Karnataka Tourism: ಫಿಲ್ಮ್ ಸೆಟ್‌ಗಳಂತಿವೆ ಕರ್ನಾಟಕದ ಈ ತೋಟಗಳು! ಒಮ್ಮೆ ವಿಸಿಟ್ ಕೊಟ್ಟು ನೋಡಿ

ಹೇಗಪ್ಪಾ ಈ ವಿಕೆಂಡ್ ಕಳೆಯೋದು ಅಂತ ಅನೇಕರು ಚಿಂತೆ ಮಾಡುತ್ತಾ ಇರುತ್ತಾರೆ, ನಗರದಲ್ಲಿರುವ ಈ ಮಾಲ್, ರೆಸ್ಟೋರೆಂಟ್ ಗಳಿಗೆ ಹೋಗಿ ಹೋಗಿ ಬೋರ್ ಆಗಿದ್ದರೆ, ಬೆಂಗಳೂರಿನ ಆಚೆಯಲ್ಲಿವೆ ನೋಡಿ ಸುಂದರವಾದ ಫಿಲ್ಮ್ ಸೆಟ್​ಗಳಂತೆ ಕಾಣುವಂತಹ ತೋಟಗಳು. ಇವುಗಳಿಗೆ ಒಮ್ಮೆ ಭೇಟಿ ನೀಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹೇಗಪ್ಪಾ ಈ ವಿಕೆಂಡ್ (Weekend) ಕಳೆಯೋದು ಅಂತ ಅನೇಕರು ಚಿಂತೆ ಮಾಡುತ್ತಾ ಇರುತ್ತಾರೆ. ನಗರದಲ್ಲಿರುವ ಈ ಮಾಲ್, ರೆಸ್ಟೋರೆಂಟ್​ಗಳಿಗೆ (Restaurant) ಹೋಗಿ ಹೋಗಿ ಬೋರ್ ಆಗಿದ್ದರೆ, ಬೆಂಗಳೂರಿನ ಆಚೆಯಲ್ಲಿವೆ ನೋಡಿ ಸುಂದರವಾದ ಫಿಲ್ಮ್ ಸೆಟ್ ಗಳಂತೆ (Film Set) ಕಾಣುವಂತಹ ತೋಟಗಳು. ಇವುಗಳಿಗೆ ಒಮ್ಮೆ ಭೇಟಿ ನೀಡಿ, ಏಕೆಂದರೆ ಈ ಸ್ಥಳಗಳು ನೈಸರ್ಗಿಕ ಸೌಂದರ್ಯದಿಂದ (Natural Beauty) ಸಮೃದ್ಧವಾಗಿವೆ. ಅಲ್ಲಿ ನೀವು ಆ ತೋಟಗಳನ್ನು ನೋಡಿ ಆನಂದಿಸಬಹುದು. ಹೂವುಗಳ ತೋಟಗಳಿಂದ ಹಿಡಿದು ಪ್ರಶಾಂತವಾದ ಭೂದೃಶ್ಯಗಳವರೆಗೆ, ನೀವು ನಿಜಕ್ಕೂ ಫಿಲ್ಮ್ ಸೆಟ್ ಗೆ ಬಂದಿದ್ದೀರಿ ಅಂತ ಅನ್ನಿಸುವಂತೆ ಮಾಡುವ ಕರ್ನಾಟಕದ (Karnataka) ಈ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿರಿ.

1. ಗುಂಡ್ಲುಪೇಟೆ
ಕೇರಳದ ಗಡಿಯಲ್ಲಿರುವ ದಕ್ಷಿಣ ಕರ್ನಾಟಕದಲ್ಲಿರುವ ಗುಂಡ್ಲುಪೇಟೆಯು ಕಣ್ಣಿಗೆ ಕಾಣುವಷ್ಟು ದೂರದವರೆಗೆ ಸೂರ್ಯಕಾಂತಿ ಕ್ಷೇತ್ರಗಳಿಗೆ ನೆಲೆಯಾಗಿದೆ. ಸೊಂಪಾದ ಬೆಟ್ಟಗಳ ನಡುವೆ ನೆಲೆಗೊಂಡಿರುವ ಈ ಸೂರ್ಯಕಾಂತಿ ಹೊಲಗಳು ನೋಡಲು ತುಂಬಾನೇ ಮಜಾ ಕೊಡುತ್ತವೆ. ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ಮ್ಯಾಂಡೋಲಿನ್ ನುಡಿಸುತ್ತಾ ಈ ಹೊಲಗಳಲ್ಲಿ ಮಲಗಿರಬಹುದು ಎಂದು ನಿಮಗೆ ಅನ್ನಿಸುವುದಂತೂ ಗ್ಯಾರೆಂಟಿ. ಗುಂಡ್ಲುಪೇಟೆಯು ಬೆಂಗಳೂರಿನಿಂದ ಸುಮಾರು 200 ಕಿಲೋ ಮೀಟರ್ ದೂರದಲ್ಲಿದೆ.  ಊಟಿ ಮತ್ತು ಮೈಸೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿದೆ.

ಈ ಹೊಲಗಳಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜೂನ್​ನಿಂದ ಸೆಪ್ಟೆಂಬರ್, ಅಲ್ಲಿ ಹೂವುಗಳು ಅರಳುತ್ತವೆ.

2. ಮೈಸೂರು-ಗುಂಡ್ಲುಪೇಟೆ ಹೆದ್ದಾರಿ
ಗುಂಡ್ಲುಪೇಟೆಯು ಕೇವಲ ಸೂರ್ಯಕಾಂತಿಗಳಿಗೆ ಮಾತ್ರ ನೆಲೆಯಾಗಿಲ್ಲ. ಆದರೆ ಇಲ್ಲಿನ ವಿಸ್ತಾರವಾದ ಹೊಲಗಳಲ್ಲಿ ಚೆಂಡು ಹೂವುಗಳನ್ನು ಬೆಳೆಯಲಾಗುತ್ತದೆ. ಈ ದೃಶ್ಯವನ್ನು ಆನಂದಿಸಲು ಉತ್ತಮ ಮಾರ್ಗವೆಂದರೆ ಗುಂಡ್ಲುಪೇಟೆ-ಮೈಸೂರು ಹೆದ್ದಾರಿಯ ರಸ್ತೆ ಬದಿಯಲ್ಲಿ ಪಿಕ್ನಿಕ್ ಗೆ ಹೋಗುವುದು, ಇದರಿಂದ ನೆಲವು ಕಿತ್ತಳೆ ಮತ್ತು ಹಳದಿ ಬಣ್ಣದ ರತ್ನಗಂಬಳಿಯಂತೆ ಕಾಣುತ್ತದೆ. ಗುಂಡ್ಲುಪೇಟೆಯು ಬಂಡೀಪುರ ರಾಷ್ಟ್ರೀಯ ಉದ್ಯಾನ, ಕೊಡಗು ಮತ್ತು ಊಟಿಯಂತಹ ಇತರ ಪ್ರವಾಸಿ ತಾಣಗಳಿಂದ ಡ್ರೈವಿಂಗ್ ದೂರದಲ್ಲಿದೆ.

3. ಹೆರಿಟೇಜ್ ವೈನರಿ, ರಾಮನಗರ
ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿ ಅನೇಕ ವೈನರಿಗಳು ಹುಟ್ಟಿಕೊಂಡಿವೆ, ಆದರೆ ಸುಳಾ ವೈನರಿಗಳ ಅಡಿಯಲ್ಲಿ ಬರುವುದೇ ಈ ಹೆರಿಟೇಜ್ ವೈನರಿ. ಇಲ್ಲಿ ಕಾಡು ವೈನ್ ಗಳನ್ನು ಉತ್ಪಾದಿಸಲಾಗುತ್ತದೆ, ಇದು ಕರ್ನಾಟಕದಲ್ಲಿ ವನ್ಯಜೀವಿಗಳನ್ನು ಸಂರಕ್ಷಿಸಲು ವೈನ್ ನಿಂದ ಬರುವ ಲಾಭದ ಒಂದು ಭಾಗವನ್ನು ದಾನ ಮಾಡುತ್ತದೆ.

ಇದನ್ನೂ ಓದಿ: Bihar: 5 ಲಕ್ಷ ರುದ್ರಾಕ್ಷಿಯಿಂದ 20 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪನೆ, ಇಲ್ಲಿವೆ ಫೋಟೋಸ್

ವೈನ್ ಪ್ರವಾಸಗಳು ಕೆಲವು ರುಚಿಕರವಾದ ವೈನ್ ಕುಡಿಯುತ್ತಾ ಮತ್ತು ಕೆಲವು ಒಳ್ಳೆಯ ಫೋಟೋಗಳನ್ನು ತೆಗೆದುಕೊಳ್ಳುತ್ತಾ ಸೊಂಪಾದ ದ್ರಾಕ್ಷಿ ತೋಟಗಳ ಮೂಲಕ ನಡೆದು ಹೋಗುವುದೇ ಒಂದು ಮಜಾ. ವೈನರಿ ಅತಿಥಿ ಗೃಹವನ್ನು ಸಹ ಹೊಂದಿದೆ ಮತ್ತು ಬೆಂಗಳೂರಿನಿಂದ ಕೇವಲ ಎರಡು ಗಂಟೆಗಳ ದೂರದಲ್ಲಿದೆ, ಇದು ಸೂಕ್ತವಾದ ವಾರಾಂತ್ಯದ ವಿಹಾರ ತಾಣವಾಗಿದೆ.

4. ಮಿರ್ಜಾನ್ ಕೋಟೆ
ನೀವು ನಿಮ್ಮ ಸ್ನೇಹಿತರೊಂದಿಗೆ ನಟ ಆಮೀರ್ ಖಾನ್ ಅಭಿನಯದ ‘ದಿಲ್ ಚಾಹ್ತಾ ಹೈ’ ಚಲನ ಚಿತ್ರದ ಕ್ಷಣವನ್ನು ಹುಡುಕುತ್ತಿದ್ದರೆ, ಇಲ್ಲಿಗೆ ಭೇಟಿ ನೀಡಿ. ಕೋಟೆಯ ಅವಶೇಷಗಳ ಮೇಲೆ ಕುಳಿತುಕೊಂಡು ಆಹ್ಲಾದಕರವಾದ ಗಾಳಿಯನ್ನು ಪಡೆಯಬಹುದು. ಮಿರ್ಜಾನ್ ಕೋಟೆಗಿಂತ ಒಳ್ಳೆಯ ಜಾಗ ಹತ್ತಿರದಲ್ಲಿ ನಿಮಗೆ ಬೇರೆ ಯಾವುದೂ ಸಿಗುವುದಿಲ್ಲ.

ಇದನ್ನೂ ಓದಿ: Tourist Places: ಜುಲೈ ತಿಂಗಳಿನಲ್ಲಿ ಸುತ್ತಾಡುವ ಪ್ಲಾನ್ ಇದೆಯಾ? ಹಾಗಿದ್ರೆ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

ಗೋಕರ್ಣದಿಂದ ಸುಮಾರು 21 ಕಿಲೋ ಮೀಟರ್ ದೂರದಲ್ಲಿರುವ ಮಿರ್ಜಾನ್ ಕೋಟೆಯು ಕರ್ನಾಟಕದ ಇತರ ಕೋಟೆಯ ಅವಶೇಷಗಳಂತೆ ಹೆಚ್ಚು ಜನಸಂದಣಿಯನ್ನು ನೋಡದ ಕಾರಣ, ಪ್ರಶಾಂತವಾದ ವಾತಾವರಣವನ್ನು ಹೊಂದಿದೆ ಎಂದು ಹೇಳಬಹುದು. ಇದನ್ನು 16 ನೇ ಶತಮಾನದಲ್ಲಿ ರಾಣಿ ಚೆನ್ನೈ ಭೈರಾ ದೇವಿ ನಿರ್ಮಿಸಿದರು ಮತ್ತು ಇದು ಅಘನಾಶಿನಿ ನದಿಯ ದಡದಲ್ಲಿದೆ.
Published by:Ashwini Prabhu
First published: