Mangalore: ಮಾಸ್ಕ್ ಧರಿಸಲು ಸೂಚಿಸಿದ ಪಿಡಿಓ ಮೇಲೆ ಹಲ್ಲೆ; ನಾಲ್ವರ ಬಂಧನ

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಪಿಡಿಓ ಹೇಳಿದ್ದರು. ಆದರೆ ಯುವಕರು ಪಿಡಿಒ ಮಾತನ್ನು ಕೇಳದೆ ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಂಗಳೂರು(ಮೇ 28): ಕೋವಿಡ್ ಎರಡನೇ ಅಲೆ ಗಂಭೀರವಾಗಿದ್ದರೂ ಜನ ಮಾತ್ರ ಇನ್ನು ಬುದ್ದಿ ಕಲಿತಿಲ್ಲ. ಮಾಸ್ಕ್ ಹಾಕಿ ಅಂತಾ ಬುದ್ದಿವಾದ ಹೇಳಿದಕ್ಕೆ ಇಲ್ಲೊಂದು ಯುವಕರ ತಂಡ ಪಿಡಿಓ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದ ಆರೋಪಿಗಳು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ.

ಮಾಸ್ಕ್ ಧರಿಸಲು ಹೇಳಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿದ್ದಾರೆ. ಮೇ 25ರಂದು ಮಂಗಳೂರು ತಾಲೂಕಿನ ಮಲ್ಲೂರು ಗ್ರಾಮ ಪಂಚಾಯತ್ ಆವರಣದಲ್ಲಿ ಯುವಕರ ಗುಂಪು ಮಾಸ್ಕ್ ಹಾಕದೆ ಹರಟುತ್ತಿದ್ದು, ಸ್ಥಳಕ್ಕೆ ಬಂದ ಗ್ರಾಮ ಪಂಚಾಯತಿ ಪಿಡಿಓ ರಾಜೇಂದ್ರ ಶೆಟ್ಟಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದರು.  ಜೊತೆಗೆ ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿದ್ದರು. ಆದರೆ ಯುವಕರು ಪಿಡಿಒ ಮಾತನ್ನು ಕೇಳದೆ ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ.

ಕೋವಿಡ್ ಎರಡನೇ ಅಲೆ ಗಂಭೀರವಾದ ಹಿನ್ನಲೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ನಡುವೆ ಕರೊನಾ ನಿಯಂತ್ರಣಕ್ಕೆ ಒಂದಷ್ಟು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದ್ರೆ ಈ ನಿಯಮಗಳನ್ನು ಉಲ್ಲಂಘಿಸಿದ ಯುವಕರಿಗೆ ಬುದ್ದಿ ಹೇಳಿದಕ್ಕೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗೆ ಮಂಗಳೂರಿನಲ್ಲಿ ಹಲ್ಲೆ ನಡೆಸಲಾಗಿದೆ. ಮಂಗಳೂರು ಹೊರ ವಲಯದ ಮಲ್ಲೂರು ಗ್ರಾ.ಪಂಚಾಯತ್ ಪಿ.ಡಿ.ಓ ರಾಜೇಂದ್ರ ಶೆಟ್ಟಿ ಹಲ್ಲೆಗೆ ಒಳಗಾದವರು. ಇದೀಗ ಹಲ್ಲೆ ಮಾಡಿದ ಆ ನಾಲ್ವರು ಹಲ್ಲೆಕೋರರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಹಮ್ಮದ್ ಇದಾಯತುಲ್ಲಾ, ಅಹ್ಮದ್ ಬಸೀರ್, ಅಬುಬಕ್ಕರ್ ಸಿದ್ದಿಕ್, ಅಬ್ದುಲ್ ಸಿದ್ದಿಕ್ ಬಂಧಿತ ಆರೋಪಿಗಳು.

ಇದನ್ನೂ ಓದಿ:Beauty Tips: ಲಾಕ್​ಡೌನ್​ನಲ್ಲಿ ನಿಮ್ಮ ತ್ವಚೆ ಮತ್ತು ಕೇಶದ ಆರೈಕೆಗೆ ಇಲ್ಲಿವೆ ಬ್ಯೂಟಿ ಟಿಪ್ಸ್​​​..!

ಎರಡು ದಿನದ ಹಿಂದೆ ಲಾಕ್ ಡೌನ್ ಜಾರಿಯಲ್ಲಿದ್ದರೂ ಮಲ್ಲೂರು ಪಂಚಾಯತ್ ಹೊರಗಡೆ ಈ ನಾಲ್ಕೂ ಜನ ಯುವಕರು ಮಾಸ್ಕ್ ಹಾಕದೇ ಗುಂಪು ಸೇರಿದ್ದರು. ಇದನ್ನು ಗಮನಿಸಿದ ಪಿ.ಡಿ.ಓ, ಸರ್ಕಾರದ ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದ್ದೀರಿ ಎಂದು ಹೇಳಿ ದಾಖಲೆಗಾಗಿ ಈ ಯುವಕರ ಫೋಟೋ ವಿಡಿಯೋ ತೆಗೆದಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಈ ತಂಡ ಪಿ.ಡಿ.ಓ ಗೆ ಅವಾಚ್ಯ ಶಬ್ಧಗಳಿಂದ ಬೈದು ಕೆನ್ನೆಗೆ, ಮುಖಕ್ಕೆ ಹೊಡೆದಿದ್ದಾರೆ.

ಈ ಸಂದರ್ಭ ಪಂಚಾಯತ್‌ನ ಇತರ ಸಿಬ್ಬಂದಿಗಳು ಬಂದಾಗ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ದೂರು ದಾಖಸಿಲಿಕೊಂಡ ಮಂಗಳೂರು ಗ್ರಾಮಾಂತರ ಪೊಲೀಸರು ಇಂದು ಬೆಳಗ್ಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಬಂಧಿತರಲ್ಲಿ ಮಹಮ್ಮದ್ ಇದಾಯತುಲ್ಲಾ, ಅಹ್ಮದ್ ಬಸೀರ್ ಮೇಲೆ ಈಗಾಗಲೇ ರಾಬರಿ ಕೇಸ್ ಇದೆ. ಸದ್ಯ ಇವರ ಮೇಲೆ ಸರ್ಕಾರಿ ಅಧಿಕಾರಿ ಮೇಲೆ ಕರ್ತವ್ಯ ಸಂದರ್ಭ ಹಲ್ಲೆ, ಎಪಿಡಮಿಕ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸುವ ಕಿಡಿಗೇಡಿಗಳಿಗೆ ಇದೊಂದು ಪಾಠವಾಗಬೇಕಿದೆ.
Published by:Latha CG
First published: