• Home
  • »
  • News
  • »
  • state
  • »
  • Hassan: ಮನೆಗೆ ಹೊರಟವನನ್ನು ಕರೆದು ಕೊಂದೇ ಬಿಟ್ರು, ನಾಲ್ವರು ಅರೆಸ್ಟ್: ಪೊಲೀಸರ ಮಿಂಚಿನ ಕಾರ್ಯಚರಣೆ ಹೀಗಿತ್ತು

Hassan: ಮನೆಗೆ ಹೊರಟವನನ್ನು ಕರೆದು ಕೊಂದೇ ಬಿಟ್ರು, ನಾಲ್ವರು ಅರೆಸ್ಟ್: ಪೊಲೀಸರ ಮಿಂಚಿನ ಕಾರ್ಯಚರಣೆ ಹೀಗಿತ್ತು

ಕೊಲೆಯಾದ ಯುವಕ

ಕೊಲೆಯಾದ ಯುವಕ

Hassan Crime News: ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹಿಂದುರುಗುತ್ತಿದ್ದ ಅನಿಲ್ ರಾಜ್ ಮೇಲೆ  ಹಳೆ ದ್ವೇಷದ ಹಿನ್ನೆಲೆಯಲ್ಲಿ  ಪ್ರಸಾದ್, ಆತನ ತಾಯಿ , ತಂಗಿ ಹಾಗೂ ಸಂಬಂಧಿಯೊಬ್ಬರು ವಿನಃ ಜಗಳ ತೆಗೆದಿದ್ದಾರೆ ಮನೆಯ ಹತ್ತಿರ ಕರೆದುಕೊಂಡು ಹೋಗಿ ಮರದ ದೊಣ್ಣೆಯಿಂದ ಅನಿಲ ರಾಜ್ ನ ತಲೆಗೆ ಬಲವಾಗಿ ಹೊಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಅನಿಲ್ ಮೃತ ಪಟ್ಟಿದ್ದಾನೆ.

ಮುಂದೆ ಓದಿ ...
  • Share this:

ಹಾಸನ: ಕ್ಷುಲಕ ಕಾರಣಕ್ಕೆ ಸ್ನೇಹಿತರ (Friends) ನಡುವೆ ಜಗಳ ಉಂಟಾಗಿ ಒಬ್ಬನ ಕೊಲೆ(Murder)ಯಲ್ಲಿ ಅಂತ್ಯ ಕಂಡ ದಾರುಣ ಘಟನೆ ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakaleshapura) ತಾಲೂಕಿನ ಬಾಳ್ಳುಪೇಟೆ(Balyupete)ಯಲ್ಲಿ ನಡೆದಿದೆ. ತಾಲೂಕಿನ ಬಾಳ್ಳುಪೇಟೆ ಸಮೀಪದ ಅಂಬೇಡ್ಕರ್ ನಗರದಲ್ಲಿ ಕಳೆದ ರಾತ್ರಿ ಸ್ನೇಹಿತರಾದ ಅನಿಲ್ ರಾಜ್ ಹಾಗೂ ಪ್ರಸಾದ್ ಎಂಬವರ ನಡುವೆ ಕ್ಷುಲಕ ಕಾರಣಕ್ಕೆ ಜಗಳವುಂಟಾಗಿ ಪ್ರಸಾದನ ಮನೆ ಸಮೀಪ ಹೊಡೆದಾಟಕ್ಕೆ ತಿರುಗಿದೆ. ತಲೆಗೆ ಬಲವಾಗಿ ಪೆಟ್ಟು ತಿಂದ ಅನಿಲ್ ರಾಜ್ (22) ಪ್ರಸಾದ್ ಮನೆ ಮುಂದೆ ಮೃತಪಟ್ಟಿದ್ದಾನೆ. ಇದೇ ವೇಳೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಸಾದ್ ತನ್ನ ಮನೆಯ ಹಿಂಭಾಗದಲ್ಲಿರುವ ಜಮೀನಿನಲ್ಲಿ ಅನಿಲ್ ಶವ (Dead body) ಹೂತು ಹಾಕಿದ್ದನು ಈ ಸಂಬಂಧ ಪೊಲೀಸರು ನಾಲ್ವರನ್ನು (Four Accused Arrest) ಬಂಧಿಸಿದ್ದಾರೆ.


ಮೃತ ಅನಿಲ್ ರಾಜ್ ಟಿಂಬರ್ ಕೆಲಸ ಮಾಡಿಕೊಂಡಿದ್ದ ಎಂದಿನಂತೆ ಸೋಮವಾರ ಬೆಳಗ್ಗೆ ಕೆಲಸ ಹೋದ ಮೇಲೆ ರಾತ್ರಿ ಮನೆಗೆ ವಾಪಸ್ಸ್ ಅಗಿರಲಿಲ್ಲ. ಕೆಲಸ ಮುಗಿಸಿ ನೇರವಾಗಿ ಅದೇ ಗ್ರಾಮದ ಮತ್ತೊಬ್ಬ ಸ್ನೇಹಿತ ಪ್ರಜ್ವಲ್ ನ ಹುಟ್ಟು ಹಬ್ಬದ ಪಾರ್ಟಿಗೆ ಅನಿಲ್ ರಾಜ್, ಪ್ರಸಾದ್ ಸೇರಿದಂತೆ ಇನ್ನಿತರು ತೆರಳಿದ್ದರು.


ಮನೆಗೆ ಕರೆದು ಕೊಂದೇ ಬಿಟ್ಟರು


ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಹಿಂದುರುಗುತ್ತಿದ್ದ ಅನಿಲ್ ರಾಜ್ ಮೇಲೆ  ಹಳೆ ದ್ವೇಷದ ಹಿನ್ನೆಲೆಯಲ್ಲಿ  ಪ್ರಸಾದ್, ಆತನ ತಾಯಿ , ತಂಗಿ ಹಾಗೂ ಸಂಬಂಧಿಯೊಬ್ಬರು ವಿನಃ ಜಗಳ ತೆಗೆದಿದ್ದಾರೆ ಮನೆಯ ಹತ್ತಿರ ಕರೆದುಕೊಂಡು ಹೋಗಿ ಮರದ ದೊಣ್ಣೆಯಿಂದ ಅನಿಲ ರಾಜ್ ನ ತಲೆಗೆ ಬಲವಾಗಿ ಹೊಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಅನಿಲ್ ಮೃತ ಪಟ್ಟಿದ್ದಾನೆ.


ಇದನ್ನೂ ಓದಿ:  Student Suicide: ಕ್ಷಮಿಸಿ ಬಿಡಿ ಅಪ್ಪ.. ಸೆಲ್ಫಿ ವಿಡಿಯೋ ಮಾಡಿ 23ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮಹತ್ಯೆ


ಕೊಂದು ಹೊಲದಲ್ಲಿ ಹೂತು ಹಾಕಿದ್ರು


ಶವವು ಯಾರ ಕಣ್ಣಿಗೆ ಬೀಳದಂತೆ ಮನೆಯ ಹಿಂಭಾಗವಿರುವ ಹೊಲದಲ್ಲಿ ಮುಣ್ಣು ಮುಚ್ಚಿ ಹೂತು ಹಾಕಿದ್ದರು. ಇತ್ತ ಮನೆಗೆ ಬಾರದ ಅನಿಲ್ ರಾಜ್ ನನ್ನು ಹುಡುಕಿಕೊಂಡು ಪ್ರಸಾದ್ ಮನೆಯ ಹತ್ತಿರ ತೆರಳಿದ ಪೋಷಕರಿಗೆ ರಕ್ತದ ಕಲೆ ನೋಡಿ ಗಾಬರಿಯಾಗಿ ಸುತ್ತಮುತ್ತ ಹುಡುಕಿದಾಗ ಹೂತು ಹಾಕಿದ ಅನಿಲ್ ರಾಜ್ ಕೈ ಬೆರಳು ಕಾಣಿಸಿದೆ.


ತಕ್ಷಣವೇ ಪೊಲೀಸರಿಗೆ ವಿಷಯ ಮುಟ್ಟಿಸಿದ ಪೋಷಕರು ಸ್ಥಳಕ್ಕೆ ಉಪವಿಭಾಗಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಹೂತ್ತಿದ್ದ ದೇಹವನ್ನು ತೆಗೆದು ನೋಡಿದಾಗ ಅದು ಅನಿಲ್ ರಾಜ್ ನ ಮೃತದೇಹವಾಗಿತ್ತು. ಮೃತ ದೇಹ ಕಂಡು ಅನಿಲ್ ರಾಜ್ ನ ಪೋಷಕರು ಹಾಗೂ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು.


 Four arrested in connection with youth murder in sakaleshapur hassan
ಬಂಧಿತ ಆರೋಪಿಗಳು


ಪೊಲೀಸರ ಮಿಂಚಿನ ಕಾರ್ಯಚರಣೆ


ಅನಿಲ್ ರಾಜ್ ಕೊಲೆ ಮಾಡಿದ ಆರೋಪದ ಮೇಲೆ ಪ್ರಸಾದ್ ನ ತಾಯಿ ಹಾಗೂ ತಂಗಿಯನ್ನು ಮನೆಯಲ್ಲಿ ಬಂಧಿಸಿದ್ದ ಪೋಲಿಸರು ಪರಾರಿಯಾಗಿದ್ದ ಪ್ರಸಾದ್ ನನ್ನು ಹುಡುಕಲು ಡಿವೈಎಸ್ ಪಿ ಹಾಗೂ ಗ್ರಾಮಾಂತರ ಠಾಣಾ ಪಿಎಸ್ಐ ಬಸವರಾಜ್  ನೇತೃತ್ವದಲ್ಲಿ ಶೀಘ್ರವೇ ಒಂದು ತಂಡ ರಚಿಸಿ ಕಾರ್ಯಚರಣೆಗೆ ಇಳಿಸಿದ್ದರು.


ಇದನ್ನೂ ಓದಿ:  Belagavi: ಬಿಲ್ಡರ್ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರ ಹತ್ಯೆ, ಒಂದಲ್ಲ, ಎರಡಲ್ಲ ಮೂರು ಮದುವೆಯಾಗಿದ್ದ ರಾಜು


ಬೆಂಗಳೂರಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಹಾಸನದ ಹೊಸ ಬಸ್ ನಿಲ್ದಾಣ ಸಮೀಪ ಪ್ರಸಾದ್ ಹಾಗೂ ಆತನ ಸಂಬಂಧಿ ಮೋಹನ್ ಎಂಬಾತನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ ಪೋಲಿಸರ ಈ ಕಾರ್ಯಕ್ಕೆ ಸಾರ್ವಜನಿಕರಿ ,ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


ಸ್ಥಳಕ್ಕೆ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್, ಡಿವೈಎಸ್ ಪಿ ಅನಿಲ್ ಕುಮಾರ್ ,ಸರ್ಕಲ್ ಇನ್ ಸ್ಪೆಕ್ಟರ್ ಚೈತನ್ಯ, ಗ್ರಾಮಾಂತರ ಠಾಣೆ ಪಿಎಸ್ಐ ಬಸವರಾಜು ಭೇಟಿ ನೀಡಿ ಪರಿಶೀಲಿಸಿದರು.

Published by:Mahmadrafik K
First published: