Male Mahadeshwara: ಕಾಡಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ, ಇಂದಿನಿಂದ 'ಜನ-ವನ ಸೇತುವೆ ಸಾರಿಗೆ' ಸಂಚಾರ

ಮಲೆ ಮಹದೇಶ್ವರ ಅರಣ್ಯದ ಗ್ರಾಮಗಳ ವಾಸಿಗಳಿಗಾಗಿ 'ಜನ-ವನ ಸೇತುವೆ ಸಾರಿಗೆ' ಎಂಬ ವಿನೂತನ ಯೋಜನೆ ಜಾರಿಗೆ ಬಂದಿದೆ. ವಿವಿಧ ಉದ್ದೇಶಗಳಿಗೆ ಬಳಸಬಹುದಾದ, ದುರ್ಗಮ ಅರಣ್ಯ ರಸ್ತೆಗಳಲ್ಲಿ ಸಂಚರಿಸುವ ಸಾಮರ್ಥ್ಯ ಇರುವ  ಫೋರ್ ವ್ಹೀಲ್ ಡ್ರೈವ್ ಸೌಲಭ್ಯದ ನಾಲ್ಕು ವಾಹನಗಳನ್ನು ನಿಯೋಜನೆ ಮಾಡುವ ಮೂಲಕ ಅರಣ್ಯ ಇಲಾಖೆ ಇಲ್ಲಿನ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದೆ.

'ಜನ-ವನ ಸೇತುವೆ ಸಾರಿಗೆ' ಎಂಬ ವಿನೂತನ ಯೋಜನೆ ಜಾರಿ

'ಜನ-ವನ ಸೇತುವೆ ಸಾರಿಗೆ' ಎಂಬ ವಿನೂತನ ಯೋಜನೆ ಜಾರಿ

  • Share this:
ಚಾಮರಾಜನಗರ, ಜೂ.19: ಆ ಜನರಿಗೆ ದುರ್ಗಮ ಕಾಲು ಹಾದಿಗಳೇ ಹೆದ್ದಾರಿಯಾಗಿವೆ. ಡೋಲಿಯೇ (Dolly) ಆ್ಯಂಬುಲೆನ್ಸ್ (Ambulance) ಆಗಿದೆ, ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ, ಗರ್ಭಿಣಿಯರಿಗೆ (Pregnant) ಹೆರಿಗೆ ನೋವು (Delivery Pain) ಕಾಣಿಸಿಕೊಂಡರೆ ಅಂತಹವರನ್ನು ಡೋಲಿ ಕಟ್ಟಿಯೇ ಹೊತ್ತುಕೊಂಡು ಬೆಟ್ಟಗುಡ್ಡ ಹತ್ತಿ ಇಳಿದು ಬರಬೇಕು. ಅಲ್ಲಿ ವಾಹನ (Vehicle) ಸಂಚಾರ ಇಲ್ಲದೆ ಎಷ್ಟೋ ಮಕ್ಕಳು (Children) ಶಿಕ್ಷಣದಿಂದ (Education) ವಂಚಿತರಾಗಿವೆ. ಇಲ್ಲಿನ ಗ್ರಾಮಗಳಿಗೆ (Village) ಸಮರ್ಪಕ ರಸ್ತೆ (Road) ಇಲ್ಲದೆ ಯಾವ ಸೌಲಭ್ಯಗಳು ಸರಿಯಾಗಿ ತಲುಪುತ್ತಿಲ್ಲ. ಆಹಾರ ಪದಾರ್ಥಗಳು ಬೇಕೆಂದರೆ, ಸರ್ಕಾರ ನೀಡುವ ಪಡಿತರ ತರಬೇಕೆಂದರೆ ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಯಲ್ಲೇ ಕಿಲೋಮೀಟರ್ ಗಟ್ಟಲೆ  ಹೋಗಿ ತರಬೇಕು.  ಇಂತಹ ಸಂದರ್ಭಗಲ್ಲಿ ಎಷ್ಟೋ ಬಾರಿ ಕಾಡುಪ್ರಾಣಿಗಳು ದಾಳಿ ನಡೆಸಿದ್ದು ಉಂಟು, ಜನರ ಪ್ರಾಣ ಹೋಗಿದ್ದು ಉಂಟು. ಇದು ಮಲೆ ಮಹದೇಶ್ವರ ಬೆಟ್ಟದ ಮಧ್ಯೆ ಇರುವ ಜನರ ಪರಿಸ್ಥಿತಿ.

ಗ್ರಾಮವಾಸಿಗಳ ಸಂಕಷ್ಟಕ್ಕೆ ಪರಿಹಾರ

ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದ ದಟ್ಟಾರಣ್ಯದ ಮಧ್ಯೆ ಇರುವ ಗ್ರಾಮಗಳ ಜನರ ಪಾಡು ಅಷ್ಟಿಷ್ಟಲ್ಲ. ಇದಕ್ಕೆಲ್ಲಾ ಈಗ ಅರಣ್ಯ ಇಲಾಖೆ ಪರಿಹಾರ ಹುಡುಕಿದೆ. ಜನ-ವನ  ಸೇತುವೆ ಸಾರಿಗೆ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ. ವಿವಿಧ ಉದ್ದೇಶಗಳಿಗೆ ಬಳಸಬಹುದಾದ, ದುರ್ಗಮ ಅರಣ್ಯ ರಸ್ತೆಗಳಲ್ಲಿ ಸಂಚರಿಸುವ ಸಾಮರ್ಥ್ಯ ಇರುವ  ಫೋರ್ ವ್ಹೀಲ್ ಡ್ರೈವ್ ಸೌಲಭ್ಯದ ನಾಲ್ಕು ವಾಹನಗಳನ್ನು ನಿಯೋಜನೆ ಮಾಡುವ ಮೂಲಕ ಅರಣ್ಯ ಇಲಾಖೆ ಇಲ್ಲಿನ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಿದೆ.

ಜಿಲ್ಲಾಧಿಕಾರಿಗಳಿಂದ ಸಿಕ್ಕಿತು ಚಾಲನೆ

ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ವತಃ ಚಾಲನೆ ಮಾಡುವ ಮೂಲಕ ಹಾಗು ಮಲೆಮಹದೇಶ್ವರ ಬೆಟ್ಟದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮೊಟ್ಟ ಮೊದಲ ಪ್ರಯಾಣ ಮಾಡುವ ಮೂಲಕ ಜನ-ವನ ಸೇತುವೆ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ

ಇದನ್ನೂ ಓದಿ: Male Mahadeshwra: ಮಾದಪ್ಪನಿಗೆ ಉಘೇ ಎಂದ ಭಕ್ತರು, 35 ದಿನಗಳಲ್ಲಿ 2 ಕೋಟಿಕೂ ಅಧಿಕ ಕಾಣಿಕೆ ಸಂಗ್ರಹ!

24 ಗಂಟೆ, 4 ಮಾರ್ಗಗಳಲ್ಲಿ ವಾಹನ ಸಂಚಾರ

ದಿನದ 24 ಗಂಟೆ ಕಾಲ ಈ ವಾಹನಗಳ ಸೇವೆ ಲಭ್ಯವಿರಲಿದ್ದು ನಾಲ್ಕು ಮಾರ್ಗಗಳಲ್ಲಿ ಈ ವಾಹನಗಳು ಸಂಚರಿಸಲಿವೆ. ಇಂಡಿಗತ್ತ- ಮೆದಗನಣೆ-ಮೆಂದರೆ- ನಾಗಮಲೈ ಮಾರ್ಗ, ಪಡಸಲನತ್ತ ಮಾರ್ಗ, ಕೊಕ್ಕಬೊರೆ-ತೋಕರೆ- ದೊಡ್ಡಾಣೆ ಮಾರ್ಗ ಹಾಗು ಕಾಂಚಳ್ಳಿ-ಪಚ್ಚೆದೊಡ್ಡಿ ಮಾರ್ಗಗಳಲ್ಲಿ ಈ   ವಾಹನಗಳು ಸಂಚರಿಸಲಿದ್ದು ಅರಣ್ಯ ಇಲಾಖೆಯಿಂದ ಚಾಲಕರನ್ನು ನಿಯೋಜಿಸಲಾಗಿದೆ.

ಗ್ರಾಮಸ್ಥರ ಬಳಕೆಗೆ ಮೀಸಲು

ಈ ಭಾಗದ ಗ್ರಾಮಸ್ಥರು ಗರ್ಭಿಣಿಯರನ್ನು, ಅನಾರೋಗ್ಯಕ್ಕೆ ಒಳಗಾದವರನ್ನು ಆಸ್ಪತ್ರೆಗೆ, ಕರೆದೊಯ್ಯಬಹುದು ಮಕ್ಕಳು ಶಾಲೆಗೆ ಹೋಗಬಹುದು, ಪಡಿತರ ಸಾಗಣೆ ಮಾಡಬಹುದು ಹಾಗು ತುರ್ತು ಸಂದರ್ಭಗಳಲ್ಲಿ ಈ ಅರಣ್ಯ ಪ್ರದೇಶದೊಳಗೆ ಇರುವ ಗ್ರಾಮಸ್ಥರು ಬಳಕೆ ಮಾಡಿಕೊಳ್ಳಬಹುದಾಗಿದೆ.

ಉಚಿತ ಪ್ರಯಾಣಕ್ಕೂ ಅವಕಾಶ

"ಈ ವಾಹನಗಳ ನಿರ್ವಹಣೆ ಜವಾಬ್ದಾರಿಯನ್ನು ಆಯಾ ಗ್ರಾಮಗಳ ಪರಿಸರ ಅಭಿವೃದ್ಧಿ ಸಮಿತಿಗಳಿಗೆ ವಹಿಸಲಾಗಿದ್ದು, ಶಾಲಾ ಮಕ್ಕಳಿಗೆ, ಗರ್ಭಿಣಿಯರಿಗೆ, ಅನಾರೋಗ್ಯಕ್ಕೆ ಒಳಗಾದವರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದ್ದು, ಪಡಿತರವನ್ನು ಉಚಿತವಾಗಿ ಸಾಗಣೆ ಮಾಡಬಹುದು, ಉಳಿದ ಸಂದರ್ಭಗಳಲ್ಲಿ ಹಾಗು ಇತರರಿಗೆ ರಿಯಾಯಿತಿ ದರ ವಿಧಿಸಲಾಗುವುದು" ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.

ಗ್ರಾಮಗಳ ಅಭಿವೃದ್ಧಿಗೆ ಆದಾಯ ಬಳಕೆ

"ಇದರಿಂದ ಬರುವ ಆದಾಯವನ್ನುಅರಣ್ಯ ಇಲಾಖೆ ಪಡೆಯುವುದಿಲ್ಲ, ಬದಲಾಗಿ ಆಯಾ ಗ್ರಾಮಗಳ ಪರಿಸರ ಅಭಿವೃದ್ಧಿ ಸಮಿತಿಗಳೆ ಬಳಸಿಕೊಂಡು ಜನ-ವನ ಸೇತುವೆ ಸಾರಿಗೆ ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುವಂತೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Chamrajnagar: ಶಾಲೆಗೆ ಮಕ್ಕಳು ಚಕ್ಕರ್ ಹೊಡೆದ್ರೆ ಮನೆ ಮುಂದೆ ಕುದುರೆ ಮಾಮ ಹಾಜರ್, ಸ್ಕೂಲ್​​ಗೆ ಉಚಿತ ಕುದುರೆ ಸವಾರಿ!

ಕೊನೆಗೂ ನನಸಾಯ್ತು ಜನರ ಕನಸು

ಹತ್ತಾರು ವರ್ಷಗಳಿಂದ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಇಲ್ಲಿನ ಜನರ ಕಷ್ಟ ಗೊತ್ತಿದ್ದರೂ ಜನರಿಗೆ ಯಾವುದೇ ಸೌಲಭ್ಯ ಒದಗಿಸಲು ಕ್ರಮ ವಹಿಸಿರಲಿಲ್ಲ. ಅವರು ನೀಡಿದ್ದ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಆದರೆ ಇತ್ತೀಚೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು  ಈ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜನರ ಸಂಕಷ್ಟವನ್ನು ಕಣ್ಣಾರೆ ಕಂಡಿದ್ದರು.  ಪರಿಹಾರ ಕಂಡು ಹಿಡಿಯಲು  ತಕ್ಷಣವೇ ಅರಣ್ಯ ಇಲಾಖೆ  ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು.  ಈ ಹಿನ್ನಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾಡಿದ ಪ್ರಯತ್ನದ  ಫಲವೇ  ಜನ ವನ ಸೇತುವೆ ಸಾರಿಗೆಯಾಗಿ ಹೊರಹೊಮ್ಮಿದೆ.
Published by:Annappa Achari
First published: