HOME » NEWS » State » FORMER SPEAKER RAMESH KUMAR SAYS I RESPECT PEOPLE VERDICT AND ALLEGATION ON EVM MACHINES IS FALSE RRK LG

ಜನರ ತೀರ್ಪನ್ನು ನಾನು ಗೌರವಿಸುತ್ತೇನೆ, ಇವಿಎಂ ಯಂತ್ರಗಳ ಮೇಲಿನ ಆರೋಪ ಸತ್ಯಕ್ಕೆ ದೂರ; ಮಾಜಿ ಸ್ಪೀಕರ್ ರಮೇಶ್ ಕುಮಾರ್

ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ವಿಚಾರ, ಕೇವಲ ಊಹಾಪೋಹಗಳು ಎಂದು ರಮೇಶ್ ಕುಮಾರ್  ಹೇಳಿಕೆ ನೀಡಿದ್ದಾರೆ.

news18-kannada
Updated:November 18, 2020, 8:58 AM IST
ಜನರ ತೀರ್ಪನ್ನು ನಾನು ಗೌರವಿಸುತ್ತೇನೆ, ಇವಿಎಂ ಯಂತ್ರಗಳ ಮೇಲಿನ ಆರೋಪ ಸತ್ಯಕ್ಕೆ ದೂರ; ಮಾಜಿ ಸ್ಪೀಕರ್ ರಮೇಶ್ ಕುಮಾರ್
ರಮೇಶ್ ಕುಮಾರ್
  • Share this:
ಕೋಲಾರ(ನ.18): ಕೆಸಿ ವ್ಯಾಲಿ ಯೋಜನೆಯಿಂದ ತುಂಬಿರುವ ಅಮ್ಮೇರಹಳ್ಳಿ ಕೆರೆಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ರಾಜಕಾರಣಿಗಳು ಬಾಗಿನ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ  ಉಸ್ತುವಾರಿ ಸಚಿವ ಎಚ್ ನಾಗೇಶ್, ಸಂಸದ ಎಸ್ ಮುನಿಸ್ವಾಮಿ, ಶಾಸಕರಾದ ಶ್ರೀನಿವಾಸಗೌಡ, ಮಾಜಿ ಸ್ಪೀಕರ್ ರಮೇಶ್ ಕುಮಾರ್ , ಪರಿಷತ್ ಶಾಸಕರಾದ ವೈಎ ನಾರಾಯಣಸ್ವಾಮಿ, ಗೋವಿಂದರಾಜು ಹಾಗು ನಾಸಿರ್ ಅಹಮದ್ ಭಾಗಿಯಾಗಿದ್ದರು, ಕೆರೆಗೆ ಶಾಸ್ರ್ತೋಪ್ತವಾಗಿ ಪೂಜೆ ಸಲ್ಲಿಸಿದ ನಂತರ ಎಲ್ಲಾ ಗಣ್ಯರು ಒಮ್ಮೆಲೆ ಭಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಅದಕ್ಕೂ ಮೊದಲು, ಕೆಸಿ ವ್ಯಾಲಿ ಯೋಜನೆಯ ನೀರು ಹರಿಯುತ್ತಿರುವ,  ಕೋಲಾರ ತಾಲೂಕಿನ ಮುದುವಾಡಿ ಕೆರೆ ತೂಬಿನ ಗೇಟ್ ತೆರೆಯುವ ಕಾರ್ಯಕ್ರಮಕ್ಕೆ  ಉಸ್ತುವಾರಿ ಸಚಿವ ಎಚ್ ನಾಗೇಶ್  ಚಾಲನೆ ನೀಡಿದರು. ಅಮ್ಮೇರಹಳ್ಳಿ ಕೆರೆಗೆ ಭಾಗಿನ ಅರ್ಪಣೆ ನಂತರ  ನಗರಸಭೆ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಸಚಿವ ನಾಗೇಶ್ ಸೇರಿದಂತೆ, ಸಂಸದರು ಶಾಸಕರು ಭಾಗಿಯಾಗಿದ್ದರು.

ಅಮ್ಮೇರಹಳ್ಳಿ ಕೆರೆಗೆ ಬಾಗಿನ ಸಮರ್ಪಿಸಿದ ನಂತರ ನಗರಸಭೆ ಆಯೋಜಿಸಿದ್ದ ವೇದಿಕೆ  ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾವುಕರಾದ ಘಟನೆ ನಡೆಯಿತು, ಈ ಹಿಂದೆ ಕೆಸಿ ವ್ಯಾಲಿ ಯೋಜನೆ ಆರಂಭವಾಗಿ ಮೊದಲ ಬಾರಿಗೆ, ಲಕ್ಷ್ಮೀ ಸಾಗರ ಕೆರೆಗೆ ನೀರು ಹರಿದಾಗ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವರು ಗಳಗಳನೆ ಕಣ್ಣೀರು ಸುರಿಸಿ ಸಂತೋಷವನ್ನ ವ್ಯಕ್ತಪಡಿಸಿದ್ದರು. ಇದೀಗ ಕೆ.ಸಿ.ವ್ಯಾಲಿ ಯೋಜನೆಯಿಂದ  78 ಕೆರೆಗಳು ಜಿಲ್ಲೆಯಲ್ಲಿ ಸಂಪೂರ್ಣವಾಗಿ ತುಂಬಿ ಹರಿಯುತ್ತಿದ್ದು, ನೀರು ಹರಿಯಲು ರಮೇಶ್ ಕುಮಾರ್ ಕಾರಣ ಅವರೇ ಯೋಜನೆ ರೂವಾರಿ ಎಂದು ಬಣ್ಣಿಸಿದ್ದಕ್ಕೆ ಕುಳಿತಲ್ಲೆ ಕಣ್ಣೀರು ಸುರಿಸಿ ಭಾವುಕರಾದರು. ಯೋಜನೆ ಅನುಷ್ಟಾನಕ್ಕೆ ಹಗಲಿರುಳು ರಮೇಶ್ ಕುಮಾರ್ ಶ್ರಮಿಸಿದರೆಂದು ಎಂಎಲ್ ಸಿ ನಾಸಿರ್ ಅಹಮದ್‌, ಶಾಸಕರಾದ ಶ್ರೀನಿವಾಸಗೌಡ, ಸಂಸದ ಎಸ್ ಮುನಿಸ್ವಾಮಿ  ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ರಮೇಶ್ ಕುಮಾರ್ ರನ್ನು ಹಾಡಿ ಹೊಗಳಿದ್ದರು, ಇದರಿಂದ ರಮೇಶ್ ಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ್ದು ಕಂಡುಬಂತು.

ವೀರಶೈವ ಲಿಂಗಾಯತರಿಗೆ 16% ಮೀಸಲಾತಿ ನೀಡಿ; ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು, ಏಕಮುಖ ಹೋರಾಟ ಅಗತ್ಯ; ಮುರುಘಾ ಶ್ರೀ

ಇನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ  ರಮೇಶ್ ಕುಮಾರ್, ಜಿಲ್ಲೆಗೆ ನೀರು ಬಂದಿದ್ದಾಗಿದೆ, ಹಾಗಂತ ರೈತರು ಮತ್ತದೇ ಸಾಂಪ್ರದಾಯಿಕ ಬೆಳೆ ಹಾಕದೆ, ವಿದೇಶದಲ್ಲಿ ಬೇಡಿಕೆ ಇರುವ ವಿವಿಧ ಬೆಳೆಗಳನ್ನು ಹಾಕಬೇಕಿದೆ. ವಿದೇಶಗಳಲ್ಲಿ ಹಂದಿ, ಹಸು ಮಾಂಸಕ್ಕೆ ಬೇಡಿಕೆಯಿದೆ ಅಂತಹ ತಳಿಗಳನ್ನು ಬೆಳೆದು ಮಾರಾಟ ಮಾಡಬೇಕಿದೆ. ಬೇರೆಡೆ ಬೇಡಿಕೆಯಿರುವ ತಳಿಗಳನ್ನ ನಾವು ಅಭಿವೃದ್ಧಿಪಡಿಸಿ,  ವ್ಯಾಪಾರ ವಹಿವಾಟು ಆರಂಭಿಸಬೇಕು, ಹತ್ತಿರದಲ್ಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದೆ, ಅದನ್ನ ಸದುಪಯೋಗ ಪಡಿಸಿಕೊಳ್ಳಬೇಕು.  ಮುಂದಿನ ಆರ್ಥಿಕ ವರ್ಷದಲ್ಲಿ ಕೋಲಾರ ಜಿಲ್ಲೆಯ ಪಾತ್ರ ವೃದ್ದಿಯಾಗುವ ಎಲ್ಲಾ ಸಾಧ್ಯತೆಯಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಭಿನ್ನಮತ ಊಹಾಪೋಹ

ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ವಿಚಾರ, ಕೇವಲ ಊಹಾಪೋಹಗಳು ಎಂದು ರಮೇಶ್ ಕುಮಾರ್  ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ನಂತರ ಗೆದ್ದ ಶಾಸಕರು ಸಿಎಂ ರನ್ನ ಆಯ್ಕೆ ಮಾಡಲಿದ್ದಾರೆ. ಆದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರು ನನಗೆ ಚೆನ್ನಾಗಿ ಚಿರಪರಿಚಿತರೇ. ಅವರ ಮಧ್ಯೆ ಉತ್ತಮ ಸಂಬಂಧವಿದೆ ಎಂದಿದ್ದಾರೆ.
ಇನ್ನು ಬಿಹಾರ ಚುನಾವಣೆ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಜನರು ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ. ಅದನ್ನ ನಾನು ಗೌರವಿಸುವೆ. ಇವಿಎಂ ಯಂತ್ರಗಳ ಮೇಲಿನ ಆರೋಪ ಸತ್ಯಕ್ಕೆ ದೂರ, ನಾನು ಇವಿಎಂ ಯಂತ್ರದ ಮೂಲಕವೇ ಗೆದ್ದಿದ್ದೇನೆ, ರಾಜಕೀಯ ಉದ್ದೇಶದಿಂದ ಮಾತನಾಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published by: Latha CG
First published: November 18, 2020, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading