HOME » NEWS » State » FORMER PRIME MINISTER HD DEVE GOWDA CANDIDATE FOR RAJYA SABHA DECISION AT THE JDLP MEETING RH

ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭ್ಯರ್ಥಿ; ಜೆಡಿಎಲ್​ಪಿ ಸಭೆಯಲ್ಲಿ ನಿರ್ಧಾರ

ರಾಜ್ಯಸಭೆಗೆ ಆಯ್ಕೆ ಆಗಲು ಮೊದಲ ಪ್ರಾಶಸ್ತ್ಯ ದ ಮತಗಳೇ 48 ಬೇಕು. ಜೆಡಿಎಸ್ ಬಳಿ 34 ಮತಗಳಿವೆ. ಇನ್ನು 14 ಮತಗಳು ಕೊರತೆಯಾಗಲಿದ್ದು, ದೇವೇಗೌಡರು ಸ್ಪರ್ಧೆ ಮಾಡಿದರೆ ಈ ಮತಗಳನ್ನು ಕಾಂಗ್ರೆಸ್​ ನೀಡುವ ಸಾಧ್ಯತೆ ಇದೆ.

news18-kannada
Updated:June 5, 2020, 3:08 PM IST
ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭ್ಯರ್ಥಿ; ಜೆಡಿಎಲ್​ಪಿ ಸಭೆಯಲ್ಲಿ ನಿರ್ಧಾರ
ಜೆಡಿಎಲ್​ಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಮುಖಂಡರು.
  • Share this:
ಬೆಂಗಳೂರು: ರಾಜ್ಯಸಭೆಗೆ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ತಿಳಿಸಿದರು. 

ಇಂದು ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್​.ಕೆ.ಕುಮಾರಸ್ವಾಮಿ ಅವರು, ಇವತ್ತಿನ ಸಂದರ್ಭದಲ್ಲಿ ದೇಶಕ್ಕೆ ದೇವೇಗೌಡರಂತಹ ನಾಯಕರ ಅವಶ್ಯಕತೆ ಇದೆ. ಇಲ್ಲಿಯ ತನಕ ಯಾವ ಕಾಂಗ್ರೆಸ್ ನಾಯಕರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಆದರೆ ದೇವೇಗೌಡರು ಸ್ಪರ್ಧೆ ಮಾಡಿದರೆ ಪಕ್ಷಾತೀತವಾಗಿ ಬೆಂಬಲಿಸುತ್ತಾರೆ ಎಂದು ಹೇಳಿದರು.

ರಾಜ್ಯಸಭೆಗೆ ಆಯ್ಕೆ ಆಗಲು ಮೊದಲ ಪ್ರಾಶಸ್ತ್ಯ ದ ಮತಗಳೇ 48 ಬೇಕು. ಜೆಡಿಎಸ್ ಬಳಿ 34 ಮತಗಳಿವೆ. ಇನ್ನು 14 ಮತಗಳು ಕೊರತೆಯಾಗಲಿದ್ದು, ದೇವೇಗೌಡರು ಸ್ಪರ್ಧೆ ಮಾಡಿದರೆ ಈ ಮತಗಳನ್ನು ಕಾಂಗ್ರೆಸ್​ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್​ನಿಂದ ಕೂಡ ಅಭ್ಯರ್ಥಿಯನ್ನಾಗಿ ಮಲ್ಲಿಕಾರ್ಜಿನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಜೆಡಿಎಸ್‌ನ ಕುಪೇಂದ್ರ ರೆಡ್ಡಿ,ಕಾಂಗ್ರೆಸ್​‌ನ ಬಿ.ಕೆ. ಹರಿಪ್ರಸಾದ್, ಪ್ರೊ.ರಾಜೀವ್‌ಗೌಡ, ಬಿಜೆಪಿಯ ಪ್ರಭಾಕರ್ ಅವರ ರಾಜ್ಯಸಭೆ ಅವಧಿ ಜೂನ್ 25ಕ್ಕೆ ಕೊನೆಗೊಳ್ಳಲಿದೆ. ಈ ನಾಲ್ಕು ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ.

ಇದನ್ನು ಓದಿ: ರಾಜ್ಯಸಭೆ ಚುನಾವಣೆ; ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
Youtube Video
First published: June 5, 2020, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories