ಕೊರೋನಾ ಟೈಮ್​ನಲ್ಲಿ ಸಾರಿಗೆ ಸಂಸ್ಥೆಗೆ 4 ಸಾವಿರ ಕೋಟಿ ನಷ್ಟ; ಸಾರಿಗೆ ಸಚಿವ ಲಕ್ಷ್ಮಣ ಸವದಿ

ಹೊಸದಾಗಿ ಸಾರಿಗೆ ಇಲಾಖೆಯಲ್ಲಿ  ಚಾಲಕರಿಗೆ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಅಲ್ಲದೇ,  ಇಂಧ‌ನ ವಾಹನ ತಪ್ಪಿಸಿ ಇಲೆಕ್ಟ್ರಿಕ್ ಬಸ್ ಗೆ ಆದ್ಯತೆ ನೀಡಲಾಗುವುದು. ಮುಂದಿನ ತಿಂಗಳು 300 ಎಲೆಕ್ಟ್ರಿಕ್ ಬಸ್ ಗಳಿಗೆ ಚಾಲನೆ ನೀಡಲಾಗುವುದು. ಹಂತ ಹಂತವಾಗಿ ರಾಜ್ಯಾದ್ಯಂತ ಎಲೆಕ್ಟ್ರಿಕ್ ಬಸ್ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಸಾರಿಗೆ ಸಚಿವ ಲಕ್ಷ್ಮಣ ಸವದಿ

ಸಾರಿಗೆ ಸಚಿವ ಲಕ್ಷ್ಮಣ ಸವದಿ

  • Share this:
ಗದಗ(ಜ.24): ಸಾರಿಗೆ ಇಲಾಖೆ ಸಚಿವನಾದ ಸಂದರ್ಭದಲ್ಲಿ ರಾಜ್ಯದ ನಾಲ್ಕು ಸಾರಿಗೆ ಘಟಕಗಳು 2 ಸಾವಿರ ಕೋಟಿಯಷ್ಟು ಹಾನಿ ಅನುಭವಿಸಿದ್ದವು. ಅದನ್ನು ನಾನು ಸವಾಲಾಗಿ ಸ್ವೀಕರಿಸಿದೆ. ಇಲಾಖೆಯನ್ನು ಶಕ್ತಿಯುತ  ಪಾರದರ್ಶಕ ಆಡಳಿತ ಹಾಗೂ ಇಲಾಖೆಯ ಸದೃಢಕ್ಕಾಗಿ ಸಂಕಲ್ಪ ಮಾಡಿದೆ. ಆದರೆ, ವಿಶ್ವಕ್ಕೆ ಕೊರೋನಾ ತಡೆಯೊಡ್ಡಿತು ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಗದಗ ನಗರದಲ್ಲಿ ನಡೆದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣ ಉದ್ಘಾಟನೆ ಮತ್ತು ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊರೋನಾದಿಂದಾಗಿ ಸಾರಿಗೆ ಸಂಸ್ಥೆ  ಸಂಪೂರ್ಣ ಸ್ಥಬ್ಧವಾಗಿ, ಸುಮಾರು  1 ಲಕ್ಷ 90 ಸಾವಿರ ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಣವಿರಲಿಲ್ಲ.ಸಿಎಂಗೆ ಮನವಿ ಮಾಡಿದಾಗ ಸಿಬ್ಬಂದಿಗಳ 2 ತಿಂಗಳ ಸಂಬಳ ನೀಡಲು 700 ಕೋಟಿಗೂ ಅಧಿಕ ಹಣ ಮಂಜೂರು ಮಾಡಿದರು. ನಂತರ ಸಾರಿಗೆ ಇಲಾಖೆ ಆರಂಭವಾದರೂ, ಬರುತ್ತಿದ್ದ ಆದಾಯ ಇಂಧನಕ್ಕೂ ಸಾಲುತ್ತಿರಲಿಲ್ಲ. ಆಗ 7 ತಿಂಗಳ ಸಂಬಳ 1762 ಕೋಟಿ ರೂ. ಸರ್ಕಾರದಿಂದ ಪಡೆದು ತಿಂಗಳ ಸಂಬಳ ನೀಡಲಾಯಿತು ಎಂದು ತಿಳಿಸಿದರು.

ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು. ಆದರೆ ನಾಲ್ಕು ದಿನ ಬಸ್ ಸಂಚಾರ ಸ್ತಬ್ಧಗೊಳಿಸಿ  ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದರು. ಯಾರದ್ದೋ ಮಾತು ಕೇಳಿ ಗೊಂದಲಕ್ಕೀಡಾಗಿ ಚಾಲಕರು, ನಿರ್ವಾಹಕರೇ ಬಸ್ಸುಗಳಿಗೆ ಕಲ್ಲು ಎಸೆದಾಗ ತುಂಬಾ ನೋವಾಯಿತು ಎಂದು ಸಚಿವ ಸವದಿ ಬೇಸರ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಅಭಿವೃದ್ಧಿ ತಾರತಮ್ಯ ಖಂಡಿಸಿ ಪಾದಯಾತ್ರೆ ಅಂತ್ಯ; ಕಾನೂನಾತ್ಮಕ ಹೋರಾಟಕ್ಕೆ ಮುಂದಾದ ರೈತರು

ಸಂಸ್ಥೆಯ ಹಿರಿಯ ಮೇಲಾಧಿಕಾರಿಗಳು ಯಾವುದೇ ಸಿಬ್ಬಂದಿಗೂ ಮಾನಸಿಕ ಕಿರುಕುಳ ನೀಡಬಾರದು. ಅವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಖಾಸಗಿ ಸಂಸ್ಥೆಗಳ ಬಸ್ ಗಳು ಲಾಭದಲ್ಲಿರುತ್ತವೆ. ಆದರೆ‌, ಸರ್ಕಾರಿ ಸಾರಿಗೆ ನಿಗಮಗಳಿಗೆ ನಷ್ಟ ಯಾಕೆ..? ಎಂಬ ಪ್ರಶ್ನೆ ಎದ್ದಿದೆ. ಆದರೆ, ಬಸ್ ದರ ಏರಿಕೆ ಆಗಿಲ್ಲ. ಅಲ್ಲದೇ, ಪ್ರತಿವರ್ಷ ಎಲ್ಲದರ ದರವೂ ಹೆಚ್ಚಾಗುತ್ತಿದೆ. ಹಾಗಾಗಿ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿದೆ. ಅಲ್ಲದೇ, ಹಿಂದಿನ ಯಾವ ರಾಜ್ಯ ಸರ್ಕಾರವೂ ಸಾರಿಗೆ ಸಂಸ್ಥೆಗೆ ಕೊಡಬೇಕಿದ್ದ ಸುಮಾರು 2980 ಕೋಟಿ ರೂ. ಕೊಡಲಿಲ್ಲ. ಅಲ್ಲದೇ, ಕೊರೊನಾ ಸಂದರ್ಭದಲ್ಲಿಯೇ ಸಾರಿಗೆ ಸಂಸ್ಥೆ 4 ಸಾವಿರ ನಷ್ಟ ಅನುಭವಿಸಿದೆ ಎಂದರು.

ಹೊಸದಾಗಿ ಸಾರಿಗೆ ಇಲಾಖೆಯಲ್ಲಿ  ಚಾಲಕರಿಗೆ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಅಲ್ಲದೇ,  ಇಂಧ‌ನ ವಾಹನ ತಪ್ಪಿಸಿ ಇಲೆಕ್ಟ್ರಿಕ್ ಬಸ್ ಗೆ ಆದ್ಯತೆ ನೀಡಲಾಗುವುದು. ಮುಂದಿನ ತಿಂಗಳು 300 ಎಲೆಕ್ಟ್ರಿಕ್ ಬಸ್ ಗಳಿಗೆ ಚಾಲನೆ ನೀಡಲಾಗುವುದು. ಹಂತ ಹಂತವಾಗಿ ರಾಜ್ಯಾದ್ಯಂತ ಎಲೆಕ್ಟ್ರಿಕ್ ಬಸ್ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಸಿ.ಸಿ.ಪಾಟೀಲ್, ಸಂಸದ ಶಿವಕುಮಾರ್ ಉದಾಸಿ, ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಶಾಸಕ ಕಳಕಪ್ಪ ಬಂಡಿ,ಶಾಸಕ ಎಚ್ ಕೆ ಪಾಟೀಲ್, ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Published by:Latha CG
First published: