• Home
  • »
  • News
  • »
  • state
  • »
  • Breaking News: ಅಪಾರ್ಟ್‌ಮೆಂಟ್ ಕಾಂಪೌಂಡ್ ಕುಸಿದು ನಾಲ್ವರ ದುರ್ಮರಣ! ನಿದ್ದೆಯಿಂದ ಚಿರನಿದ್ರೆಗೆ ಜಾರಿದ ಕಾರ್ಮಿಕರು

Breaking News: ಅಪಾರ್ಟ್‌ಮೆಂಟ್ ಕಾಂಪೌಂಡ್ ಕುಸಿದು ನಾಲ್ವರ ದುರ್ಮರಣ! ನಿದ್ದೆಯಿಂದ ಚಿರನಿದ್ರೆಗೆ ಜಾರಿದ ಕಾರ್ಮಿಕರು

ಘಟನಾ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ

ಘಟನಾ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ

ಶೆಡ್‌ನಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು ಎನ್ನಲಾಗಿದೆ. ಕಾಂಪೌಂಡ್ ಕುಸಿಯುತ್ತಿದ್ದಂತೆ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ದುರಾದೃಷ್ಟವಶಾತ್ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ನಿದ್ದೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಚಿರನಿದ್ರೆಗೆ ಜಾರಿದ್ದಾರೆ.

  • Share this:

ಬೆಂಗಳೂರು: ನಿರ್ಮಾಣ ಹಂತದ ಅಪಾರ್ಟ್ಮೆಂಟ್ (Apartment) ಕಾಂಪೌಂಡ್ (Compound) ಕುಸಿದು ನಾಲ್ವರು ಸಾವನ್ನಪ್ಪಿರುವ (Four Death) ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದಿದೆ. ನಗರದ ಹೊರವಲಯದ ತಿರುಮಲಶೆಟ್ಟಿಹಳ್ಳಿಯಲ್ಲಿ (Tirumalashetty Halli) ಬೆಳ್ಳಂಬೆಳಗ್ಗೆ ಘಟನೆ‌ ನಡೆದಿದೆ. ಹೊಸಕೋಟೆ (Hoskote) ತಾಲೂಕಿನ ತಿರುಮಲಶೆಟ್ಟಹಳ್ಳಿ ಬಳಿ ಅಪಾರ್ಟ್‌ಮೆಂಟ್ ಕಾಂಪೌಂಡ್ ಕಾರ್ಮಿಕರ ಶೆಡ್ (Labours Shed) ಮೇಲೆ ಕುಸಿದಿದೆ. ಪರಿಣಾಮ ನಿದ್ದೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಚಿರನಿದ್ರೆಗೆ ಜಾರಿದ್ದಾರೆ. ಘಟನೆ ವೇಳೆ ಶೆಡ್‌ನಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು ಎನ್ನಲಾಗಿದೆ. ಕಾಂಪೌಂಡ್ ಕುಸಿಯುತ್ತಿದ್ದಂತೆ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ದುರಾದೃಷ್ಟವಶಾತ್ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಶೆಡ್‌ನಲ್ಲಿ ಮಲಗಿದ್ದವರು 8 ಮಂದಿ ಕಾರ್ಮಿಕರು


ಮೃತರೆಲ್ಲ ಉತ್ತರ ಭಾರತ ಮೂಲದ ಕಾರ್ಮಿಕರು ಎಂದು ಗುರುತಿಸಲಾಗಿದೆ. ಇವರೆಲ್ಲ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್ ಕೆಲಸದಲ್ಲಿ ತೊಡಗಿದ್ದರು. ಎಂದಿನಂತೆ ನಿನ್ನೆ ರಾತ್ರಿ ಅಪಾರ್ಟ್‌ಮೆಂಟ್ ಕಾಂಪೌಂಡ್ ಬಳಿಯೇ ನಿರ್ಮಿಸಲಾಗಿದ್ದ ಕಾರ್ಮಿಕರ ಶೆಡ್‌ನಲ್ಲಿ ಇವರೆಲ್ಲ ಮಲಗಿದ್ದಾರೆ. ಆದರೆ ಮುಂಜಾನೆ ಏಕಾಏಕಿ ಕಾಂಪೌಂಡ್ ಕುಸಿದಿದೆ. ಪರಿಣಾಮ ಅಲ್ಲೇ ಮಲಗಿದ್ದ 8 ಮಂದಿ ಪೈಕಿ ನಾಲ್ವರು ಮೃತಪಟ್ಟಿದ್ದಾರೆ.


ದುರಂತ ನಡೆದ ಸ್ಥಳ


ಗಾಯಾಳುಗಳು ಆಸ್ಪತ್ರೆಗೆ ದಾಖಲು


ಮೃತರನ್ನು ಮನೋಜ್ ಕುಮಾರ್ ಸದಯ್ (35), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದಯ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರ ಗುರುತು ಸಿಕ್ಕಿಲ್ಲ. ಇನ್ನು ಘಟನೆಯಲ್ಲಿ ಸುನಿಲ್ ಮಂಡಲ್, ಶಂಭು ಮಂಡಲ್, ದಿಲೀಪ್ ಹಾಗೂ ದುರ್ಗೇಶ್ ಎಂಬುವರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ವೈಟ್ ಫೀಲ್ಡ್ ಖಾಸಗಿ ಅಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ: Sting Operation: ಕೆಜಿಎಫ್‌ ಆರ್‌ಟಿಒ ಅಧಿಕಾರಿಗಳಿಂದ ತಡರಾತ್ರಿವರೆಗೂ ವಸೂಲಿ! ರಹಸ್ಯ ಕಾರ್ಯಾಚರಣೆಯಲ್ಲಿ ಲಂಚಾವತಾರ ಬಯಲು


ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ


ಈ ಕಾರ್ಮಿಕರ ಶೆಡ್ ನಲ್ಲಿ ಒಟ್ಟು 8 ಜನ ಕಾರ್ಮಿಕರು ಮಲಗಿದ್ದರು. ಕಾಂಪೌಂಡ್ ಕುಸಿಯುತ್ತಿದ್ದಂತೆ ನಾಲ್ವರನ್ನು ರಕ್ಷಿಸಲಾಗಿದೆ. ಆದರೆ ನಿದ್ದೆಯಲ್ಲಿದ್ದ ನಾಲ್ವರು ಕಾರ್ಮಿಕರು ನಿದ್ದೆಯಲ್ಲೇ ಚಿರನಿದ್ರೆಗೆ ಜಾರಿದ್ದಾರೆ. ಇನ್ನು ಸ್ಥಳಕ್ಕೆ ಎಎಸ್​ಪಿ ಪುರುಷೋತ್ತಮ್ ಹಾಗೂ ಹೊಸಕೋಟೆ ಡಿವೈಎಸ್​ಪಿ ಉಮಾಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಸಂಬಂಧ ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.


ಪೊಲೀಸರಿಂದ ಪರಿಶೀಲನೆ


ತಂಗಳು ಬಿರಿಯಾನಿ ತಿಂದು ಕಾರ್ಮಿಕರು ಅಸ್ವಸ್ಥ


ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿ ಕುಣಿಗಳ್ಳಿಯಲ್ಲಿ ತಂಗಳು ಬಿರಿಯಾನಿ ಸೇವಿಸಿ 25 ಕಾರ್ಮಿಕರು ಅಸ್ವಸ್ಥ ರಾಗಿದ್ದಾರೆ. ಸಂತೋಷ್ ಎಂಬವರು ಜು.18 ರಂದು ತಮ್ಮ ಮಗನ ಹುಟ್ಟುಹಬ್ಬದ ಹಿನ್ನೆಲೆ ಯಲ್ಲಿ ಚಿಕನ್ ಬಿರಿಯಾನಿ ಮಾಡಿಸಿದ್ದರು. ಬಿರಿಯಾನಿ ಮಾಡಿಸಿ ಸ್ನೇಹಿತರು, ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು. ಮರುದಿನ ಜಮೀನಿಗೆ ಕಬ್ಬು ಕಟಾವಿಗೆ ಬಂದಿದ್ದ ಕಾರ್ಮಿಕ ರಿಗೆ ತಂಗಳು ಬಿರಿಯಾನಿ ನೀಡಿದ್ದರು. ತಂಗಳು ಬಿರಿಯಾನಿ ಸೇವಿಸಿದ ಕಾರ್ಮಿಕರಿಗೆ ವಾಂತಿ-ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ಮಿಕರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Gadaga: ಸೆಲ್ಫಿ ವಿಡಿಯೋ ಮಾಡಿ ನದಿಗೆ ಹಾರಿದ ಯುವಕ! ಕ್ರಿಕೆಟ್ ಟೀಮ್​ನಿಂದ ಕೈ ಬಿಟ್ಟಿದ್ದಕ್ಕೆ ಆತ್ಮಹತ್ಯೆ


ಮಂಗಳೂರು ಬಳಿಯ ಬಾರೆಬೈಲಿನ ಅಗ್ನಿ ಶಾಮಕ ಠಾಣೆಯ ವಾಹನ ನಿಲುಗಡೆ ಕಟ್ಟಡದ ಚಾವಣಿಗೆ ಶೀಟ್ ಅಳವಡಿಸುವ ವೇಳೆ ಕೆಳಕ್ಕೆ ಬಿದ್ದು ಕಾರ್ಮಿಕರೊಬ್ಬರು ಕಳೆದ ಮಂಗಳವಾರ ಮೃತಪಟ್ಟಿದ್ದಾರೆ. ಮೃತರನ್ನು ಬಂಟ್ವಾಳದ ಅಮ್ಮಂಜೆಯ ದೀಪಕ್ (29 ವರ್ಷ) ಎಂದು ಗುರುತಿಸಲಾಗಿದೆ. ದೀಪಕ್‌ ಅವರ ಅಕ್ಕನ ಗಂಡ ನಾಗೇಶ್‌ ಅವರು ನಗರ ಪೂರ್ವ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಚಾವಣಿಯ ಶೀಟ್ ಅಳವಡಿಸುವಾಗ ಆಯತಪ್ಪಿ ಸುಮಾರು 30 ಅಡಿ ಕೆಳಗೆ ಬಿದ್ದಿದ್ದರು. ತಲೆಗೆ ತೀವ್ರ ಏಟಾಗಿತ್ತು. ಅವರನ್ನು ಅಲ್ಲಿದ್ದ ಕಾರ್ಮಿಕರು ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕೂಡಲೇ ವಾಹನದಲ್ಲಿ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು.

Published by:Annappa Achari
First published: