ರಾಮನಗರದಿಂದ ನಿಖಿಲ್​ ರಾಜಕೀಯ ಪುನರಾರಂಭ; ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭವಿಷ್ಯ

ರಾಮನಗರ ನನಗೆ, ಕುಮಾರಸ್ವಾಮಿಗೆ ರಾಜಕೀಯ ಶಕ್ತಿಕೊಟ್ಟ ಸ್ಥಳ. ಇಲ್ಲಿಂದಲೇ ನಾನು ಸಿಎಂ ಆಗಿ ಪ್ರಧಾನಿಯಾದೆ. ನಮ್ಮ ವಂಶಕ್ಕೆ ರಾಜಕೀಯದಲ್ಲಿ ಎರಡನೇ ಶಕ್ತಿ ಕೊಟ್ಟ ಸ್ಥಳವಿದು. ಇಲ್ಲಿಂದಲೇ ನಿಖಿಲ್​ ಕೂಡ ರಾಜಕೀಯವಾಗಿ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಮನದಿಂಗಿತ ಹೊರ ಹಾಕಿದರು.

ನಿಖಿಲ್​ ಕುಮಾರಸ್ವಾಮಿ - ದೇವೇಗೌಡ

ನಿಖಿಲ್​ ಕುಮಾರಸ್ವಾಮಿ - ದೇವೇಗೌಡ

  • Share this:
ರಾಮನಗರ (ಮಾ.03): ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಕಹಿ ಬಳಿಕ ನಿಖಿಲ್​ ಕುಮಾರಸ್ವಾಮಿ ರಾಜಕೀಯ ಭವಿಷ್ಯ, ಈಗ ಮದುವೆ ಮೂಲಕ ರಾಮನಗರ ಕ್ಷೇತ್ರದಿಂದ ಪುನರ್​ ಆರಂಭವಾಗಲಿದೆ ಎಂದು ಜೆಡಿಎಸ್​ ವರಿಷ್ಠ ಎಚ್.ಡಿ.  ದೇವೇಗೌಡ ಭವಿಷ್ಯ ನುಡಿದಿದ್ದಾರೆ. 

ನಿಖಿಲ್​-ರೇವತಿ ಮದುವೆ ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ಅವರು, ಹಾಸನದಲ್ಲಿ ರೇವಣ್ಣ ಬಳಿಕ ಪ್ರಜ್ವಲ್​ ರೇವಣ್ಣ ರಾಜಕೀಯ ನೆಲೆ ಕಂಡುಕೊಂಡರು. ರಾಮನಗರ ನನಗೆ ಹಾಗೂ ಕುಮಾರಸ್ವಾಮಿಗೆ ಕರ್ಮಭೂಮಿ ಆಯಿತು. ಈಗ ಇದೇ ಭೂಮಿ ನಿಖಿಲ್​ಗೆ ರಾಜಕೀಯ ನೆಲೆ ನೀಡುವ ಭರವಸೆ ಇದೆ ಎಂದರು.

ನಿಖಿಲ್​ ರಾಜಕೀಯದಲ್ಲಿ ದೈವದ ಆಟ ನಡೆಯಿತು. ಅವನ ರಾಜಕೀಯ ಮಂಡ್ಯದಿಂದ ಆರಂಭಿಸಬೇಕು ಎಂಬ ಉದ್ದೇಶವಿರಲಿಲ್ಲ. ಆಕಸ್ಮಿಕವಾಗಿ ಆತ ಅಲ್ಲಿ ನಿಂತ. ಮತ್ತೆ ಈಗ ಆ ತಪ್ಪು ಮಾಡುವುದಿಲ್ಲ. ಮಂಡ್ಯದಲ್ಲಿ ನಾವು ಪಕ್ಷವನ್ನು ಮಾತ್ರ ಕಟ್ಟುತ್ತೇವೆ. ರಾಮನಗರದಿಂದಲೇ ಹೊಸದಾಗಿ ಆತ ವೈವಾಹಿಕ ಜೀವನದ ಜೊತೆ ರಾಜಕೀಯ ಭವಿಷ್ಯ ಉದಯವಾಗಲಿದೆ ಎಂದರು.

ರಾಮನಗರ ನನಗೆ, ಕುಮಾರಸ್ವಾಮಿಗೆ ರಾಜಕೀಯ ಶಕ್ತಿಕೊಟ್ಟ ಸ್ಥಳ. ಇಲ್ಲಿಂದಲೇ ನಾನು ಸಿಎಂ ಆಗಿ ಪ್ರಧಾನಿಯಾದೆ. ನಮ್ಮ ವಂಶಕ್ಕೆ ರಾಜಕೀಯದಲ್ಲಿ ಎರಡನೇ ಶಕ್ತಿ ಕೊಟ್ಟ ಸ್ಥಳವಿದು. ಇಲ್ಲಿಂದಲೇ ನಿಖಿಲ್​ ಕೂಡ ರಾಜಕೀಯವಾಗಿ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಮನದಿಂಗಿತ ಹೊರ ಹಾಕಿದರು.

ಮದುವೆ ನೆಪದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೆ ಕುಮಾರಸ್ವಾಮಿ ಭದ್ರ ಬುನಾದಿಯಾಗುತ್ತಿದ್ದು, ಈ ಮೂಲಕ ಪಕ್ಷ ಸಂಘಟನೆಗೂ ಒತ್ತು ನೀಡಿದ್ದಾರೆ. ಅಲ್ಲದೇ ಮದುವೆ ನೆಪದಲ್ಲಿ ಪದೇ ಪದೇ ರಾಜಕೀಯ ಮುಖಂಡರ ಸಭೆ ಕರೆದು ನಿಖಿಲ್​ ರಾಜಕೀಯ ಭವಿಷ್ಯದ ಬಗ್ಗೆ ಕೂಡ ಚರ್ಚಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಈ ಹಿಂದೆ ಮಾಗಡಿ ಶಾಸಕ ಎ ಮಂಜು ಕೂಡ ಮಾತನಾಡಿದ್ದರು

ಇದನ್ನು ಓದಿ: ನಿಖಿಲ್​ ಮದುವೆ: ರಾಮನಗರ ಜನರಿಗೆ ಭರ್ಜರಿ ಗಿಫ್ಟ್​; ರೇಷ್ಮೆ ಸೀರೆ, ಪಂಚೆ, ಶರ್ಟ್​ ನೀಡಿ ಮತದಾರರಿಗೆ ಎಚ್​ಡಿಕೆ ಆಹ್ವಾನ

ದೇವೇಗೌಡರ ಮಾತು ಇದಕ್ಕೆ ಸಾಕ್ಷ್ಯ ಒದಗಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪರೋಕ್ಷವಾಗಿ ಮಗನ ರಾಜಕೀಯಕ್ಕೆ ಅಡಿಪಾಯ ಹಾಕುತ್ತಿರುವುದನ್ನು ಒಪ್ಪಿಕೊಂಡರು. ರಾಮನಗರ-ಚನ್ನಪಟ್ಟಣ ಮಧ್ಯೆ ನಡೆಯುವ ಮದುವೆ ನನ್ನ ವೈಯಕ್ತಿಕ ಇಚ್ಛೆ. ಇದಕ್ಕೂ ನಿಖಿಲ್ ರಾಜಕೀಯ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ದೈವದ ಆಟ ಹೇಗೋ ಗೊತ್ತಿಲ್ಲ. ಮಂಡ್ಯಕ್ಕೆ ನಾನು ಅವನಿಗೆ ಹೋಗಲು ಬೇಡ ಎಂದಿದ್ದೇವು. ಆದರೂ ಕೆಲವೊಮ್ಮೆ ದೈವ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ನನಗೆ ರಾಜಕೀಯವಾಗಿ ಜನ್ಮ ಕೊಟ್ಟವರ ಮಧ್ಯೆ ಮಗನ ಮದುವೆ ನಡೆಯಲಿದೆ ಎಂದರು.

ಇದನ್ನು ಓದಿ: ನಿಖಿಲ್ ರಾಜಕೀಯ ಅಖಾಡ ಮಂಡ್ಯದಿಂದ ರಾಮನಗರಕ್ಕೆ ಶಿಫ್ಟ್? ಹೆಚ್​ಡಿಕೆ ಮಗನ ವಿವಾಹ ಮಹೋತ್ಸವ ಒಂದು ನೆಪವೇ?

ಇನ್ನು ಮದುವೆ ನೆಪದಲ್ಲಿ ಕ್ಷೇತ್ರದ ಜನರಿಗೆ ಭರ್ಜರಿ ಉಡುಗೊರೆ ನೀಡುತ್ತಿರುವುದರ ಕುರಿತು ಮಾತನಾಡಿದ ಅವರು, ಅದು ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ. ನನ್ನ ಮಗನ ಮದುವೆಯಾದರೂ, ಇದು ಕಾರ್ಯಕರ್ತರೇ ನಿಂತು ಮಾಡುವ ಸಮಾರಂಭ ಎಂದು ಸ್ಪಷ್ಟನೆ ನೀಡಿದರು.

(ವರದಿ: ಎಟಿ ವೆಂಕಟೇಶ್​)

 
First published: