ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ; ಪ್ರಮುಖ ಆರೋಪಿಯ ಮೇಲೆ ಪೊಲೀಸ್​ ಫೈರಿಂಗ್

ಅಯ್ಯಪ್ಪ ದೊರೆ ಕೊಲೆಗೆ ಸಂಪೂರ್ಣ ಯೋಜನೆ ಸಿದ್ದಪಡಿಸಿ ಅದನ್ನು ಕಾರ್ಯರೂಪಕ್ಕೆ ತಂದದ್ದು ಮತ್ತು ಸುಪಾರಿ ಹಂತಕರಿಗೆ ಮಾರಕಾಸ್ತ್ರಗಳನ್ನು ಪೂರೈಕೆ ಮಾಡಿದ್ದೇ ಹಂತಕ ಗಣೇಶ್ ಎಂದು ಹೇಳಲಾಗುತ್ತಿದೆ. ಗುಂಡೇಟು ತಿಂದ ಆರೋಪಿ ಗಣೇಶ್, ಪಿಎಸ್ಐ ಯಲ್ಲವ್ವ ಹಾಗೂ ಪೇದೆ ಮಲ್ಲಿಕಾರ್ಜುನ್ ಮೂವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

MAshok Kumar | news18-kannada
Updated:October 20, 2019, 8:35 AM IST
ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ; ಪ್ರಮುಖ ಆರೋಪಿಯ ಮೇಲೆ ಪೊಲೀಸ್​ ಫೈರಿಂಗ್
ಪೊಲೀಸರಿಂದ ಗುಂಡೇಟು ತಿಂದ ಆರೋಪಿ ಗಣೇಶ್ ಮತ್ತು ಫೈರಿಂಗ್ ನಡೆದ ಸ್ಥಳ.
  • Share this:
ಬೆಂಗಳೂರು (ಅಕ್ಟೋಬರ್ 20); ಇತ್ತೀಚೆಗೆ ಸುಪಾರಿ ಹಂತಕರಿಂದ ಹತ್ಯೆಗೀಡಾಗಿದ್ದ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಮೂರನೇ ಹಾಗೂ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಅಯ್ಯಪ್ಪ ದೊರೆ ಕೊಲೆಯ ನಂತರ ಪೊಲೀಸರು ಪ್ರಮುಖ ಆರೋಪಿಗಳಾದ ಸೂರಜ್ ಶೆಟ್ಟಿ, ಸುದೀರ್ ಅಂಗೂರ್ ಸೇರಿ ನಾಲ್ಕು ಜನರನ್ನು ಬಂಧಿಸುವಲ್ಲಿ ಆರ್​ಟಿ ನಗರ ಪೊಲೀಸರು ಸಫಲವಾಗಿದ್ದರು. ಆದರೆ, ಮೂರನೇ ಆರೋಪಿ ಗಣೇಶ್ ತಲೆಮರೆಸಿಕೊಂಡಿದ್ದ. ಆತ ಹೆಬ್ಬಾಳದ ಕಾರ್ಪೋರೇಷನ್ ಬಳಿ ಅಡಗಿರುವ ಖಚಿತ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಭಾನುವಾರ ಬೆಳಗ್ಗೆಯೇ ಆತನನ್ನು ಬಂಧಿಸಲು ಮುಂದಾಗಿದ್ದಾರೆ.

ತನ್ನನ್ನು ಬಂಧಿಸಲು ಪೊಲೀಸರು ಆಗಮಿಸಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಆರೋಪಿ ಗಣೇಶ್ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪಿಎಸ್ಐ ಯಲ್ಲವ್ವ ಮತ್ತು ಪೊಲೀಸ್ ಪೇದೆ ಮಲ್ಲಿಕಾರ್ಜುನ್ ಅವರು ತೀವ್ರ ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇನ್ಸ್​ಪೆಕ್ಟರ್​ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ತಿಳಿಸಿದ್ದಾರೆ. ಆದರೆ, ಆರೋಪಿ ಮತ್ತೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮ ರಕ್ಷಣೆಗಾಗಿ ಆತನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Ashoke1
ಸುಪಾರಿ ಹಂತಕ ಗಣೇಶ್ ನಿಂದ ಹಲ್ಲೆಗೊಳಗಾದ ಪಿಎಸ್​ಐ ಯಲ್ಲವ್ವ ಮತ್ತು ಪೇದೆ ಮಲ್ಲಿಕಾರ್ಜುನ್.


ಅಯ್ಯಪ್ಪ ದೊರೆ ಕೊಲೆಗೆ ಸಂಪೂರ್ಣ ಯೋಜನೆ ಸಿದ್ದಪಡಿಸಿ ಅದನ್ನು ಕಾರ್ಯರೂಪಕ್ಕೆ ತಂದದ್ದು ಮತ್ತು ಸುಪಾರಿ ಹಂತಕರಿಗೆ ಮಾರಕಾಸ್ತ್ರಗಳನ್ನು ಪೂರೈಕೆ ಮಾಡಿದ್ದೇ ಹಂತಕ ಗಣೇಶ್ ಎಂದು ಹೇಳಲಾಗುತ್ತಿದೆ. ಗುಂಡೇಟು ತಿಂದ ಆರೋಪಿ ಗಣೇಶ್, ಪಿಎಸ್ಐ ಯಲ್ಲವ್ವ ಹಾಗೂ ಪೇದೆ ಮಲ್ಲಿಕಾರ್ಜುನ್ ಮೂವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡಿದ್ದ ಅಯ್ಯಪ್ಪ ಅವರು ಮಹಾದಾಯಿ ನೀರನ್ನು ಕಳಸಾ ಬಂಡೂರಿ ನಾಲೆ ಮೂಲಕ ಮಲಪ್ರಭೆಗೆ ಹರಿಸಲೇಬೇಕು ಎಂದು ಪಣತೊಟ್ಟು, ರೈತರ ಹೋರಾಟದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. ಶಿವರಾಮ ಕಾರಂತ ಡಿನೋಟಿಫಿಕೇಷನ್ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಎಸಿಬಿಗೆ ದೂರು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಅವರು ಭ್ರಷ್ಟಾಚಾರ ವಿರೋಧಿ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಅವರ ಕೊಲೆ ಪ್ರಕರಣ ಕುರಿತು ತನಿಖೆ ನಡೆಸಲು 3 ತಂಡಗಳನ್ನು ರಚಿಸಲಾಗಿದೆ.
First published:October 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading