ಮೋದಿ ಆಡಳಿತದಲ್ಲಿ ಹೆಚ್ಚಾದ ಜಾತಿ, ಜನಾಂಗ ಘರ್ಷಣೆ; ಸಿಎಎ ವಿರೋಧಿ ಹೋರಾಟದಲ್ಲಿ ಎಚ್.ಡಿ.ದೇವೇಗೌಡ ಗುಡುಗು

ನಮ್ಮ‌ ಜನ ಪ್ರಾದೇಶಿಕ ಪಕ್ಷವನ್ನು ಆಯ್ಕೆ ಮಾಡುವಲ್ಲಿ ಎಡವಿದ್ದಾರೆ. ರಾಜ್ಯಸಭೆಯಲ್ಲಿ ಪ್ರಾದೇಶಿಕ ಪಕ್ಷ ಧ್ವನಿ ಎತ್ತಲಾಗದಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ. ಗುಲಾಂ ನಬಿ ಆಜಾದ್ ಮಾತುಗಳನ್ನು ರಾಜ್ಯಸಭೆಯಲ್ಲಿ ಕಡತಕ್ಕೆ ಹೋಗಬಾರದು ಎಂದು ಆಜ್ಞೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

news18-kannada
Updated:February 8, 2020, 3:09 PM IST
ಮೋದಿ ಆಡಳಿತದಲ್ಲಿ ಹೆಚ್ಚಾದ ಜಾತಿ, ಜನಾಂಗ ಘರ್ಷಣೆ; ಸಿಎಎ ವಿರೋಧಿ ಹೋರಾಟದಲ್ಲಿ ಎಚ್.ಡಿ.ದೇವೇಗೌಡ ಗುಡುಗು
ಎಚ್​.ಡಿ ದೇವೇಗೌಡ
  • Share this:
ಹಾಸನ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಸನದ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಭಾಗಿಯಾದರು.

ಈದ್ಗಾ ಮೈದಾನದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಚ್.ಡಿ.ದೇವೇಗೌಡ ಅವರು,  ನಾವೆಲ್ಲರೂ ಒಟ್ಟು ಸೇರಿ ಸಿಎಎ, ಎನ್​ಆರ್​ಸಿ, ಎನ್​ಪಿಆರ್ ಕಾನೂನುಗಳನ್ನು ವಿರೋಧಿಸಬೇಕು. ನಮ್ಮ ದೇಶದಲ್ಲಿ ವಿವಿಧ ಜಾತಿ, ಜನಾಂಗದವರು ವಾಸವಿದ್ದಾರೆ.  ನರೇಂದ್ರ ಮೋದಿ ಮಾತನಾಡುವ ಧಾಟಿಯಲ್ಲೇ ಹಿಂದೂ ರಾಷ್ಟ್ರ ಮಾಡುವಂತಿದೆ. ಅವರು ಅಂದುಕೊಂಡಿರುವುದು ಅಷ್ಟು ಸುಲಭವಾದುದ್ದಲ್ಲ. ಈ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರವಲ್ಲ ಉಳಿದವರಿಗೂ ತೊಂದರೆಯಾಗುತ್ತದೆ ಎಂದು ಕಾಯ್ದೆ ವಿರುದ್ಧ ಕಿಡಿ ಕಾರಿದರು.

ಮಹಾತ್ಮ ಗಾಂಧಿಯನ್ನು ಕೊಲೆ ಮಾಡಿದವರಿಗೆ ಭಾರತ ರತ್ನ ‌ನೀಡಬೇಕು ಎನ್ನುತ್ತಿದ್ದಾರೆ.  ಲೋಕಸಭೆಯಲ್ಲಿ ಬಿಜೆಪಿಯವರನ್ನು ಸಂಪೂರ್ಣ ಬೆಂಬಲಿಸಿದ್ದೇ ಇದಕ್ಕೆ ಕಾರಣ. ಮೋದಿ ಆಡಳಿತದಲ್ಲಿ ಜಾತಿ, ಜನಾಂಗದ ಘರ್ಷಣೆಗಳು ಹೆಚ್ಚಾಗಿವೆ. ಇವೆಲ್ಲವನ್ನೂ ನೋಡಿಯೂ ಮತ್ತೆ ಮೋದಿಯನ್ನು ಅಧಿಕಾರಕ್ಕೆ ತರಲಾಗಿದೆ. ನಮ್ಮ‌ ಜನ ಪ್ರಾದೇಶಿಕ ಪಕ್ಷವನ್ನು ಆಯ್ಕೆ ಮಾಡುವಲ್ಲಿ ಎಡವಿದ್ದಾರೆ. ರಾಜ್ಯಸಭೆಯಲ್ಲಿ ಪ್ರಾದೇಶಿಕ ಪಕ್ಷ ಧ್ವನಿ ಎತ್ತಲಾಗದಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ. ಗುಲಾಂ ನಬಿ ಆಜಾದ್ ಮಾತುಗಳನ್ನು ರಾಜ್ಯಸಭೆಯಲ್ಲಿ ಕಡತಕ್ಕೆ ಹೋಗಬಾರದು ಎಂದು ಆಜ್ಞೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಬಡತನ, ನಿರುದ್ಯೋಗ ಸಮಸ್ಯೆ ಇಂದು ದೇಶದಲ್ಲಿ ತಾಂಡವವಾಡುತ್ತಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ಪ್ರತಿಯೊಂದು ಧರ್ಮಕ್ಕೂ ನ್ಯಾಯ ಒದಗಿಸಿದ್ದಾರೆ. ರಾಷ್ಟ್ರದಲ್ಲಿ ಮುಂದೆ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸದೇ ಹೋದರೆ ಕಷ್ಟವಾಗುತ್ತದೆ.  ಜಾತ್ಯತೀತವಾದಿಗಳು ಒಟ್ಟಾಗಿ ಕೆಲಸ ಮಾಡಿದರೆ ಮುಂದಿನ ಅನಾಹುತ ತಡೆಯಬಹುದು.  ಇಲ್ಲವಾದರೆ ದೇಶ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಕಳಕಳಿ ವ್ಯಕ್ತಪಡಿಸಿದರು.

ಇದನ್ನು ಓದಿ: ಯಡಿಯೂರಪ್ಪ ಸ್ವತಂತ್ರವಾಗಿ ಖಾತೆ ಹಂಚಿಕೆ ಮಾಡಲಾರದಷ್ಟು ಅಸಮರ್ಥ ಸಿಎಂ: ಸಿದ್ಧರಾಮಯ್ಯ ಲೇವಡಿ

ದೆಹಲಿ ಚುನಾವಣೆ ನಡೆಯುತ್ತಿದ್ದು, ಎಎಪಿಯನ್ನು ಸುಖಾಸುಮ್ಮನೆ ಗುರಿ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಎಂದು ದೇವೇಗೌಡರು ಹೇಳಿದರು.
First published: February 8, 2020, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading