ಸಿದ್ದರಾಮಯ್ಯ ನಮ್ಮೊಂದಿಗೆ ಇದ್ದಾಗ ಜೆಡಿಎಸ್​​ಗೆ ಸೆಕ್ಯೂಲರಿಸಂ ಇತ್ತು, ಈಗಿಲ್ಲವೇ?: ಮಾಜಿ ಸಿಎಂಗೆ ದೇವೇಗೌಡರ ಪ್ರಶ್ನೆ

ಇನ್ನೂ ಮೂರುವರೆ ವರ್ಷ ಜೆಡಿಎಸ್​ಗೆ ಪಕ್ಷ ಕಟ್ಟೋದಷ್ಟೇ ನನ್ನ ಕೆಲಸ. ಬೈ ಎಲೆಕ್ಷನ್​ಗೆ ಅಭ್ಯರ್ಥಿ ಹಾಕುವ ಬಗ್ಗೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಜೊತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಎಚ್​ಡಿಡಿ ತಿಳಿಸಿದ್ರು.

news18-kannada
Updated:November 13, 2019, 5:50 PM IST
ಸಿದ್ದರಾಮಯ್ಯ ನಮ್ಮೊಂದಿಗೆ ಇದ್ದಾಗ ಜೆಡಿಎಸ್​​ಗೆ ಸೆಕ್ಯೂಲರಿಸಂ ಇತ್ತು, ಈಗಿಲ್ಲವೇ?: ಮಾಜಿ ಸಿಎಂಗೆ ದೇವೇಗೌಡರ ಪ್ರಶ್ನೆ
ದೇವೇಗೌಡ- ಸಿದ್ದರಾಮಯ್ಯ
  • Share this:
ಬೆಂಗಳೂರು(ನ.13): ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಡುವೇ ಮತ್ತೆ ಶೀತಲ ಸಮರ ಶುರುವಾಗಿದೆ. ಕರ್ನಾಟಕ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೆಕ್ಯುಲರಿಸಂ ಎಲ್ಲಿದೆ? ಎಂದು ಕೇಳಿದ್ದ ಸಿದ್ದರಾಮಯ್ಯಗೆ ದೇವೇಗೌಡರು ತಪರಾಕಿ ಬಾರಿಸಿದ್ದಾರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಪ್ರಧಾನಿ ದೇವೇಗೌಡರು, ಜೆಡಿಎಸ್​​ಗೆ ಸೆಕ್ಯುಲರಿಸಂ ಎಲ್ಲಿದೆ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ನಾವು ನಮ್ಮ ಸೆಕ್ಯೂಲರಿಸಂ ಅನ್ನು ಕಾಂಗ್ರೆಸ್​​ ಮಾಜಿ ಅಧ್ಯಕ್ಷ ರಾಹುಲ್​​ ಗಾಂಧಿಗೆ ವರ್ಗಾಯಿಸಿದ್ದೇವೆ. ರಾಹುಲ್​​ ಗಾಂಧಿ ಬಳಿ ನಮ್ಮ ಸೆಕ್ಯೂಲರಿಸಂ ವಾಪಸ್​​ ಪಡೆಯುವ ಕಾಲ ಬರುತ್ತದೆ. ನನ್ನೊಂದಿಗೆ​ ರಾಜಕೀಯ ಮಾಡುವಾಗ ಸಿದ್ದರಾಮಗೆ ಸೆಕ್ಯುಲರಿಸಂ ಗೊತ್ತಿರಲಿಲ್ಲವೇ? ಸಿದ್ದರಾಮಯ್ಯ ಯಾರು? ಇವರು ಎಲ್ಲಿಂದ ಬದರು? ಎಂಬುದು ಸದ್ಯದಲ್ಲೇ ಹೇಳುತ್ತೇನೆ ಎಂದು ಕಿರಿಕಾರಿದರು.

ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂಕೋರ್ಟ್​​ ನೀಡಿದ ತೀರ್ಪನ್ನು ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡ ಸ್ವಾಗತಿಸಿದ್ದಾರೆ. ಈ ತೀರ್ಪಿನಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆ ಆಗೋದಿಲ್ಲ. ಮೂರುವರೆ ವರ್ಷ ಬಿಎಸ್​ವೈ ಸಿಎಂ ಆಗಿಯೇ ಇರ್ತಾರೆ. ಇನ್ನೂ ಯಡಿಯೂರಪ್ಪರೇ ಸಿಎಂ, ಸಿದ್ದರಾಮಯ್ಯ ವಿಪಕ್ಷ ನಾಯಕ ಆಗಿರುತ್ತಾರೆ ಎಂದು ಹೇಳಿದ್ಧಾರೆ.

ಇದನ್ನೂ ಓದಿ: ನಾನು ಮೂರು ಮದುವೆ ಆದ್ದರಿಂದಲೇ ನೀವು​​ ಜೈಲಿಗೆ ಹೋಗಿದ್ರಾ?: ಸಿಎಂ ಜಗನ್​​ಗೆ ನಟ ಪವನ್​​ ಕಲ್ಯಾಣ್​​ ಪ್ರಶ್ನೆ

ಸುಪ್ರೀಂಕೋರ್ಟ್​ ತೀರ್ಪಿನಿಂದ ಯಾವುದೇ ಬದಲಾವಣೆ ಆಗೋದಿಲ್ಲ. ಕಾಂಗ್ರೆಸ್ ​ಹಾಗೂ ಬಿಜೆಪಿ 17ಕ್ಕೆ 17 ಕ್ಷೇತ್ರ ಗೆದ್ದರು ಎಲ್ಲರೂ ಒಂದೇ ಕಡೆ ಇರಬೇಕು. ಇನ್ನೂ ಮೂರುವರೆ ವರ್ಷ ಜೆಡಿಎಸ್​ಗೆ ಪಕ್ಷ ಕಟ್ಟೋದಷ್ಟೇ ನನ್ನ ಕೆಲಸ. ಬೈ ಎಲೆಕ್ಷನ್​ಗೆ ಅಭ್ಯರ್ಥಿ ಹಾಕುವ ಬಗ್ಗೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಜೊತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ತಿಳಿಸಿದರು.

ಇದನ್ನೂ ಓದಿ: ಹೊಸಕೋಟೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಳೆ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ

ಇನ್ನೊಂದೆಡೆ ಮಾಜಿ ಸಿಎಂ ಹೆಚ್​ಡಿಕೆ ಸುಪ್ರೀಂ ತೀರ್ಪಿನ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ಅನುಕೂಲಕ್ಕೆ ತಕ್ಕಂತೆ ತೀರ್ಮಾನಿಸುವುದಾರೆ ಪಕ್ಷಾಂತರ ನಿಷೇಧ ಕಾಯ್ದೆ ಯಾಕೆ? ಎಂದು ಪ್ರಶ್ನಿಸಿದರು. ನಮ್ಮ ಪಕ್ಷ ಸಂಘಟನೆ ಬಗ್ಗೆ ನನ್ನ ಗಮನವಿದೆ. ಪ್ರಾದೇಶಿಕ ಪಕ್ಷದ ಮೇಲೆ ಗೂಬೆ ಕೂರಿಸಲು ರಾಷ್ಟ್ರೀಯ ಪಕ್ಷಗಳು ಯತ್ನಿಸುತ್ತಿವೆ. ಪ್ರಾದೇಶಿಕ ಪಕ್ಷಗಳ ಜತೆ ಆಟವಾಡಬೇಡಿ. ಯಾರೊಂದಿಗೂ ರಾಜಿಯಾಗಬೇಕಾಗಿಲ್ಲ. ನಾನೇಕೆ ಬಿಜೆಪಿ ಜೊತೆ ಕೈಜೋಡಿಸಬೇಕು? ಎಂದು ಹೇಳಿದರು.-------
First published: November 13, 2019, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading