• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramotsava: ಸುತ್ತಮುತ್ತ ಬಗ್ಗಿ ಬಗ್ಗಿ ನಮಸ್ಕಾರ ಮಾಡೋರ ಬಗ್ಗೆ ಹುಷಾರಾಗಿರಿ: ಸಿದ್ದರಾಮಯ್ಯಗೆ ರಮೇಶ್ ಕುಮಾರ್ ಎಚ್ಚರಿಕೆ

Siddaramotsava: ಸುತ್ತಮುತ್ತ ಬಗ್ಗಿ ಬಗ್ಗಿ ನಮಸ್ಕಾರ ಮಾಡೋರ ಬಗ್ಗೆ ಹುಷಾರಾಗಿರಿ: ಸಿದ್ದರಾಮಯ್ಯಗೆ ರಮೇಶ್ ಕುಮಾರ್ ಎಚ್ಚರಿಕೆ

ಸಿದ್ದರಾಮಯ್ಯ, ರಮೇಶ್​ ಕುಮಾರ್​ (ಫೈಲ್​ ಫೋಟೋ)

ಸಿದ್ದರಾಮಯ್ಯ, ರಮೇಶ್​ ಕುಮಾರ್​ (ಫೈಲ್​ ಫೋಟೋ)

ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಸುತ್ತಮುತ್ತ ಸೇರಿರುವವರ ಬಗ್ಗೆ ಸ್ವಲ್ಪ ಹುಷಾರಾಗಿರಿ. ಬಗ್ಗಿ ಬಗ್ಗಿ ನಮಸ್ಕಾರ ಮಾಡೋರ ಬಗ್ಗೆ ಹುಷಾರಾಗಿರಿ. ನೀವು ನಿಮ್ಮ ಕುಟುಂಬಕ್ಕೆ, ಹೆಂಡ್ತಿ ಮಕ್ಕಳಿಗೆ ಸೇರಿದವರಲ್ಲ, ಇಡೀ ರಾಜ್ಯದ ಜನರಿಗೆ ಸೇರಿದವರು ಎಂದು ರಮೇಶ್​ ಕುಮಾರ್​ ಎಚ್ಚರಿಸಿದ್ದಾರೆ.

ಮುಂದೆ ಓದಿ ...
  • Share this:

ದಾವಣಗೆರೆ: ಜಿಟಿಜಿಟಿ ಮಳೆಯ ನಡುವೆಯೂ ಸಿದ್ದರಾಮೋತ್ಸವ (Siddramotsava) ಮುಂದುವರೆದಿದೆ. ವೇದಿಕೆ ಮೇಲೆ ಸೇರಿರುವ ಪ್ರತಿಯೊಬ್ಬರ ಕಾಂಗ್ರೆಸ್​ ನಾಯಕರೂ (Congress Leaders) ಸಿದ್ದರಾಮಯ್ಯ (Siddaramaiah) ಅವರ 75ನೇ ಹುಟ್ಟುಹಬ್ಬಕ್ಕೆ ಶುಭ ಕೋರಿ, ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಆದರೆ ಮಾಜಿ ಸ್ಪೀಕರ್​ ರಮೇಶ್ ಕುಮಾರ್ (Former Speaker Ramesh Kumar) ಮಾತ್ರ ಸಿದ್ದರಾಮಯ್ಯ ಅವರಿಗೆ ಸೂಕ್ಷ್ಮವಾದ ಎಚ್ಚರಿಕೆಯನ್ನು ನೀಡಿದರು. ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಸುತ್ತಮುತ್ತ ಸೇರಿರುವವರ ಬಗ್ಗೆ ಸ್ವಲ್ಪ ಹುಷಾರಾಗಿರಿ. ಬಗ್ಗಿ ಬಗ್ಗಿ ನಮಸ್ಕಾರ ಮಾಡೋರ ಬಗ್ಗೆ ಹುಷಾರಾಗಿರಿ. ನೀವು ನಿಮ್ಮ ಕುಟುಂಬಕ್ಕೆ, ಹೆಂಡ್ತಿ ಮಕ್ಕಳಿಗೆ ಸೇರಿದವರಲ್ಲ, ಇಡೀ ರಾಜ್ಯದ ಜನರಿಗೆ ಸೇರಿದವರು ಎಂದು ರಮೇಶ್​ ಕುಮಾರ್​ ಎಚ್ಚರಿಸಿದ್ದಾರೆ. ಪರೋಕ್ಷವಾಗಿ ಸಿದ್ದರಾಮಯ್ಯ ಆಪ್ತರಾಗಿರುವವರಿಗೆ ತಿರುಗೇಟು ಕೊಟ್ಟಿದ್ದಾರೆ.


ನಂತರ ಮಾತನಾಡಿದ ಕಾರ್ಯಕ್ರಮದ ರೂವಾರಿ ಶಾಸಕ ಜಮ್ಮೀರ್ ಅಹಮದ್, ಇವತ್ತು ಸಿದ್ದರಾಮಯ್ಯಗೆ ಪ್ರೀತಿ ತೋರಿಸಿದ್ದೀರಿ. ಈ ಪ್ರೀತಿ ಇಡಿ ದೇಶದ ಯಾವ ನಾಯಕನಿಗೂ ಸಿಗೋಕೆ ಸಾಧ್ಯ ಇಲ್ಲ. 2023ಕ್ಕೆ ತಾವೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.


ಜೀವನದಲ್ಲೇ ಇಂಥಾ ಕಾರ್ಯಕ್ರಮ ನೋಡಿಲ್ಲ


ನನ್ನ ರಾಜಕೀಯ ಜೀವನದಲ್ಲೇ ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಎಲ್ಲಿಯೂ ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅಚ್ಚರಿ ವ್ಯಕ್ತಪಡಿಸಿದರು.  ನಾನು ಕಾರ್ಯಕ್ರಮಕ್ಕೆ ಬರುವಾಗ ಜನ ಸಾಗರಏ ಇತ್ತು.  ಮೋಟಾರು ಸೈಕಲ್‌ ನಲ್ಲಿ ಬಂದೆ. ಈ ಕಾರ್ಯಕ್ರಮದ ಮೂಲಕ ಸಿದ್ದರಾಮಯ್ಯನವರಿಗೆ ಸಾವಿರ ಆನೆ ಬಲ ಬಂದಿದೆ. ಇದು ಕರ್ನಾಟಕ ರಾಜಕಾರಣಕ್ಕೆ ದಿಕ್ಸೂಚಿ ಆಗಿದೆ. ರಾಜ್ಯದಲ್ಲಿ ಊದಿರುವ ಕಹಳೆ ದೇಶದ ಕಾಶ್ಮೀರದ ವರೆಗೂ ಹೋಗುತ್ತದೆ ಎಂದರು.


ಐಶ್ವರ್ಯ ಬೇಡ ಎಂದ ಸಿದ್ದರಾಮಯ್ಯ


ಮಾಜಿ ಡಿಸಿಎಂ ಜಿ ಪರಮೇಶ್ವರ್ ಮಾತನಾಡಿ, ಸಿದ್ದರಾಮಯ್ಯನವರಿಗೆ ಆರೋಗ್ಯ ಆಯಸ್ಸು, ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದ್ದಕ್ಕೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನವರು, ಐಶ್ವರ್ಯ ಬೇಡ ಎಂದರು. ನಗೆಯಾಡಿ ಮಾತು ಮುಂದುವರಿಸಿದ ಪರಮೇಶ್ವರ್​, ಆಯ್ತು ಸಕಲ ಸಂಪದ್ಭರಿತ ವಾಗಿ ಕಾಪಾಡಲಿ ಎಂದರು. 75 ವರ್ಷದ ಈ ಹುಡುಗ ನಮ್ಮೆಲ್ಲರಿಗೂ ಮಾದರಿ. ನನ್ನನ್ನು ಸಹೋದರನಂತೆ ಜೊತೆಯಲ್ಲೇ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ಮು ಅಧಿಕಾರಕ್ಕೆ ತಂದವರು ಇವರು. ಇದನ್ನು ನಾನು ಯಾವುದೇ ಕಾರಣಕ್ಕೂ ಮರೆಯೋದಕ್ಕೆ ಸಾಧ್ಯ ಇಲ್ಲ. ಇವರು ನಮಗೆಲ್ಲ ಮಾದರಿ, ಆದರ್ಶ, ಸ್ಪೂರ್ತಿ ಎಂದರು.


ಇದನ್ನೂ ಓದಿ: Siddramotsava: ಮೈಸೂರು ಪಾಕ್, ಲಾಡು, ರುಚಿ ರುಚಿ ಊಟ; ಸಿದ್ದರಾಮೋತ್ಸವದಲ್ಲಿ ಭರ್ಜರಿ ಭೋಜನ


ಸಿದ್ದರಾಮಯ್ಯನವರು 75ರಲ್ಲೂ ಮರಳಿ ಅರಳುತ್ತಿದ್ದಾರೆ


ಮಾಜಿ ಸಚಿವೆ ಉಮಾಶ್ರೀ ಸಿನಿಮಾ ಶೈಲಿಯಲ್ಲೇ ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದರು. ರಾಜಕಾರಣ ವ್ಯಾಪಾರ ಅಲ್ಲ, ರಾಜಕಾರಣ ಸೇವೆ ಅಂತಾ ತೋರಿಸಿದವರು ನಮ್ಮಸಿದ್ದರಾಮಯ್ಯನವರು. ಅವರೊಬ್ಬ ಆದರ್ಶ ರಾಜಕಾರಣಿ, ಭ್ರಷ್ಟ ರಹಿತ ರಾಜಕಾರಣಿ ಎಂದು. ಮಾತಿನ ಉದ್ದಕ್ಕೂ ತಮ್ಮದೇ ಆದ ಸಿನಿಮಾ ಶೈಲಿಯಲ್ಲಿ ಸಿದ್ದರಾಮಯ್ಯ ಹೊಗಳಿ, ಜನರಿಂದ ಹರ್ಷೋದ್ಘಾರ ವ್ಯಕ್ತವಾಗುವಂತೆ ಮಾಡಿದರು ಉಮಾಶ್ರೀ. ರಾಜ್ಯದ ಜನರು ಮತ್ತೆ ಸಿದ್ದರಾಮಯ್ಯ ಬರಲು ಬಯಸುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರನ್ನು ಅರಳೋ, ಮರಳೋ ಅಂತಾರೆ. ಆದರೆ ನಮ್ಮ ಸಿದ್ದರಾಮಯ್ಯ ನವರು 75ರಲ್ಲೂ ಮರಳಿ ಅರಳುತ್ತಿದ್ದಾರೆ ಎಂದರು.


ಸಿದ್ದರಾಮಯ್ಯಗೆ ಬೆಂಗಳೂರಲ್ಲಿ ಮನೆ ಇಲ್ಲ


ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್​ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ. ಸಿದ್ದರಾಮಯ್ಯ ಅವರು ಮಾಡದ ಯೋಜನೆ ಇಲ್ಲ ಎಂದರು. ಅಂತವರ ಉತ್ಸವದಲ್ಲಿ ಭಾಗಿ ಯಾಗ್ತಿರೋದು ನಮ್ಮ ಭಾಗ್ಯ. ಸಿದ್ದರಾಮಯ್ಯ ನವರಿಗೆ ಇನ್ನೂ ಬೆಂಗಳೂರಲ್ಲಿ ಒಂದು ಸ್ವಂತ ಮನೆ ಇಲ್ಲ. ಅವರಂತ ಸರಳ ರಾಜಕಾರಣಿ ಬೇರೆ ಯಾರು ಇಲ್ಲ. ಕರ್ನಾಟಕ ರಾಜ್ಯದ ರಾಜಕೀಯ ಧ್ರುವ ತಾರೆ ಸಿದ್ದರಾಮಯ್ಯ. 2023ರ‌ ಚುನಾವಣೆಗೆ ನಾವು ಇಲ್ಲಿಂದಲೇ ರಣಕಹಳೆ ಮೊಳಗಿಸಿದ್ದೇವೆ. ಹೀಗಾಗಿ 2023ಕ್ಕೆ ಕಾಂಗ್ರೆಸ್ ನ ಬಾವುಟ ಹಾರಿಸಲು ನೀವೆಲ್ಲರೂ ಸಜ್ಜಾಗಬೇಕು. ಸಿದ್ದರಾಮಯ್ಯರ 40 ವರ್ಷದ ರಾಜಕೀಯ ಅನುಭವ, ನನ್ನ ವಯಸ್ಸು ಎಂದು ಲಕ್ಷ್ಮೀ ಹೆಬ್ಬಾಳ್ಕರ್​​​ ಧನ್ಯವಾದ ತಿಳಿಸಿದರು.

Published by:Kavya V
First published: