ದೇಶದ ಪರ ಹೋರಾಟ ನಡೆಯುವಾಗ ಬಿಜೆಪಿಯವರು ಹುಟ್ಟೇ ಇರಲಿಲ್ಲ; ಮಾಜಿ ಸ್ಪೀಕರ್​ ರಮೇಶ್​ ಕುಮಾರ್​​ ವ್ಯಂಗ್ಯ

ಸಂವಿಧಾನದ ಮೂಲ ಆಶಯಗಳಿಗೆ ಬಹುಮತ ಆಧರಿಸಿ ಶಾಸನ ಮಾಡಲು ಸಾಧ್ಯವಿಲ್ಲ. ಅಂತಹ ಯಾವುದೇ ಶಾಸನಗಳಿಗೆ ಮಾನ್ಯತೆ ಇರುವುದಿಲ್ಲ. ದೇಶದಲ್ಲಿ ಮೊದಲನೇ ಬಾರಿಗೆ ಇಂತಹ ಕಷ್ಟ ಬಂದಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್.

ಮಾಜಿ ಸ್ಪೀಕರ್ ರಮೇಶ್ ಕುಮಾರ್.

  • Share this:
ಕೋಲಾರ(ಡಿ.23): ಪೌರತ್ವ ಮಸೂದೆ ಕಾಯ್ದೆ ವಿರುದ್ಧ ಕೋಲಾರದಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡಿದ್ದೇವೆ ಎಂದು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದಾರೆ. 

ಕೋಲಾರದಲ್ಲಿ ಮಾತನಾಡಿದ ಅವರು, ಭಾರತ ವಾಸಿಗಳಾಗಿ ಹೋರಾಟಕ್ಕೆ ಬಂದಿದ್ದೇವೆ. ಭಾರತ ಸಮಾಜವಾದು ತತ್ವದ ಮೇಲೆ ನಿಂತಿದೆ. ಸಂಸತ್​ ಕಾನೂನು ರೂಪಿಸುವಾಗ ಯೋಚಿಸಬೇಕು. ಜನರ ಭಾವನೆಗಳಿಗೆ ತಕ್ಕಂತೆ ಕಾನೂನು ತರಬೇಕು ಎಂದು ಆಗ್ರಹಿಸಿದರು.

ಸಂವಿಧಾನದ ಮೂಲ ಆಶಯಗಳಿಗೆ ಬಹುಮತ ಆಧರಿಸಿ ಶಾಸನ ಮಾಡಲು ಸಾಧ್ಯವಿಲ್ಲ. ಅಂತಹ ಯಾವುದೇ ಶಾಸನಗಳಿಗೆ ಮಾನ್ಯತೆ ಇರುವುದಿಲ್ಲ. ದೇಶದಲ್ಲಿ ಮೊದಲನೇ ಬಾರಿಗೆ ಇಂತಹ ಕಷ್ಟ ಬಂದಿದೆ. ಗಣರಾಜ್ಯದ ನಂತರ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ದವಾಗಿ ಮೊದಲ ಶಾಸನ ಬಂದಿದೆ ಎಂದು ಕಿಡಿಕಾರಿದರು.

ಮಂಗಳೂರು ಗೋಲಿಬಾರ್​ನಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕೇರಳ ಸರ್ಕಾರದ ನಿಯೋಗ

ಬೇರೆ ಮಾರ್ಗವಿಲ್ಲದೆ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದೇವೆ. ದೇಶದ ಪರ ಹೋರಾಟ ನಡೆಯುವಾಗ ಬಿಜೆಪಿಯವರು ಹುಟ್ಟೇ ಇರಲಿಲ್ಲ. ಇವರೆಲ್ಲಾ ಬ್ರಿಟಿಷ್​​ನವರ ಜೊತೆಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮೂಲಕ ಸಿಎಎ ವಿರುದ್ದ ಹೋರಾಟಗಾರರನ್ನು ದೇಶ ವಿರೋಧಿಗಳು ಎನ್ನುವ ಬಿಜೆಪಿ ನಾಯಕರಿಗೆ ರಮೇಶ್ ಕುಮಾರ್ ತಿರುಗೇಟು ನೀಡಿದರು.

ದೇಶದ ಜನರಿಗೆ ಇತಿಹಾಸ ಗೊತ್ತಿದೆ. ಬಹುಮತ ಅವರಿಗೆ, ನಾವು ನಮ್ಮ ಕರ್ತವ್ಯ. ಮಾಡುತ್ತೇವೆ. ಮಣ್ಣಲ್ಲಿ ಮಣ್ಣಾಗುವವರೆಗೂ ಹೋರಾಟ ಮಾಡುತ್ತೇವೆ. ನಮಗೆ ಬೇರೆ ದಾರಿಯಿಲ್ಲ ಎಂದು ಗುಡುಗಿದರು.

ಜಾರ್ಖಂಡ್ ಚುನಾವಣಾ ಫಲಿತಾಂಶ; ಬಿಜೆಪಿಗೆ ಭಾರೀ ಮುಖಭಂಗ, ದಶಕದ ನಂತರ ಅಧಿಕಾರದತ್ತ ಕಾಂಗ್ರೆಸ್ ಮೈತ್ರಿಕೂಟ

 
Published by:Latha CG
First published: