ನ; ಕಾಮುಕನಿಗೆ ಸಾರ್ವಜನಿಕರ ಧರ್ಮದೇಟು
ಸಾಂದರ್ಭಿಕ ಚಿತ್ರ.
  • Share this:
ಕಲಬುರ್ಗಿ (ಫೆ.25) : ಹೆತ್ತಮ್ಮನ ಜೊತೆ ನಿದ್ರೆ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ತಾಯಿ ಜೊತೆ ಮಲಗಿದ್ದ ಬಾಲಕಿಯನ್ನು ಎತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.

ಸಾರ್ವಜನಿಕರಿಂದ ಧರ್ಮದೇಟು ತಿಂದ ವ್ಯಕ್ತಿಯನ್ನು ಚಿಂಚೋಳಿ ತಾಲೂಕಿನ ಮಿರಿಯಾಣ ಗ್ರಾಮದ 30 ವರ್ಷದ ಪ್ರವೀಣ್ ಎಂದು ಗುರುತಿಸಲಾಗಿದೆ.

ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನ ಹರಕೆ ತೀರಿಸಲು ಕುಟುಂಬವೊಂದು ಕಲಬುರ್ಗಿಗೆ ಬಂದಿತ್ತು. ಆದರೆ, ದೇವಸ್ಥಾನದ ಆವರಣದಲ್ಲಿ ಮಲಗಿದ್ದ ಸಂದರ್ಭದಲ್ಲಿ ಮಗುವನ್ನು ಎತ್ತೊಯ್ದಿದ್ದ ಕಾಮುಕ, ಕೋಣೆಯೊಂದಕ್ಕೆ ಕರೆದೊಯ್ದಿದ್ದಾನೆ. ಕೋಣೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಮಗು ಕಿರುಚಿಕೊಂಡಿದೆ. ಮಗು ಚೀರಾಟ ಕೇಳಿಸಿಕೊಂಡ ಸಾರ್ವಜನಿಕರು ಅನುಮಾನಗೊಂಡು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಕುಪಿತಗೊಂಡ ಸಾರ್ವಜನಿಕರು ಕಾಮುಕನಿಗೆ ಕೋಣೆಯಲ್ಲಿಯೇ ಧರ್ಮದೇಟು ನೀಡಿದ್ದಾರೆ. ಹಿಗ್ಗಾಮುಗ್ಗ ಥಳಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಕಾಮುಕನ ಬಟ್ಟೆ ಬಿಚ್ಚಿಸಿ ನಡು ರಸ್ತೆಯಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ್ದ ಸಾರ್ವಜನಿಕರು ನಂತರ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ :  ಬಾಲ ಮಂದಿರದಲ್ಲಿ ಬಾಲಕಿಯರಿಗಿಲ್ಲ ರಕ್ಷಣೆ - ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ - ಇಬ್ಬರು ಸಿಬ್ಬಂದಿ ಅಮಾನತು

ಸ್ಥಳಕ್ಕೆ ಬಂದ ಪೊಲೀಸರು, ಕಾಮುಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
First published: February 25, 2020, 9:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading