• Home
  • »
  • News
  • »
  • state
  • »
  • Rain Effect: ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು, ಮೂವರ ಶವ ಪತ್ತೆ; ದಾವಣಗೆರೆಯಲ್ಲಿ ಸೇತುವೆ ಕುಸಿತ, ಬೆಳೆ ಜಲಾವೃತ

Rain Effect: ಹಳ್ಳದಲ್ಲಿ ಕೊಚ್ಚಿಹೋದ ನಾಲ್ವರು, ಮೂವರ ಶವ ಪತ್ತೆ; ದಾವಣಗೆರೆಯಲ್ಲಿ ಸೇತುವೆ ಕುಸಿತ, ಬೆಳೆ ಜಲಾವೃತ

ಮಹಿಳೆಯರು ಕೊಚ್ಚಿ ಹೋದ ಹಳ್ಳ

ಮಹಿಳೆಯರು ಕೊಚ್ಚಿ ಹೋದ ಹಳ್ಳ

ಹೆಬ್ಬಾಳು ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಹಿನ್ನೆಲೆ ಗ್ರಾಮಕ್ಕೆ ಹಾಗೂ ಕೆಲ ತೋಟಗಳಿಗೆ ನೀರು ನುಗ್ಗಿದೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ನೂರಾರು ಎಕರೆ ಮೆಕ್ಕೆಜೋಳ ಬೆಳೆ ನಾಶವಾಗಿದೆ.

  • Share this:

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಉತ್ತರ ಕರ್ನಾಟಕ (North Karnataka Rains) ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದೆ. ಕೊಪ್ಪಳ, ದಾವಣಗೆರೆ, ಬೆಳಗಾವಿ, ವಿಜಯಪುರ ಭಾಗದಲ್ಲಿ ಮಳೆಯಾಗುತ್ತಿದೆ. ಕೃಷ್ಣಾ ನದಿಯಲ್ಲಿ (Krishna River) ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ. ಕೊಪ್ಪಳ (Koppal Rains) ಜಿಲ್ಲೆಯಲ್ಲಿ ವರಣನ ಅಬ್ಬರ ಜೋರಾಗಿದೆ. ನಿರಂತರ ಮಳೆಯಿಂದ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿತ್ತು. ಕೃಷಿ ಕೆಲಸಕ್ಕೆ ಹೋಗಿ ವಾಪಸ್‌ ಮನೆಗೆ ಮರಳುವಾಗ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ. 32 ವರ್ಷದ ಗಿರಿಜಾ ಮಾಲಿಪಾಟೀಲ್, 40 ವರ್ಷದ ಭುವನೇಶ್ವರಿ ಪೊಲೀಸ್ ಪಾಟೀಲ್ 45 ವರ್ಷದ ಪವಿತ್ರಾ ಪೊಲೀಸ್ ಪಾಟೀಲ್ 19 ವರ್ಷದ ವೀಣಾ ಮಾಲಿಪಾಟೀಲ್ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ನಾಲ್ವರ ಪೈಕಿ ಮೂವರ ಶವ ಪತ್ತೆಯಾಗಿದ್ದು, ಮತ್ತೊಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.


ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಚಿವ ಹಾಲಪ್ಪ ಆಚಾರ್‌ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದರು. ಸೇತುವೆ ನಿರ್ಮಿಸಿಕೊಡಿ ಅಂತ ಕೇಳಿದ್ರೂ ನಿರ್ಲಕ್ಷ್ಯಿಸಿದ್ದೀರಿ. ನಿಮ್ಮ ನಿರ್ಲಕ್ಷ್ಯಕ್ಕೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಚಿವರನ್ನು ಕ್ಲಾಸ್ ತೆಗೆದುಕೊಂಡರು.


ದಾವಣಗೆರೆಯಲ್ಲಿ ಮಳೆ ಜಮೀನಿಗೆ ನುಗ್ಗಿದ ನೀರು


ದಾವಣಗೆರೆ  ಜಿಲ್ಲೆಯಲ್ಲಿ ನಿನ್ನೆ ಸಂಜೆ ಭಾರೀ ಮಳೆ ಆಗಿದೆ.. ಹಲವು ಕಡೆ ಕೆರೆ- ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದು, ಜಮೀನಿಗೆ ನೀರು ನುಗ್ಗಿದೆ. ಹೆಬ್ಬಾಳು ಗ್ರಾಮದಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿ ಹಿನ್ನೆಲೆ ಗ್ರಾಮಕ್ಕೆ ಹಾಗೂ ಕೆಲ ತೋಟಗಳಿಗೆ ನೀರು ನುಗ್ಗಿದೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ. ನೂರಾರು ಎಕರೆ ಮೆಕ್ಕೆಜೋಳ ಬೆಳೆ ನಾಶವಾಗಿದೆ.


ಮಳೆ ಎಫೆಕ್ಟ್ ಕುಸಿದ ಸೇತುವೆ


ಇದೇ ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಭದ್ರಾ ಎಡದಂಡೆ ಕಾಲುವೆಯ ಸೇತುವೆ ಮುರಿದು ಬಿದ್ದಿದೆ. ಹಳ್ಳದ ಮೇಲೆ ಭದ್ರಾ ಜಲಾಶಯದ ನೀರು ಹರಿದು ಹೋಗಲು ತೊಟ್ಟಿಲು ನಿರ್ಮಿಸಲಾಗಿತ್ತು. ನಿನ್ನೆ ರಾತ್ರಿ ಸುರಿದ ಮಳೆಗೆ ಸೇತುವೆ ಮುರಿದಿದ್ದು, ಚಾನೆಲ್ ನೀರು ಹಳ್ಳಕ್ಕೆ ಹರಿದುಹೋಗ್ತಿದೆ.


ಇದನ್ನೂ ಓದಿ:  Vijayapura Gandhi: ವಿಜಯಪುರದಲ್ಲಿ ಗಾಂಧಿ! ಬಾಪು ಇಲ್ಲೇ ಇದ್ದಾರೆ ನೋಡಿ


ಗದಗದಲ್ಲಿ ಮಳೆ ಅಬ್ಬರ -ಸೇತುವೆ ಜಲಾವೃತ


ಇನ್ನ ಗದಗ ಜಿಲ್ಲೆಯಲ್ಲೂ ಮಳೆ ಅಬ್ಬರಿಸುತ್ತಿದೆ. ಮಳೆಯ ಅಬ್ಬರಕ್ಕೆ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ ಬಳಿಯ ಸೇತುವೆ ಜಲಾವೃತ ಆಗಿದೆ. ರೋಣ-ನರಗುಂದ ಸಂಪರ್ಕ ಕಡಿತ ಆಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.


ಸಿಡಿಲು ಬಡಿದು 23 ವರ್ಷದ ಯುವಕ ಸಾವು


ಕೊಪ್ಪಳ ತಾಲೂಕಿನ ಕಾಟ್ರಳ್ಳಿ ಬಳಿ ಸಿಡಿಲು ಬಡಿದು 23 ವರ್ಷದ ಕೋಟ್ರೇಶ್ ಸಾವನ್ನಪ್ಪಿದ್ದಾನೆ. ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು,  ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಗಾಯಾಳು ಅನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.


ಯುವಕರು ನೀರುಪಾಲು


ಚೆಕ್ ಡ್ಯಾಂ ಬಳಿ ರೀಲ್ಸ್ ಮಾಡಲು ಹೋಗಿದ್ದ ಇಬ್ಬರು ಯುವಕರು ಕಣ್ಮರೆಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಸಮೀಪದ ಹರಗನಹಳ್ಳಿ ಚೆಕ್ ಡ್ಯಾಂ ಬಳಿ  ರೀಲ್ಸ್ ಮಾಡಲು ಹೋಗಿ ಇಬ್ಬರು ಯುವಕರು ನೀರಲ್ಲಿ ಮುಳುಗಿದ್ದಾರೆ. 24 ವರ್ಷದ ಪ್ರಕಾಶ್ , 25 ವರ್ಷದ ಪವನ್ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದಾರೆ.


ಇದನ್ನೂ ಓದಿ:  Cabinet Expansion: ಸಂಪುಟ ವಿಸ್ತರಣೆಗೆ ಹೆಚ್ಚಾದ ಒತ್ತಡ; BSY ಭೇಟಿಯಾದ ಸಿಎಂ; ಸಚಿವಾಕಾಂಕ್ಷಿಗಳ ಪಟ್ಟಿ ಹೀಗಿದೆ


ಕಳೆದ ಮೂರು ದಿನಗಳ ಹಿಂದೆ ನೀರಲ್ಲಿ ಯುವಕರು ಮುಳುಗಿದ್ರು. ಇವತ್ತು ಓರ್ವನ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಮತ್ತೊಂದು  ಮೃತದೇಹಕ್ಕಾಗಿ ಶೋಧ ನಡೆಸಿದ್ದಾರೆ.

Published by:Mahmadrafik K
First published: