ಯಡಿಯೂರಪ್ಪ ಮನೆ ಎದುರು ಹೆಚ್‌.ಡಿ. ದೇವೇಗೌಡ ಧರಣಿ; ಸಿಎಂಗೆ ಎಚ್ಚರಿಕೆ ಪತ್ರ ರವಾನಿಸಿದ ಮಾಜಿ ಪಿಎಂ

ಸಿಎಂಗೆ ದೂರವಾಣಿ ಕರೆ ಮಾಡಿ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಸ್ವತಃ ಸಿಎಂ ಯಡಿಯೂರಪ್ಪ ತಾವೇ ನಾರಾಯಣಗೌಡಗೆ ಬುದ್ದಿವಾದ ಹೇಳುವುದಾಗಿ ತಿಳಿಸಿದ್ದರು. ಆದರೂ, ಏನೂ ಪ್ರಯೋಜನ ಆಗಿಲ್ಲ ಎಂದು ದೇವೇಗೌಡ ಆರೋಪಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ- ಹೆಚ್​.ಡಿ. ದೇವೇಗೌಡ.

ಬಿ.ಎಸ್. ಯಡಿಯೂರಪ್ಪ- ಹೆಚ್​.ಡಿ. ದೇವೇಗೌಡ.

  • Share this:
ಬೆಂಗಳೂರು (ಜೂನ್‌ 25); ರಾಜ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರಿಗೆ ಬಿಜೆಪಿ ಸಚಿವರುಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಮನೆಯ ಎದುರು ಧರಣಿ ನಡೆಸಲು ಮುಂದಾಗಿದ್ದಾರೆ. ಜೂನ್‌.29 ರಂದು ಧರಣಿ ನಡೆಸಲಿರುವುದಾಗಿ ಸ್ವತಃ ಸಿಎಂ ಗೆ ಎಚ್ಚರಿಕೆ ಪತ್ರ ರವಾನಿಸಿದ್ದಾರೆ.

ಸಿಎಂ ಗೆ ಪತ್ರ ಬರೆದಿರುವ ದೇವೇಗೌಡ, "ಸಚಿವ ಕೆ.ಸಿ. ನಾರಾಯಣಗೌಡ ಚುನಾವಣಾ ವೈಷಮ್ಯದ ಹಿನ್ನೆಲೆ ಕೆ.ಆರ್ ಪೇಟೆಯ ಜೆಡಿಎಸ್ ಕಾರ್ಯಕರ್ತ ಹೆಚ್.ಟಿ. ಮಂಜು ಎಂಬುವವರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಹೊರಡಿಸಿರುವ ಪತ್ರಿಕಾ ಪ್ರಕಟಣೆ.


ಹೆಚ್.ಟಿ ಮಂಜುಗೆ ಸೇರಿದ ಸ್ಟೋನ್ ಕ್ರಷರ್, ಕ್ವಾರಿ ಮೈನಿಂಗ್ ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಇಲ್ಲಿ ಕ್ವಾರಿ ಮೈನಿಂಗ್ ನಡೆಸಲು ಎಲ್ಲಾ ಇಲಾಖೆಗಳ ಅನುಮತಿ ಇದ್ದರೂ ಕಿರುಕುಳ ನೀಡಲಾಗುತ್ತಿದೆ. ಈ ಕುರಿತು ದೂರು ನೀಡಲು ಮಂಡ್ಯ ಜಿಲ್ಲಾಧಿಕಾರಿಗೆ ಕರೆ ಮಾಡಿದರೂ ಸಹ ಅವರು ಸ್ವೀಕರಿಸಿಲ್ಲ. ಅಲ್ಲದೆ, ಡಿಸಿ ಸಹ ಉದ್ದಟತನದ ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ : CoronaVirus:ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ; ನ್ಯೂಸ್‌18 ವರದಿಗೆ ಸ್ಪಂದಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಪಾಲಿಕೆ

ಸಿಎಂಗೆ ದೂರವಾಣಿ ಕರೆ ಮಾಡಿ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಸ್ವತಃ ಸಿಎಂ ಯಡಿಯೂರಪ್ಪ ತಾವೇ ನಾರಾಯಣಗೌಡಗೆ ಬುದ್ದಿವಾದ ಹೇಳುವುದಾಗಿ ತಿಳಿಸಿದ್ದರು. ಆದರೂ, ಏನೂ ಪ್ರಯೋಜನ ಆಗಿಲ್ಲ. ಕಿರುಕುಳ ನಿರಂತರವಾಗಿ ನಡೆಯುತ್ತಲೇ ಇದೆ. ಹಾಗಾಗಿ ಜೂನ್ 29 ನೇ ತಾರೀಖು ಸೋಮವಾರ ಗೃಹ ಕಚೇರಿ ಕೃಷ್ಣಾ ಎದುರು ತಾವು ಜೆಡಿಎಸ್ ಶಾಸಕರು ಮತ್ತು ಮುಖಂಡರ ಜೊತೆ ಧರಣಿ ನಡೆಸಲಿದ್ದೇವೆ" ಎಂದು ಹೆಚ್‌.ಡಿ. ದೇವೇಗೌಡ ತಿಳಿಸಿದ್ದಾರೆ.
First published: