ಹೌದು.. ನಿಖಿಲ್ ಸೋತ ಬಳಿಕ ನಾನಾಗಲಿ, ಕುಮಾರಸ್ವಾಮಿ ಆಗಲಿ ಮಂಡ್ಯಕ್ಕೆ ಬಂದಿಲ್ಲ: ದೇವೇಗೌಡ್ರು

ನಾನು ದೆಹಲಿಗೆ ಹೋದಾಗ ನನಗ್ಯಾರು ಒಂದು ಗ್ಲಾಸ್ ಕಾಫಿ ಕೊಡಲಿಲ್ಲ. ನಾನು ಹೋದ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದವರಿಂದಾಗಿ ನಮ್ಮ ಪಕ್ಷ 16 ರಿಂದ ಕೇವಲ 2 ಸ್ಥಾನಕ್ಕೆ ಕುಸಿಯಿತು ಎಂದು ಇತಿಹಾಸವನ್ನು ದೇವೇಗೌಡರು ನೆನೆದರು.

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ

  • Share this:
ಮಂಡ್ಯ: ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು (H. D. Deve Gowda) ಸಕ್ಕರೆ ನಾಡಲ್ಲಿ ಇಂದು ಭರ್ಜರಿ ಪ್ರಚಾರ (MLC Election Campaign) ನಡೆಸಿದರು. ಶ್ರೀರಂಗಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ  ಲೋಕಸಭೆ ಚುನಾವಣೆಯ ನಂತರ ಎಲ್ಲರೂ ಒಟ್ಟಿಗೆ ಸೇರಿ ಪತ್ರಿಕಾಗೋಷ್ಠಿ ನಡೆಯುತ್ತಿದೆ. ಕಳೆದ ಬಾರಿ ಸ್ಪರ್ಧೆ ಮಾಡಿ ಗೆದ್ದಿರುವವರನ್ನೇ ಒಮ್ಮತದಿಂದ ಆಯ್ಕೆ ಮಾಡಿದ್ದೀವಿ. ಶಾಸಕರೆಲ್ಲರೂ ಸೇರಿ ಒಟ್ಟಿಗೆ ಆಯ್ಕೆ ಮಾಡಿರೋದ್ರಿಂದ ಶಾಸಕರಲ್ಲಿ ಯಾವುದೇ ಒಡಕ್ಕಿಲ್ಲ ಎನ್ನುವ ಮೂಲಕ ಜಿಲ್ಲೆಯ ಜೆಡಿಎಸ್​ ನಾಯಕರ ಜೊತೆಯಾಗಿ ಒಗ್ಗಟ್ಟು ಪ್ರದರ್ಶಿಸಿದರು. ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಮೂರ್ನಾಲ್ಕು ಬಾರಿ ಇಲ್ಲಿಗೆ ಬಂದಿದ್ದಾರೆ. ನಾನಾಗಲಿ, ಕುಮಾರಸ್ವಾಮಿಯಾಗಲಿ ಜಿಲ್ಲೆಗೆ ಬಂದಿಲ್ಲ ಎಂದರು.

ನಾನು ಜಿಲ್ಲೆಗೆ ಬಂದಿರಲಿಲ್ಲ

ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಿಗೆ ಚುನಾವಣೆ ಮಾಡ್ತಿರೋದ್ರಿಂದ ನಾನು ಜಿಲ್ಲೆಗೆ ಬಂದಿರಲಿಲ್ಲ. ಅಭ್ಯರ್ಥಿ ಹಾಗೂ ಅವರ ಮನೆಯವರು ಎಲ್ಲಾ ಮತದಾರರನ್ನ ಭೇಟಿ ಮಾಡಿದ್ದಾರೆ ಮಾತಾಡಿದ್ದಾರೆ. ಉಳಿದಂತೆ ಆಯಾ ತಾಲೂಕಿನಲ್ಲಿ ಶಾಸಕರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಗೆದ್ದಿರುವವರಿಗೆ ಶಕ್ತಿ ಕೊಟ್ಟಿದ್ದೇ ನಾನು. 1995 ರಲ್ಲಿ ಮಹಿಳೆಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಕಲ್ಪಿಸಿದ್ದೆ. ಇದರ ಪರಿಣಾಮವಾಗಿ 16 ಲೋಕಸಭೆ ಸ್ಥಾನಗಳನ್ನ ಗೆದ್ದಿದ್ದೆವು ಎಂದರು.

ಇದನ್ನೂ ಓದಿ: Karnataka Politics: ಟಕ್ಕರ್ ಕೊಡುತ್ತಿದ್ದ ಜಿ.ಟಿ.ದೇವೇಗೌಡರಿಗೆ ಶಾಕ್ ನೀಡಿದ HDK

ನನಗ್ಯಾರು ಒಂದು ಗ್ಲಾಸ್ ಕಾಫಿ ಕೊಡಲಿಲ್ಲ

ನಾನೊಬ್ಬ ಸಾಮಾನ್ಯ ಹಳ್ಳಿಯ ರೈತನ ಮಗ, ನಾನೆಂದು ಪ್ರಧಾನ ಮಂತ್ರಿ ಆಗ್ತಿನಿ ಅಂದುಕೊಂಡಿರಲಿಲ್ಲ. ಬಿಜೆಪಿಯ ವಾಜಪೇಯಿ ನೇತೃತ್ವದ ಸರ್ಕಾರ ಬಿದ್ದು ಹೋದ ನಂತರ ಕಾಂಗ್ರೆಸ್ಸೆತರ, ಬಿಜೆಪಿಯೇತರ ಸರ್ಕಾರ ರಚನೆಗಾಗಿ ದೆಹಲಿಗೆ ಕರೆಸಿಕೊಂಡರು. ಅಂದು ಒತ್ತಾಯ ಮಾಡಿ ನನ್ನ ಆ ಸ್ಥಾನದಲ್ಲಿ ಕೂರಿಸಿದ ನಂತರ ನಾನೇನು ಕೆಲಸ ಮಾಡಿದ್ದೆ ಎಂದು ಹೇಳಲು ಹೋಗಲ್ಲ. ಹಳ್ಳಿಯ ರೈತನ ಮಗ ಪ್ರಧಾನಿಯಾಗಿ ಮಾಡಿರುವ ಕೆಲಸದ ಬಗೆಗೆ ಪುಸ್ತಕ ಬಿಡುಗಡೆಗೆ ಸಿದ್ದವಾಗ್ತಿದೆ. ನಾನು ದೆಹಲಿಗೆ ಹೋದಾಗ ನನಗ್ಯಾರು ಒಂದು ಗ್ಲಾಸ್ ಕಾಫಿ ಕೊಡಲಿಲ್ಲ. ನಾನು ಹೋದ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದವರಿಂದಾಗಿ ನಮ್ಮ ಪಕ್ಷ 16 ರಿಂದ ಕೇವಲ 2 ಸ್ಥಾನಕ್ಕೆ ಕುಸಿದವು ಎಂದು ಇತಿಹಾಸವನ್ನು ದೇವೇಗೌಡರು ನೆನೆದರು.

ಹಾಸನ ಬಿಟ್ಟರೆ, ಮಂಡ್ಯನೇ ನನಗೆ ಬಲ ಕೊಟ್ಟಿದ್ದು

ನನ್ನ ರಾಜಕೀಯ ಜೀವನದಲ್ಲಿ ರಾಜಕೀಯವಾಗಿ ಶಕ್ತಿ ತುಂಬಿದ್ದು ಹಾಸನ ಹೊರತು ಪಡಿಸಿದ್ರೆ, ಅದು ಮಂಡ್ಯ ಜಿಲ್ಲೆ. ಹಾಗಾಗಿ ನಾನು ಇಂದು ಮಂಡ್ಯಗೆ ಬಂದಿದ್ದೀನಿ. ನಾಳೆ-ನಾಳಿದ್ದು ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಗಳಲ್ಲಿ ಪ್ರವಾಸ ಮಾಡುವೆ. ನಾವು ಕೇವಲ ಹಳೇ ಮೈಸೂರು ಭಾಗಕ್ಕೆ ಸೀಮಿತ ಎಂದುಕೊಂಡಿದ್ದರೆ, ಅದರ ಬಗೆಗೆ ನಾನು ಮಾತನಾಡುವುದಿಲ್ಲ. ನಾನು ಸಿಎಂ ಆಗಲು ಹೈದ್ರಾಬಾದ್-ಮುಂಬೈ ಕರ್ನಾಟಕ ಭಾಗದ ಜನರ ಕೊಡುಗೆಯೂ ಇದೆ. 2023, 2024 ರಲ್ಲಿಯೂ ನಾನು ಸುಮ್ಮನೇ ಕೂರುವುದಿಲ್ಲ. ನನ್ನ ಹೊರಾಟದ ಸಂಕಲ್ಪವನ್ನ ಯಾರೂ ಕಿತ್ತುಕೊಳ್ಳಲಾಗಲ್ಲ. 2023ಕ್ಕೆ ನಮ್ಮ ಪಕ್ಷವನ್ನ ನಾಶ ಮಾಡ್ತಿವಿ ಎನ್ನುವವರ ವಿರುದ್ದ ಎದ್ದು ನಿಲ್ಲುತ್ತೇವೆ ಎಂದು ಇಳಿ ವಯಸ್ಸಿನಲ್ಲೂ ದೇವೇಗೌಡ್ರು ಉತ್ಸಾಹ ಹಾಗೂ ಆತ್ಮವಿಶ್ವಾಸ ತೋರಿದರು.

ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಉಸಿರಾಡೋದನ್ನ ನಿಲ್ಲಿಸಬೇಕು, ಅದನ್ನು ನಾನೇ ಮಾಡ್ತೀನಿ: ಇದೇನಿದು BSY ಹೊಸ ವರಸೆ?

ಮೋದಿಯಲ್ಲಿ ಬದಲಾವಣೆ ಗಮನಿಸಿದೆ

ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ನಾನು ಬಿಜೆಪಿ ಬಹುಮತ ಗಳಿಸಿದ್ರೆ ರಾಜೀನಾಮೆ ನೀಡ್ತಿನಿ ಎಂದಿದ್ದೆ. ಆ ನಂತರ ಅವರು ಪಿಎಂ ಆಗಿ ನನಗೆ ದೆಹಲಿಗೆ ಬರಲು ಪತ್ರ ಬರೆದಿದ್ದರು. ಅದರಂತೆ ದೆಹಲಿಗೆ ಹೋದ ನಾನು ಅವರನ್ನ ಭೇಟಿ ಮಾಡಿ ನನ್ನ ರಾಜೀನಾಮೆ ತೆಗೆದುಕೊಳ್ಳಿ ಎಂದೆ. ಅದಕ್ಕವರು ರಾಜಕೀಯದಲ್ಲಿ ಮಾತನಾಡುವುದು ಮಾಮೂಲಿ. ಇದನ್ನೆಲ್ಲಾ ನೀವು ಸಿರಿಯಸ್ ಆಗಿ ತೆಗೆದುಕೊಳ್ಳಬೇಡಿ ಅಂದ್ರು. ಆಗ ನಾನು ಅವರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ಹಾಗೂ ದೇಶದ ಪ್ರಧಾನಿಯಾಗಿದ್ದಾಗಿನ ವ್ಯತ್ಯಾಸ ಗಮನಿಸಿದೆ ಎನ್ನುವ ಮೂಲಕ ಪ್ರಧಾನಿ ಮೋದಿ ಬಗ್ಗೆ ದೇವೇಗೌಡ್ರು ಮೃದು ಧೋರಣೆ ತಳೆದಿರುವುದು ಸ್ಪಷ್ಟವಾಗಿತ್ತು.
Published by:Kavya V
First published: