ಹೆಚ್.ಡಿ.ಕೋಟೆ : ಕೆರೆಯಲ್ಲಿ ಈಜಲು ಹೋದ ನಾಲ್ವರು ಬಾಲಕರು ನೀರು ಪಾಲು

ಇಂದು ಶಿವರಾತ್ರಿ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ನಾಲ್ವರು ಸ್ನೇಹಿತರು ಸೇರಿ ಹೆಚ್. ಡಿ. ಕೋಟೆಯ ಮಲ್ಬಾರ್ ಕೆರೆಯಲ್ಲಿ  ಈಜಲು ಹೋಗಿದ್ದರು. 

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಮೈಸೂರು (ಫೆ.21) : ಕೆರೆಗೆ ಈಜಲು ಹೋಗಿ ನಾಲ್ವರು ಬಾಲಕರು ನೀರು ಪಾಲಾದ ಹೃದಯ ವಿದ್ರಾವಕ ಘಟನೆ  ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತ ಬಾಲಕರನ್ನು ಕಿರಣ್, ಕೆಂಡ, ರೋಹಿತ್, ಯಶವಂತ‌ ಎಂದು ಗುರುತಿಸಲಾಗಿದೆ.

ಇಂದು ಶಿವರಾತ್ರಿ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ನಾಲ್ವರು ಸ್ನೇಹಿತರು ಸೇರಿ ಹೆಚ್. ಡಿ. ಕೋಟೆಯ ಮಲ್ಬಾರ್ ಕೆರೆಯಲ್ಲಿ ಈಜಲು ಹೋಗಿದ್ದರು. ಕೆರೆಯ ಆಳದ ನೀರಿಗೆ ನಾಲ್ವರು ಯುವಕರು ಇಳಿದಾಗ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

ಕೆರೆ ಏರಿ ಮೇಲೆ ಬಾಲಕರ ಬಟ್ಟೆ ಹಾಗೂ ಸೈಕಲ್​​​​ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಮಸ್ಥರಿಂದ ಕೆರೆಯಲ್ಲಿ ಹುಡುಕಾಟ ನಡೆಸಲಾಗಿದ್ದು, ನಾಲ್ವರ ಮೃತದೇಹಗಳನ್ನೂ ಪತ್ತೆಮಾಡಲಾಗಿದೆ.

ಇದನ್ನೂ  ಓದಿ : ಈಜಲು ಹೋದ ನಾಲ್ವರು ವಿದ್ಯಾರ್ಥಿಗಳು ನೀರು ಪಾಲು

ಘಟನಾ ಸ್ಥಳದಲ್ಲಿ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನೆ ಸಂಬಂಧ ಹೆಚ್.ಡಿ. ಕೋಟೆ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
First published: