ಪ್ರಧಾನಿಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯ ಪರ್ಮಿಷನ್ ಬೇಕಾ.. Nonsense: ಸಿಡಿಮಿಡಿಗೊಂಡ ದೇವೇಗೌಡರು

Deve gowda lashes out on Siddaramaiah: ಪ್ರಧಾನಿಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯನ ಪರ್ಮಿಷನ್ ಬೇಕಾ? ಮನಮೋಹನ್ ಸಿಂಗ್ ಅವರನ್ನು  ಭೇಟಿ ಮಡಿದ್ದೇನೆ, ವಾಜಪೇಯಿ ಅವರನ್ನು ಭೇಟಿ ಮಾಡಿದ್ದೇನೆ. ಸಿದ್ದರಾಮಯ್ಯನಿಗೆ ನನ್ನ ಪಕ್ಷವನ್ನು ಸರಂಡರ್ ಮಾಡ್ತೀವಿ ಅಂತ ಹೇಳಿದ್ದೀವಾ ನಾನ್ಸೆನ್ಸ್ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ

ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ

  • Share this:
ಚಿಕ್ಕಬಳ್ಳಾಪುರ: ವಿಧಾನ ಪರಿಷತ್​ ಚುನಾವಣೆ (MLC Election) ಹಿನ್ನೆಲೆ ಜೆಡಿಎಸ್ (JDS)​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು (H. D. Deve Gowda) ಶಿಡ್ಲಘಟ್ಟ ಬಾಲಾಜಿ ಕನ್ವೆವೆನ್ಷನ್ ಹಾಲ್ ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತಯಾಚಿಸಿದರು. ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ವಕ್ಕಲೇರಿ ರಾಮು (JDS Candidate Vokkaleri Ramu) ಪರ ಪ್ರಚಾರ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಪ್ರಧಾನಿಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯನ ಪರ್ಮಿಷನ್ ಬೇಕಾ? ಮನಮೋಹನ್ ಸಿಂಗ್ ಅವರನ್ನು  ಭೇಟಿ ಮಡಿದ್ದೇನೆ, ವಾಜಪೇಯಿ ಅವರನ್ನು ಭೇಟಿ ಮಾಡಿದ್ದೇನೆ. ಸಿದ್ದರಾಮಯ್ಯನಿಗೆ ನನ್ನ ಪಕ್ಷವನ್ನು ಸರಂಡರ್ ಮಾಡ್ತೀವಿ ಅಂತ ಹೇಳಿದ್ದೀವಾ ನಾನ್ಸೆನ್ಸ್ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಸರ್ಕಾರ ಕೆಡವಿದವರು ಯಾರು ಉತ್ತರ ಕೊಡಲಿ

ಕಾಂಗ್ರೆಸ್​​​​​ಗೆ ಬೆಂಬಲ ಕೊಡುವ ತೀರ್ಮಾನ ಮಾಡುವುದು 2023 ಚುನಾವಣೆಯಲ್ಲಿ. ಕುಮಾರಸ್ವಾಮಿಯವರು ನನ್ನ ಅನುಮತಿ ಇಲ್ಲದೆ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದರು. ಮುಖ್ಯಮಂತ್ರಿ ಮಾಡಿ ಸರ್ಕಾರ ಕೆಡವಿದವರು ಯಾರು ಉತ್ತರ ಕೊಡಲಿ ಎಂದು ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರಿದರು. ಸ್ಥಳೀಯ ಮತದಾರರು ಕಾಂಗ್ರೆಸ್ ಜೆಡಿಎಸ್ ಅಂತ ಗೆದ್ದಿಲ್ಲ, ಅವರವರ ಸ್ವಂತ ಶಕ್ತಿಯಿಂದ ಗೆದ್ದಿದ್ದಾರೆ. ಗೆದ್ದ ಮೇಲೆ ಈ ಚುನಾವಣೆಗೆ ಮತ ಕೊಡುವುದು ಮತದಾರನಿಗೆ ಬಿಟ್ಟಿದ್ದು ಎಂದರು.

ಜೆಡಿಎಸ್​ನವರು ಬಿಜೆಪಿಯವರ ಜೊತೆ ಹೋಗ್ತಾರೆ

ದೇವೇಗೌಡರು-ಪ್ರಧಾನಿ ಭೇಟಿ ವಿಚಾರವಾಗಿ ಹಾಸನದಲ್ಲಿ ಪ್ರತಿಕ್ರಿಯಿಸಿದ ಸಂಸದ ಡಿ.ಕೆ.ಸುರೇಶ್, ಅವರು ಯಾವುದೇ ಕ್ಷಣದಲ್ಲಿ ಒಂದಾಗ್ತಾರೆ ಎಂಬುದು ಗೊತ್ತಿದೆ. ಜೆಡಿಎಸ್‌ನವರು ಬಿಜೆಪಿ ಜೊತೆ ಅಥವಾ ಯಾರ ಜೊತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ತಾರೆ. ಅಧಿಕಾರಕ್ಕೋಸ್ಕರ ಅವರು ಸ್ಥಾನ ಉಳಿಯಲು ಅವರು ಏನು ಬೇಕಾದ್ರು ಮಾಡ್ತಾರೆ. ಅವರು ಅದನ್ನು ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ ಮುಂದೆಯೂ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: MLC Electionನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ; ಮೋದಿ-ದೇವೇಗೌಡ್ರ ಭೇಟಿ ಬೆನ್ನಲ್ಲೇ HD Kumaraswamy ರಣತಂತ್ರ!

ಹಾಸನ ಜನಪ್ರತಿನಿಧಿಗಳ ಮನವಿ

ಹಾಸನ ಜಿಲ್ಲೆಯಲ್ಲಿ ಇರುವ ಎಲ್ಲರಿಗೂ ಮುಕ್ತವಾಗಿ ಮನವಿ ಮಾಡುತ್ತೇನೆ. ನೀವು ಯಾವುದೇ ಪಕ್ಷದಿಂದ ಗೆದ್ದಿದ್ದರೂ ಅದರ ಸದಸ್ಯತ್ವ ನೀವು ಪಡೆದಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆ ಹಾಳು ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಸದಸ್ಯರ ಹಕ್ಕು ಮೊಟಕುಗೊಳಿಸುತ್ತಿದೆ, ಎಲ್ಲರ ಜಾಗೃತರಾಗಿ ನಮ್ಮ ‌ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ಕಾಂಗ್ರೆಸ್​​ ಅಭ್ಯರ್ಥಿ ಪರ ಮತಯಾಚಿಸಿದರು.

ಕಾಂಗ್ರೆಸ್​​ಗೆ ಬರುವುದು ಎ.ಮಂಜುಗೆ ಬಿಟ್ಟ ವಿಷಯ

ಎ.ಮಂಜು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿಯೂ ಮಾತನಾಡಿದ ಸಂಸದ ಡಿಕೆ ಸುರೇಶ್​​, ಎ.ಮಂಜು ಈಗಾಗಲೇ ಬಿಜೆಪಿಯ ಸಕ್ರಿಯ ನಾಯಕರು. ಅವರು ಏನು ತೀರ್ಮಾನ‌ ತೆಗೆದುಕೊಂಡಿದ್ದಾರೆ ನನಗೆ ಮಾಹಿತಿಯಿಲ್ಲ. ಕೊಡಗಿನಲ್ಲಿ ನಮ್ಮ‌ ಪಕ್ಷದಿಂದ ಸ್ಪರ್ಧಿಸಿರುವ ಮಂಥರ್ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದವರು, ಪಕ್ಷ ಅವರನ್ನು ಗುರುತಿಸಿ ಟಿಕೆಟ್ ನೀಡಿದೆ. ಮಂಥರ್ ಪರ ಎ.ಮಂಜು ಅವರು ಹೋಗಿ ಚುನಾವಣೆ ಪ್ರಚಾರ ಮಾಡೋದು ಅವರ ವೈಯುಕ್ತಿಕ, ಪಕ್ಷ ಅದನ್ನು ಸಮರ್ಥನೆ ಮಾಡಿಕೊಳ್ಳಲ್ಲ. ನಾನು ಶಾಸಕರಾದ ಶಿವಲಿಂಗೇಗೌಡ, ಪ್ರೀತಂಗೌಡ, ಬಾಲಕೃಷ್ಣ, ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರ ಬೆಂಬಲ ಕೋರುತ್ತೇನೆ. ಈ ಜಿಲ್ಲೆಯಲ್ಲಿ ಇತಿಹಾಸ ಬರೆಯಲು ಎಲ್ಲ ನಾಯಕರು ಮುಂದೆ ಬಂದು ಕಾಂಗ್ರೆಸ್ ಅಭ್ಯರ್ಥಿ ಶಂಕರ್‌ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: HD Devegowda: ಹಾಸನಕ್ಕಾಗಿ ಪ್ರಧಾನಿಯನ್ನೇ ಭೇಟಿ ಮಾಡಿ ಬಂದ್ರಾ ದೇವೇಗೌಡ್ರು? ಅವರ ಡಿಮ್ಯಾಂಡ್ ಕೇಳಿ ಜನ ಫುಲ್ ಖುಷ್!

ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.
Published by:Kavya V
First published: