ಬೆಂಗಳೂರು: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ (HD Devegowda) ಅವರು ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಲು ಊತ ಜಾಸ್ತಿ ಆಗಿದ್ದ ಕಾರಣ ಜನರಲ್ ಚೆಕಪ್ಗೆ (General Health Checkup) ಎಂದು ದೇವೇಗೌಡರು ಆಸ್ಪತ್ರೆಗೆ ಆಗಮಿಸಿದ್ದರು. ಹೆಚ್ಡಿಡಿ ಆರೋಗ್ಯ (Health) ಪರಿಶೀಲನೆ ನಡೆಸಿದ್ದ ವೈದ್ಯರು, ಒಂದು ವಾರ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ವೈದ್ಯರ (Doctor) ಸೂಚನೆ ಮೇರೆಗೆ ದೇವೇಗೌಡರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬೆಳಗ್ಗೆ 10:30ರ ವೇಳೆಗೆ ಹೆಚ್ಡಿಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಬೆಳಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು, ದೇವೇಗೌಡರು ಆರೋಗ್ಯ ತಪಾಸಣೆಗೆ ಹೋಗಿದ್ದಾರೆ. ಅವರು ಬಂದ ಬಳಿಕ ಎಲ್ಲಾ ತೀರ್ಮಾನ ಹಾಸನ ಟಿಕೆಟ್ ಬಗ್ಗೆ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಯಾವುದೇ ಗೊಂದಲ ಅವಘಡಕ್ಕೆ ಅವಕಾಶವಿಲ್ಲ. ಅವರ ಸಲಹೆ ಪಡೆದು, ಕಾರ್ಯಕರ್ತರ ಭಾವನೆಗಳಿಗೆ ತಕ್ಕಂತೆ ಅವರೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದರು.
ಅಲ್ಲದೆ, ನನಗೆ ದೇವೇಗೌಡ ಅವರ ಆರೋಗ್ಯವೇ ಮುಖ್ಯ. ಈ ವಿಚಾರವಾಗಿ ಅವರಿಗೆ ಹೆಚ್ಚಿನ ಹೊರೆ ನೀಡುವುದು ಇಷ್ಟವಿಲ್ಲ. ದೇವೇಗೌಡರ ಆರೋಗ್ಯ ಸ್ಥಿತಿ ಹೇಗಿದೆ ಅಂತ ನನಗೆ ಮಾತ್ರ ಗೊತ್ತು. ಬೇರೆ ಯಾರಿಗೂ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.
ಇದನ್ನೂ ಓದಿ: RBI Restrictions: ಗ್ರಾಹಕರಿಗೆ ಬಿಗ್ ಶಾಕ್! ಕರ್ನಾಟಕದ ಈ ಬ್ಯಾಂಕ್ ಇಂದಿನಿಂದ ಬಂದ್
ಅವರು ರಾಜಕೀಯ ಮಾಡುವಾಗ ಇವರು ರಾಜಕೀಯಕ್ಕೆ ಬಂದೇ ಇರಲಿಲ್ಲ
ಇದೇ ವೇಳೆ ಬಿಜೆಪಿ ಮೇಲಿಂದ ಮೇಲೆ ರ್ಯಾಲಿ ಮಾಡಿದರು ಅವರು ರಾಜ್ಯಕ್ಕೆ ಏನು ಕೊಡುತ್ತೇವೆ ಎಂದು ಹೇಳಿಲ್ಲ. ಮಾಜಿ ಸಿಎಂಗಳಾದ ಎಸ್.ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರನ್ನು ನೆನಪಿಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅವರು ರಾಜಕೀಯ ಮಾಡುವಾಗ ಇವರು ರಾಜಕೀಯಕ್ಕೆ ಬಂದೇ ಇರಲಿಲ್ಲ.
ಪಾಪಾ, ಛತ್ರಿ ಹಿಡಿಯಲಿಲ್ಲವೆಂದು ಖರ್ಗೆ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ . ಓರ್ವ ಪ್ರಧಾನಿ ಯಾರಿಗೆ ಛತ್ರಿ ಹಿಡಿದರು, ಹಿಡಿಯಲಿಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಏನು ಕೊಡುತ್ತೇವೆ, ಏನು ಕೊಟ್ಟೆ ಅಂತ ಎಂದು ಹೇಳಲಿಲ್ಲ ಎಂದು ವ್ಯಂಗ್ಯವಾಡಿದರು.
ಬಿಎಸ್ ಯಡಿಯೂರಪ್ಪರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ?
ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವಶ್ಯಕ ಎಂದು ಹೇಳಿ, ಯಡಿಯೂರಪ್ಪ ಅವರ ಬಗ್ಗೆ ಹೊಗಳಿದ್ದಾರೆ. ಹಾಗಾದರೆ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದೀರಿ. ಯಡಿಯೂರಪ್ಪ ಬಗ್ಗೆ ಅಷ್ಟು ಅನುಕಂಪ ಪ್ರೀತಿ ಇದ್ದಿದ್ದರೆ ಯಾಕೆ ಕೆಳಗೆ ಇಳಿಸುತ್ತಿದ್ದೀರಿ? ಅವರು ಹೇಗೆ ಬಂದರೋ, ಯಾವ ರೀತಿ ಬಂದರೋ. ಕಷ್ಟಪಟ್ಟು ಎರಡು ವರ್ಷ ಮುಖ್ಯಮಂತ್ರಿ ಆದ್ರು. ಆಮೇಲೆ ಅವರನ್ನು ಎರಡು ವರ್ಷ ಹೇಗೆ ನಡೆಸಿಕೊಂಡಿರಿ.
ಇದನ್ನೂ ಓದಿ: Bengaluru: ಆಟೋ ಚಾಲಕನಿಂದಾಗಿ ಆಸ್ಪತ್ರೆ ಸೇರಿದ ಎಎಸ್ಐ ಮೆದುಳು ನಿಷ್ಕ್ರಿಯ! ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ
ಈಗ ಅವರ ಮೇಲೆ ಪ್ರೀತಿ ಬಂದು ಆತ್ಮೀಯವಾಗಿ ತಬ್ಬಿಕೊಳ್ಳುತ್ತಿದ್ದೀರಿ. ಎರಡು ವರ್ಷ ನೀವು ಅವರಿಗೆ ಕೊಟ್ಟಿದ್ದು ಏನು? ಅವರಿಗೆ ಯಾವ ರೀತಿ ಗೌರವ ಕೊಟ್ಟಿದ್ದೀರಾ? ವಯಸ್ಸಿನ ಅಂತರ ಹೇಳಿ, ಅಡ್ವಾಣಿ, ಮುರುಳಿ ಮನೋಹರ ಜೋಶಿ, ಉಮಾಭಾರತಿ ಅವರನ್ನು ಮನೆಗೆ ಕಳಿಸಿದ್ದಾರೆ. ಈಗ ಯಡಿಯೂರಪ್ಪ ಅನಿವಾರ್ಯ ಅನಿವಾರ್ಯ ಎಂದು ಯಾಕೆ ಹೇಳುತ್ತಿದ್ದೀರಾ? ಒಂದು ಸಮುದಾಯದ ಮತ ಪಡೆಯಲು ಈ ಚುನಾವಣೆವರೆಗೂ ಮಾತ್ರ ಯಡಿಯೂರಪ್ಪನ ಮೇಲೆ ಪ್ರೀತಿ ಎಂದು ಟೀಕೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ