ಹೆಗ್ಗಣಕ್ಕೆ ನಾಲ್ಕು ತಿಂಗಳ ಕಂದಮ್ಮ ಬಲಿ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಮಗುವಿನ ವಾಸನೆಗೆ ಹತ್ತಿರ ಬಂದ ಹೆಗ್ಗಣ ಅದರ ಬಲಗಾಲನ್ನು ಕಚ್ಚಿ ಎಳೆದಾಡಿದೆ. ಈ ವೇಳೆ ಮಗು ಬೋರಾಲಾಗಿದ್ದು, ಕಿರುಚಲು ಆಗದೇ ಉಸಿರುಗಟ್ಟಿ ಸಾವನ್ನಪ್ಪಿದೆ.

Seema.R | news18-kannada
Updated:October 20, 2019, 11:47 AM IST
ಹೆಗ್ಗಣಕ್ಕೆ ನಾಲ್ಕು ತಿಂಗಳ ಕಂದಮ್ಮ ಬಲಿ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಪ್ರಾತಿನಿಧಿಕ ಚಿತ್ರ.
  • Share this:
ವಿಜಯಪುರ (ಅ.20): ಅಮ್ಮನ ಪಕ್ಕದಲ್ಲಿ ಸುಖವಾಗಿ ಮಲಗಿದ್ದ ಹಸುಗೂಸೊಂದು ಹೆಗ್ಗಣಕ್ಕೆ ಬಲಿಯಾಗಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ. 

ಗೋಲಪ್ಪ. ಗೀತಾ ಮಗುವನ್ನು ಕಳೆದುಕೊಂಡ ಪೋಷಕರು. ಹಬ್ಬಕ್ಕೆಂದು ತವರಿಗೆ ಬಂದಿದ್ದ ಬಂದಿದ್ದ ಗೀತಾ, ನಾಲ್ಕು ತಿಂಗಳ ಗಂಡು ಮಗುವಿನೊಂದಿಗೆ ಮಲಗಿದಾಗ ಈ ಘಟನೆ ನಡೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ: ನೂರು ದಿನದ ಸಂಭ್ರಮದಲ್ಲಿ ಬಿಜೆಪಿ ಸರ್ಕಾರ; ಸಿಎಂ ಯಡಿಯೂರಪ್ಪರಿಂದ ಭರ್ಜರಿ ಫೋಟೋ ಶೂಟ್

ರಾತ್ರಿ ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡು ದಂಪತಿಗಳು ಮಲಗಿದ್ದಾಗ ಈ ದರ್ಘಟನೆ ನಡೆದಿದೆ. ಮಗುವಿನ ವಾಸನೆಗೆ ಹತ್ತಿರ ಬಂದ ಹೆಗ್ಗಣ ಅದರ ಬಲಗಾಲನ್ನು ಕಚ್ಚಿ ಎಳೆದಾಡಿದೆ. ಈ ವೇಳೆ ಮಗು ಬೋರಾಲಾಗಿದ್ದು, ಕಿರುಚಲು ಆಗದೇ ಉಸಿರುಗಟ್ಟಿ ಸಾವನ್ನಪ್ಪಿದೆ.

First published:October 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ