• Home
  • »
  • News
  • »
  • state
  • »
  • ರಾಯಚೂರಲ್ಲಿ ಜಲ ದುರಂತಗಳ ಸರಮಾಲೆ; ನಾಲ್ಕು ಜನ ಸಾವು, ಇನ್ನೊಬ್ಬರಿಗಾಗಿ ಹುಡುಕಾಟ

ರಾಯಚೂರಲ್ಲಿ ಜಲ ದುರಂತಗಳ ಸರಮಾಲೆ; ನಾಲ್ಕು ಜನ ಸಾವು, ಇನ್ನೊಬ್ಬರಿಗಾಗಿ ಹುಡುಕಾಟ

ರಾಯಚೂರಿನಲ್ಲಿ ನೀರಿನಲ್ಲಿ ಮುಳುಗಿದವರಿಗಾಗಿ ಶೋಧ ಕಾರ್ಯ

ರಾಯಚೂರಿನಲ್ಲಿ ನೀರಿನಲ್ಲಿ ಮುಳುಗಿದವರಿಗಾಗಿ ಶೋಧ ಕಾರ್ಯ

ನಿನ್ನೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಕೇಶವನ ಶವ ಪತ್ತೆ ಮಾಡಿದ್ದರು. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣವು ಲಿಂಗಸಗೂರು ತಾಲೂಕಿನ ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಠಾ ಗ್ರಾಮದಲ್ಲಿ ನಡೆದಿದೆ. 

  • Share this:

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಈಗ ಸಾಕಷ್ಟು ಜಲ ದುರಂತಗಳು ವರದಿಯಾಗುತ್ತಿವೆ. ನಿನ್ನೆ ಹಾಗೂ ಇಂದಿಗೆ ಒಟ್ಟು ನಾಲ್ಕು ಜನರ ಮೃತ ದೇಹಗಳು ಪತ್ತೆಯಾಗಿವೆ. ಇನ್ನೊಬ್ಬರ ಶೋಧ ಕಾರ್ಯ ನಡೆದಿದೆ. ಕೃಷ್ಣಾ ಹಾಗು ತುಂಗಾ-ಭದ್ರಾ ನದಿಯಲ್ಲಿ ಈಗ ಪ್ರವಾಹವಿಲ್ಲ. ರಾಯಚೂರು ಜಿಲ್ಲೆಯಲ್ಲಿ ಮಳೆಯೂ ಕಡಿಮೆಯಾಗಿದೆ. ಆದರೂ ಜಲಮೂಲದಲ್ಲಿ ದುರಂತಗಳು ನಡೆಯುತ್ತಿವೆ. ಮಸ್ಕಿ ತಾಲೂಕಿನ ದೇಸಾಯಿ ಬೋಗಾಪುರದ ಕೇಶವ (15) ಎಂಬ ಬಾಲಕ ಗುಡಗಲದಿನ್ನಿಗೆ ಕೂಲಿ ಕೆಲಸಕ್ಕೆ ಹೋಗಿದ್ದ ಗುಡಗಲದಿನ್ನಿಯಲ್ಲಿಯ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದಿದ್ದ.


ನಿನ್ನೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಕೇಶವನ ಶವ ಪತ್ತೆ ಮಾಡಿದ್ದರು. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣವು ಲಿಂಗಸಗೂರು ತಾಲೂಕಿನ ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಠಾ ಗ್ರಾಮದಲ್ಲಿ ನಡೆದಿದೆ. ಕೊಠಾ ಗ್ರಾಮದ ಪಾರ್ವತಿ (30) ಎಂಬ ಮಹಿಳೆ ತನ್ನ ಮಗ ಅರ್ಜುನ(9) ಹಾಗೂ ಅಕ್ಕನ‌ ಮಗಳು ಶಿಲ್ಪಾ(10)ಳೊಂದಿಗೆ ಹಳ್ಳದಲ್ಲಿ ಬಟ್ಟೆ ತೊಳೆಯಲು ಹೋಗಿದ್ದಳು. ಈ ಸಂದರ್ಭದಲ್ಲಿ ಮಕ್ಕಳು ಕಾಲು ಜಾರಿ ಬಿದ್ದಿದ್ದು, ಮಕ್ಕಳನ್ನು ರಕ್ಷಿಸಲು ಹೋಗಿ ತಾನೂ ಕಾಲು ಬಿದ್ದಿದ್ದಳು.


ನಿನ್ನೆ ಸಂಜೆಯಿಂದ ಅಹೋರಾತ್ರಿ ಹುಡುಕಾಟವನ್ನು ಗ್ರಾಮಸ್ಥರು ಮಾಡಿದ್ದರು. ಇಂದು ಮುಂಜಾನೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತೊಂದು ಮಾನವಿ ತಾಲೂಕಿನ‌ ಹರ್ನಹಳ್ಳಿಯಲ್ಲಿ ತುಂಗಭದ್ರಾ ನದಿಯಲ್ಲಿ ನಡೆದಿದೆ‌. ನದಿ ದಡದಲ್ಲಿ ಶಾಸ್ತ್ರೀ ಕ್ಯಾಂಪಿನ ಸಂದೀಪ್ ಕುಮಾರ್ (24) ನಾಪತ್ತೆಯಾಗಿದ್ದಾನೆ. ಸಂದೀಪ್​ನ ಚಪ್ಪಲಿ  ಹಾಗೂ ಬಟ್ಟೆಗಳು ದಡದಲ್ಲಿ ಪತ್ತೆಯಾಗಿದ್ದು ಸಂದೀಪ ನದಿಯಲ್ಲಿ ನಾಪತ್ತೆಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಅಗ್ನಿ ಶಾಮಕ ದಳದೊಂದಿಗೆ ತುಂಗಭದ್ರಾ ನದಿಯಲ್ಲಿ ಶೋಧ ಕಾರ್ಯ ನಡೆದಿದೆ. ಮಾನವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published by:Sushma Chakre
First published: