ಧಾರವಾಡ : ವಿಧಾನಸಭಾ ಚುನಾವಣೆ (Assembly Elections) ಹತ್ತಿರವಾಗುತ್ತಿದ್ದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇತ್ತೀಚೆಗೆ ಧಾರವಾಡ ಜಿಲ್ಲೆಗೆ (Dharwad District) ಒಂದರ ಮೇಲೊಂದು ಗಿಫ್ಟ್ ನೀಡುತ್ತಿವೆ. ಐಐಟಿ, ತ್ರಿಬಲ್ ಐಟಿ, ಫೊರೆನ್ಸಿಕ್ ವಿವಿ ಕ್ಯಾಂಪಸ್ ಬೆನ್ನಲ್ಲೇ ಈಗ ಧಾರವಾಡ ಜಿಲ್ಲೆಗೆ ಕೇಂದ್ರ ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರವೂ (Lalit Kala Academy Regional Centre) ಒಲಿದು ಬಂದಿದೆ. ಸೋಮವಾರ ಅಕಾಡೆಮಿಯ ಪ್ರಾದೇಶಿಕ ಕೇಂದ್ರದ ಶಂಕುಸ್ಥಾಪನೆ ಧಾರವಾಡದಲ್ಲಿ ನಡೆಯಿತು. ಧಾರವಾಡ ಜಿಲ್ಲೆಗೆ ಕೇಂದ್ರ ಸರ್ಕಾರ ಮತ್ತೊಂದು ಗಿಫ್ಟ್ ನೀಡಿದೆ. ದೊಡ್ಡ ದೊಡ್ಡ ವಿದ್ಯಾಸಂಸ್ಥೆಗಳನ್ನು ಹೊಂದಿರುವ ಕಾರಣಕ್ಕೆ ರಾಜ್ಯದ ಶೈಕ್ಷಣಿಕ ಕೇಂದ್ರ ಸ್ಥಾನವಾಗಿ (Karnataka Education Centre) ಧಾರವಾಡ ಬೆಳೆದಿದೆ.
ಇದೇ ಕಾರಣಕ್ಕೆ ಧಾರವಾಡದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವದ ಕೇಂದ್ರಗಳು ಬಂದಿವೆ. ಅದರಲ್ಲಿ ಐಐಟಿ, ತ್ರಿಬಲ್ ಐಟಿ ಜೊತೆಗೆ ಇತ್ತೀಚೆಗೆ ಫೋರೆನ್ಸಿಕ್ ವಿಶ್ವವಿದ್ಯಾಲಯದ ಕ್ಯಾಂಪಸ್ ಕೂಡ ಬಂದಿದೆ.
ಈಗ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿನ ಕೇಂದ್ರ ಲಲಿತ ಕಲಾ ಅಕಾಡೆಮಿಯ ಪ್ರಾದೇಶಿಕ ಕೇಂದ್ರವೂ ಧಾರವಾಡ ನಗರಕ್ಕೆ ಒಲಿದಿದ್ದು, ಅದರ ಶಂಕುಸ್ಥಾಪನೆಯು ನೆರವೇರಿಸಲಾಯಿತು.
40 ವರ್ಷಗಳಿಂದ ನಿರಂತರ ಹೋರಾಟ
ದೇಶದಲ್ಲಿ ಕೇಂದ್ರ ಲಲಿತ ಕಲಾ ಅಕಾಡೆಮಿ 50ರ ದಶಕದಲ್ಲಿಯೇ ಸ್ಥಾಪನೆಯಾಗಿದೆ. ಆದರೆ ಅಂದಿನಿಂದಲೂ ದಕ್ಷಿಣ ಭಾರತದ ದೃಶ್ಯ ಮತ್ತು ಚಿತ್ರಕಲಾವಿದರ ಪಾಲಿಗೆ ಪ್ರಾದೇಶಿಕ ಕೇಂದ್ರವಾಗಿ ಇದ್ದಿದ್ದು ಚೆನ್ನೈನಲ್ಲಿ ಮಾತ್ರವೇ. ಆದರೆ ಕರ್ನಾಟಕದ ಉತ್ತರ ಭಾಗದ ಜನರಿಗೆ ಚೆನ್ನೈ ದೂರವಾಗುತ್ತಿತ್ತು.
ದೃಶ್ಯ ಮತ್ತು ಚಿತ್ರಕಲೆಯಲ್ಲಿ ಈ ಭಾಗದ ಜನ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಹಿನ್ನಡೆಯಾಗುತ್ತಲೇ ಬಂದಿತ್ತು. ಆದರೆ ಇಂತಹ ಒಂದು ಪ್ರಾದೇಶಿಕ ಕೇಂದ್ರ ಕರ್ನಾಟಕಕ್ಕೆ ಬೇಕು ಎನ್ನುವ ಬೇಡಿಕೆ ಶುರುವಾಗಿದ್ದು 40 ವರ್ಷಗಳ ಹಿಂದೆ. ಆದರೆ ಅದು ಇಲ್ಲಿಯವರೆಗೂ ಈಡೇರಿರಲಿಲ್ಲ.
ಮೊದಲಿಗೆ ಶಾಸ್ತ್ರೋಕ್ತವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ಚಿತ್ರಕಲಾ ಪ್ರದರ್ಶನವನ್ನು ರಿಬ್ಬನ್ ಕತ್ತರಿಸೋ ಮೂಲಕ ಉದ್ಘಾಟಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದೀಗ ಮೋದಿ ಸರ್ಕಾರ ಬಂದ ಬಳಿಕ ಎಲ್ಲವೂ ಬದಲಾಗಿದೆ. ನಮ್ಮ ಸಂಸ್ಕೃತಿ, ಕಲೆಗಳಿಗೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಅವುಗಳನ್ನು ಉಳಿಸಿಕೊಂಡು ಹೋಗುವತ್ತ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ಅರ್ಜುನ ರಾಮ್
ಧಾರವಾಡ ಕೋರ್ಟ್ ವೃತ್ತದ ಬಳಿಯಲ್ಲಿ ಮಹಾನಗರ ಪಾಲಿಕೆಯ ಜಾಗೆಯಲ್ಲಿ ಪ್ರಾದೇಶಿಕ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇನ್ನು ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಅರ್ಜುನ ರಾಮ್ ಮೇಘ್ವಾಲ್, ಜೋಶಿಯವರಿಗೆ ನಾನು ಗುರು ಅಲ್ಲ. ಬದಲಿಗೆ ಅವರೇ ನನಗೆ ಗುರು ಎಂದರು.
ಇಂದು ಧಾರವಾಡದಲ್ಲಿ ಪ್ರತಿಷ್ಠಿತ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕಚೇರಿಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರಾದೇಶಿಕ ಕಚೇರಿ ಹೊಂದಿರುವ ಲಲಿತಕಲಾ ಅಕಾಡೆಮಿಯು ನಮ್ಮ ಜಿಲ್ಲೆಯಲ್ಲಿ ಆರಂಭವಾಗುತ್ತಿರುವುದು ಸಂತೋಷದ ಸಂಗತಿಯಾಗಿದೆ. pic.twitter.com/XjGLoxEKOx
— Pralhad Joshi (@JoshiPralhad) February 20, 2023
ಇದನ್ನೂ ಓದಿ: Paresh Mesta Case: ಪರೇಶ್ ಮೇಸ್ತಾ ಹತ್ಯೆ ಕೇಸ್; 122 ಜನರ ವಿರುದ್ಧ ದಾಖಲಾಗಿದ್ದ ಕೇಸ್ ಹಿಂಪಡೆದ ಸರ್ಕಾರ
ಒಂದೇ ವರ್ಷದಲ್ಲಿ ಕಾಮಗಾರಿ ಪೂರ್ಣ
ಇನ್ನು ಅರ್ಜುನ ರಾಮ್ ಸ್ವತಃ ಹಾಡುಗಾರರೂ ಹೌದು. ವೇದಿಕೆಯಲ್ಲಿ ಭಜನೆಯೊಂದನ್ನು ಹಾಡೋ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಇನ್ನು ಒಂದು ವರ್ಷದಲ್ಲಿ ಈ ಕೇಂದ್ರದ ಕಾಮಗಾರಿಯನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಧಾರವಾಡಕ್ಕೆ ಹರಿದು ಬಂದಿದ್ದು, ಅದರೊಂದಿಗೆ ಇದೀಗ ಲಲಿತ ಕಲಾ ಅಕಾಡೆಮಿಯೂ ಬಂದಿದೆ. ಮುಂದಿನ ದಿನಗಳಲ್ಲಿ ಇಂಥ ಹಲವು ಯೋಜನೆಗಳು ಬಂದರೆ, ಖಂಡಿತವಾಗಿಯೂ ಧಾರವಾಡ ದಕ್ಷಿಣ ಭಾರತದ ಸಾಂಸ್ಕೃತಿಕ ರಾಜಧಾನಿಯಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ