ಕುದುರೆ ವ್ಯಾಪಾರ ಮಾಡಿದ್ದೇ ಸಿಎಂ ಯಡಿಯೂರಪ್ಪನವರ ದೊಡ್ಡ ಸಾಧನೆ ; ಹೆಚ್​.ಡಿ. ದೇವೇಗೌಡ ಲೇವಡಿ

ನಾನು ಲೋಕಸಭಾ ಸದಸ್ಯನೂ ಅಲ್ಲ, ಪ್ರಧಾನಮಂತ್ರಿ ಯೂ ಅಲ್ಲ. ಬೆಳಗಾವಿ ಮೇಲೆ ನನಗೆ ವಿಶೇಷ ಗೌರವ ಇದೆ. ನಾನು ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಿಂದ ಜನತಾದಳಕ್ಕೆ 14 ಸ್ಥಾನ ಕೊಟ್ಟಿತ್ತು. ಈ ಭಾಗಕ್ಕೂ ನನಗೂ‌ ಬಹಳ ಸಂಬಂಧ ಇದೆ.

news18-kannada
Updated:December 2, 2019, 3:11 PM IST
ಕುದುರೆ ವ್ಯಾಪಾರ ಮಾಡಿದ್ದೇ ಸಿಎಂ ಯಡಿಯೂರಪ್ಪನವರ ದೊಡ್ಡ ಸಾಧನೆ ; ಹೆಚ್​.ಡಿ. ದೇವೇಗೌಡ ಲೇವಡಿ
ಹೆಚ್​.ಡಿ.ದೇವೇಗೌಡ
  • Share this:
ಬೆಳಗಾವಿ(ಡಿ.02): ಕುದುರೆ ವ್ಯಾಪಾರ ಮಾಡಿದ್ದೇ ಸಿಎಂ ಯಡಿಯೂರಪ್ಪನವರ ಮಹತ್ತರ ಸಾಧನೆ. ಮಾಜಿ ಶಾಸಕರುಗಳೇ ಮುಂದಿನ ಮಂತ್ರಿಗಳೇ ಅಂತಾ ಭಾಷಣ ಮಾಡ್ತಿದಾರೆ. 105 ಜನ ಮೊದಲು ಗೆದ್ದಿದ್ದ ಪೈಕಿ 18 ಜನರನ್ನು ಮಂತ್ರಿ ಮಾಡಿಕೊಂಡಿದಾರೆ. ಅವರಲ್ಲೇ 80 ಜನ ಕೂತಿದ್ದಾರೆ, ಅವರನ್ನು ಬಿಟ್ಟು ಈ 15 ಜನರಿಗೆ ಮಂತ್ರಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಲೇವಡಿ ಮಾಡಿದ್ದಾರೆ.

ಗೋಕಾಕ್​​ನಲ್ಲಿ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಗೆಲ್ಲದೇ ಇದ್ದ ಲಕ್ಷ್ಮಣ್ ಸವದಿಯವರನ್ನು ಡಿಸಿಎಂ ಮಾಡಿದ್ರು, ಅವರಿಗೆ ಟಿಕೆಟ್ ಕೊಡಲಿಲ್ಲ ಅವರನ್ನೂ ಮಂತ್ರಿ ಮಾಡ್ತೇವೆ. ಸವದಿಯವರನ್ನು ಎಂಎಲ್ ಸಿ ಮಾಡಿ ಡಿಸಿಎಂ ಇರುತ್ತಾರೆ ಅಂತಾರೆ. ಜನರು ಪ್ರಬುದ್ಧತೆಯಿಂದ ಇದ್ದಾರೆ, ಇದನ್ನೆಲ್ಲ ಜನರು ನಂಬುತ್ತಾರಾ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಶ್ನೆ ಮಾಡಿದರು.

ಬಿಜೆಪಿ ಅಧಿಕಾರದಿಂದ ದೂರ ಇಡಲು ಎಲ್ಲಾ ಆಯ್ಕೆಗಳು ಓಪನ್ ಇವೆ ಎಂಬ ಕೆ.ಸಿ.ವೇಣುಗೋಪಾಲ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ್ದ ಅವರು, ನಾನು ವೇಣುಗೋಪಾಲರವರ ಬಗ್ಗೆ ಲಘುವಾಗಿ ಮಾತನಾಡಲ್ಲ. ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿದ್ದಾರೆ. ಮೈತ್ರಿ ಸರ್ಕಾರ ಹೇಗೆ ಹೋಯ್ತು ಅಂತಾ ಗೊತ್ತಿದೆ. ಮಹಾರಾಷ್ಟ್ರದಲ್ಲಿ ನಡೆದ ಘಟನೆ ಬೇರೆ ಅದರಲ್ಲಿ ನನ್ನ ಪಕ್ಷ ಇಲ್ಲ. ನಾನು ಎರಡು ಪಕ್ಷಗಳ ವಿರುದ್ಧ ಹೋರಾಟ ಮಾಡ್ತಿದ್ದೇನೆ. ಮೈತ್ರಿ ಪಕ್ಷ ವ್ಯಾಪ್ತಿಯಿಂದ ಹೊರಗೆ ಇದ್ದು ಹೋರಾಟ ಮಾಡಬೇಕೆಂದಿದ್ದೇನೆ ಎಂದರು.

ಇದನ್ನೂ ಓದಿ : ಡಿ. 9ರ ನಂತರ ಇಡೀ ರಾಷ್ಟ್ರಕ್ಕೆ ಶುಭಸುದ್ದಿ: ಜೆಡಿಎಸ್ ಜೊತೆಗೆ ಮರುಮೈತ್ರಿಯ ಸುಳಿವು ಕೊಟ್ಟ ಕೆಸಿ ವೇಣುಗೋಪಾಲ್

ಕಳೆದ ಬಾರಿ ಕಾಂಗ್ರೆಸ್ ನಾಯಕರು ನಮ್ಮ ಮನೆಗೆ ಬಂದ್ರು. ಕುಮಾರಸ್ವಾಮಿಯನ್ನೇ ಸಿಎಂ ಮಾಡಿ ಅಂತಾ ಹೇಳಿದರು. 2004ರಲ್ಲಿ ಖರ್ಗೆರನ್ನು ಸಿಎಂ ಮಾಡಬೇಕಿತ್ತು ನಾನು ಪ್ರಪೋಸಲ್ ಮಾಡ್ತೀನಿ ಮಾಡಿ ಎಂದೆ. ಅವರು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡ್ತಿದಾರೆ ಅಂದ್ರು. ಆಗ ಪರಮೇಶ್ವರ ಅಥವಾ ಮುನಿಯಪ್ಪರನ್ನು ಮಾಡಿ ಎಂದಿದ್ದೆ. ನನ್ನ ಮಾತಿಗೆ ಮಲ್ಲಿಕಾರ್ಜುನ ಖರ್ಗೆರವರು ಒಪ್ಪಿಕೊಂಡಿದ್ರು. ಆದರೆ ಆ ವೇಳೆ ಕುಮಾರಸ್ವಾಮಿಯೇ ಸಿಎಂ ಆಗಬೇಕು ಅಂತಾ ಹೈಕಮಾಂಡ್ ಹೇಳಿದೆ ಅಂತಾ  ಇದೇ ಸಂದರ್ಭದಲ್ಲಿ ದೇವೇಗೌಡರು ತಿಳಿಸಿದರು.

ಬೆಳಗಾವಿ ಮೇಲೆ ನನಗೆ ವಿಶೇಷ ಗೌರವ

ನಾನು ಲೋಕಸಭಾ ಸದಸ್ಯನೂ ಅಲ್ಲ, ಪ್ರಧಾನಮಂತ್ರಿ ಯೂ ಅಲ್ಲ. ಬೆಳಗಾವಿ ಮೇಲೆ ನನಗೆ ವಿಶೇಷ ಗೌರವ ಇದೆ. ನಾನು ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಿಂದ ಜನತಾದಳಕ್ಕೆ 14 ಸ್ಥಾನ ಕೊಟ್ಟಿತ್ತು. ಈ ಭಾಗಕ್ಕೂ ನನಗೂ‌ ಬಹಳ ಸಂಬಂಧ ಇದೆ. ಎಂಟು ಶುಗರ್ ಫ್ಯಾಕ್ಟರಿಗಳನ್ನು ಇಲ್ಲಿಗೆ ಕೊಟ್ಟಿದ್ದೇನೆ. ಮಾರ್ಕಂಡೇಯ ನೀರಾವರಿ ಯೋಜನೆ ಈ ಜಿಲ್ಲೆಗೆ ಕೊಟ್ಟಿದ್ದೇನೆ. ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಶುಗರ್ ಫ್ಯಾಕ್ಟರಿ ಅನುಮತಿಗೆ ನಿಯಂತ್ರಣ ಇತ್ತು. ನಾನು ರೈತರ ಪರವಾಗಿ ಹೋರಾಟ ಮಾಡಿದ್ದೇನೆ ಎಂದರು.

 
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ