ಬೆಂಗಳೂರು(ಮಾ. 07): ರಾಜ್ಯದ ಹೆಸರಾಂತ ಅವಧೂತ ವಿನಿಯ್ ಗೂರೂಜಿಗೆ ಬ್ಲ್ಯಾಕ್ಮೇಲ್ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ನಾಲ್ವರು ಕಿರಾತಕರನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುನಿರಾಜ್, ಮನೋಜ್, ಮುರಳಿ ಮತ್ತು ರವಿಕುಮಾರ್ ಎಂದು ಗುರುತಿಸಲಾಗಿದೆ. ಮುನಿರಾಜ್ ಅಲಿಯಾಸ್ ಟೋಕನ್ ಮುನಿರಾಜ್ ಸೇರಿ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುನಿರಾಜು ನೇತೃತ್ವದಲ್ಲೇ ಈ ಟೀಂ ಬ್ಲಾಕ್ ಮೇಲ್ ಮಾಡಿತ್ತು ಎನ್ನಲಾಗಿದೆ. ಈತ ಕಾವೇರಿ ಯೂಟ್ಯೂಬ್ ಚಾನೆಲ್ ಮಾಲೀಕ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಸಿಬಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
![]()
ಬಂಧಿತ ಆರೋಪಿಗಳು
ದೆಹಲಿ ಹಿಂಸಾಚಾರ: ಪಕ್ಷಪಾತಿ ವರದಿ ಆರೋಪದ ಮೇಲೆ ಕೇರಳದ 2 ಸುದ್ದಿ ವಾಹಿನಿಗಳಿಗೆ 48 ಗಂಟೆ ನಿಷೇಧ
ಕಿಡಿಗೇಡಿಗಳು ಒಂದು ತಿಂಗಳಿನಿಂದ ಅವಧೂತ ವಿನಯ್ ಗುರೂಜಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಅವರು, ಹಣ ಕೊಡದಿದ್ದರೆ ಗುರೂಜಿ ವಿರುದ್ಧದ ಅಪಪ್ರಚಾರದ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೇ, ಹಣದ ವಿಚಾರವಾಗಿ ವಾಟ್ಸ್ಯಾಪ್ ವಿಡಿಯೋ ಕಾಲ್ ಮಾಡಿ ಬೆದರಿಕೆ ಜೊತೆಗೆ ಒತ್ತಡ ಕೂಡ ಹೇರುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಸಂಬಂಧ ವಿನಯ್ ಗುರೂಜಿ ಆಪ್ತ ಪ್ರಶಾಂತ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ಬೆನ್ನತ್ತಿದ್ದರು. ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕೆಂಗೇರಿ ಬಳಿ ನಾಲ್ವರು ಆರೋಪಿಗಳು ಸಿಕ್ಕಿ ಬಿದ್ದಿದ್ದರು. ಈ ಸಂಬಂಧ ಸಿಸಿಬಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
YES Bank Crisis: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ