Jarkiholi Brothers: ರಾಜ್ಯದ ಶಾಸಕಾಂಗದಲ್ಲೀಗ ನಾಲ್ವರು ಜಾರಕಿಹೊಳಿ ಸಹೋದರರ ದರ್ಬಾರ್‌..!

Jarkiholi Brothers: ಜಾರಕಿಹೊಳಿ ಸಹೋದರರು ಕಿತ್ತೂರು ಕರ್ನಾಟಕದ ಭಾಗದಲ್ಲಿ ತಮ್ಮ ರಾಜಕೀಯ ಪ್ರಭಾವ ತೋರಿಸಿದಂತಾಗಿದೆ.

ಜಾರಕಿಹೊಳಿ ಸಹೋದರರು

ಜಾರಕಿಹೊಳಿ ಸಹೋದರರು

  • Share this:

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ (Assembly elections in Karnataka) ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ(Non-party candidate) ನಿಂತು ಲಖನ್ ಜಾರಕಿಹೊಳಿ (Lakhan Jarkiholi) ಜಯಶಾಲಿಯಾಗಿದ್ದಾರೆ, ಅವರು ಜಾರಕಿಹೊಳಿ (Jarkiholi brothers) ಸಹೋದರರಲ್ಲಿ ಕಿರಿಯವರು (youngest). ಈ ವಿಜಯದ ಮೂಲಕ ಈಗ ಕರ್ನಾಟಕದ ವಿಧಾನಸಭೆ ಹಾಗೂ ವಿಧಾನ ಪರಿಷತ್ತು ಸೇರಿ ಶಾಸಕಾಂಗದಲ್ಲಿ(Legislature) ಜಾರಕಿಹೊಳಿ ಕುಟುಂಬದಿಂದಲೇ ನಾಲ್ಕು ಜನ ಉಪಸ್ಥಿತರಿದ್ದಂತಾಗಿದೆ.


ರಾಜಕೀಯ ಪ್ರಭಾವ
ಡಿಸೆಂಬರ್ 14ರಂದು ಘೋಷಿತವಾದ ಫಲಿತಾಂಶದಲ್ಲಿ 50 ವರ್ಷದ ಲಖನ್ ಜಾರಕಿಹೊಳಿ ಬೆಳಗಾವಿ ವಲಯದಿಂದ ವಿಜೇತರಾಗಿದ್ದು ಹೊಸದಾಗಿ ಆಯ್ಕೆಗೊಂಡ ಕರ್ನಾಟಕದ 25 ಹೊಸ ವಿಧಾನ ಪರಿಷತ್ ಸದಸ್ಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಜಾರಕಿಹೊಳಿ ಸಹೋದರರು ಕಿತ್ತೂರು ಕರ್ನಾಟಕದ ಭಾಗದಲ್ಲಿ ತಮ್ಮ ರಾಜಕೀಯ ಪ್ರಭಾವ ತೋರಿಸಿದಂತಾಗಿದೆ.

ಇದನ್ನೂ ಓದಿ: ಪಕ್ಷ ಎದಿರುಹಾಕಿಕೊಂಡು ಬೆಳಗಾವಿಯಲ್ಲಿ ಶಕ್ತಿಪ್ರದರ್ಶನ ಮಾಡಿ ಗೆದ್ದ ಜಾರಕಿಹೊಳಿ ಬ್ರದರ್ಸ್

ಮೂಲತಃ ಉದ್ಯಮಿ
ವಾಲ್ಮೀಕಿ ನಾಯಕ ಎಸ್‌ಟಿ ಪಂಗಡಕ್ಕೆ ಸೇರಿರುವ ಜಾರಕಿಹೊಳಿ ಸಹೋದರರು ಮೂಲತಃ ಉದ್ಯಮಿಗಳಾಗಿದ್ದು ಉತ್ತರ ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸಕ್ಕರೆ ಉದ್ಯಮ ಹಾಗೂ ಮದ್ಯ ಕ್ಷೇತ್ರಗಳಲ್ಲಿ ಅಪಾರವಾದ ಹೂಡಿಕೆ ಹೊಂದಿದ್ದಾರೆ. ಹಾಗಾಗಿ ಬೆಳಗಾವಿಯ ರಾಜಕೀಯ ವಲಯದಲ್ಲಿ ಅವರ ಪ್ರಭಾವ ಹೆಚ್ಚಾಗಿಯೇ ಇರುವುದನ್ನು ಕಾಣಬಹುದು.

ಹಲವು ವರ್ಷಗಳಿಂದ ಜಾರಕಿಹೊಳಿ ಕುಟುಂಬದ ಸಹೋದರರು ವಿವಿಧ ರಾಜಕೀಯ ಪಕ್ಷಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರಿಂದ ಒಟ್ಟಾರೆ ಈ ಭಾಗದಲ್ಲಿ ಆಡಳಿತ ಪಕ್ಷ ಯಾವುದೇ ಇರಲಿ ಕುಟುಂಬದ ಒಬ್ಬ ಸದಸ್ಯನಾದರೂ ಆಡಳಿತ ಪಕ್ಷದಲ್ಲಿರುವ ಹಾಗೆ ನೋಡಿಕೊಂಡಿರುವುದು ಸುಳ್ಳಲ್ಲ.

ಜಾರಕಿಹೊಳಿ ಸಹೋದರರು
ಈ ಹಿಂದೆ 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ಸತೀಶ್‌ ಜಾರಕಿಹೊಳಿ ಸಹೋದರರಿಬ್ಬರೂ ಕಾಂಗ್ರೆಸ್ ಟಿಕೆಟ್ ಪಡೆದು ಆಯ್ಕೆಗೊಂಡರೆ, ಇನ್ನೊಬ್ಬ ಸಹೋದರ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಟಿಕೆಟ್ ಪಡೆದು ಚುನಾವಣೆ ಗೆದ್ದಿದ್ದರು. ಸದ್ಯ ಸತೀಶ ಜಾರಕಿಹೊಳಿ ಇಂದಿಗೂ ಕಾಂಗ್ರೆಸ್ ಪಕ್ಷದಲ್ಲಿದ್ದು ಅದರ ಕಾರ್ಯಾಧ್ಯಕ್ಷರಾಗಿದ್ದರೆ, ರಮೇಶ್‌ 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ತದನಂತರ ಸಚಿವರಾಗಿದ್ದರು. ಆದರೆ ಈ ವರ್ಷದ ಮಾರ್ಚ್‌ನಲ್ಲಿ ಸಿಡಿ ಪ್ರಕರಣದಿಂದಾಗಿ ಅವರು ಸಚಿವ ಸ್ಥಾನಕ್ಕೆ ತಲೆದಂಡ ಕೊಡಬೇಕಾಯಿತು.

ಸಿಹಿ ಅನುಭವ
ಅಷ್ಟಕ್ಕೂ ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವು ಜಾರಕಿಹೊಳಿ ಸಹೋದರರಲ್ಲಿ ಕಹಿಯಾದ ಸಿಹಿ ಅನುಭವ ಒಡಮೂಡಿದಂತಾಗಿದೆ. ಈ ಚುನಾವಣೆಯಲ್ಲಿ ಲಖನ್ ಸೆಣೆಸಿದ್ದರಿಂದ ಕಾಂಗ್ರೆಸ್ ಪಕ್ಷದಿಂದ ನಿಂತಿದ್ದ ಬಿಜೆಪಿಯ ಜಾರಕಿಹೊಳಿ ಸಹೋದರರ ರಾಜಕೀಯ ಶತ್ರುವಾದ ಲಕ್ಷ್ಮೀ ಹೆಬ್ಬಾಳ್ಕರ್‌ ಸಹೋದರ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಹಿನ್ನಡೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದರು ಜಾರಕಿಹೊಳಿ ಸಹೋದರರು. ಆದರೆ, ಅದಕ್ಕೆ ವೈಪರೀತ್ಯವಾಗಿ ಲಖನ್ ಜಯವು ಬೆಳಗಾವಿಯಲ್ಲಿ ಬಿಜೆಪಿಯಿಂದ ಸೆಣೆಸಿದ್ದ ಅಭ್ಯರ್ಥಿಗೇ ಹಿನ್ನಡೆ ಉಂಟಾಗುವಂತೆ ಮಾಡಿರುವುದು ಸದ್ಯ ಬಿಜೆಪಿ ನಾಯಕರಿಗೆ ಚಿಂತೆಗೀಡು ಮಾಡಿದೆ.

ಅಧಿಕಾರದ ಚುಕ್ಕಾಣಿ
ಒಂದೊಮ್ಮೆ ರಮೇಶ್‌ರೊಂದಿಗೆ ಸ್ನೇಹಪರವಾಗಿದ್ದ ಕಾಂಗ್ರೆಸ್ ಪಕ್ಷದ ಲಕ್ಷ್ಮೀ ಹೆಬ್ಬಾಳ್ಕರ್‌ ಇದೀಗ ಅವರ ರಾಜಕೀಯ ವಲಯದ ಶತ್ರುವಾಗಿದ್ದು ತಮ್ಮ ಸಹೋದರನನ್ನು ಜಯಶಾಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ರಾಜ್ಯ ಬಿಜೆಪಿ ನಾಯಕರಿಗೆ ರಮೇಶ್‌ಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಕೊಡಬೇಕೋ ಅಥವಾ ಬೇಡವೋ ಎಂಬ ಸಂದಿಗ್ಧ ಪರಿಸ್ಥಿತಿ ಬಂದೊದಗಿದೆಯೆಂದರೂ ತಪ್ಪಾಗಲಾರದು.

ಇದನ್ನೂ ಓದಿ: ಸಿದ್ದರಾಮಯ್ಯ ಈಗಲೂ ನನ್ನ ಗುರುಗಳೇ, ಡಿಕೆಶಿಗೆ ಎಷ್ಟೊಂದು ಗರ್ವ: ರಮೇಶ್ ಜಾರಕಿಹೊಳಿ ಮಾತಿನೇಟು

ಲಖನ್ ಅವರ ಈ ಜಯಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಸತೀಶ್‌ ಜಾರಕಿಹೊಳಿ ಪ್ರಸಿದ್ಧತೆಯಿಂದಾಗಿ ಸಂದ ಜಯ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದರೆ, ಲಖನ್ ಈ ಬಗ್ಗೆ ರಾಜಕೀಯವಾಗಿ ನನ್ನನ್ನು ಸೋಲಿಸಲು ತೆರೆಮರೆಯಲ್ಲಿ ಬಿಜೆಪಿ ಕಾಂಗ್ರೆಸ್‌ನೊಂದಿಗೆ ಮಾಡಿದ್ದ ಷಡ್ಯಂತ್ರವೇ ಕಾರಣ ಎಂದು ಹೇಳಿದ್ದಾರೆ.
Published by:vanithasanjevani vanithasanjevani
First published: