HOME » NEWS » State » FORMER PM HD DEVEGOWDA DID YOGA ON INTERNATIONAL YOGA DAY LG

International Yoga Day: ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯ ಶುಭಾಶಯ ತಿಳಿಸಿದ ಮಾಜಿ ಪ್ರಧಾನಿ ದೇವೇಗೌಡ

ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಜನರಿಗೆ  ವಿಶ್ವ ಯೋಗ ದಿನದ ಶುಭಾಶಯಗಳನ್ನು  ತಿಳಿಸಿದ್ದಾರೆ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಯೋಗ ಒಂದು ಸಮಗ್ರ ವಿಧಾನ ಎಂದು ದೇವೇಗೌಡರು ಹೇಳಿದ್ದಾರೆ.

news18-kannada
Updated:June 21, 2020, 11:14 AM IST
International Yoga Day: ಯೋಗ ಮಾಡುವ ಮೂಲಕ ವಿಶ್ವ ಯೋಗ ದಿನಾಚರಣೆಯ ಶುಭಾಶಯ ತಿಳಿಸಿದ ಮಾಜಿ ಪ್ರಧಾನಿ ದೇವೇಗೌಡ
ಯೋಗ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು
  • Share this:
ಬೆಂಗಳೂರು(ಜೂ.21): ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. ಹಾಗಾಗಿ ವಿಶ್ವದ ಬಹುತೇಕ ಕಡೆಗಳಲ್ಲಿ ವಿಶ್ವ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಸೇರಿ ಇತರೆ ರಾಜಕೀಯ ನಾಯಕರು ಯೋಗಾಭ್ಯಾಸ ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಿದ್ದಾರೆ.

ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಜನರಿಗೆ  ವಿಶ್ವ ಯೋಗ ದಿನದ ಶುಭಾಶಯಗಳನ್ನು  ತಿಳಿಸಿದ್ದಾರೆ. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಯೋಗ ಒಂದು ಸಮಗ್ರ ವಿಧಾನ ಎಂದು ದೇವೇಗೌಡರು ಹೇಳಿದ್ದಾರೆ.

ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಸ್ವತಃ ತಾವೇ ಯೋಗ ಮಾಡುವ ಮೂಲಕ ಯೋಗದ ಮಹತ್ವ ತಿಳಿಸಿದ್ದಾರೆ. ದೇಶದ ರಾಜಕಾರಣಿಗಳ ಪೈಕಿ ಅತ್ಯಂತ ಹಿರಿಯ ರಾಜಕಾರಣಿಯಾಗಿರುವ ದೇವೇಗೌಡರ ಆರೋಗ್ಯದ ಬಗ್ಗೆ ಎಲ್ಲರಿಗೂ ಕುತೂಹಲ ಇದೆ.

ಇಡೀ ದೇಶವೇ ಬಳಸುತ್ತಿರುವ ಆರೋಗ್ಯ ಸೇತು ಆಪ್​ ಸಿದ್ಧಪಡಿಸಿದ್ದು ಬೆಂಗಳೂರಿನ ಯುವಕರು; ಈ ಆಪ್ ತಯಾರಾದ ಬಗೆಯೇ ರೋಚಕ

ದೇವೇಗೌಡರು ತಮ್ಮ 86ನೇ ವಯಸ್ಸಿನಲ್ಲಿ ಒಳ್ಳೆಯ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಜೊತೆಗೆ ಇನ್ನೂ ಸಹ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಆರೋಗ್ಯ ಹಾಗೂ ಲವಲವಿಕೆಯ ಹಿಂದಿನ ಗುಟ್ಟು ಏನೆಂದರೆ ಅವರ ಶಿಸ್ತು ಬದ್ಧ ವ್ಯಾಯಾಮ, ಯೋಗ ಮತ್ತು ಉತ್ತಮವಾದ ಆಹಾರ ಪದ್ಧತಿ.

ಒಟ್ಟಿನಲ್ಲಿ ಇಂದು ವಿಶ್ವ ಯೋಗ ದಿನ ಇಂದು ಸ್ವತಃ ಯೋಗ ಮಾಡುವ ಮೂಲಕ ಜನರು ಯೋಗ ಮಾಡಬೇಕು ಎಂದು ದೇವೇಗೌಡರು ಸಂದೇಶ ಕೊಟ್ಟಿದ್ದಾರೆ.
First published: June 21, 2020, 11:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories