12 ಕ್ಷೇತ್ರಗಳಲ್ಲೂ ಬಿಜೆಪಿ, ಕಾಂಗ್ರೆಸ್ ವಿರುದ್ಧ ನೇರ ಪೈಪೋಟಿ ಮಾಡುತ್ತೇವೆ; ಎಚ್​.ಡಿ.ದೇವೇಗೌಡ

12 ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ. ಮನೆಯಲ್ಲಿ ಕೂರಲ್ಲ. ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿದ ಎಲ್ಲರನ್ನೂ ಸೋಲಿಸಿದ್ದಾರೆ. ಕುದುರೆ ವ್ಯಾಪಾರ ಆಗಿರೋದು ಸೇರಿ ಎಲ್ಲದರ ಬಗ್ಗೆಯೂ ಜನರಿಗೆ ಗೊತ್ತಿದೆ. 

Latha CG | news18-kannada
Updated:November 21, 2019, 5:15 PM IST
12 ಕ್ಷೇತ್ರಗಳಲ್ಲೂ ಬಿಜೆಪಿ, ಕಾಂಗ್ರೆಸ್ ವಿರುದ್ಧ ನೇರ ಪೈಪೋಟಿ ಮಾಡುತ್ತೇವೆ; ಎಚ್​.ಡಿ.ದೇವೇಗೌಡ
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
  • Share this:
ಬೆಂಗಳೂರು(ನ.21): ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರೆ ನಾವ್ಯಾಕೆ ಅಭ್ಯರ್ಥಿಗಳನ್ನು ಹಾಕುತ್ತಿದ್ದೆವು. ಹೋರಾಟ ಮಾಡುವುದು  ಶತಸಿದ್ದ, ತೀರ್ಪು ಕೊಡುವುದು ಮಹಾ ಜನತೆ. 12 ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ. ಮನೆಯಲ್ಲಿ ಕೂರಲ್ಲ. ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿದ ಎಲ್ಲರನ್ನೂ ಸೋಲಿಸಿದ್ದಾರೆ. ಕುದುರೆ ವ್ಯಾಪಾರ ಆಗಿರೋದು ಸೇರಿ ಎಲ್ಲದರ ಬಗ್ಗೆಯೂ ಜನರಿಗೆ ಗೊತ್ತಿದೆ. ವಿಪರ್ಯಾಸವೆಂದರೆ ಚುನಾವಣಾ ಆಯೋಗದವರೇ ಹೋಗಿ ಅರ್ಜಿ ಹಾಕಿದ್ದಾರೆ. ಇದರಲ್ಲಿ ರಾಜಕೀಯ ಇದೆ ಅನಿಸಲ್ವಾ?  ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ, ಅದರ ಬಗ್ಗೆ ಕಾಮೆಂಟ್ ಮಾಡಲ್ಲ. ನಾಳೆಯಿಂದಲೇ ಪ್ರಚಾರ ಶುರು ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿದ್ದಾರೆ.

ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಮ್ಮ ಪಕ್ಷದ ಅಭ್ಯರ್ಥಿಗಳ ಮೇಲೆ ಒತ್ತಡ ಹಾಕಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದಾರೆ. ಹಾಗಾಗಿ ನಮ್ಮ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಅಥಣಿ ಕ್ಷೇತ್ರದ ಗುರು ದಾಸ್ಯಾಳ  ಹಾಗೂ ಹಿರೆಕೇರೂರ ಕ್ಷೇತ್ರದ ಶಿವಾಚಾರ್ಯ ಸ್ವಾಮೀಜಿ  ನಾಮಪತ್ರ ವಾಪಸ್ ಪಡೆದಿದ್ದಾರೆ‌. ನಾಮಪತ್ರ ಯಾಕೆ ವಾಪಸ್ ಪಡೆದಿದ್ದಾರೆ ಎಂಬುದರ ಬಗ್ಗೆ ಕುಮಾರಸ್ವಾಮಿ ಹೇಳಿದ್ದಾರೆ.  ಶಿವಾಚಾರ್ಯ ಸ್ವಾಮೀಜಿ ಮೇಲೆ ಅನೇಕ ಮಠಾಧೀಶರು ಒತ್ತಡ ಹಾಕಿದ್ದರು. ದೇಶದಲ್ಲಿ ಅನೇಕ ಜನ ಸ್ವಾಮಿಜಿಗಳು ರಾಜಕೀಯ ಪ್ರವೇಶ ಮಾಡಿ, ಉನ್ನತ ಸ್ಥಾನ ಪಡೆದಿದ್ದಾರೆ. ಆದರೆ  ನಮ್ಮ ರಾಜ್ಯದಲ್ಲಿ ಒಬ್ಬ ಸ್ವಾಮೀಜಿ ಮೇಲೆ, ಬೇರೆ ಸ್ವಾಮಿಜಿಗಳು ಹಾಕುತ್ತಿರುವ ಒತ್ತಡ ನೋಡಿದರೆ ಬೇಜಾರು ಆಗುತ್ತದೆ. ಓರ್ವ ವ್ಯಕ್ತಿಯ ಸ್ವಾತಂತ್ರ್ಯ ಯಾವ ರೀತಿ ಹರಣವಾಗುತ್ತಿದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ," ಎಂದು ಬೇಸರ ವ್ಯಕ್ತಪಡಿಸಿದರು.

ಕಾಗಿನೆಲೆ ಸ್ವಾಮೀಜಿ ಜೊತೆಗಿನ ಸಂಧಾನ ಸಭೆ ಯಶಸ್ವಿ; ಸಚಿವ ಮಾಧುಸ್ವಾಮಿ ವಿವಾದಕ್ಕೆ ತೆರೆ

ಮುಂದುವರೆದ ಅವರು, "ನಾಮಪತ್ರ ವಾಪಸ್​​ ಪಡೆದ ಕ್ರಮವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಮಾನಸಿಕ ಒತ್ತಡ ಹಾಕಿದ್ದಾರೆ. ನಾಮಪತ್ರ ಹಿಂಪಡೆದುಕೊಂಡಿಲ್ಲ ಅಂದರೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ. ಸಿಎಂ ಯಡಿಯೂರಪ್ಪನವರ ಪುತ್ರನ ನಾಯಕತ್ವದಲ್ಲಿ ಒತ್ತಡ ಹಾಕಿಸಿದ್ದಾರೆ.  ರಾಷ್ಟ್ರದಲ್ಲಿ ಅನೇಕ ಕಡೆ ಸ್ವಾಮೀಜಿಗಳು ಸಂಸತ್​​ಗೆ  ಗೆದ್ದು ಬಂದಿದ್ದಾರೆ. ಕರ್ನಾಟಕದಲ್ಲಿ ದೊಡ್ಡ ಅನಾಹುತ ಆಯ್ತು ಅನ್ನೋ ಮಟ್ಟದಲ್ಲಿ ಮಾತನಾಡಿದ್ದಾರೆ. ಏಳೆಂಟು ಸ್ವಾಮೀಜಿಗಳಿಂದ ಒತ್ತಡ ಹಾಕಿಸಿದ್ದಾರೆ. ಅವರ ಹೆಸರು ಇಲ್ಲಿ ಹೇಳಲ್ಲ," ಎಂದರು.

"15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ಅವರಿಗೆ ಎಲ್ಲ ಬಲಗಳೂ ಇವೆ. ದೌರ್ಜನ್ಯ ಮಾಡಿದರೂ ಅವರಿಗೆ ಸರ್ಕಾರ ರಕ್ಷಣೆ ನೀಡುತ್ತದೆ. ನಮ್ಮ ಸದಸ್ಯರ ಕಾಲನ್ನೇ ಕತ್ತರಿಸಿ ಹಾಕಿದ್ದಾರೆ. ಕೆ.ಆರ್.ಪೇಟೆಯಲ್ಲಿ ಚಪ್ಪಲಿ ಹೊಡೆದರು," ಎಂದು ಬಿಜೆಪಿಯವರು ಹೇಳಿದರು.  25 ಸಾವಿರಕ್ಕೂ ಹೆಚ್ಚು ನಮ್ಮ ಕಾರ್ಯಕರ್ತರಿದ್ದರು. ಅಷ್ಟು ಜನ ಸೇರಿದ್ದು ಬಿಜೆಪಿಯವರಿಗೆ ಇಷ್ಟವಾಗಲಿಲ್ಲ. ನಮ್ಮ ಕಾರ್ಯಕರ್ತರನ್ನು ಕೆಟ್ಟದಾಗಿ ಬೈಯ್ದಿದ್ದಾರೆ. ಕೆ.ಆರ್.ಪೇಟೆ ನಮ್ಮ ಮನೆಯಿದ್ದಂತೆ. ನಾವು 12 ಕ್ಷೇತ್ರಗಳಲ್ಲೂ ಪ್ರಬಲ ಪೈಪೋಟಿ ಕೊಡುತ್ತೇವೆ. ಬಿಜೆಪಿ, ಕಾಂಗ್ರೆಸ್ ವಿರುದ್ಧ ನೇರ ಪೈಪೋಟಿ ಮಾಡುತ್ತೇವೆ. 12 ಕ್ಷೇತ್ರಗಳಲ್ಲಿ ಕಿಂಚಿತ್ತೂ ಹಿಂದೆ ಬೀಳದೇ ನೇರ ಹೋರಾಟ ಮಾಡ್ತೇವೆ. ಆರ್ಥಿಕ ಮುಗ್ಗಟ್ಟು ಇರಬಹುದು, ಆದರೆ ಹಿಂದೆ ಬೀಳಲ್ಲ. ಕೇಳೋದು, ಸಾಲ ಮಾಡೋದು ನಮಗೆ ಅಭ್ಯಾಸ ಆಗಿದೆ," ಎಂದು ಗೌಡರು ಗುಡುಗಿದರು.

 ಇದು ಲಂಚ ಯೋಜನೆಯಲ್ಲದೇ ಮತ್ತೇನು? ಚುನಾವಣಾ ಬಾಂಡ್​ಗಳ ಎಲ್ಲಾ ವಿವರ ಬಹಿರಂಗಗೊಳಿಸಿ: ಸಂಸತ್​ನಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ಗೋಪಾಲಯ್ಯ ವಿರುದ್ಧ ಕಿಡಿ"ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಹೇಗಿದ್ದರು..? ಅವರಿಗೆ ಏನೇನು ಮಾಡಿದ್ದೇವೆ? ಅವರ ಪತ್ನಿಯನ್ನು ಉಪ ಮೇಯರ್ ಮಾಡಿದ್ದೆವು. ನನ್ನ ಬಳಿ ಬಂದು ಡೆಪ್ಯೂಟಿ ಮೇಯರ್ ಮಾಡಬೇಕು ಅಂತ ಕೇಳಿಕೊಂಡಿದ್ದರು. ಕುಮಾರಸ್ವಾಮಿ ಜೊತೆ ಮಾತನಾಡಿ ನಿಮ್ಮ ಹೆಸರು ಕೈ ಬಿಡಲ್ಲ ಅಂತ ಹೇಳಿದ್ದೆ. ಜಾತಿ ಆಧಾರದ ಮೇಲೆ ಪಕ್ಷ ಕಟ್ಟೋದಾದರೆ ಈ ಪಕ್ಷಕ್ಕೆ ಜಾತ್ಯಾತೀತ ಜನತಾದಳ ಅಂತ ಹೆಸರಿಡುವ ಅಗತ್ಯ ಇರಲಿಲ್ಲ. ಮಹಾಲಕ್ಷ್ಮೀಲೇಔಟ್​​ನಲ್ಲಿ ಏನೇನ್ ನಡೀತಿದೆ ಅಂತ ಗುರುತಿಸಿಕೊಂಡೇ ಮಾತನಾಡುತ್ತೇನೆ. ಜೆಡಿಎಸ್ ಅಭ್ಯರ್ಥಿ ಓಡಿ ಹೋಗುವ ಪ್ರಶ್ನೆ ಇಲ್ಲ. ಈ ಕ್ಷೇತ್ರದ ಮುಖಂಡರ ಜೊತೆ ಸಭೆ ಕೂಡ ಮಾಡುತ್ತೇನೆ," ಎಂದು ಹೇಳಿದರು.

 

First published: November 21, 2019, 5:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading