‘ಯಡಿಯೂರಪ್ಪ ರಾಜಾಹುಲಿ ಅಲ್ಲ, ರಾಜ ಇಲಿ‘: ಮಾಜಿ ಸಂಸದ ವಿ.ಎಸ್​​ ಉಗ್ರಪ್ಪ

ರಾಜಾಹುಲಿಗೆ ಬಿಜೆಪಿ ವರಿಷ್ಠ ಭೇಟಿಗೆ ಅವಕಾಶ ನೀಡುತ್ತಿಲ್ಲ. ಹಾಗಾಗಿ ರಾಜಾಹುಲಿ ಎಂಬ ಹೆಸರು ಎಷ್ಟು ಸೂಕ್ತ? ಎಂದರು ಉಗ್ರಪ್ಪ. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದು ಅವರದ್ದೇ ಪಕ್ಷದ ಒಂದು ಬಣ ಒತ್ತಾಯಿಸುತ್ತಿದೆ ಎಂದು ಹೇಳಿದರು.

news18-kannada
Updated:January 14, 2020, 3:30 PM IST
‘ಯಡಿಯೂರಪ್ಪ ರಾಜಾಹುಲಿ ಅಲ್ಲ, ರಾಜ ಇಲಿ‘: ಮಾಜಿ ಸಂಸದ ವಿ.ಎಸ್​​ ಉಗ್ರಪ್ಪ
ವಿ.ಎಸ್​​ ಉಗ್ರಪ್ಪ, ಬಿ.ಎಸ್​​ ಯಡಿಯೂರಪ್ಪ
  • Share this:
ಬೆಂಗಳೂರು(ಜ.14): "ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ರಾಜಾಹುಲಿ ಅಲ್ಲ, ರಾಜ ಇಲಿ" ಎನ್ನುವ ಮೂಲಕ ಮಾಜಿ ಸಂಸದ ವಿ.ಎಸ್​ ಉಗ್ರಪ್ಪ ಕುಹಕವಾಡಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ವಿ.ಎಸ್​ ಉಗ್ರಪ್ಪ, ಬಿ.ಎಸ್​​ ಯಡಿಯೂರಪ್ಪಗೆ ರಾಜ್ಯದ ಜನ ಏನಂತಾ ಕರೆಯುತ್ತಾರೆ. ಅವರು ರಾಜಾಹುಲಿ ಅಲ್ಲ, ರಾಜ ಇಲಿ ಎಂದು ಹೆಸರು ಬದಲಿಸಿಕೊಳ್ಳುವುದು ಸೂಕ್ತ ಎಂದು ವ್ಯಂಗ್ಯವಾಡಿದರು.

ರಾಜಾಹುಲಿಗೆ ಬಿಜೆಪಿ ವರಿಷ್ಠ ಭೇಟಿಗೆ ಅವಕಾಶ ನೀಡುತ್ತಿಲ್ಲ. ಹಾಗಾಗಿ ರಾಜಾಹುಲಿ ಎಂಬ ಹೆಸರು ಎಷ್ಟು ಸೂಕ್ತ? ಎಂದರು ಉಗ್ರಪ್ಪ. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದು ಅವರದ್ದೇ ಪಕ್ಷದ ಒಂದು ಬಣ ಒತ್ತಾಯಿಸುತ್ತಿದೆ ಎಂದು ಹೇಳಿದರು.

ಇನ್ನು ಕೂಡಲೇ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು. ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಜನತೆಗೆ ತಿಳಿಸಬೇಕು. ನಿಮಗೆ ತಾಕತ್ತಿದ್ದರೆ 2 ಕೆ.ಜಿ ಅಕ್ಕಿ ಕಡಿತ ಮಾಡಿ ನೋಡಿ ನಾವೇಗೆ ಜನಾಂದೋಲನ ರೂಪಿಸುತ್ತೇವೆ ಎಂದು ಗೊತ್ತಾಗಲಿದೆ. ಬೇರೆ ರಾಜ್ಯಗಳಿಗೆ ಅಕ್ಕಿ ರವಾನೆ ನಿಯಂತ್ರಣ ಮಾಡಲಾಗದ ಸರ್ಕಾರ ಬಡವರ ಬದುಕಿನಲ್ಲಿ ಆಟವಾಡುತ್ತಿದೆ ಎಂದು ಕುಟುಕಿದರು.

ಕರ್ನಾಟಕ ಉಪಚುನಾವಣೆಯಲ್ಲಿ ಗೆದ್ದ 24 ಗಂಟೆಗಳಲ್ಲಿ ಮಂತ್ರಿ ಮಾಡುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಬಿಜೆಪಿಗರು ಪ್ರಚಾರ ಮಾಡಿದ್ದರು. ಇದಕ್ಕೆ ಸೂಟು ಬೂಟು ಹಾಕಿಕೊಂಡು ಸಿದ್ದರಾಗಿದ್ದ ಶಾಸಕರು 24 ಗಂಟೆಯಲ್ಲಿ, 24 ದಿನ ಕಳೆದರೂ ಮಂತ್ರಿಗಳು ಆಗಲಿಲ್ಲ ಎಂದು ಹಾಸ್ಯ ಮಾಡಿದರು.

ಕೇಂದ್ರ ಸರ್ಕಾರದ ಜನ ವಿರೋಧಿ ಕಾನೂನುಗಳಾದ ಸಿಎಎ ಮತ್ತು ಎನ್​​ಆರ್​​ಸಿ ವಿರುದ್ಧ ವಿಚಾರ ಸಂಕಿರಣ ನಡೆಸಲಾಗುವುದು. ಕಾಂಗ್ರೆಸ್​ನಿಂದ ಇದೇ 16ನೇ ತಾರಿಕಿನಂದು ಒಂದು ದಿನದ ಕಾರ್ಯಾಗಾರ ನಡೆಸಲಾಗುವುದು. 200 ರಿಂದ 250 ಪಕ್ಷದ ಪದಾಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ವಿಪಕ್ಷ ನಾಯಕರು ಸೇರಿದಂತೆ ಪಕ್ಷದ ಅಧ್ಯಕ್ಷರು, ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದರು.

ಇನ್ನು ಅಚ್ಚೇ ದಿನ್ ಬಗ್ಗೆ ಮಾತನಾಡುವ ಮೋದಿಯವರು ಕಳೆದ 5 ವರ್ಷಗಳಲ್ಲಿ ಹಣದುಬ್ಬರ ಶೇ.2 ರಿಂದ 4ರಷ್ಟಿರಬೇಕಿತ್ತು, ಆದರೆ 7 ಜಿಗಿದಿದೆ ಎಂಬುದನ್ನು ಯಾಕೇ ನೋಡಲಿಲ್ಲ. ಹಾಗಾಗಿಯೇ ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಗಗಕ್ಕೇರಿವೆ. ಇವರು ಅಧಿಕಾರಕ್ಕೆ ಬಂದಾಗ ಈ ರೀತಿಯಾಗುತ್ತೆ. ಮೋದಿ ಪ್ರತಿಪಾದಿಸುವ ಅಚ್ಚೇ ದಿನ್ ಇದೇನಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಉಡುಪಿಯಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ: ಪೊಲೀಸರಿಂದ ತೀವ್ರ ವಿಚಾರಣೆಪಶ್ಚಿಮ ಬಂಗಾಳದ ರಾಜ್ಯಪಾಲರು ಮೋದಿ ವಿರುದ್ಧ ಮಾತನಾಡುವವರಿಗೆ ಹುಚ್ಚುನಾಯಿಗಳಿಗೆ ಹೊಡೆಯುವಂತೆ ಹೊಡೆಯುತ್ತೇವೆ ಎನ್ನುತ್ತಾರೆ. ಸರ್ವಾಧಿಕಾರಿ ದೋರಣೆ ಅನುಸರಿಸುತ್ತಿದ್ದಾರೆ. ರಾಷ್ಟ್ರದಲ್ಲಿ ಮೋದಿ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹಿಟ್ಲರ್ ರೀತಿ ಆಡಳಿತ ನಡೆಸುತ್ತಿದ್ದಾರೆ. ರಾಷ್ಟ್ರದ ಜನ ತಮಗೆ ಬುದ್ದಿ ಕಲಿಸುತ್ತಾರೆ ಎಂದು ಸಿಡಿಮಿಡಿಗೊಂಡರು.

ಹಾಗೆಯೇ ಯೇಸು ಪ್ರತಿಮೆ ವಿರೋಧಿಸಿ ನಿನ್ನೆ ಕನಕಪುರ ಚಲೋ ನಡೆದಿದೆ. ರಾಜ್ಯದಲ್ಲಿ ಮಾಡೊ ಕೆಲಸ ಬಿಟ್ಟು ಬೇರೆ ಎಲ್ಲವನ್ನೂ ಬಿಜೆಪಿ ಮಾಡುತ್ತಿದೆ. ರಾಜ್ಯದಲ್ಲಿ ‌ಸಾಕಷ್ಟು ಸಮಸ್ಯೆ ಇದೆ ಈ ಬಗ್ಗೆ ಯೋಚಿಸಬೇಕು. ಕನಕಪುರದಲ್ಲಿ ಪ್ರತಿಭಟನೆ ಮಾಡಿದರೆ ಏನೂ ಆಗಲ್ಲ. ಡಿಕೆಶಿ ಅಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಡಿಕೆಶಿ ಪರವಾಗಿ ನಾವು ಎಲ್ಲರೂ ಇದ್ದೇವೆ. ಕಾಂಗ್ರೆಸ್ ಪಕ್ಷ ಅವರ ಪರವಾಗಿದೆ. ಪ್ರತಿಮೆ ನಿರ್ಮಾಣ ಮಾಡೊ ವಿಚಾರ ಅಲ್ಲಿನ ಜನ ತೀರ್ಮಾನ ಮಾಡ್ತಾರೆ. ಅಲ್ಲಿ ಹೋಗಿ ಬಿಜೆಪಿ ಸಂಘಪರಿವಾರದವರು ವಿರೋಧ ಮಾಡೋದು ತಪ್ಪು. ಸಂಘ ಪರಿವಾರದವರದ್ದು ಇದೇ ಕೆಲಸ. ಈ ಹಿಂದೆ ಬಾಬಾಬುಡನ್ ಗಿರಿಯಲ್ಲಿ, ಹುಬ್ಬಳ್ಳಿಯ ಈದ್ಗಾ ಮೈದಾನ ವಿಚಾರದಲ್ಲಿ ಹೀಗೆ ಪ್ರತಿಭಟನೆ ಮಾಡಿದರು ಎಂದು ತಪರಾಕಿ ಬಾರಿಸಿದರು.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ