ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೆಸರೆತ್ತಿದರೆ ಹೇಸಿಗೆಯಾಗುತ್ತೆ: ಕುಟುಕಿದ ಮಾಜಿ ಪ್ರಧಾನಿ ದೇವೇಗೌಡ

ನಾನು ಪ್ರಧಾನಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದ್ದು ಒಂದು ಕೆಟ್ಟ ಹೆಸರು ತೆಗೆದುಕೊಳ್ಳಲಿಲ್ಲ. ನಮ್ಮ ದೇಶ ರಾಜಕೀಯ ಅಧೋಗತಿಗೆ ಹೋಗಿದೆ. ನಾನು ಈಗ ಮಲಗುವುದಿಲ್ಲ. ಜೀವನದಲ್ಲಿ ನನ್ನು ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ.

G Hareeshkumar | news18-kannada
Updated:November 29, 2019, 5:12 PM IST
ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಹೆಸರೆತ್ತಿದರೆ ಹೇಸಿಗೆಯಾಗುತ್ತೆ: ಕುಟುಕಿದ ಮಾಜಿ ಪ್ರಧಾನಿ ದೇವೇಗೌಡ
ಹೆಚ್ ಡಿ ದೇವೇಗೌಡ
  • Share this:
ಮಂಡ್ಯ(ನ.29): ಬಿಜೆಪಿ ಅನರ್ಹ ಶಾಸಕ ನಾರಾಯಣಗೌಡರ ಹೆಸರು ಕೇಳಿದರೆ ಹೇಸಿಗೆಯಾಗುತ್ತದೆ. ಅವರ ಬಗ್ಗೆ ನಾನು ಮಾತನಾಡಲ್ಲ. ಆತ ಆಡುವುದು ನಾಗರಿಕ ವ್ಯಕ್ತಿ ಮಾತನಾಡುವ ಮಾತುಗಳಲ್ಲ. ನೀವು ದೇವರಾಜು ಅವರಿಗೆ ಕೊಡುವಂತಹ ಒಂದೊಂದು ಓಟು ಸಂಪೂರ್ಣವಾಗಿ ದೇವೇಗೌಡರಿಗೆ ಕೊಡುವಂತಹ ಮತಗಳಾಗಿವೆ. ಈ ಗೆಲುವು ದೇವೇಗೌಡರಿಗೆ ಇನ್ನೂ ಹತ್ತು ವರ್ಷ ರಾಜಕೀಯ ಮಾಡಲು ಶಕ್ತಿ ನೀಡಿದಂತೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.

ಕೆಆರ್​ ಪೇಟೆ ಜೆಡಿಎಸ್ ಅಭ್ಯರ್ಥಿ ಪರವಾಗಿ ಅನಗೋಳ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು, ದೇವರಾಜು ಅವರಿಗಾಗಿ ಮತ ಯಾಚಿಸಿದರು. ಹಾಗೂ ಹಿಂದೆ ಅವರಿಗೆ ಕೊಟ್ಟ ವಾಗ್ದಾನವನ್ನೂ ಸ್ಮರಿಸಿಕೊಂಡರು.

"ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಭಾಷಣ ಮಾಡುತ್ತಿದ್ದೆ. ಕೆಆರ್ ಪೇಟೆ ಕೃಷ್ಣ ನನಗೆ ಫೋನ್ ಮಾಡಿದರು. ಸಿದ್ದರಾಮಯ್ಯರನ್ನು ನಂಬಿದ್ದೆ, ಅವರು ಬರುತ್ತಾ ಇಲ್ಲ. ಚುನಾವಣೆಗೆ ಇನ್ನು 8 ದಿನ ಇದೆ. ನೀವು ಹೇಗಾದರೂ ಮಾಡಿ ಬನ್ನಿ ಅಂದ್ರು. ರಾತ್ರೋರಾತ್ರಿ ಸಿದ್ದಾಪುರದಿಂದ ಹೊರಟು ಬಂದು ಕೆಆರ್ ನಗರದಲ್ಲಿ ಹತ್ತೇ ಹತ್ತು ನಿಮಿಷ ಮಾತಾಡಿ ಕಿಕ್ಕೇರಿಗೆ ಬಂದೆ. ಹತ್ತು ಸಾವಿರಕ್ಕಿಂತ ಹೆಚ್ಚು ಜನರು ಸೇರಿದ್ದರು. ಆ ಸಭೆಯಲ್ಲಿ ದೇವರಾಜು ಸಹಕರಿಸುತ್ತಾ ಇರಲಿಲ್ಲ. ದೇವರಾಜು ಸಹಕಾರ ಇಲ್ಲದಿದ್ದರೆ ಕೃಷ್ಣ ಸೋಲುತ್ತಿದ್ದುದರಲ್ಲಿ ಯಾವ ಸಂಶಯ ಇರಲಿಲ್ಲ. ದೇವರಾಜು ಮುನಿಸಿಕೊಂಡು ಹೊರಗೆ ಇದ್ದರು. ನಾನು ದೇವರಾಜರನ್ನ ಕರೆದು ಮಾತಾಡಿದೆ. ಕೃಷ್ಣರನ್ನು ಪಾರ್ಲಿಮೆಂಟ್​ಗೆ ಕಳುಹಿಸುತ್ತೇನೆ. ನಿನ್ನನ್ನ ಅಸೆಂಬ್ಲಿಗೆ ನಿಲ್ಲಿಸ್ತೇನೆ ಎಂದು ಹೇಳಿ ಅವರಿಬ್ಬರ ಕೈಹಿಡಿದು ಮೇಲೆತ್ತಿ ಸಭೆಯಲ್ಲಿ ಘೋಷಣೆ ಮಾಡಿದೆ. ದೇವರಾಜು ಅವರ ಎಲ್ಲಾ ಸ್ನೇಹಿತರು ಮತ್ತು ಅಭಿಮಾನಿಗಳು ಈ ಬಾರಿ ಕೃಷ್ಣರನ್ನು ಗೆಲ್ಲಿಸಿ ಎಂದು ಮನವಿ ಮಾಡಿದೆ. ಆ ಸಭೆ ನಡೆದ ಸ್ಥಳದಲ್ಲಿ ಕೃಷ್ಣಗೆ 8 ಸಾವಿರ ಲೀಡ್ ಬಂದಿತ್ತು. ಕೃಷ್ಣ ವಿಧಾನಸಭೆಗೆ ಆಯ್ಕೆಯಾದರು. ನಾವು ಸ್ಪೀಕರ್ ಮಾಡಿದೆವು. ಮುಂದೆ ಕೃಷ್ಣರನ್ನು ಸಂಸತ್ತಿಗೆ ಕಳುಹಿಸಿದೆ. ಆದರೆ, ದೇವರಾಜುಗೆ ವಿಧಾನಸಭೆ ಟಿಕೆಟ್ ಕೊಡಲು ಸಾಧ್ಯವಾಗಿರಲಿಲ್ಲ ಎಂಬ ನೋವಿತ್ತು" ಎಂದು ದೇವೇಗೌಡರು ತಿಳಿಸಿದರು.

ನಾನು ಪ್ರಧಾನಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದ್ದು ಒಂದು ಕೆಟ್ಟ ಹೆಸರು ತೆಗೆದುಕೊಳ್ಳಲಿಲ್ಲ. ನಮ್ಮ ದೇಶ ರಾಜಕೀಯ ಅಧೋಗತಿಗೆ ಹೋಗಿದೆ. ನಾನು ಈಗ ಮಲಗುವುದಿಲ್ಲ. ಜೀವನದಲ್ಲಿ ನನ್ನು ಉಸಿರು ಇರುವವರೆಗೂ ಹೋರಾಟ ಮಾಡುತ್ತೇನೆ. ರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳು ಇಲ್ಲದಿದ್ದರೆ ಎರಡು ರಾಷ್ಟ್ರೀಯ ಪಕ್ಷಗಳನ್ನು ಹತೋಟಿಯಲ್ಲಿಡಲು ಆಗುವುದಿಲ್ಲ ಎಂದರು.

ಇದನ್ನೂ ಓದಿ : ಯಶವಂತಪುರದಲ್ಲಿ ಒಕ್ಕಲಿಗರೇ ಕಿಂಗ್ ಮೇಕರ್ಸ್; ಮೂರೂ ಪಕ್ಷಗಳಿಂದಲೂ ಮತಬೇಟೆಗೆ ಸರ್ಕಸ್

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ವಿಚಾರ ಬಂತು ಪಾರ್ಲಿಮೆಂಟ್ ನಲ್ಲಿ ವಿಚಾರಬಂತು. ಆ ವಿಚಾರವಾಗಿ ಎಂಟು ದಿನಗಳ ಉಪವಾಸ ಸತ್ಯಾಗ್ರಹ ಮಾಡಿದೆ. ನನ್ನ ಕೊನೆ ಉಸಿರು ಇರುವವರೆಗೂ ರೈತನ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಯವರು ಘೋಷಿಸಿದರು.

ದೇವರಾಜು ಇನ್ನೂ ಯುವಕರಿದ್ಧಾರೆ. ವಕೀಲರಿದ್ದಾರೆ. ಜೋರು ಭಾಷಣ ಮಾಡದಿದ್ದರೂ ಚೆನ್ನಾಗಿ ಕೆಲಸ ಮಾಡುತ್ತಾರೆ. ಅವರಿಗೆ ಒಂದು ಅವಕಾಶವಾದರೂ ಬೇಕು. ನೀವು ಅವರಿಗೆ ವೋಟು ಹಾಕಿ ಗೆಲ್ಲಿಸಿ ಎಂದು ಗೌಡರು ಕರೆಕೊಟ್ಟರು.
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading