3 ತಿಂಗಳಲ್ಲಿ ನರಭಕ್ಷಕ ಚಿರತೆಗೆ ಬಾಲಕ ಸೇರಿ ನಾಲ್ವರು ಬಲಿ; ಭಯದಲ್ಲಿ ಬದುಕುತ್ತಿರುವ ಗುಬ್ಬಿ ತಾಲೂಕಿನ ಜನತೆ

ಅರಣ್ಯ ಇಲಾಖೆ ನರಭಕ್ಷಕ ಚಿರತೆಯ ಛಾಯಾಚಿತ್ರ ಬಿಡುಗಡೆ ಮಾಡಿದೆ. ಗುರುವಾರ ರಾತ್ರಿ ಓಡಾಡುತಿದ್ದ ಚಿರತೆ ಅರಣ್ಯ ಇಲಾಖೆಯ ಕ್ಯಾಮರಾದಲ್ಲಿ ಸೆರೆಯಾಗಿದೆ.

news18-kannada
Updated:January 11, 2020, 7:59 AM IST
3 ತಿಂಗಳಲ್ಲಿ ನರಭಕ್ಷಕ ಚಿರತೆಗೆ ಬಾಲಕ ಸೇರಿ ನಾಲ್ವರು ಬಲಿ; ಭಯದಲ್ಲಿ ಬದುಕುತ್ತಿರುವ ಗುಬ್ಬಿ ತಾಲೂಕಿನ ಜನತೆ
ತುಮಕೂರು ಅರಣ್ಯ ಇಲಾಖೆ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾಗಿರುವ ಚಿರತೆ.
  • Share this:
ತುಮಕೂರು: ಗುಬ್ಬಿ ತಾಲೂಕಿನ ಮಣ್ಣಕುಪ್ಪೆ ಗ್ರಾಮದ ಬಾಲಕನನ್ನು ಎರಡು ದಿನಗಳ ಹಿಂದೆ ಚಿರತೆಗೆ ಬಲಿ ತೆಗೆದುಕೊಂಡಿದೆ. ಕಳೆದ ಮೂರು ತಿಂಗಳಲ್ಲಿ ನರಭಕ್ಷಕ ಚಿರತೆ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದು, ಇಡೀ ಗ್ರಾಮವೇ ಭಯದಿಂದ ಕಂಗಾಲಾಗಿದೆ.

ಚಿರತೆ ಜನರ ಪ್ರಾಣ ತೆಗೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಚಿರತೆ ಸೆರೆಗೆ ಇದುವರೆಗೂ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಮಣ್ಣಕುಪ್ಪೆ ಗ್ರಾಮಸ್ಥರು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ ನೇತೃತ್ವದಲ್ಲಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ, ನರಭಕ್ಷಕ ಚಿರತೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ತುಮಕೂರು ನಗರದ ರಾಮಕೃಷ್ಣ ನಗರದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಇಲಾಖೆ ವಿರುದ್ದ ಘೋಷಣೆ ಕೂಗಿದರು.

ಕಳೆದ ಮೂರು ತಿಂಗಳಲ್ಲಿ ನರಭಕ್ಷಕ ಚಿರತೆ ಮೂವರನ್ನು ಬಲಿ ತೆಗೆದುಕೊಂಡಿದೆ. ಆದರೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡಿಲ್ಲ. ನರಭಕ್ಷಕ ಚಿರತೆಯನ್ನು ಹಿಡಿಯಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಈ‌ ಕೂಡಲೇ ಕಾರ್ಯಾಚರಣೆ ನಡೆಸಿ ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ಕುಣಿಗಲ್ ಭಾಗದಲ್ಲಿ ಓಡಾಡುತ್ತಿರುವ‌ ಚಿರತೆಯನ್ನ ಸೆರೆ ಹಿಡಿಯಲು ಒತ್ತಾಯಿಸಿದ್ದಾರೆ. 15 ದಿನಗಳ ನಡುವಿನಲ್ಲಿ ಚಿರತೆಯನ್ನು ಸೆರೆ ಹಿಡಿಯದಿದ್ದರೆ ಇನ್ನೂ ಉಗ್ರ ಹೋರಾಟದ ಎಚ್ಚರಿಕೆಯನ್ನು ಶಾಸಕ ಗೌರಿಶಂಕರ್ ಕೊಟ್ಟಿದ್ದಾರೆ. ಅಲ್ಲದೆ ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನು ಓದಿ: ಮಕ್ಕಳ ಊಟಕ್ಕಾಗಿ ಕೇವಲ 150 ರೂಪಾಯಿಗೆ ತನ್ನ ಕೂದಲನ್ನೇ ಮಾರಿಕೊಂಡ ಬಡತಾಯಿ; ತಮಿಳುನಾಡಿನಲ್ಲೊಂದು ಧಾರುಣ ಘಟನೆ

ಚಿರತೆಯಿಂದ ಮೃತ ಬಾಲಕನ ಕುಟುಂಬಕ್ಕೆ 7.5 ಲಕ್ಷ ಪರಿಹಾರ ನೀಡಲಾಗುವುದು. ಈವರೆಗೆ ಸರಕಾರದಿಂದ 5 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಆದರೇ ಇದೇ ಮೊದಲ ಬಾರಿಗೆ 7.5 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್ ಭರವಸೆ ನೀಡಿದರು. ಈ ನಡುವೆ ಅರಣ್ಯ ಇಲಾಖೆ ನರಭಕ್ಷಕ ಚಿರತೆಯ ಛಾಯಾಚಿತ್ರ ಬಿಡುಗಡೆ ಮಾಡಿದೆ. ಗುರುವಾರ ರಾತ್ರಿ ಓಡಾಡುತಿದ್ದ ಚಿರತೆ ಅರಣ್ಯ ಇಲಾಖೆಯ ಕ್ಯಾಮರಾದಲ್ಲಿ ಸೆರೆಯಾಗಿದೆ.

 
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ