ಕಳೆದ 11 ದಿನಗಳಿಂದ ಹೊಸ ಪಿಂಚಣಿ ನೀತಿ (National Pension System) ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ (Freedom Park, Bengaluru) ನೌಕರರ ಸಂಘ ಪ್ರತಿಭಟನೆ ನಡೆಸುತ್ತಿದೆ. ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನ ಹೆಚ್.ಡಿ.ದೇವೇಗೌಡರು (Former PM HD Devegowda), ಎನ್ಪಿಎಸ್ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಹೆಚ್.ಡಿ.ದೇವೇಗೌಡರು, ನನಗೆ 90 ತುಂಬಿ 91 ವರ್ಷಕ್ಕೆ ಕಾಲಿಟಿದ್ದೇನೆ. 2018ರಲ್ಲಿ ನಾನು ರಾಜಕೀಯದಿಂದ ನಿವೃತ್ತಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ. ಇದಕ್ಕೆ ಕಾರಣ 2004ರಲ್ಲಿ ಮಾಜಿ ಪ್ರಧಾನಿ ಮಂತ್ರಿಯಾಗಿ ಒಂದು ಗಂಟೆ 15 ನಿಮಿಷ ಮಾತಾಡದೇ ಅಂದು ಕಾಂಗ್ರೆಸ್ಗೆ ನಾನೇ ಬೆಂಬಲ ಕೊಟ್ಟಿದ್ದೆ. ಆದರೆ ಕಾಂಗ್ರೆಸ್ ಅವರು ನನಗೆ ಕಂಡಿಷನ್ ಹಾಕಿದ್ದರು. ರಾಜಕಾರಣ ಇಷ್ಟೊಂದು ಹದಗೆಟ್ಟಿದೆ ನಾನು ಪಾರ್ಲಿಮೆಂಟ್ನಲ್ಲಿ (Parliament) ಇರೋದಿಲ್ಲ ಅಂತ ನಿರ್ಧಾರ ಮಾಡಿದೆ. ಹೀಗಾಗಿ ನಾನು NPS ಹೋರಾಟಕ್ಕೆ ಬಂದಿರೋದು ಯಾವುದೇ ಸ್ವಾರ್ಥದಿಂದ ಅಲ್ಲ ಎಂದು ಹೇಳಿದರು.
ನಿಮಗೆ ಆಗಿರೋ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ನಿಮ್ಮ ಜೊತೆಗೆ ನಾನೂ ಕೊನೆಯವರೆಗೆ ಹೋರಾಟ ಮಾಡುತ್ತೇನೆ. ಈ ಮಾತನ್ನು ನಿಮ್ಮನ್ನು ಮೆಚ್ಚಿಸೋಕೆ ಹೇಳುತ್ತಿಲ್ಲ. ನಾನು ಯಾವುದೇ ಶಕ್ತಿಗೂ ಜಗ್ಗೋದಿಲ್ಲ ಎಂದು ಗುಡುಗಿದರು.
ಪಿಂಚಣಿ ಇಲ್ಲದೇ ಜೀವನ ಮಾಡೋದು ಕಷ್ಟ
ಮನುಷ್ಯ ಹುಟ್ಟಿದ ಅಂದ್ರೆ ಒಂದು ದಿನ ಸಾಯಲೇಬೇಕು. ಹೀಗಾಗಿ ಒಂದು ಮಾತು ಕೊಟ್ಡಿದ್ದೇನೆ ಅಂದ್ರೆ ಈ ವಿಚಾರ ನಾನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತೇನೆ. ಪಿಂಚಣಿ ಇಲ್ಲದೆ ಜೀವನ ಮಾಡೋದು ಎಷ್ಟು ಕಷ್ಟ ಇದೆ ಅಂತ ನನಗೆ ಗೊತ್ತಿದೆ. ಈ ಹೋರಾಟದಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಂಡು OPS ಅನುಷ್ಠಾನ ಆಗೋವರೆಗೂ ನಿಮ್ಮ ಜೊತೆ ಹೋರಾಟ ಮಾಡ್ತೇನೆ ಎಂದು ಭರವಸೆ ನೀಡಿದರು.
‘ಪಂಚಮಸಾಲಿ’ಗೆ ಮೀಸಲಾತಿ?
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ (Panchamasali Reservation) ನೀಡುವ ವಿಚಾರಕ್ಕೆ ಇವತ್ತು ಮಹತ್ವದ ದಿನ. ಮೀಸಲಾತಿ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಮುದಾಯ ನೀಡಿರುವ ಡೆಡ್ಲೈನ್ ಇಂದು ಮುಕ್ತಾಯಗೊಳ್ಳುತ್ತಿದೆ. ಆದ್ದರಿಂದ ಸಿಎಂ ಬೊಮ್ಮಾಯಿ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಮೀಸಲಾತಿ ಬಗ್ಗೆ ಸಿಎಂ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಎಸ್.ಎಸ್.ಮಲ್ಲಿಕಾರ್ಜುನ್ ಬಂಧನಕ್ಕೆ ಪಟ್ಟು
ಮಾಜಿ ಸಚಿವ S.S ಮಲ್ಲಿಕಾರ್ಜುನ್ (Former Minister SS Mallikarjun), ವನ್ಯಪ್ರಾಣಿಗಳನ್ನ ಅಕ್ರಮವಾಗಿಟ್ಟ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಿದೆ. ದಾವಣಗೆರೆಯ ದುಗ್ಗಮ್ಮ ದೇವಸ್ಥಾನದಲ್ಲಿ ಪೂಜೆ ನೇರವೇರಿಸಿ ಬೈಕ್ ಜಾಥಾ ಮೂಲಕ ಅರಣ್ಯ ಇಲಾಖೆ ಕಚೇರಿಗೆ ಬಂದ ಬಿಜೆಪಿ ಕಾರ್ಯಕರ್ತರು, ಕಚೇರಿಗೆ ಮುತ್ತಿಗೆ ಹಾಕಿದರು. ಜಿಂಕೆ ಕೊಂದ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನ ಬಂಧಿಸಬೇಕೆಂದು ಒತ್ತಾಯಿಸಿದರು.
ಹೊಸ ವರ್ಷಕ್ಕೆ ಖಾಕಿ ಕಣ್ಗಾವಲು
ಹೊಸ ವರ್ಷ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕಠಿಣ ಕ್ರಮಗಳನ್ನ ಕೈಗೊಂಡಿದ್ದಾರೆ. ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ನಲ್ಲಿ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
2 ವರ್ಷದಿಂದ 250 ರಿಂದ 300 ಸಿಸಿಟಿವಿ ಅಳವಡಿಸ್ತಿದ್ದ ಪೊಲೀಸರು ಈ ಬಾರಿ ಹೆಚ್ಚಿನ ಜನ ಸೇರುವ ಹಿನ್ನೆಲೆಯಲ್ಲಿ 800ಕ್ಕೂ ಅಧಿಕ ಸಿಸಿಟಿವಿ ಫಿಕ್ಸ್ ಮಾಡಿದ್ದಾರೆ.
ಇದನ್ನೂ ಓದಿ: Pancharatna Yatre: ಇದು ಅಭಿವೃದ್ಧಿ ಯಾತ್ರೆ ಅಲ್ಲ, ಪಂಚ ಜನರ ಪಂಚರ್ ಯಾತ್ರೆ; ಬಿಜೆಪಿ ವ್ಯಂಗ್ಯ
ಹೆಜ್ಜೆ ಹೆಜ್ಜೆಗೂ ಸಿಸಿಟಿವಿ
ನ್ಯೂ ಇಯರ್ ಸೆಲಬ್ರೇಷನ್ಗೆಂದೇ ಹೈಟೆಕ್ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿಯೊಬ್ಬರ ಚಲನವಲನವೂ ಎಲ್ಇಡಿ ಸ್ಕ್ರೀನ್ಗಳಲ್ಲಿ ಡಿಸ್ಪ್ಲೇ ಆಗುತ್ತೆ. ಹೆಜ್ಜೆ ಹೆಜ್ಜೆಗೂ ಸಿಸಿಟಿವಿ ನಿಗಾ, ಹೈಟೆಕ್ ಡ್ರೋಣ್ ಹಾರಾಟ ಇರಲಿದೆ.
ರಾತ್ರಿ 9 ಗಂಟೆ ಬಳಿಕ ನೈಸ್ ರೋಡ್ ಮೇಲೆ ಕಣ್ಣಿಡಲಾಗುತ್ತೆ. ಎಲ್ಲಾ ಫ್ಲೈ ಓವರ್ ಬಂದ್ ಮಾಡಾಗುತ್ತೆ. ಈ ನಡುವೆ ಮಧ್ಯರಾತ್ರಿ 2 ಗಂಟೆ ತನಕ ಮೆಟ್ರೋ ರೈಲು ಓಡಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ