ಚಿತ್ರದುರ್ಗ: ಅಪ್ಪ, ಅಣ್ಣ ಬೆಸ್ಕಾಂ ನೌಕರರೇ (BESCOM Employees) ಅಲ್ಲವಾದರೂ ನೌಕರರೆಂದು ದಾಖಲೆ ಸೃಷ್ಟಿಸಿ ಅನುಕಂಪದ ಆಧಾರದಲ್ಲಿ ಬೆಸ್ಕಾಂ ಇಲಾಖೆಯಲ್ಲಿ ಕೆಲಸ ಗಿಟ್ಟಿಸೋಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ದಾಖಲೆ ಪರಿಶೀಲನೆ ವೇಳೆ ಬೆಸ್ಕಾಂ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾಚಾರವನ್ನ (Corruption) ಬಯಲು ಮಾಡಿದೆ. ದೂರು ಆಧರಿಸಿ ತನಿಖೆ ಪ್ರಾರಂಭ ಮಾಡಿದ್ದ ಚಿತ್ರದುರ್ಗ ಪೊಲೀಸರು (Chitradurga Police) ನಕಲಿ ದಾಖಲೆ ಸೃಷ್ಟಿಸ ಮಾಡಿದ್ದ ಇಬ್ಬರು ಬೆಸ್ಕಾಂ ಖಾಯಂ ನೌಕರರು, ನೌಕರಿ ಪಡೆದು ಸರ್ಕಾರಕ್ಕೆ ವಂಚನೆ ಮಾಡಿದ್ದ ನಾಲ್ವರನ್ನು ಬಂಧಿಸಿ (Arrest) ಜೈಲಿಗೆ ಕಳಿಸಿದ್ದಾರೆ.
ಚಿತ್ರದುರ್ಗದ ಮೆದೆಹಳ್ಳಿ ನಿವಾಸಿ ಫೈಜಾನ್ ಮುಜಾಹಿದ್ ತನ್ನ ಅಣ್ಣ ಮಹಮದ್ ಶೇಕ್ ಬೆಸ್ಕಾಂ ಇಲಾಖೆಯಲ್ಲಿ ಸಹಾಯಕ ಮಾರ್ಗದಾಳಾಗಿ ಕೆಲಸ ಮಾಡುತ್ತಿದ್ದ ಎಂದು ನಕಲಿ ದಾಖಲೆಯನ್ನ ಇಲಾಖೆಗೆ ನೀಡಿದ್ದನು. ಅಲ್ಲದೇ ಲೈನ್ಮ್ಯಾನ್ , ಸಹಾಯಕ, ಕಿರಿಯ ಸಹಾಯಕ ಹುದ್ದೆ ಗಿಟ್ಟಿಸೋಕೆ ಪ್ಲಾನ್ ಮಾಡಿದ್ದು ಅದರಲ್ಲಿಯೂ ಇಲ್ಲದ ಅಣ್ಣ ಸತ್ತಿದ್ದಾನೆಂದು, ಬದುಕಿರುವ ಅಪ್ಪ ಸತ್ತಿದ್ದಾನೆಂದು ಅನುಕಂಪದಲ್ಲಿ ನೌಕರಿ ಗಿಟ್ಟಿಸೋಕೆ ದಾಖಲೆ ನೀಡಿದ್ದನು.
ದೂರು ದಾಖಲಿಸಿದ ಬೆಸ್ಕಾಂ ಅಧಿಕಾರಿ
ದಾಖಲೆಗಳ ಪರಿಶೀಲನೆ ವೇಳೆ ಅನುಮಾನ ಬಂದ ಹಿನ್ನೆಲೆ ಮತ್ತೊಮ್ಮೆ ಜಿಲ್ಲಾಮಟ್ಟದ ಅಧಿಕಾರಿಗಳು ದಾಖಲೆ ಪರಿಶೀಲನೆಗೆ ಬೆಂಗಳೂರು ಮೂಲದ ಡೆಪ್ಯುಟಿ ಅಕೌಂಟ್ ಕಂಟ್ರೋಲರ್ ಪರುಶುರಾಮ್ ಸೂಚಿಸಿದ್ದರು. ಮೇಲಾಧಿಕಾರಿಯ ಸೂಚನೆಯಂತೆ ದಾಖಲೆ ಪರಿಶೀಲಿಸಿ ಚಿತ್ರದುರ್ಗ AEE ನಾಗರಾಜ್ ದೂರು ನೀಡಿದ್ದರು.
ನಾಲ್ವರು ಅರೆಸ್ಟ್, ಇಬ್ಬರು ಎಸ್ಕೇಪ್
ನಕಲಿ ದಾಖಲೆ ನೀಡಿದ್ದನ್ನ ಗಮನಿಸಿ ಬೆಸ್ಕಾಂ ಅಧಿಕಾರಿ ನಾಗರಾಜ್ ನೀಡಿದ್ದ ದೂರಿನ ಅನ್ವಯ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಲ್ಲಿ ವೀರೇಶ್, ರಘುಕಿರಣ್, ಹರೀಶ್, ಶಿವಪ್ರಕಾಶ್, ಜೆ.ರಕ್ಷಿತ್, ಒ ಕಾರ್ತಿಕ್ ಅನುಂಕಪದ ಆಧಾರದ ನೌಕರಿ ಪಡೆದ ಆರೋಪಿಗಳು ಎಂದು ಗುರುತಿಸಲಾಗಿದೆ.
ಇದರಲ್ಲಿ ವಿರೇಶ್, ರಘುಕಿರಣ್, ಹರೀಶ್, ಶಿವ ಪ್ರಸಾದ್ ಎಂಬವರನ್ನು ಬಂಧಿಲಾಗಿದೆ. ಇನ್ನುಳಿದ ಇಬ್ಬರು ತಲೆಮರೆಸಿಕೊಂಡಿದ್ದಾರೆ.
ರವಿ, ಪ್ರೇಮ್ ಕುಮಾರ್ ಸರ್ಕಾರದ ಕಣ್ಣಿಗೆ ಮಣ್ಣೆರಚಿ ನಕಲಿ ದಾಖಲೆ ಸೃಷ್ಠಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದರಲ್ಲಿ ಸಹಾಯಕ ಬೆಸ್ಕಾಂ ಅಧಿಕಾರಿ ಎಲ್.ರವಿ, ಸಹಾಯಕ ಪ್ರೇಮ್ ಕುಮಾರ್, ಅಧೀಕ್ಷಕ ಇಂಜಿನಿಯರ್ ಎಸ್.ಟಿ ಶಾಂತಮಲ್ಲಪ್ಪ ಎಂಬವರನ್ನು ಬಂಧನ ಮಾಡಲಾಗಿದೆ. ಈ ಕುರಿತು ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ IPC 420, 465, 468,471 ಅಡಿ ಕೇಸ್ ದಾಖಲಿಸಲಾಗಿದೆ.
ಅವಮಾನ ತಾಳದೇ ಮೂವರು ಆತ್ಮಹತ್ಯೆ
ಒಂದೇ ಕುಟುಂಬದ ಮೂವರು ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ. ತಾಯಿ ಭಾರತಿ, ಮಗ ಕಿರಣ್, ಸೊಸೆ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿರಿಮಗ ಅರುಣ್ ಹಾಗೂ ಗೌರಮ್ಮ ಅನ್ನೋರು ಪ್ರೀತಿಸಿ ಮದುವೆಯಾಗಿದ್ರು. ಅದೇ ಕಾರಣಕ್ಕೆ ಗೌರಮ್ಮ ಕುಟುಂಬಸ್ಥರು ಭಾರತಿ ಕುಟುಂಬಕ್ಕೆ ಥಳಿಸಿದ್ರು. ನಿಮ್ಮ ಮಗ ನಮ್ಮ ಹುಡುಗಿಯನ್ನ ಓಡಿಸಿಕೊಂಡು ಹೋಗಿದ್ದಾನೆ ಎಂದು ಹಿಂಸೆ ಕೊಡ್ತಿದ್ರಂತೆ. ಅದರ ಅವಮಾನ ತಾಳಲಾಗದೇ ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನೇಣಿಗೆ ಶರಣಾದ 24 ವರ್ಷದ ವಿವಾಹಿತೆ
ಗಂಡನ (Husband) ಸಾವಿನಿಂದ ಮನನೊಂದಿದ್ದ 24 ವರ್ಷದ ಮಹಿಳೆ (Women) ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರಿನ (Bengaluru) ಕಾಡುಗೋಡಿಯ (Kadugodi) ಓಪಾರಂ ಸಮೀಪದ ರಾಮಯ್ಯ ಗಾರ್ಡನ್ ಬಳಿ ನಡೆದಿದೆ. ಸೌಂದರ್ಯ (Soundarya) ಸಾವಿಗೆ ಶರಣಾದ ಮಹಿಳೆಯಾಗಿದ್ದು, ಮಾನಸಿಕ ಖಿನ್ನತೆಯಿಂದ (Mental illness) ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮೃತ ಸೌಂದರ್ಯ, ಪತಿ ಮಾಗಡಿ ರಸ್ತೆಯಲ್ಲಿ (Magadi Road) ತಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ